ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೩-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ೦೧
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಬೆಮೆಲ್ ನಗರದ, ವಿಜಯ ನಗರ, ೯ನೇ ಕ್ರಾಸ್ ಮನೆ ಸಂಖ್ಯೆ ೧೭೬ರ ವಾಸಿ ಶ್ರೀ. ಷಣ್ಮುಗಂ ಬಿನ್ ಲೇಟ್ ಜ್ಞಾನೇಶ್ವರ್, ೬೧ ವರ್ಷ ಎಂಬುವರು ಬೆಮೆಲ್ ಕಾರ್ಖಾನೆಯಿಂದ ನಿವೃತ್ತಿಹೊಂದಿ, ನಂತರ ಬೆಮೆಲ್ ಕಾರ್ಖಾನೆಯಲ್ಲಿ ಟಿ.ಸಿ.ಎಲ್ ನೌಕರನಾಗಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: ೧೯-೦೩-೨೦೦೯ ರಂದು ಬೆಳಿಗ್ಗೆ ೭-೦೦ ಗಂಟೆಗೆ ಎಂದಿನಂತೆ ಒಂದನೇ ಪಾಳಿ ಕರ್ತವ್ಯಕ್ಕೆ ಬೆಮೆಲ್ ಕಾರ್ಖಾನೆಗೆ ಹೋಗಿದ್ದು, ಬೆಳಿಗ್ಗೆ ೧೧-೧೫ ಗಂಟೆ ಸಮಯದಲ್ಲಿ ಕಾರ್ಖಾನೆಯ ಒಳಗಡೆಯಿರುವ ೬೬ ಕೆವಿ ವಿದ್ಯೂತ್ ಕಂಬದಲ್ಲಿ ಷಣ್ಮುಗಂ ರವರು ರಿಪೇರಿ ಮಾಡುತ್ತಿದ್ದಾಗ ಯಾರೋ ಎಲೆಕ್ಟ್ರಿಕಲ್ ಸ್ವಚ್ ಆನ್ ಮಾಡಿದಾಗ ವಿದ್ಯೂತ್ ಸ್ಪರ್ಶವಾಗಿ ಷಣ್ಮುಗಂ ರವರಿಗೆ ಸುಟ್ಟಗಾಯವಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.
-ಸಾಧಾರಣ: -೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೭-೦೩-೨೦೦೯ ರಂದು ರಾತ್ರಿ ೭.೨೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್, ಮಾರಿಕುಪ್ಪಂ, ನ್ಯೂ ವೆಸ್ಟ್ ಗಿಲ್ಬರ್ಟ್ಸ್, ಮನೆ ಸಂಖ್ಯೆ ೩೦ ರ ವಾಸಿ ಶ್ರೀ.ಕುಮಾರ್ ಬಿನ್ ಲೇಟ್ ಆನಂದ್ ಎಂಬುವರು ಯಾವುದೋ ಆಟೋದಲ್ಲಿ ರಾಬರ್ಟ್‌ಸನ್‌ಪೇಟೆ ಕಡೆಯಿಂದ ಆಂಡಸ್ರನ್‌ಪೇಟೆಗೆ ಹೋಗಲು ಹಿಂದೆ ಶೀಟ್‌ನಲ್ಲಿ ಹೊರಗಡೆ ಕಾಲು ಬಿಟ್ಟು ಕುಳಿತುಕೊಂಡು ಹೋಗುತ್ತಿದ್ದಾಗ ಸಲ್ಡಾನ ಸರ್ಕಲ್ ಹತ್ತಿರ ಬಿ.ಎಂ ರಸ್ತೆಯಲ್ಲಿ ಕೆ.ಜಿ.ಎಫ್ ಮಾರಿಕುಪ್ಪಂ ವಾಸಿ ವಸಂತ್ ಬಿನ್ ವಾಸುದೇವಮೂರ್ತಿ ತನ್ನ ಹೀರೋ ಹೊಂಡ ಸಂಖ್ಯೆ ಕೆಎ-೦೮-ಇಎಸ್-೩೨೪೭ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋದಲ್ಲಿದ್ದ ಕುಮಾರ್ ರವರ ಕಾಲಿಗೆ ಹೊಡೆದ ಪ್ರಯುಕ್ತ ಕುಮಾರ್ ರವರು ಕೆಳಗೆ ಬಿದ್ದು ಬಲಕಾಲಿನ ತೊಡೆ, ಮೊಣಕಾಲು ಮತ್ತು ಪಾದಕ್ಕೆ ರಸ್ತಗಾಯವಾಗಿರುತ್ತದೆ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


