ದಿನದ ಅಪರಾಧಗಳ ಪಕ್ಷಿನೋಟ ೨೫ನೇ ಮಾರ್ಚ್‌ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೩-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ           

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೩-೨೦೦೯ ರಂದು  ಬೆಳಿಗ್ಗೆ ೫.೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ರಾಬರ್ಟ್‌‌ಸನ್‌ಪೇಟೆಯ ಬೌರಿಲಾಲ್‌ಪೇಟೆಯ ವಾಸಿ ರಾಘವೇದ್ರ ರವರ ಮನೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲನ್ನು ಮುರಿದು ಅಲ್ಮೆರದಲ್ಲಿದ್ದ ರೂ ೨೦,೦೦೦\- ಗಳ ನಗದು ಮತ್ತು ಚಿನ್ನದ ಒಡವೆಗಳನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ.        

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೩-೨೦೦೯ ರಂದು ಬೆಳಿಗ್ಗೆ ೯.೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಮುಖ್ಯಪೇದೆ ೮೯ ಮತ್ತು ಪೇದೆ ೨೪,೧೭೧ ರವರು ನಗರ ಗಸ್ತಿನಲ್ಲಿದ್ದಾಗ ಬಂಗಾರಪೇಟೆ ತಾಲೂಕು ತಮ್ಮೇನಹಳ್ಳಿ ಗ್ರಾಮದ ವಾಸಿ ಶಕರಪ್ಪ ಬಿನ್ ಐಪಣ್ಣ ಎಂಬುವನು ಬಂಗಾರಪೇಟೆಯ ಅರಣ್ಯ ಇಲಾಖೆಯ ಮುಂಭಾಗ ಜನರನ್ನು ಸೇರಿಸಿಕೊಂಡು ಒಂದು ಟಿವಿಎಸ್ ಹೆವಿ ಡ್ಯೂಟಿ ಯನ್ನು ಇಟ್ಟುಕೊಂಡು ಮಾರಾಟ ಮಾಡಲು ವಂಚು ಹಾಕಿರುತ್ತಾನೆ, ಅವನನ್ನು ಹಿಡಿದು ಕ್ರಮ ಜರುಗಿಸಿರುತ್ತಾರೆ.

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ   

 -ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ:  ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೩-೦೩-೨೦೦೯ ರಂದು ಸಂಜೆ ೦೫.೧೫ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ರಾಬರ್ಟ್‌‌ಸನ್‌ಪೇಟೆಯ ಸಂಜಯಗಾಂದಿನಗರದ ವಾಸಿ ಶ್ರೀಮತಿ ಪಾಪಮ್ಮ ಕೋಂ ಎರಚಪ್ಪ, ೭೦ ವರ್ಷ ಎಂಬುವರು ಅದೇ ಕೇರಿಯಲ್ಲಿರುವ ಅಂಗಡಿಯಿಂದ ಎಲೆ ಅಡಿಕೆ ತೆಗೆದುಕೊಂಡು ಮನೆಗೆ ಬರಲು ಸಾರ್ವಜನಿಕರ ಆಸ್ಪತ್ರೆಯ ಕಾಂಪೌಂಡ್ ಗೋಡೆ ಹಿಂಭಾಗದ ಟೈಟಾನಿಕ್ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ರಾಬರ್ಟ್‌‌ಸನ್‌ಪೇಟೆ ಕಡೆಯಿಂದ ಸಂಜಯಗಾಂದಿನಗರದ ಕಡೆಗೆ ಬರುತ್ತಿದ್ದ ವಾಹನ ಸಂಖ್ಯೆ ಕೆಎ-೦೭-ಎಂ-೫೭೭ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಾಪಮ್ಮನವರಿಗೆ  ಹಿಂದೆಯಿಂದ ಡಿಕ್ಕಿ ಹೊಡೆದ ಕಾರಣ ಅವರಿಗೆ ಬಲಗೈ, ಎಡಕಾಲಿಗೆ ಮತ್ತು ಬೇರೆಡೆಗೆ ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಲಕಾರಿಯಾಗದೆ ಮೃತ ಪಟ್ಟಿರುತ್ತಾನೆ. 
  • ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೫-೦೩-೨೦೦೯ ರಂದು ಬೆಳಿಗ್ಗೆ ೧೦.೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ರಾಬರ್ಟ್‌‌ಸನ್‌ಪೇಟೆಯ ನಗರ ಸಭೆಯ ಟ್ರಾಕ್ಟರ್‍ ಸಂಖ್ಯೆ ಕೆಎ-೦೮-೩೧೯೩-೯೪ ರಲ್ಲಿ ಆಂಡ್ರಸನ್‌ಪೇಟೆಯಿಂದ ಕಸವನ್ನು ತುಂಬಿಸಿಕೊಂಡು ರಾಜೇಶ್ ಕ್ಯಾಂಪ್‌ಗೆ ಹೋಗುತ್ತಿದ್ದಾಗ ಟ್ರಾಕ್ಟರ್‍ ಚಾಲಯ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಈಡನ್ಸ್ ಶಾಲೆಯ ಮುಂಭಾಗ ತಾರ್‍ ರಸ್ತೆಯಲ್ಲಿ ಟ್ರಾಕ್ಟರ್‍ ಉರಳಿ ಬಿದ್ದಾಗ ಟ್ರಾಕ್ಟರ್‌ನಲ್ಲಿ ಕುಳಿತಿದ್ದ ರವಿ ಎಂಬುವನು ಕೆಳೆಗೆ ಬಿದ್ದು ಟ್ರಾಕ್ಟರ್‍ ಟ್ರಾಲಿ ತಲೆ ಮೇಲೆ ಬಿದ್ದ ಕಾರಣ ತಲೆಯ ಮೇಲೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.

-ಸಾಧಾರಣ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ: ೨೪-೦೩-೨೦೦೯ ರಂದು ಸಂಜೆ ೦೭.೦೦ ಗಂಟೆ ಸಮಯದಲ್ಲಿ ಬೆಮೆಲ್ ಕಾರ್ಖಾನೆಯ ಮೈನ್ ಗೇಟ್ ಮುಂಭಾಗವಿರುವ ಬಸ್ ನಿಲ್ದಾಣದ ಕಡೆ ಬೆಮೆಲ್ ನಗರದ ಒಂದನೇ ಟೈಪ್ ವಾಸಿ ಬೆಮೆಲ್ ನೌಕರ ಶ್ರೀ ಎಸ್.ಜೋಸೆಫ್ ರೊಜಾರಿಯೋ ಬಿನ್ ಲೇಟ್ ಸಿಂಗರಾಜ್ ಎಂಬುವರು ನಡೆದುಕೊಂಡು ಹೋಗುತ್ತಿದ್ದಾಗ ಕೆ.ಜಿ.ಎಫ್ ಕಡೆಯಿಂದ ಕೆಆರ್‌ಎಸ್ ಖಾಸಗಿ ಬಸ್ ಸಂಖ್ಯೆ ಕೆಎ-೦೮-೩೯೪೭ ರ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜೋಸೆಫ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಜೊಸೆಫ್ ಎರಡೂ ಮೊಣಕಾಲುಗಳ ಮೇಲೆ ಬಲ ಹೆಬ್ಬರಳಿನ ಬಳಿ, ಕಣ್ಣಿನ ಹುಬ್ಬಿನ ಬಳಿ ರಕ್ತಗಾಯವಾಗಿರುತ್ತದೆ.

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

  ಹಲ್ಲೆ: ಇಲ್ಲ         

 ಇತರೆ: ಇಲ್ಲ 

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೦-೦೩-೨೦೦೯ ರಂದು ಬೆಳಿಗ್ಗೆ ೬.೦೦ ಗಂಟೆ ಸಮಯದಲ್ಲಿ ಬಂಗಾರಪೇಟೆಯ ವಿಜಯನಗರ, ೧ನೇ ಕ್ರಾಸ್ ವಾಸಿ ಶ್ರೀ ಚಲಪತಿ ಬಿನ್ ಗುರಪ್ಪಚಾರಿ ರವರ ಹೆಂಡತಿಯಾದ ಶ್ರೀಮತಿ ಜಮುನಾ, ೨೧ ವರ್ಷ ಎಂಬಾಕೆಯು ತನ್ನ ವಾಸದ ಮನೆಯಿಂದ ಹೊರಗಡೆ ಹೋದವಳು ಇದುವರೆವಿಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ.              

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply