ದಿನದ ಅಪರಾಧಗಳ ಪಕ್ಷಿನೋಟ ೨೮ನೇ ಏಪ್ರಿಲ್‌ ೨೦೦೯

April 28, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳುವಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೪-೨೦೦೯ ರಂದು ರಾತ್ರಿ ೦೦೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ನ ಬಿ.ಎಂ. ರಸ್ತೆಯಲ್ಲಿರುವ ಶ್ರೀ ನಯಾಜ್‌ ಅಹ್ಮದ್‌ ಬಿನ್ ಲೇಟ್‌ ಅಬ್ದುಲ್‌ ಜಲೀಲ್‌ ರವರ ಅಂಗಡಿ ಜಾಗದಲ್ಲಿ ಇಟ್ಟಿದ್ದ ಒಂದು ಕೋರ್ಟ್‌ ಆದೇಶದ ವಿವರ ಇದ್ದ ಬೋರ್ಡ್‌ ಕಾಣೆಯಾಗಿದ್ದು, ಸದರಿ ಕೋರ್ಟ್‌ ಆದೇಶದ ಬೋರ್ಡ್‌ ಅನ್ನು ಅಂಜದ್‌ ಮತ್ತು ಸಿಕಂದರ್‌ ಎಂಬುವರು ಒಂದು ಆಟೋದಲ್ಲಿ ಬಂದು ಕಳವು ಮಾಡಿಕೊಂಡು ಹೋಗಿರುತ್ತಾರೆ. 

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೪-೨೦೦೯ರ ಹಿಂದೆ ಹಾಗೂ ೨೭-೦೪-೨೦೦೯ ರಂದು ಮದ್ಯಾಹ್ನ ೧೩೩೦ ಗಂಟೆಯಲ್ಲಿ ಗೌತಮ್‌ ಬಿನ್ ದೊರೈಸ್ವಾಮಿ, ೧ನೇ ಕ್ರಾಸ್‌, ಡಿ.ಕ್ರಾಸ್‌, ಹೆಚ್.ಆರ್‍.ಬಿ.ಆರ್‍. ಲೇಔಟ್‌, ೩ನೇ ಆರ್‍.ಡಿ.ಬ್ಲಾಕ್‌, ಕಮ್ಮನಹಳ್ಳಿ ಅಂಚೆ, ಬೆಂಗಳೂರು-೮೪ ರವರು, ಶ್ರೀಮತಿ ಅಮ್ಮು ಶರ್ಮಿಲ ಕೋಂ ಸಂಪತ್‌ಕುಮಾರ್‌, ವಯಸ್ಸು ೩೦ ವರ್ಷ, ಮನೆ ನಂ. ೧೯೧, ೭ನೇ ಕ್ರಾಸ್‌, ಅಂಬೇಡ್ಕರ್‍ನಗರ, ಕೆ.ಜಿ.ಎಫ್. ರವರು ಮದುವೆಯಾಗಿರುವುದು ಗೊತ್ತಿದ್ದು, ಅಪರಾಧಿಕ ಉದ್ದೇಶದಿಂದ ಪುಸಲಾಯಿಸುತ್ತಾ ಬಾರದಿದ್ದರೆ ಸದರಿ ಹೆಂಗಸಿನ ಗಂಡನನ್ನು ಕೊಲೆ ಮಾಡಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಲ್ಲದೆ ಮಹಿಳೆ ಮಾನಕ್ಕೆ ಕುಂದು ಉಂಟುಮಾಡುವ ಶಬ್ದಗಳನ್ನು ಉಪಯೋಗಿಸಿರುತ್ತಾನೆ.  ಈ ಕೃತ್ಯವು ಕೆ.ಜಿ.ಎಫ್.ನ ಅಂಬೇಡ್ಕರ್‌ನಗರದಲ್ಲಿ ನಡೆದಿರುತ್ತದೆ.

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: - ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೪-೨೦೦೯ ರಂದು ಸಂಜೆ ೧೭೦೦ ಗಂಟೆಯಲ್ಲಿ ಶ್ರೀ ಬಾಲು ಬಿನ್ ಸೀತಾರಾಂ, ವಯಸ್ಸು ೩೫ ವರ್ಷ, ವಾಸ ನಂ. ೮೧, ಮಿಲ್‌ ಬ್ಲಾಕ್‌, ಉರಿಗಾಂ, ಕೆ.ಜಿ.ಎಫ್. ರವರು ತನ್ನ ದ್ವಿಚಕ್ರ ವಾಹನ ಪಲ್ಸರ್‌ ಸಂಖ್ಯೆ: ಕೆಎ-೦೮-೫೩೮೫ ರಲ್ಲಿ ಹಿಂಬದಿಯಲ್ಲಿ ಆತನ ಅಕ್ಕನ ಮಗನಾದ ರವಿಂದರ್‌ ರವರನ್ನು ಕುಳ್ಳರಿಸಿಕೊಂಡು ಆಂಡ್ರಸನ್‌ಪೇಟೆ ಕಡೆಗೆ ಹೋಗಲು ಬಿ.ಎಂ.ರಸ್ತೆಯ ದಾಸ್‌ ಚಿನ್ನಸವರಿ ರವರ ಮನೆಯ ಮುಂಭಾಗ ಹೋಗುತ್ತಿರುವಾಗ ಆಂಡ್ರಸನ್‌ಪೇಟೆ ಕಡೆಯಿಂದ  ಆಕ್ಟೀವ್‌ ಹೋಡಾ ದ್ವಿಚಕ್ರ ವಾಹನ ಸಂಖ್ಯೆ: ಕೆಎ-೦೧-ಇಎಫ್‌-೮೧೩ ಅನ್ನು ಅದರ ಸವಾರ ಶಕೀಲ್‌, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್. ಎಂಬುವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ಪಲ್ಸರ್‌ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಬಾಲು ಮತ್ತು ರವಿಂದರ್‌ ರವರುಗಳಿಗೆ ವಾಹನ ಸಮೇತ ಕೆಳಗೆ ಬಿದ್ದಿದ್ದು ರಕ್ತಗಾಯಗಳಾಗಿರುತ್ತವೆ.

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಏಪ್ರಿಲ್‌ ೨೦೦೯

April 27, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: – ಇಲ್ಗ         

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •        ಕಾಮಸಮುದ್ರಂ ಪೊಲೀಸ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೪-೨೦೦೯ ರಂದು ಸುಮಾರು ೧೯-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಚಿಕ್ಕಪುರ ಗ್ರಾಮದ ವಾಸಿಗಳಾದ ರತ್ನಮ್ಮ, ವೆಂಕಟೇಶಪ್ಪ ಮತ್ತು ಮುನಿಸಿದ್ದ ಎಂಬುವರುಗಳು ಅದೇ ಗ್ರಾಮದ ವಾಸಿ ಶ್ರೀಮತಿ. ಪದ್ಮಮ್ಮ ಕೋಂ ವೆಂಕಟಸ್ವಾಮಿ ಎಂಬುವರ  ಪತಿಯಾದ ವೆಂಕಟಸ್ವಾಮಿರೊಂದಿಗೆ ಹಣದ ವಿಚಾರದಲ್ಲಿ ಜಗಳ ಮಾಡಿ ಕೆಟ್ಟಮಾತುಗಳನ್ನು ಬೈದಿದ್ದು ಪದ್ಮಮ್ಮ ರವರು ಜಗಳ ಬಿಡಿಸಲು ಹೋದಾಗ ವೆಂಕಟಸ್ವಾಮಿ ರವರಿಗೆ ಒಂದು ಕಲ್ಲಿನಿಂದ ಕುತ್ತಿಗೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ. 
  •            ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀ.ಅಪ್ಪೇನ್‌ ಬಿನ್‌ ಲೇಟ್‌ ರಾಜ(೨೫), ಲೂರ್ದುನಗರ, ಆಂಡ್ರಸನ್‌ಪೇಟೆ ವಾಸಿ ಎಂಬುವರು ದಿನಾಂಕ: ೨೬.೦೪.೨೦೦೯ ರಂದು ಸಂಜೆ ೬.೩೦ ಗಂಟೆ ಸಮಯದಲ್ಲಿ ತನ್ನ ಆಟೋವನ್ನು ರಾಬರ್ಟ್‌‌ಸನ್‌ಪೇಟೆಯಿಂದ ಆಂಡ್ರಸನ್‌ಪೇಟೆ ಕಡೆಗೆ ಬರುತ್ತಿದ್ದು, ಪಿಲಿಪ್ಸ್‌ ಎಂಬುವರ ಮನೆಯ ಬಳಿ ಸುಸೈಪಾಳ್ಯಂ ಕಡೆಗೆ ಹೋಗುತ್ತಿದ್ದಾಗ ಅಪ್ಪನ್‌ @ ವೆಳ್ಫಪನ್‌ , ಭರತ್‌ @ ತೋಲ್‌ ಮತ್ತು ಮೂಖ, ಎಲ್ಲಾರು ಎಂ. ಬ್ಲಾಕ್‌, ಚಾಂಪಿಯನ್‌ ರೀಫ್ಸ್‌ ವಾಸಿಗಳು ಏಕೋದ್ದೇಶದಿಂದ ಅಪ್ಪನ್‌ನ್ನು ತಡೆದು ೮ ತಿಂಗಳ ಹಿಂದೆ ಚಾಂಪಿಯನ್‌ ರೀಫ್ಸ್‌ ಪೊಲಿಸ್‌ ಠಾಣೆಯಲ್ಲಿ ನಮ್ಮ ವಿರುದ್ದ ದೂರು ಹೇಳಿದ್ದಿಯಾ ಎಂತ ಜಗಳ ಮಾಡಿ ಕೆಟ್ಟಮಾತುಗಳನ್ನು ಬೈದು ಒಂದು ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತರೆ.

 ಇತರೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •               ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆ ನಾಪತ್ತೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ೨ನೇ ಬ್ಲಾಕ್‌‌, ಆಂಡ್ರಸನ್‌ಪೇಟೆ, ಕೆ.ಜಿ.ಎಫ್‌ ನಲ್ಲಿ ಸಂಭವಿಸಿರುತ್ತದೆ. ಶ್ರೀ. ಜಾಕುಬ್‌ ರವಿ ಬಿನ್‌ ಅರುಳ್‌ದಾಸ್‌, ೨ನೇ ಬ್ಲಾಕ್‌ ವಾಸಿ ಎಂಬುವರು ದಿನಾಂಕ: ೨೦.೦೪.೨೦೦೯ ರಂದು ತನ್ಮ ಪತ್ನಿಯಾದ ಶ್ರೀಮತಿ. ಪುಷ್ಪಮೇರೆ ಎಂಬುವರನ್ನು ಮನೆಯಲ್ಲಿ ಬಿಟ್ಟು ಕುಪ್ಪಂ ಪಿ.ಇ.ಎಸ್‌. ಕಾಲೇಜಿಗೆ ಹೋಗಿ ತನ್ನ ತಾಯಿಯನ್ನು ಡಿಚಾರ್ಚ್‌ ಮಾಡಿಸಿಕೊಂಡು ಮನೆಗೆ ಬಂದು ನೋಡಲಾಗಿ ತನ್ನ ಪತ್ನಿ ಮನೆಯಲ್ಲಿ ಇಲ್ಲದ ಕಾರಣ ಅಕ್ಕಪಕ್ಕದವರನ್ನು ವಿಚಾರಿಸಿ, ಸಂಬಂಧಿಕರ ಮನೆಗಳಲ್ಲಿ ಇಲ್ಲದೆ ಕಾಣೆಯಾಗಿರುತ್ತಾರೆ.

 ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ನೇ ಏಪ್ರಿಲ್ ೨೦೦೯

April 26, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: – ಇಲ್ಗ         

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •   ಕಾಮಸಮುದ್ರಂ ಪೊಲೀಸ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೪-೨೦೦೯ ರಂದು ಸುಮಾರು ೨೧-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮೂಗನಹಳ್ಳಿ ಗ್ರಾಮದ ವಾಸಿಗಳಾದ ಶಾಮಪ್ಪ ಮತ್ತು ಜಯಂತಪ್ಪ ಎಂಬುವರುಗಳು ಅದೇ ಗ್ರಾಮದ ವಾಸಿ ಶ್ರೀ. ವೆಂಕಟೇಶ ಬಿನ್ ಚಿಕ್ಕಗೋಪಾಲಪ್ಪ ಎಂಬುವರೊಂದಿಗೆ ವಿನಾಕಾರಣ ಜಗಳ ತೆಗೆದು, ಕಟ್ಟ ಮಾತುಗಳಿಂದ ಬೈದು, ಹೊಣ್ಣೆಯಿಂದ ಹೊಡೆದು ಮತ್ತು ಪ್ರಾಣಬೆದರಿಕೆಯಾಕಿರುತ್ತಾರೆ.
  • ಕಾಮಸಮುದ್ರಂ ಪೊಲೀಸ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೪-೨೦೦೯ ರಂದು ೧೮-೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಚಿಕ್ಕಾಪುರ ಗ್ರಾಮದ ವಾಸಿ ಶ್ರೀ. ವೆಂಕಟೇಶಪ್ಪ ಬಿನ್ ಚಿಕ್ಕಜುಂಜಪ್ಪ ಎಂಬುವರು ತಮ್ಮ ಹೆಂಡತಿಯೊಂದಿಗೆ ಮನೆಯ ಬಳಿ ಕುಳಿತಿರುವಾಗ ಅದೇ ಗ್ರಾಮದ ವೆಂಕಟಸ್ವಾಮಿ, ಮುರುಗೇಟ್ ಮತ್ತು ಪದ್ಮಮ್ಮ ಎಂಬುವರು ಏಕಾಏಕಿ ಬಂದು ವೆಂಕಟೇಶಪ್ಪ ಮತ್ತು ಆತನ ಹೆಂಡತಿಯನ್ನು ಹೊಡೆದು ಪ್ರಾಣಬೆದರಿಕೆಹಾಕಿರುತ್ತಾರೆ.      

 ಇತರೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೧ನೇ ಏಪ್ರಿಲ್‌ ೨೦೦೯

April 21, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •         ಬಂಗಾರಪೇಟೆ ಪೊಲೀಸ್‌ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಬಾಲಮುರುಗನ್‌ ದೇವಾಸ್ತಾನ ರಸ್ತೆಯ ಶಾಂತ ಎಂಬುವರ ಮನೆಯಲ್ಲಿ ಸಂಬವಿಸಿರುತ್ತದೆ. ದಿನಾಂಕ: ೧೯.೦೪.೨೦೦೯ ರಂದು ರಾತ್ರಿ ಶ್ರೀಮತಿ. ಶಾಂತ ಎಂಬುವರು ತನ್ನ ಮನೆಯನ್ನು ಬೀಗ ಹಾಕಿಕೊಂಡು ತನ್ನ ಸಂಬಂಧಿಕರ ಮನೆಗೆ ಹೋಗಿದ್ದ ಸಮದಯಲ್ಲಿ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಬೀರುವಿನಲ್ಲಿದ್ದ ಚಿನ್ನದ ವಡವೆಗಳು ಮತ್ತು ನಗದು ರೂ. ೨೦೦೦/-ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: – ೦೧

  •           ಬೆಮೆಲ್‌ ನಗರ ಪೊಲೀಸ್‌ ಸಾದಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೆಮೆಲ್‌ ಕಾರ್ಖಾನೆಯ ಆರ್‌. & ಡಿ ಗೇಟ್‌ ಬಳಿ ಸಂಬವಿಸಿರುತ್ತದೆ. ದಿನಾಂಕ: ೨೦.೦೪.೨೦೦೯ ರಂದು ೧೯.೧೫ ಗಂಟೆ ಸಮಯದಲ್ಲಿ ಸುಂದರ್‌ ಬಿನ್‌ ಮಣಿ, ಕಾವೇರಿ ನಗರ, ಕೆ.ಜಿ.ಎಫ್‌ ರವರು ತನ್ನ ವಾಹನ ಸಂಖ್ಯೆ ಕೆಎ-೫೧-ಇ-೩೦೨೩ ಬಜಾಜ್‌ ಪಲ್ಸ್‌ ರ್‌ ವಾಹನದಲ್ಲಿ ಹಿಂಬದಿಯಲ್ಲಿ ಸಿಗಾಮಣಿ ಎಂಬುವರನ್ನು ಕುಳ್ಳರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಹಿಂಬದಿಯಲ್ಲಿದ್ದ ಸಿಗಾಮಣಿ ರವರು ಕೆಳೆಗೆ ಬಿದ್ದು ತಲೆ ಮತ್ತು ಕೈಕಾಲುಗಳ ಮೇಲೆ ರಕ್ತಗಾಯಗಳಾಗಿರುತ್ತವೆ.
  • ಬೇತಮಂಗಲ ಪೊಲೀಸ್‌ ಸರಹದ್ದು ಗೆನ್ನೆರಹಳ್ಳಿ ಮತ್ತು ಪಿಲ್ಲಗುಂಡ್ಲಹಳ್ಳಿ ಮದ್ಯೆ ಜಿಲಾನಿ, ಬಂಗಾರಪೇಟೆ ವಾಸಿ ರವರು ದಿನಾಂಕ: ೨೦.೦೪.೨೦೦೯ ರಂದು ೧೨.೦೦ ಗಂಟೆಯಲ್ಲಿ ತನ್ನ ವಾಹನ ಸಂಖ್ಯೆ ಕೆಎ-೦೮-ಬಿ-೧೬೦೬ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನ ಕೆಳೆಗೆ ಬಿದ್ದು ವಾಹನದಲ್ಲಿದ್ದ ನಾರಾಯಣಸ್ವಾಮಿ, ರಾದಕೃಷ್ಣ ಮತ್ತು ಇಲಿಯಾಜ್‌ ಎಂಬುವರುಗಳಿಗೆ ರಕ್ತಗಾಯಗಳಾಗಿರುತ್ತವೆ.

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

ಬೇತಮಂಲ ಪೊಲೀಸ್‌ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲದ ಮೂಸ್ಟೂರು ಗ್ರಾಮದಲ್ಲಿ ಸಂಭವಿಸಿರುತ್ತದೆ ದಿನಾಂಕ: ೨೦.೦೪.೨೦೦೯ ರಂದು ಬೆಳಿಗ್ಗೆ ೯.೩೦ ಗಂಟೆ ಸಮಯದಲ್ಲಿ ಕುಮಾರಿ ಶಿಲ್ಪ ಬಿನ್‌ ನಾರಾಯಣಪ್ಪ ಎಂಬುವರು ತನ್ನ ಮನೆಯಲ್ಲಿರುವಾಗ ಶ್ರೀರಾಮಪ್ಪ ಮತ್ತು ೬ ಜನ ಇತರರು ಸೇರಿಕೊಂಡು ಅಕ್ರಮಕೂಟಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಬಂದು ನಿಮ್ಮ ತಂದೆ ತಾಯಿ ಎಲ್ಲಿ ಅವರನ್ನು ಸುಮ್ಮನೆ ಬಿಡುವುದಿಲ್ಲವೆಂತ ಕೆಟ್ಟಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೦-೦೪-೨೦೦೯ ರಂದು ೦೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮುಗನಹಳ್ಳಿ ಗ್ರಾಮದ ವಾಸಿ ಶ್ರೀ. ನಾಗರಾಜಪ್ಪ ಬಿನ್ ಚಿನ್ನಪ್ಪ ಎಂಬುವರು ತನ್ನ ಹಸುವನ್ನು ಕಟ್ಟಲು ಅದೇ ಗ್ರಾಮದ ಕೃಷ್ಣಪ್ಪ ಎಂಬುವರ ಜನೀನಿನಲ್ಲಿ ಕಟ್ಟುತ್ತಿದ್ದಾಗ ಜಗಳ ನಡೆದು ಕೃಷ್ಣಪ್ಪನವರು ನಾಗರಜಪ್ಪನವರನ್ನು ಹೊಡೆದು ರಕ್ತಗಾಯಪಡಿಸಿರುತ್ತಾರೆ.

 ಇತರೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •          ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲ ಠಾಣೆ ಸರಹದ್ದು ವೆಂಕಟಾಪುರ ಚೆಕ್‌ಪೋಸ್ಟ್‌ ಬಳಿ ಸಂಬವಿಸಿರುತ್ತದೆ. ದಿನಾಂಕ: ೧೯.೦೪.೨೦೦೯ ರಂದು ೧೮.೫೦ ಗಂಟೆ ಸಮಯದಲ್ಲಿ ಶಶಿಕುಮಾರ್‌ ಬಿನ್‌ ಗುರುಮೂರ್ತಿ, ಪುರಹಳ್ಳಿ ಗ್ರಾಮದ ವಾಸಿ ತನ್ನ ವಾಹನ ಸಂಖ್ಯೆ ಕೆಎ-೦೫-ಬಿ-೯೪೪೦ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿದ ೨೦೦೦ ಕರಪತ್ರಗಳನ್ನು ವಾಹನದಲ್ಲಿ ಯಾವುದೇ ಪರವಾನಿಗಿ ಇಲ್ಲದೆ ಸಾಗಿಸುತ್ತಿದ್ದನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿರುತ್ತದೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ೦೧

  •          ಬೇತಮಂಗಲ ಪೊಲೀಸ್‌ ಠಾಣೆಯ ಸರಹದ್ದಿನ ರೌಡಿ ಆಸಾಮಿ ರಾಜ್‌ಗೋಪಾಲ್‌ಗೌಡ, ಕಮ್ಮಸಂದ್ರ ವಾಸಿ ರವರು ದಿನಾಂಕ: ೨೦.೦೪.೨೦೦೯ ರಂದು ೧೧.೫೫ ಗಂಟೆ ಸಮಯದಲ್ಲಿ ಚುನಾವಣೆ ಸಂಬಂದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಭಂಗವಾಗುವ ರೀತಿಯಲ್ಲಿ ಚುನಾವಣೆಗೆ ಸಂಬಂದಿಸಿದಂತೆ ವರ್ತಿಸುತ್ತಿದ್ದಾಗ ಮುಂಜ್ರಾಗತಾ ಕ್ರಮಕ್ಕಾಗಿ ದಸ್ತಗಿರಿ ಮಾಡಿ ಕ್ರಮಕೈಗೊಂಡಿರುತ್ತದೆ.

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೦ನೇ ಏಪ್ರಿಲ್‌ ೨೦೦೯

April 20, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: – ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೯-೦೪-೨೦೦೯ ರಂದು ಸುಮಾರು ೧೪೦೦ ಗಂಟೆ ಸಮಯದಲ್ಲಿ ಶ್ರೀಮತಿ ಶಶಿಕಲಾ ಕೋಂ ರಾಜ, ವಯಸ್ಸು ೩೦ ವರ್ಷ, ವಾಸ ನಂ. ೧೨೧/೧೫೧ ಎಲ್.ಆರ್‍.ನಗರ, ೧ನೇ ಮೈನ್‌, ನ್ಯೂ ಕಾರ್ಪೋರೇಷನ್‌ ವಸತಿ ಗೃಹ, ವಿವೇಕನಗರ, ಆಡುಗೋಡಿ ಪೊಲೀಸ್ ಠಾಣೆ ಬಳಿ, ಬೆಂಗಳೂರು ರವರು ಜಗನ್ ಮತ್ತು ಮುರಗನ್ ಎಂಬುವರಗಳ ಮನೆಯ ಪಕ್ಕದಲ್ಲಿ ವಾಹನವನ್ನು ನಿಲ್ಲಿಸಿದ್ದ ವಿಚಾರದಲ್ಲಿ ಸದರಿಯವರುಗಳು ಶ್ರೀಮತಿ ಶಶಿಕಲಾ ಮತ್ತು ಅವರ ಮೈದ ರವಿ ಎಂಬುವರನ್ನು ಕೆಟ್ಟ ಮಾತುಗಳಿಂದ ಬೈದು ಚಾಕು ಮತ್ತು ದೊಣ್ಣೆಗಳಿಂದ ಹೊಡೆದು ರಕ್ತಗಾಯಗಳನ್ನುಂಟು ಮಾಡಿರುತ್ತಾರೆ.  ಈ ಕೃತ್ಯವು ಕೆ.ಜಿ.ಎಫ್. ಕೆನಡೀಸ್‌ ೪ನೇ ಲೈನ್‌ನಲ್ಲಿ ಮನೆ ಸಂಖ್ಯೆ: ೧೬೮ರ ಮುಂಭಾಗ ನಡೆದಿರುತ್ತದೆ.

ಇತರೆ: ೦೧

  •   ದಿನಾಂಕ ೧೮-೦೪-೨೦೦೯ ರಂದು ಬಂಗಾರಪೇಟೆ ಜೂನಿಯರ್‌ ಕಾಲೇಜು ಮೈದಾನದಲ್ಲಿ ಜೆ.ಡಿ.ಎಸ್. ಪಕ್ಷದ ಬಹಿರಂಗ ಸಭೆಯನ್ನು ಏರ್ಪಡಿಸಿದ್ದು, ಸಂಜೆ ೧೭೦೦ ಗಂಟೆಯಲ್ಲಿ ಶ್ರೀ ರಾಮಚಂದ್ರಪ್ಪ, ಮುನ್ಸಿಪಲ್‌ ಆಫೀಸರ್‌, ಬಂಗಾರಪೇಟೆ ರವರು ತನ್ನ ದಳದ ಸದಸ್ಯರೊಂದಿಗೆ ಆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಂದು ಟಾಟಾ ಸುಮೋ ವಾಹನ ಸಂಖ್ಯೆ: ಕೆಎ-೦೬-ಎಂ-೩೩೩೯ ರಲ್ಲಿ ಸಾರ್ವಜನಿಕರನ್ನು ಸಭೆಗೆ ಕರೆದುಕೊಂಡು ಬಂದು ಶೇಕ್‌ ಇಲಿಯಾಸ್‌ ಬಿನ್ ಶೇಖ್ ಇಸ್ಮಾಯಿಲ್‌, ವಯಸ್ಸು ೩೮ ವರ್ಷ, ವಾಸ ನಂ. ೩೧೧೨, ರಾಜಾಜಿನಗರ, ಶ್ರೀನಿವಾಸಪುರ ಟೌನ್‌ ರವರು ಇಳಿಸುತ್ತಿದ್ದು, ಅದರ ಚಾಲಕನನ್ನು ಚುನಾವಣಾಧಿಕಾರಿಗಳಿಂದ ಅಧಿಕೃತವಾಗಿ ಪರವಾನಗಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಲಾಗಿ ಆತನು ಇಲ್ಲವೆಂದು ತಿಳಿಸಿದ್ದು, ಸದರಿ ಆಸಾಮಿಯ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ      

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಗಳ ಪಕ್ಷಿನೋಟ ೧೯ನೇ ಏಪ್ರಿಲ್ ೨೦೦೯

April 19, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನ್ಕೆಕ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೭-೦೪-೨೦೦೯ ರಂದು ಸಂಜೆ ಸುಮಾರು ೫.೩೦ ಗಂಟೆಗೆಯಲ್ಲಿ ಶ್ರೀ. ಬ್ಯಾಟಪ್ಪ ಬಿನ್ ದ್ಯವಪ್ಪ, ಅರ್ಚಕರು, ಶ್ರೀ. ಬ್ಯಾಟರಾಯಸ್ವಾಮಿ ದೇವಾಲಯ, ದೊಡ್ಡೂರು ಕರಪನಹಳ್ಳಿ ಗ್ರಾಮದವರು ಬ್ಯಾಟರಾಯಸ್ವಾಮಿ ದೇವಾಲಯಕ್ಕೆ ಬೀಗ ಹಾಕಿಕೊಂಡು ಮನೆಗೆ ಹೋಗಿ ಮರು ದಿನ ಬಂದು ದೇವಾಲಯದ ಬಾಗಿಲು ನೋಡಲಾಗಿ ಯಾರೋ ಕಳ್ಳರು ದೇವಾಲಯದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಹೊಂಡಿಯಲ್ಲಿದ್ದ ರೂ ೭,೦೦೦/- ಗಳನ್ನು ಹಾಗೂ ಪೂಜಾ ಸಾಮಾನುಗಳು ಸುಮಾರು ರೂ. ೧೦,೦೦೦/- ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: – ಇಲ್ಲ

 ಮೋಸ/ವಂಚನೆ ಪ್ರಕರಣಗಳು: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೭-೦೨-೧೯೯೯ ರಂದು ಪಿರ್ಯಾದಿ ಶ್ರೀ. ಜೆ.ಬಾಬು ಬಿನ್ ಗೋಪಾಲಕೃಷ್ಣನಾಯ್ಡು, ೭ನೇ ಕ್ರಾಸ್, ರಾಬರ್ಟ್‌‌ಸನ್‌ಪೇಟೆ ಎಂಬುವರು ಆರೋಪಿ ಪಿ.ಅನುಸೂಯ ಬಿನ್ ಪಟ್ಟಾಬಿ ಸೀತಾರಮಯ್ಯ, ಮನೆ ಸಂಕ್ಯೆ ೧೮/೧೮, ಪಿರ್ಯಾದರ್ಶೀನಿ, ೧ನೇ ಕ್ರಾಸ್, ನಾಗರಾಜ ಗುಪ್ತ ಲೇಹೌಟ್, ಬೆಂಗಳೂರು ರವರ ಬಳಿ ಹುಲಿಮಾವು ಗ್ರಾಮದ ಪಂಚಾಯ್ತಿಗೆ ಸೇರಿದ ಖಾಲಿ ನಿವೇಶನವನ್ನು ೪ ಲಕ್ಷ ರೂಗಳಿಗೆ ತೆಗೆದುಕೊಂಡು ೧೦,೦೦೦/- ರೂ ಮುಂಗಡ ಹಣವನ್ನು ಹಾಗೂ ಖಾಲಿ ಚೆಕ್ ನೀಡಿದ್ದರೂ ಸಹ ಆರೋಪಿಯು ಪಿರ್ಯಾದಿಗೆ ಖಾಲಿ ನಿವೇಶನ ನೀಡದೆ ಕೆಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಯಾಕಿರುತ್ತಾರೆ ಇತ್ಯಾದಿ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •        ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸದಿಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೮-೦೪-೨೦೦೯ ರಂದು ಸಂಜೆ ೫.೩೦ ಗಂಟೆ ಸಮನಯದಲ್ಲಿ ಪಿರ್ಯಾದಿ ಶ್ರೀ. ನಾಗರಾಜ್ ಬಿನ್ ಲೇಟ್ ಪುಷ್ಪರಾಜ್, ಸಂಜಯಗಾಂದಿ ನಗರ ಎಂಬುವರು ರಾಬರ್ಟ್‌‌ಸನ್‌ಪೇಟೆಯ ಪ್ರಿಚರ್ಡ್‌ ರಸ್ತೆಯಲ್ಲಿರುವ ನಿರ್ಮಲ್ ಸ್ಟೋರ್‍ ಬಳಿ ತನ್ನ ಕಾರು ಪಾರ್ಕ್‌ ಮಾಡಿ ಕುಳಿತಿದ್ದಾಗ ಆರೋಪಿ ಕಾರ್ತಿಕ್, ಕಾರ್‍ ಜಾಲಕ, ೪ನೇ ಕ್ರಾಸ್, ರಾಬರ್ಟ್‌‌ಸನ್‌ಪೇಟೆ ಎಂಬುವರು ತಮಾಷೆಗಾಗಿ ಪಿರ್ಯಾದಿಯೋಂದಿಗೆ ಜಗಳ ತೆಗೆದು ಒಂದು ರೈಸರ್‌ನಿಂದ ಪಿರ್ಯಾದಿ ಕಿವಿಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಇತ್ಯಾದಿ.
  • ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೨-೦೪-೨೦೦೯ ರಂದು ಪಿರ್ಯಾದಿ ಶ್ರೀ. ಸುಬ್ರಮಣಿ ಬಿನ್ ಮುನಿಯಪ್ಪ, ಮುಸ್ತೂರ್‍ ಗ್ರಾಮದವರಿಗೂ ಮತ್ತು ಅದೇ ಗ್ರಾಮದ ನಾರಾಯಣಪ್ಪ ಎಂಬುವರಿಗು  ಜಮೀನಿನ ವಿಷಯವಾಗಿ ಜಗಳ ವಿದ್ದು, ನಾರಾಯಣಪ್ಪ ಮತ್ತು ೪ ಜನ ಇತರರು ಪಿರ್ಯಾದಿಯನ್ನು ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ      

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೬-೦೩-೨೦೦೯ ರಂದು ಕೆ.ಜಿ.ಎಫ್ ಚಾಂಪಿಯನ್‌ರೀಫ್ಸ್, ಎಸ್.ಟಿ ಬ್ಲಾಕ್ ವಾಸಿ ಶ್ರೀಮತಿ ಅಂಜಲಿ ಕೋಂ ಸೆಲ್ವರಾಜ್ ಎಂಬುವಳು ರಾಬರ್ಟ್‌‌ಸನ್‌ಪೇಟೆಯಲ್ಲಿ ನಡೆಯುವ ಪುಷ್ಪ ಪಲ್ಲಕ್ಕಿಯನ್ನು ನೋಡಿಕೊಮಡು ಬರುತ್ತೇನೆ ಎಂದು ಮನೆಯಿಂದ ಹೋದವಳು ಇನ್ನು ವಾಪಸ್ಸು ಮನೆಗೆ ಬಂದಿರುವುದಿಲ್ಲ.

 ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ೦೧

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಮುಂಜಾಗ್ರತಾ ಕ್ರಕ್ಕಾಗಿ ಕೆಳಕಂಡ ರೌಡಿ ಆಸಾಮಿಗಳನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿರುತ್ತದೆ.

೧. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಒಂದು ಕೇಸು: ರೌಡಿ ಆಸಾಮಿಯಾದ ವೆಂಕಟರಾಮಪ್ಪ ಬಿನ್ ಮುನಿವೆಂಕಟಪ್ಪ, ೫೪ ವರ್ಷ, ವೀರಸಂದ್ರ ಗ್ರಾಮದ, ಬೇತಮಂಗಲ ಪೊಲೀಸ್ ಠಾಣೆ ಸರಹದ್ದು, ಬಂಗಾರಪೇಟೆ ತಾಲೂಕು.

೨. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಕೇಸು: ರೌಡಿ ಆಸಾಮಿಯಾದ ರಾಜಣ್ಣ ಬಿನ್ ರುದ್ರಪ್ಪ, ೫೦ ವರ್ಷ, ವಿಜಯನಗರ, ಬಂಗಾರಪೇಟೆ .

೩. ಚಾಮಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಒಂದು ಕೇಸು: ರೌಡಿ ಆಸಾಮಿಯಾದ ಪಳನಿ ಬಿನ್ ರೇನು, ೨೭ ವರ್ಷ, ಎಫ್ ಬ್ಲಾಕ್, ಚಾಂಪಿಯನ್‌ರೀಫ್ಸ್, ಕೆ.ಜಿ.ಎಫ್.  

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೮ನೇ ಏಪ್ರಿಲ್‌ ೨೦೦೯

April 18, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: – ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •        ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸದಿಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಹರಟಿ ಕೆರೆಯ ಬಳಿ ಸಂಭವಿಸಿರುತ್ತದೆ. ಶ್ರೀ. ಸುಬ್ರಮಣಿ ಬಿನ್‌ ನಾರಾಯಣಪ್ಪ, ಕಾರಹಳ್ಳಿ ಎಂಬುವರಿಗೆ ಮಂಜು @ ಜೋಗಿ, ವೇಣುಗೋಪಾಲಪುರ ಗ್ರಾಮದ ವಾಸಿ ಮತ್ತು ಇನ್ನಿಬ್ಬರು ಸೇರಿಕೊಂಡು ಸುಬ್ರಮಣಿಯವರಿಗೆ ಏಕೆ ನಮ್ಮ ಊರಿಗೆ ಹುಡುಗಿರಯನ್ನು ನೋಡುವುದಕ್ಕೆ ಬರುತ್ತೀಯ ಎಂತ ಜಗಳ ಮಾಡಿ ಒಂದು ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೨

  •        ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಮದ್ಯಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲ ಠಾಣೆಯ ಸರಹದ್ದು ಸರ್ವರೆಡ್ಡಿ ಗ್ರಾಮದ ಬಳಿ ಸಂಬವಿಸಿರುತ್ತದೆ. ದಿನಾಂಕ: ೧೭.೦೪.೨೦೦೯ ರಂದು ಬೆಳಿಗ್ಗೆ ೭.೩೦ ಗಂಟೆಯ ಸಮಯದಲ್ಲಿ ಪೊಲೀಸ್‌ ಅಧೀಕ್ಷಕರು, ಕೆ.ಜಿ.ಎಫ್‌ ರವರಿಗೆ ಬಂದ ಖಚಿತ ಮಾರ್ತಮಾನದ ಮೇರೆಗೆ ಸರ್ವರೆಡ್ಡಿ ಹಳ್ಳಿ ಗ್ರಾಮದ ಮುನಿರೆಡ್ಡಿ ರವರ ಜಮೀನಿನ ಪಂಪ್‌ ರೂಮಿನ ಬಳಿ ನೀರಿನ ತೊಟ್ಟಿಯಲ್ಲಿ ಚುನಾವಣೆ ಸಂಬಂದವಾಗಿ ೧೮ ಬಾಕ್ಸ್‌ ಬಾಸ್‌ ಹೆಸರಿನ ವಿಸ್ಕಿ ಮದ್ಯವನ್ನು ವಶಪಡಿಸಕೊಂಡು ಪ್ರಕರಣ ದಾಖಲು ಮಾಡಲಾಗಿರುತ್ತದೆ. ಇದರ ಒಟ್ಟು ಮೌಲ್ಯ ರೂಲ ೩೪,೫೬೦/-ಗಳಾಗಿರುತ್ತದೆ.
  •          ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಮದ್ಯಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲ ಠಾಣೆಯ ಸರಹದ್ದು ಬೂಡದಮಿಟ್ಟ  ಗ್ರಾಮದ ಬಳಿ ಸಂಬವಿಸಿರುತ್ತದೆ. ದಿನಾಂಕ: ೧೭.೦೪.೨೦೦೯ ರಂದು ಮದ್ಯಹ್ನ ೩.೩೦ ಗಂಟೆಯ ಸಮಯದಲ್ಲಿ  ಪಿ.ಎಸ್‌.ಐ. ಬೇತಮಂಗಲ ಪೊಲೀಸ್‌ ಠಾಣೆ ರವರಿಗೆ ಬಂದ ಖಚಿತ ಮಾರ್ತಮಾನದ ಮೇರೆಗೆ ಚುನಾವಣೆ ಸಂಬಂದವಾಗಿ ರಾಜರೆಡ್ಡಿ ಎಂಬುವರ ಕಲ್ಲುಕೂಚಗಲ ಶ್‌ಡ್‌ನಲ್ಲಿ ದಾಳಿ ಮಾಡಿ ಬಾಸ್‌ ಹೆಸರಿನ ೪೬೦೩ ವಿಸ್ಕಿ ಮದ್ಯದ ಬಾಟಲ್‌ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಲಾಗಿರುತ್ತದೆ. ಇದರ ಒಟ್ಟು ಮೌಲ್ಯ ರೂಲ ೨,೧೫,೩೦೦/-ಗಳಾಗಿರುತ್ತದೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

 ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೭ನೇ ಏಪ್ರಿಲ್‌ ೨೦೦೯

April 17, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೬-೦೪-೨೦೦೯ ರಂದು ಬೆಳಿಗ್ಗೆ ೧೧೦೦ ಗಂಟೆಯಲ್ಲಿ ಶ್ರೀಮತಿ ಲಲಿತಾ ಕೋಂ ಶೇಖರ್‌, ವಯಸ್ಸು ೩೨ ವರ್ಷ, ದಾಸರಹೊಸಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ತನ್ನ ಗಂಡನೊಂದಿಗೆ ಯಮಹಾ ಮೋಟಾರ್‌ ಸೈಕಲ್‌ ಸಂಖ್ಯೆ: ಕೆಎ-೦೭-ಕೆ-೩೫೦೬ ವಾಹನದಲ್ಲಿ ಬೇತಮಂಗಲ ಕಡೆ ಕೃಷ್ಣಾವರಂ ಸಮೀಪ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಟಿವಿಎಸ್‌ ಎಕ್ಸೆಲ್‌ ಸಂಖ್ಯೆ: ಕೆಎ-೦೫-ಇಎಂ-೫೦೧೦ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಮಹಾ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪ್ರಯುಕ್ತ ಯಮಹಾ ಮೋಟಾರ್‌ ಸೈಕಲ್‌ನಲ್ಲಿ ಕುಳಿತಿದ್ದ ಶ್ರೀಮತಿ ಲಲಿತಾ ರವರಿಗೆ ತರಚಿದ ಗಾಯಗಳಾಗಿದ್ದು, ಆಕೆಯ ಗಂಡ ಶೇಖರ್‌ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.

-ಸಾಧಾರಣ: – ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ   

ಇತರೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೪-೨೦೦೯ ರಂದು ಮದ್ಯಾಹ್ನ ೧೬೩೦ ಗಂಟೆ ಸಮಯದಲ್ಲಿ ಶ್ರೀ ಗಜಲಕ್ಷ್ಮಿ, ಮಹಿಳಾ ಎ.ಎಸ್.ಐ. ರವರು ತಮ್ಮ ಸಿಬ್ಬಂದಿಯವರೊಂದಿಗೆ ವೀರಸಂದ್ರ ಗ್ರಾಮಕ್ಕೆ ಭೇಟಿ ನೀಡಿದಾಗ ೧)ಶ್ರೀನಿವಾಸಯ್ಯ ಬಿನ್ ನಾಗಪ್ಪ, ವಯಸ್ಸು ೬೯ ವರ್ಷ, ೨)ವೆಂಕಟರಾಮರೆಡ್ಡಿ ಬಿನ್ ಲೇಟ್‌ ಸುಬ್ಬಾರೆಡ್ಡಿ, ವಯಸ್ಸು ೬೬ ವರ್ಷ, ೩)ಕೇಶವರೆಡ್ಡಿ ಬಿನ್  ವೆಂಕಟರಾಮರೆಡ್ಡಿ, ವಯಸ್ಸು ೩೦ ವರ್ಷ ರವರುಗಳು ವೀರಸಂದ್ರ ಗ್ರಾಮದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ಬರುವಂತೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಜಗಳ ಮಾಡುತ್ತಿದ್ದವರನ್ನು ಕಂಡು, ಸದರಿ ಮೂವರನ್ನು ದಸ್ತಗಿರಿ ಮಾಡಿ ಸ್ವತಃ ಕೇಸು ದಾಖಲು ಮಾಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೦೪-೨೦೦೯ ರಂದು ಬೆಳಿಗ್ಗೆ ಸುಮಾರು ೦೮೩೦ ಗಂಟೆಯಲ್ಲಿ ಕು: ಜೆ.ಪ್ರವೀಣಾ ಬಿನ್ ಜಯಕುಮಾರ್‍, ವಯಸ್ಸು ೧೬ ವರ್ಷ, ವಾಸ: ನಂ. ೩, ಸಂಜಯಗಾಂಧಿನಗರ, ಕೆ.ಜಿ.ಎಫ್. ರವರು ಮಲ ವಿಸರ್ಜನೆಗೆಂದು ಹೋದವಳು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ೧೦

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ೨೦೦೯ ರ ಪ್ರಯುಕ್ತ ಈ ಕೆಳಕಂಡ ಮುಂಜಾಗ್ರತೆ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತದೆ.

೧. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ ನಾರಾಯಣಸ್ವಾಮಿ ಬಿನ್ ಲೇಟ್‌ ಪಿ.ವೆಂಕಟಸ್ವಾಮಪ್ಪ, ವಯಸ್ಸು ೫೫ ವರ್ಷ, ಪಾಕರಹಳ್ಳಿ ಗ್ರಾಮ ಮತ್ತು ಶ್ರೀನಾಥ ಬಿನ್ ನಾರಾಯಣಸ್ವಾಮಿ, ವಯಸ್ಸು ೩೦ ವರ್ಷ, ಪಾಕರಹಳ್ಳಿ ಗ್ರಾಮ ಎಂಬುವರುಗಳನ್ನು ಮುಂಜಾಗ್ರತಾ ಕ್ರಮಕ್ಕಾಗಿ ದಸ್ತಗಿರಿಮಾಡಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

೨. ಚಾಂಪಿಯನ್‌ರೀಪ್ಸ್ ಪೊಲೀಸ್ ಠಾಣೆಯಲ್ಲಿ ಎರಡು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ ಉಮೇಶ್‌ ಬಿನ್ ಲೇಟ್‌ ಮುರುಗೇಶ್‌, ವಯಸ್ಸು ೨೮ ವರ್ಷ, ವಾಸ ನಂ. ೧೫೩, ಐ.ಬ್ಲಾಕ್‌, ಚಾಂಪಿಯನ್‌ರೀಪ್ಸ್‌, ಕೆ.ಜಿ.ಎಫ್. ಮತ್ತು ಎಲ್ಲಯ್ಯ ಬಿನ್ ಜಾನ್‌, ವಾಸ: ನಂ. ೧೬, ಬ್ಯಾಂಡ್‌ ಲೈನ್‌, ಚಾಂಪಿಯನ್‌ರೀಪ್ಸ್‌, ಕೆ.ಜಿ.ಎಫ್. ಎಂಬುವರುಗಳನ್ನು ಮುಂಜಾಗ್ರತಾ ಕ್ರಮಕ್ಕಾಗಿ ದಸ್ತಗಿರಿಮಾಡಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

೩. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ನಾಲ್ಕು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ ೧)ಬಿ.ಎಂ.ರಮೇಶ್‌ ಬಿನ್ ಮುನಿವೆಂಕಟಪ್ಪ, ನ್ಯೂಟೌನ್‌, ಬೇತಮಂಗಲ, ೨)ಕೆ.ಸಿ.ಶಿವಪ್ಪ ಬಿನ್ ಚಿನ್ನಸ್ವಾಮಿ, ಬೇತಮಂಗಲ, ೩)ಪ್ರಕಾಶ್ ಬಿನ್ ವೆಂಕಟೇಶಪ್ಪ, ಚಿನ್ನಪಲ್ಲಿ ಗ್ರಾಮ ಮತ್ತು ೪)ರವಿ ಬಿನ್ ಕೆಂಪಯ್ಯ, ಬಡಮಾಕನಹಳ್ಳಿ ಗ್ರಾಮ ಎಂಬುವರುಗಳನ್ನು ಮುಂಜಾಗ್ರತಾ ಕ್ರಮಕ್ಕಾಗಿ ದಸ್ತಗಿರಿಮಾಡಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ೦೨ ಪ್ರಕರಣಗಳು ದಾಖಲಾಗಿರುತ್ತವೆ. ಜಮೀನಿನ ವಿಚಾರದಲ್ಲಿ ೧)ರಾಮಚಂದ್ರಾರೆಡ್ಡಿ ಬಿನ್ ಹನುಮಂತರೆಡ್ಡಿ, ವಯಸ್ಸು ೪೫ ವರ್ಷ, ೨)ಕರುಣಾಕರರೆಡ್ಡಿ ಬಿನ್ ಹನುಮಂತರೆಡ್ಡಿ, ವಯಸ್ಸು ೨೮ ವರ್ಷ, ೩)ಹನುಮಂತರೆಡ್ಡಿ ಬಿನ್ ಲೇಟ್‌ ಗಂಡಿರೆಡ್ಡಿ, ವಯಸ್ಸು ೭೦ ವರ್ಷ ಎಲ್ಲರೂ ವಾಸ: ಸೂರಪ್ಪಲ್ಲಿ ಗ್ರಾಮ ರವರಿಗೂ ಮತ್ತು ರಾಜೇಶ್‌ ಕ್ಯಾಂಪಿನ ವಾಸಿಗಳಾದ ೧)ಪೊಣ್ಣುರಂಗಂ ಬಿನ್ ಕೊಲ್ಲಾಪುರ, ವಯಸ್ಸು ೪೦ ವರ್ಷ, ೨) ಶ್ರೀಮತಿ ಶೋಭಾ ಕೋಂ ಪೊಣ್ಣುರಂಗಂ, ವಯಸ್ಸು ೨೫ ವರ್ಷ, ೩)ಭಾರತ ಸಾರಥಿ ಬಿನ್ ಕೊಲ್ಲಾಪುರ, ವಯಸ್ಸು ೫೦ ವರ್ಷ ಮತ್ತು ೪)ಬರ್ನಾಡ್ ಬಿನ್ ಅಂತೋಣಿದಾಸ್‌, ವಯಸ್ಸು ೪೮ ವರ್ಷ, ವಾಸ: ಪೈಪ್‌ಲೈನ್‌, ಕೆ.ಜಿ.ಎಫ್. ರವರುಗಳಿಗೆ ಆಗಾಗ ಗಲಾಟೆಗಳು ಆಗುತ್ತಿದ್ದು, ಇನ್ನು ಮುಂದೆಯೂ ಸಹ ಗ್ರಾಮದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ಬರುವಂತೆ ಹಾಗೂ ಪ್ರಾಣ ಹಾನಿಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಉಭಯಸ್ಥರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಿರುತ್ತಾರೆ. 

 ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೬ನೇ ಏಪ್ರಿಲ್‌ ೨೦೦೯

April 16, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: – ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •            ಉರಿಗಾಂ ಪೊಲಿಸ್‌ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಉರಿಗಾಂನ ಎಂ.ಎಲ್‌. ಬ್ಲಾಕ್‌ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೫.೦೪.೨೦೦೯ ರಂದು ರಾತ್ರಿ ೧೦.೦೦ ಗಂಟೆ ಸಮದಯಲ್ಲಿ ರಾಜಿ ಮತ್ತು ರಾಜಿಯ ೪ ಜನ ಮಕ್ಕಳು (ವಿಳಾಸ ತಿಳಿಯಬೇಕಾಗಿರುತ್ತದೆ)  ಅಕ್ರಮಕೂಟ ಕಟ್ಟಿಕೊಂಡು ಮನೋಹನ್‌ ಬಿನ್‌ ಲೇಟ್‌ ಹನುಮಾನ್‌, ಅಂಬೇಡ್ಕರ್‌ ನಗರ ವಾಸಿ ರವರ ತಂಗಿಯ ಗಂಡ ಸಂಪತ್‌ ರವರ ಬಳಿ ಜಗಳ ಮಾಡುತ್ತಿದ್ದು, ಜಗಳ ಬಿಡಿಸಲು ಹೋದಾಗ ರಾಜಿ ಮತ್ತು ೪ ಜನ ಮಕ್ಕಳು ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಹಲ್ಲೆ: ಇಲ್ಲ   

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: 

  •             ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೪-೨೦೦೯ ರಂದು  ಪೊಲೀಸ್‌ ಉಪಾಧೀಕ್ಷಕರು, ಮತ್ತು ಸಿಪಿಐ ಬಂಗಾರಪೇಟೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಸರ್ವರೆಡ್ಡಿ ಹಳ್ಳಿ ಗ್ರಾಮದ ಮುನಿರೆಡ್ಡಿ ರವರ ಕೋಳಿ ಪಾರಂನಲ್ಲಿ ಚುನಾವಣೆ ಸಂಭಂದ ಅಕ್ರಮವಾಗಿ ೧೯ ಪ್ರಾಸ್ಪಿಕ್‌ ಚೀಲಗಳಲ್ಲಿ ಒಟ್ಟು ೨೬೭೨ (೧೮೦ ಎಂಎಲ್‌ನ) ಬಾಸ್‌ ವಿಸ್ಕಿ ಬಾಟಲ್‌ಗಳನ್ನು ಇಟ್ಟಿದ್ದು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿರುತ್ತದೆ ಇದರ ಮೌಲ್ಯ ರೂ. ೧,೦೬,೮೮೦.೦೦  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ೦೧

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ೨೦೦೯ ರ ಪ್ರಯುಕ್ತ ಈ ಕೆಳಕಂಡ ಮುಂಜಾಗ್ರತೆ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತದೆ.

೧. ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಯಾದ ನಾಗೇಂದ್ರ @ ನಾಗರಾಜು ಬಿನ್ ಕೆ.ನಲ್ಲಯ್ಯ ಎಂಬುವರನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

೨. ಉರಿಗಾಂ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಯಾದ ಗೋಪಿ @ ಗೋಪಿನಾಥ್ ಎಂಬುವರನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

೩. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ  ಬಿ.ಎಂ.ರಾಮಚಂದ್ರಪ್ಪ ಬಿನ್ ಮುನಿವೆಂಕಟಪ್ಪ, ನ್ಯೂ ಟೌನ್ ಬೇತಮಂಗಲ ಮತ್ತು ವಿಜಿ @ ವಿಜಯ ಕುಮಾರ್‍ ಬಿನ್ ಮುನಿವೆಂಕಟಪ್ಪ, ನ್ಯೂ ಟೌನ್, ಬೇತಮಂಗಲ  ಎಂಬುವರುಗಳನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

೪. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೂರು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ ಚಿನ್ನ @ ಚಿನ್ನಗಾಡು ಬಿನ್ ರಾಮಸ್ವಾಮಿ, ಕಾರಹಳ್ಳಿ, ಬಂಗಾರಪೇಟೆ, ಶಿವಕುಮಾರ್‍ ಬಿನ್ ಮಲ್ಲಪ್ಪ, ವಿವೇಕನಂದ ನಗರ, ಬಂಗಾರಪೇಟೆ ಮತ್ತು ಶ್ರೀನಿವಾಸ ಬಿನ್ ಬಿ.ಮುನಿಯಪ್ಪ, ಬೋವಿ ನಗರ, ಬಂಗಾರಪೇಟೆ ಎಂಬುವರುಗಳನ್ನು  ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

  ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೫ನೇ ಏಪ್ರಿಲ್ ೨೦೦೯

April 15, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: – ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೪-೦೪-೨೦೦೯ ರಂದು ೧೩೪೫ ಗಂಟೆ ಸಮಯದಲ್ಲಿ ಬಂಗಾರಪೇಟೆ ಟೌನ್, ಕುಪ್ಪಸ್ವಾಮಿ ಲೇಔಟ್ ವಾಸಿ ಶ್ರೀ ವಿಶ್ವನಾಥ್ ಎಂಬುವರು ಬಂಗಾರಪೇಟೆಯ ಎಸ್.ಎನ್.ರೆಸಾರ್ಟ್‌ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಎದರುಗಡೆಯಿಂದ ಟೆಂಪೋ ಸಂಖ್ಯೆ ಕೆಎ-೦೮-ಎ-೬೬೬ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಿಶ್ವನಾಥ್ ರವರಿಗೆ ಡಿಕ್ಕಿಹೊಡೆದ ಪ್ರಯುಕ್ತ ರಕ್ತಗಾಯವಾಗಿರುತ್ತದೆ.  

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ   

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೪-೨೦೦೯ ರಂದು ಬೆಳಿಗ್ಗೆ ೦೬೩೫ ಗಂಟೆಯಲ್ಲಿ ಶ್ರೀ ವಿ.ಸೋಮಶೇಖರ್‍, ಪಿ.ಎಸ್.ಐ., ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪಾರಂಡಹಳ್ಳಿ ಬಳಿಗೆ ತನ್ನ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ, ಕ್ಯಾಸಂಬಳ್ಳ ಕಡೆಯಿಂದ ಬರುತ್ತಿದ್ದ ಲಾರಿ ಸಂಖ್ಯೆ: ಟಿಎನ್‌-೨೩-ಬಿ-೨೭೯೯ ಮತ್ತು ಟೆಂಪೊ ಸಂಖ್ಯೆ: ಟಿಎನ್-೦೫-ಹೆಚ್‌-೦೪೬೮ ವಾಹನಗಳನ್ನು ನಿಲ್ಲಿಸಿ ಪರಿಶೀಲಿಸಲಾಗಿ ಲಾರಿಯಲ್ಲಿ ೧೨೦ ಅಕ್ಕಿಮೋಟೆಗಳು, ಟೆಂಪೋದಲ್ಲಿ ೮೫ ಅಕ್ಕಿಮೋಟೆಗಳನ್ನು ಯಾವುದೇ ಪರವಾನಿಗೆ ದಾಖಲಾತಿಗಳು ಇಲ್ಲದೆ ಅಕ್ರಮವಾಗಿ ತಮಿಳುನಾಡು ಕಡೆಯಿಂದ ಬಂಗಾರಪೇಟೆಗೆ ಸಾಗಿಸುತ್ತಿರುವುದಾಗಿ ತಿಳಿದು ಬಂದಿದ್ದರಿಂದ ಸದರಿ ಅಕ್ಕಿಯನ್ನು ವಾಹನಗಳ ಸಮೇತ ಅಮಾನತ್ತುಪಡಿಸಿಕೊಂಡು, ಟೆಂಪೋ ಚಾಲಕ ಸುಬ್ರಮಣಿ ಬಿನ್ ಚಿನ್ನನ್ನ, ವಯಸ್ಸು ೨೬ ವರ್ಷ, ವಾಸ: ಗಾಂಡ್ಲಪಲ್ಲಿ, ವಿ.ಕೋಟ, ಆಂಧ್ರಪ್ರದೇಶ ಮತ್ತು ಲಾರಿ ಚಾಲಕ ಏಳುಮಲೈ ಬಿನ್ ಕೃಷ್ಣನ್, ವಯಸ್ಸು ೪೬ ವರ್ಷ, ವಾಸ: ನಂ. ೬೪/೩, ವಸಂತಪುರಂ, ವೇಲೂರು, ತಮಿಳುನಾಡು ರವರುಗಳನ್ನು ದಸ್ತಗಿರಿ ಮಾಡಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
  • ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜನತಾ ಪ್ರತಿನಿಧಿ ಕಾಯಿದೆ, ೧೯೫೧ರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೧೪-೦೪-೨೦೦೯ ರಂದು ಮದ್ಯಾಹ್ನ ೧೨೫೫ ಗಂಟೆಯಲ್ಲಿ ಎಂ.ಸಿ.ಸಿ. ತಂಡದ ನಾಯಕರಾದ ಶ್ರೀ ಎಂ.ಶ್ರೀಧರ್‍, ಕೆ.ಜಿ.ಎಫ್. ಮತ್ತು ಪಿ.ಎಸ್.ಐ. ಶ್ರೀ ಆರ್‍.ವೆಂಕಟೇಶ್ ರವರುಗಳು ಠಾಣಾ ಸರಹದ್ದು ಗಡ್ಡೂರು ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಸದರಿ ಗ್ರಾಮದಲ್ಲಿ ಒಂದು ಮೋಟಾರು ಸೈಕಲ್‌ ಸಂಖ್ಯೆ: ಕೆಎ-೫೩-ಇ-೯೪೩೮ ರಲ್ಲಿ ಯಾರೋ ಒಬ್ಬ ಕಾಂಗ್ರೆಸ್‌ ಕಾರ್ಯಕರ್ತ ಕಾಂಗ್ರೆಸ್‌ ಪಕ್ಷಕ್ಕೆ ಸಂಬಂಧಪಟ್ಟ ಶ್ರೀ ಕೆ.ಹೆಚ್‌.ಮುನಿಯಪ್ಪ ರವರ ಭಾವಚಿತ್ರವುಳ್ಳ ಭಿತ್ತಿ ಪತ್ರಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಹಂಚಿ ಪ್ರಚಾರ ಮಾಡುತ್ತಿದ್ದು ಮೇಲ್ಕಂಡವರನ್ನು ಕಂಡು ಓಡಿ ಹೋಗಿರುತ್ತಾನೆ.  ಸದರಿ ಮೋಟಾರ್‌ ಸೈಕಲ್‌ನಲ್ಲಿ ಪರೀಕ್ಷಿಸಲಾಗಿ ೧೫೦ ಭಿತ್ತಿಪತ್ರಗಳು ಇದ್ದು ಅವುಗಳನ್ನು ಹಂಚಲು ಹಾಗೂ ಪ್ರಚಾರ ಮಾಡಲು ಯಾವುದೇ ರೀತಿಯ ಅನುಮತಿ ಪಡೆಯದೆ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ಹಾಗೂ ಮೋಟಾರ್‌ ಸೈಕಲ್‌ನ್ನು ಬೀಗ ಹಾಕಿಕೊಂಡು ಭಿತ್ತಿಪತ್ರಗಳನ್ನು ಹಂಚುತ್ತಿದ್ದ ಆರೋಪಿ ಪರಾರಿಯಾಗಿರುತ್ತಾನೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೪-೨೦೦೯ ರಂದು ರಾತ್ರಿ ೨೦೧೫ ಗಂಟೆಯಲ್ಲಿ ಸಿ.ಪಿ.ಐ. ಶ್ರೀ ಜಿ.ಕೇಶವಮೂರ್ತಿ, ಬಂಗಾರಪೇಟೆ ವೃತ್ತ ಮತ್ತು ಎಸ್.ಐ. ಶ್ರೀ ಸಿ.ಬಿ.ಶಿವಸ್ವಾಮಿ, ಬಂಗಾರಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಕಣಿಂಬೆಲೆ ಗ್ರಾಮದ ಮುನಿಸ್ವಾಮಿ ತೋಟದಲ್ಲಿ ದಾಳಿ ಮಾಡಲಾಗಿ, ಲೋಕಸಭಾ ಚುನಾವಣೆ ಸಂಬಂಧ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ೯೧೨ ಬಾಸ್‌ ವಿಸ್ಕಿ ಕ್ವಾರ್ಟರ್‌ ಬಾಟಲ್‌ಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಇದಕ್ಕೆ ಸಂಬಂಧಪಟ್ಟ ಆರೋಪಿಗಳು ಪರಾರಿಯಾಗಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆಯಾಗಿ ಪ್ರಕರಣ ದಾಖಲಾಗಿರುತ್ತದೆ. ಕಾಮಸಮುದ್ರಂ ಪೊಲೀಸ್ ಠಾಣೆ ಸರಹದ್ದು ಕೇತಗಾನಹಳ್ಳಿ ಗ್ರಾಮದಲ್ಲಿ ಶ್ರೀ ಸಿ.ವೆಂಕಟೇಶ್ ಬಿನ್ ತಾಯಪ್ಪ ಮತ್ತು ಇತರೆ ೫ ಜನರಿಗೂ ಹಾಗೂ ನಾಗರಾಜ ಬಿನ್ ಚಿನ್ನಪ್ಪ ಮತ್ತು ಇತರೆ ಇಬ್ಬರಿಗೂ ಜಾತಿ ವಿಚಾರದಲ್ಲಿ ಆಗಾಗ ಜಗಳಗಳು ಆಗುತ್ತಿದ್ದು, ಮುಂದೆಯೂ ಸಹ ಎರಡೂ ಗುಂಪುಗಳ ನಡುವೆ ಗಲಭೆಗಳಾಗಿ ಪ್ರಾಣಹಾನಿಯಾಗುವ ಸಂಭವಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.