ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೩-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೩-೨೦೦೯ ರಂದು ಕೆ.ಜಿ.ಎಫ್, ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ೩೪ ರವರು ತನ್ನ ಸಹೋದ್ಯೋಗಿ ಪಿಸಿ ೧೮ ಶ್ರೀ ಎಂ.ಎಲ್.ಗೋಪಿನಾಥ್ ರವರೊಂದಿಗೆ ಅಪರಾಧ ಪತ್ತೆ ಕರ್ತವ್ಯಕ್ಕಾಗಿ ನೇಮಕಗೊಂಡು ರಾಜಪೇಟೆ ರಸ್ತೆ ಕಡೆಗೆ ಹೋಗಿ ಮದ್ಯಾಹ್ನ ೧.೦೦ ಗಂಟೆ ಸಮಯದಲ್ಲಿ ಇವರು ಸರ್ಕಾರಿ ವಾಹನದಲ್ಲಿ ವಾಪಸ್ಸು ಬರುತ್ತಿದ್ದಾಗ ಕ್ಯಾಸಂಬಳ್ಳಿ-ಕೆ.ಜಿ.ಎಫ್ ಮುಖ್ಯ ರಸ್ತೆ ಸಂಪತ್ ಮಜಾಕ್ ಟೈಲ್ಸ್ ರವರ ಜಮೀನಿನ ಬಳಿ ಆರೋಪಿ ವಾಹನ ಸಂಖ್ಯೆ ಕೆಎ-೦೮-ಕೆ-೭೧೪೯ ರ ಚಾಲಕ ವಾಹವನ್ನು ಕ್ಯಾಸಂಬಳ್ಳಿ ಕಡೆಯಿಂದ ಪಾರಾಂಡ್ಲಹಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಷಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಒಬ್ಬರಿಗೆ ಡಿಕ್ಕಿಹೊಡೆದ ಪ್ರಯುಕ್ತ ಪಾದಚಾರಿ ರಸ್ತೆಯ ಮೇಲೆ ಬಿದ್ದು ರಕ್ತಗಾಯವಾಗಿರುತ್ತದೆ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೩
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹುಡುಗ ನಾಪತ್ತೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಗಿರುತ್ತದೆ. ಬಂಗಾರಪೇಟೆ ತಾಲೂಕು ಕಮ್ಮಸಂದ್ರ ಗ್ರಾಮದ ವಾಸಿ ಶ್ರೀ ಚಲಪತಿ ಬಿನ್ ನಾರಾಯಣಪ್ಪ ಎಂಬುವರ ಅಕ್ಕನ ಮಗ ಅನಿಲ್ ಕುಮಾರ್, ೧೨ ವರ್ಷ್, ಕಮ್ಮಸಂದ್ರ ಸರ್ಕಾರಿ ಹಿರಿಯ ಪ್ರಥಮಿಕ ಶಾಳೆಯಲ್ಲಿ ೭ ನೇ ತರಗತಿ ಓದುತ್ತಿದ್ದು, ದಿನಾಂಕ: ೨೩-೦೩-೨೦೦೯ ರಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದು ನಂತರ ಸಂಜೆ ೦೫.೩೦ ಗಂಟೆ ಸಮಯದಲ್ಲಿ ಊಟ ಮಾಡಿಕೊಂಡು ಆಟ ಆಡಿಕೊಂಡು ಬರುತ್ತೇನೆಂತ ಮನೆಯಲ್ಲಿ ಹೇಳಿ ಹೋದವನು ಮತ್ತೆ ರಾತ್ರಿಯಾದರೂ ಮನೆಗೆ ಬರದೆ ಕಾಣೆಯಾಗಿರುತ್ತಾನೆ.
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಆಮಡ್ರಸನ್‌ಪೇಟೆ, ಭಾರತೀಪುರಂ ವಾಸಿ ಪಿರ್ಯಾದಿದಾರ ಅಮಾನುಲ್ಲಾ ರವರ ಸಂಬಂಧಿಯಾದ ಬೆಂಗಳೂರಿನ ಗೋಪಾಲಪುರಂನಲ್ಲಿ ವಾಸವಾಗಿರುವ ಅಜಮಲ್ ಎಂಬುವನು ಪಿರ್ಯಾದಿದಾರರ ಸಂಬಂಧಿಯಾದ ಕುಮಾರಿ ಮುಗುಸಿರಾ @ ಸೈದಾ ೧೫ ವರ್ಷ ವಯಷ್ಷಿನವಳನ್ನು ಒಂದು ವರ್ಷದಿಂದ ಬೆಂಗಳೂರಿನಲ್ಲಿ ಸಾಕಿಕೊಂಡಿದ್ದು ದಿನಾಂಕ ೨೨-೦೩-೨೦೦೯ ರಂದು ಅಜಮಲ್ ಮತ್ತು ಮುಗಿಸಿ @ ಸೈದಾ ರವರು ಬೆಂಗಳೂರಿನಿಂದ ಪಿರ್ಯಾದಿದಾರರ ಮನೆ ಭಾರತಿಪುರಂಗೆ ಬಂದಿದ್ದು, ದಿನಾಂಕ: ೨೩-೦೩-೨೦೦೯ ರಂದು ಮದ್ಯಾನ ೩.೦೦ ಗಂಟೆ ಸಮಯದಲ್ಲಿ ಊಟಮಾಡಿ ನಂತರ ಆದೇ ಕೇರಿಯಲ್ಲಿ ವಾಸವಾಗಿರುವ ರಹಮತ್ ಬೇಗಂ ರವರ ಮೆನೆಗೆ ಹೋಗಿ ಬಟ್ಟೆಬದಲಾಯಿಸಿಕೊಂಡು ಬರುತ್ತೇನೆಂದು ಹೇಳಿ ಹೋದವಳು ಪುನಃ ಪಿರ್ಯಾದಿದಾರನ ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೫-೦೩-೨೦೦೯ ರಂದು ಮದ್ಯಾಹ್ನ ೧.೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು, ನಾರಾಯಣಪುರ ಗ್ರಾಮದ ವಾಸಿ ಶ್ರೀ ಎಸ್.ಎನ್.ಮುನಿಯಪ್ಪ ಬಿನ್ ಲೇಟ್ ಸೊಣ್ಣೆಪಲ್ಲಪ್ಪ ಎಂಬುವರ ಮಗಳಾದ ಶ್ರೀಮತಿ ಎಂ.ಸಿಜಾತ, ೨೦ ವರ್ಷ ಎಂಬಾಕೆಯು ಬಂಗಾರಪೇಟೆ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


