ದಿನದ ಅಪರಾಧಗಳ ಪಕ್ಷಿನೋಟ ೨೧ನೇ ಮಾರ್ಚ್ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೩-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •          ಚಾಂಪಿಯನ್‌ ರೀಫ್ಸ್ ಪೊಲೀಸ್‌ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಚಾಂಪಿಯನ್‌ ರೀಫ್ಸ್‌ ವರ್ಕ್‌ಶಾಫ್ ಬಳಿ ಸಂಭವಿಸಿರುತ್ತದೆ.  ದಿನಾಂಕ: ೨೧.೦೩.೨೦೦೯ ರಂದು ಬೆಳಿಗ್ಗೆ ೬.೩೦ ಗಂಟೆ ಸಮಯದಲ್ಲಿ ‌ ಮೃತ ಮುರುಗೇಶ್‌, ಮನೆ ಸಂಖ್ಯೆ ೧೫೩, ಐ. ಬ್ಲಾಕ್‌, ಚಾಂಪಿಯನ್‌ ರೀಫ್ಸ್‌ ರವರು ವಾಯು ವಿಹಾರಕ್ಕೆಂದು ಚಾಂಪಿಯನ್‌ ವರ್ಕ್‌‌ಶಾಫ್ ಬಳಿ ಹೋಗುತ್ತಿರುವಾಗ ಲಾಂಗ್‌ಬಾಬು, ವಿನೋದ್‌, ಬುದ್ದಿಮಿತ್ರನ್‌ ಮತ್ತು ಅಳಗಿರಿ ಎಂಬುವರುಗಳು  ಹಳೆಯ ವೈಷಮ್ಮದಿಂದ ಮರುಗೇಶ್‌ ರವರನ್ನು ಆಯಧಗಳನ್ನು ಹೊಡೆದು ತೀವ್ರ ರಕ್ತಗಾಯಪಡಿಸಿ ಸಾಯಿಸಿರುತ್ತಾರೆ.  

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೩-೨೦೦೯ ರಂದು ಬೆಳಿಗ್ಗೆ ೯-೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಉರಿಗಾಂ, ಕೆನಡೀಸ್ ೨ನೇ ಲೈನ್ ಮನೆ ಸಂಖ್ಯೆ ೫೧ ರ ವಾಸಿ ಶ್ರೀಮತಿ ಅರ್ಚನಾ ಕೋಂ ಬಾಲಮಗಳೇಶ್ವರನ್ ಎಂಬುವರನ್ನು ಆಕೆಯ ಗಂಡನು ಆಕೆಯ ತವರು ಮನೆಗೆ ಬಂದು ವಿನಾಕಾರಣ ಜಗಳ ತೆಗೆದು ಆತನ ಕೈಯಿಂದ ಅರ್ಚನಾ ರವರ ಎಡಕಣ್ಣಿನ ಕೆಳಗಡೆ ಬಲವಾಗಿ ಹೊಡೆದ ಪ್ರಯುಕ್ತ ಕಣ್ಣಿನ ಕೆಳಗಡೆ ಊದಿಕೊಂಡಿರುತ್ತದೆ ಮತ್ತು ಆಕೆಯನ್ನು ಕುರಿತು ನಿನ್ನನ್ನು ಈ ದಿನ ಕೊಲೆ ಮಾಡದೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ. ಅರ್ಜನಾ ಮತ್ತು ಬಾಲಮಗಳೇಶವರನ್ ರವರುಗಳು ೨ ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಮಾಡಿಕೋಮಡಿದ್ದು, ೧ ವರ್ಷದ ಹಿಂದೆ ಅರ್ಚನಾ ಆಕೆಯ ಗಂಡನ ಮಾನಸಿಕಾ ಮತ್ತು ದೈಹಿಕ ಕುರುಕುಳ ತಾಳಲಾರದೆ ತವರುಮನೆಗೆ ಬಂದುಬಿಟ್ಟಿದ್ದಳು. 

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

  ಹಲ್ಲೆ: ಇಲ್ಲ         

 ಇತರೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಬ್ಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೦೩-೨೦೦೯ ರಂದು ೧೪೩೦ ಗಂಟೆ ಸಮಯದಲ್ಲಿ ಕಾಮಸಮುದ್ರಂ ಪೊಲೀಸ್ ಠಾಣೆಯ ಮುಖ್ಯಪೇದೆ ೧೦೪ ಮತ್ತು ಪೇದೆ ೨೭ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಬಂಗಾರಪೇಟೆ ತಾಲೂಕು, ಕಾಮಸಮುದ್ರಂ ಹೋಬಳಿಯ ಫಲಮೊಡಗು ಕಾಲೋನಿಯ ವಾಸಿ ನಾರಾಯಣಪ್ಪ ಮತ್ತು ಗೋವಿಂದಪ್ಪ ಎಂಬುವರುಗಳು ಯಾವುದೇ ಪರವಾನಗಿ ಇಲ್ಲದೆ ೧೦ ಲೀಟರ್‍ ಕಳ್ಳಬಟ್ಟಿ ಸಾರಾಯಿಯನ್ನು ಮಾರಾಟ ಮಾಡುವವರನ್ನು ಮತ್ತು ಮಾಲನ್ನು ವಶಪಡಿಸಿಕೊಂಡಿರುತ್ತಾರೆ.          

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ          

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply