ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಮಾರ್ಚ್‌ ೨೦೦೭

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೩-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ           

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ   

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ         

 ಇತರೆ: ಇಲ್ಲ 

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕಿನ ಕಳ್ಳಿಕುಪ್ಪ ಗ್ರಾಮದ ವಾಸಿ ನಾಗಭೂಷಣ ಅಲಿಯಾಸ್‌ ದೊಡ್ಡಗೌಡ ಬಿನ್ ವೆಂಕಟೇಗೌಡ ರವರ ಜಮೀನಿನಲ್ಲಿ ಸಂಪಂಗೆಮ್ಮ ಎಂಬುವರು ನೀರಿನ ಟ್ಯಾಂಕ್‌ ಬಳಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಬೇತಮಂಗಲ ಪೊಲೀಸರು ದಾಳಿ ನಡೆಸಿ, ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಬಿಂದಿಗೆಯಲ್ಲಿ ೨ ಲೀಟರ್‍ ಕಳ್ಳಬಟ್ಟಿ ಸಾರಾಯಿ ಇದ್ದು, ೨ ಡೇಕ್ಸಾಗಳು, ೧ ಮಣ್ಣಿನ ಮಡಿಕೆ, ೨ ಪ್ಲಾಸ್ಟಿಕ್‌ ಬಿಂದಿಗೆಗಳು ಹಾಗೂ ಕಳ್ಳಬಟ್ಟಿಯನ್ನು ತಯಾರಿಸಲು ತಂದಿದ್ದ ೪ ಜಾಲಿ ಮರದ ತೊಗಡೆ ಇದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿರುತ್ತಾರೆ.

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ          

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಈ ಕೃತ್ಯವು ಎಸ್.ಎನ್.ಎಂ.ಸ್ಕೂಲ್‌ ರಸ್ತೆ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್. ಇಲ್ಲಿ ನಡೆದಿರುತ್ತದೆ. ಶ್ರೀ ಎಲ್.ಎಸ್.ಕಮಲ್‌, ವಯಸ್ಸು ೬೦ ವರ್ಷ, ಎಸ್.ಎನ್.ಎಂ.ಸ್ಕೂಲ್‌ ರಸ್ತೆ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್. ಎಂಬುವರಿಗೆ ಕ್ಯಾನ್ಸರ್‌ ಖಾಯಿಲೆ ಇದ್ದು, ಆಪರೇಷನ್‌ ಆಗಿ ಚಿಕಿತ್ಸೆ ಕೊಡಿಸಿದ್ದರೂ ಸಹ ಗುಣಮುಖನಾಗದೇ ಇದ್ದುದ್ದರಿಂದ ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ ೨೦-೦೩-೨೦೦೯ ರಂದು ರಾತ್ರಿ ೨೦೩೦ ಗಂಟೆಯಲ್ಲಿ ತನ್ನ ವಾಸದ ಮನೆಯಲ್ಲಿ ಇಲಿಯ ವಿಷವನ್ನು ಸೇವಿಸಿದ್ದ ಇವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಭಗವಾನ್‌ ಶ್ರೀ ಮಹಾವೀರ್‌ ಜೈನ್‌ ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ: ೨೧-೦೩-೨೦೦೯ ರಂದು ಸಂಜೆ ೧೯೧೦ ಗಂಟೆಗೆ ಮೃತಪಟ್ಟಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೭-೦೩-೨೦೦೯ ರಂದು ಬೆಳಿಗ್ಗೆ ೧೧೪೫ ಗಂಟೆಯಲ್ಲಿ ರೌಡಿ ಹಾಳೆ ಆಸಾಮಿಯಾದ ಬುಕ್ಕ ಅಲಿಯಾಸ್ ಚಿನ್ನಪ್ಪಯ್ಯ, ವಯಸ್ಸು ೪೨ ವರ್ಷ, ವಾಸ: ನಂ.೩೦, ಹೆನ್ರೀಸ್‌ ೩ನೇ ಲೈನ್‌, ಉರಿಗಾಂ, ಕೆ.ಜಿ.ಎಫ್. ರವರು ಲೈನಿನ ಸಾರ್ವಜನಿಕ ಸ್ಥಳದಲ್ಲಿ ಜನರಲ್ಲಿ ಭಯಭೀತಿಯನ್ನುಂಟು ಮಾಡುತ್ತಿದ್ದು ಮತ್ತು ೨೦೦೯ನೇ ಸಾಲಿನ ಲೋಕಸಭಾ ಚುನಾವಣೆ ವೇಳೆಯಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರೆಸಿ ಚುನಾವಣಾ ನೀತಿ ಸಂಹಿತೆಯನ್ನು ಮುರಿಯುವ ಸಂಭವ ಬಹಳ ಇದ್ದು, ಸಮಾಜಕ್ಕೆ ಕಂಟಕನಾಗಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಸಂಭವ ಬಹಳ ಇದ್ದುದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮೇಲ್ಕಂಡ ರೌಡಿ ಆಸಾಮಿಯನ್ನು ಹಿಡಿದು ಉರಿಗಾಂ ಪೊಲೀಸರು ಪ್ರಕರಣ ದಾಖಲು ಮಾಡಿರುತ್ತಾರೆ.

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply