ದಿನದ ಅಪರಾಧಗಳ ಪಕ್ಷಿನೋಟ ೧೧ ನೇ ಜನವರಿ ೨೦೦೯

February 11, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೧-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ೦೨

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೦-೦೨-೨೦೦೯ ರಂದು ಬೆಳಿಗ್ಗೆ ೧೧.೦೦ ಗಂಟೆ ಸಮಯದಲ್ಲಿ ಶ್ರೀ. ರಾಕೇಶ್ ಬಾಬು ಬಿನ್ ನಿತ್ಯಾನಂದನ್, Epicorean ಕಂಟ್ರಾಕ್ಟರ್‍ ಮ್ಯಾನೇಜರ್‍, ೩೦ ವರ್ಷ, ದೇಶಿಹಳ್ಳಿ, ಬಂಗಾರಪೇಟೆ ಎಂಬುವರು ಟಿಸಿಎಲ್ ನೌಕರರಿಗೆ ಜನವರಿ ತಿಂಗಳ ಸಂಭಳ ಮಾಡಲು ತಂದಿದ್ಗ ೧,೦೦,೦೦೦/- ರೂಗಳಲ್ಲಿ ೫೩,೬೫೦/- ರೂಗಳನ್ನು ವಿತರಣೆ ಮಾಡಿ ಉಳಿದ ೪೬,೩೫೦/- ರೂಗಳನ್ನು ಮರದ ಡ್ರಾಯರ್‌ನಲ್ಲಿ ಇಟ್ಟು ತಿಂಡಿ ತಿನ್ನಲು ಬಿಎಎಂಎಲ್ ಕ್ಯಾಂಟಿನ್‌ಗೆ ಹೋಗಿ ತಿಂಡಿ ತಿಂದುಕೊಂಡು ಮತ್ತೆ ೧೧-೧೫ ಗಂಟೆಗೆ ಕಛೇರಿಗೆ ವಾಪಸ್ಸು ಬಂದು ನೊಡಲಾಗಿ ಮರದ ಟೇಬಲ್ ಡ್ರಾಯರ್‌ನಲ್ಲಿದ್ದ ೪೬,೩೫೦/- ರೂಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಕೃತ್ಯವು ಬೆಮೆಲ್ ಕಾರ್ಖಾನೆ ಇಎಂ ಡಿವಿಜಿನ್ Epicoren ಕಾಂಟ್ರಾಕ್ಟರ್‍ ಕಛೇರಿಯಲ್ಲಿ ನಡೆದಿರುತ್ತದೆ.
  • ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೦-೦೨-೨೦೦೯ ರಂದು ರಾತ್ರಿ ಬಂಗಾರಪೇಟೆ ತಾಲೂಕು, ಮರಾಠಹೊಸಹಳ್ಳಿ ಗ್ರಾಮದಲ್ಲಿನ ಶ್ರೀ ಆಂಜಿನೇಯ ಸ್ವಾಮಿ ದೇವಾಲಯದ ಹುಂಡಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ೧ ಪರ್ಲಾಂಗ್ ದೂರಕ್ಕೆ ಆ ಹೊಂಡಿಯನ್ನು ತೆಗೆದುಕೊಂಡು ಹೋಗಿ ಅದನ್ನು ಹೊಡೆದು ಅದರಲ್ಲಿದ್ದ ಸುಮಾರು ೪,೦೦೦/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೦-೦೨-೨೦೦೯ ರಂದು ಮದ್ಯಾಹ್ನ ೦೩.೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು, ಕ್ಯಾಸಂಬಳ್ಳಿ ಹೋಬಳಿ, ಬೂಚೇಪಲ್ಲಿ ಗ್ರಾಮದ ವಾಸಿ ಶ್ರೀ. ಶ್ರೀನಿವಾಸರೆಡ್ಡಿ ಬಿನ್ ನಾರಾಯಣರೆಡ್ಡಿ ಎಂಬುವರು ತನ್ನ ಮನೆಯ ಮುಂದೆ ಅದೇ ಗ್ರಾಮದ ವಾಸಿ ರಾಜಾರೆಡ್ಡಿ ಎಂಬುವರನ್ನು ಕುರಿತು ನಾನು ಕುಡಿದು ಅಲ್ಲಲ್ಲಿ ಮಲಗುತ್ತೇನೆಂತ ನನ್ನ ಹೆಂಡತಿಗೆ ನೀನು ಚಾಡಿ ಹೇಳಿದ್ದೀಯ ಎಂದು ಕೇಳಿದ್ದಕ್ಕೆ ರಾಜಾರೆಡ್ಡಿ ಶ್ರೀನಿವಾಸರೆಡ್ಡಿಯೊಂದಿಗೆ ಜಗಳಕಾದು ಒಂದುಕಲ್ಲಿನಿಂದ ತಲೆಯಮೇಲೆ ಹೊಡೆದು ರಕ್ತಘಾಯ ಪಡಿಸಿರುತ್ತಾರೆ.       

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್ ರಾಬರ್ಟ್‌ಸನ್‌ಪೇಟೆಯ ೨ನೇ ಬ್ಲಾಕ್ ವಾಸಿ ಶ್ರೀ ಕಾರ್ತಿಕೇಯನ್ (೨೪) ಬಿನ್ ಲೇಟ್ ಮಣಿ, ೨ನೇ ಬ್ಲಾಕ್, ರಾಬರ್ಟ್‌‌ಸನ್‌ಪೇಟೆ ಎಂಬುವರಿಗೆ ಚಿಕ್ಕ ವಯಸ್ಸಿನಿಂದ ಆಗಾಗ ಹೊಟ್ಟೆ ನೋವು ಬರುತ್ತಿದ್ದು ದಿನಾಂಕ ೧೦-೦೨-೨೦೦೯ ರಂದು ಮದ್ಯಾಹ್ನ ೨.೩೦ ಗಂಟೆ ಸಮಯದಲ್ಲಿ ಹೊಟ್ಟೆನೋವು ಜಸ್ತಿಯಾಗಿದ್ದು, ನೋವು ತಾಳಲಾರದೆ ಜೀವನದ ಮೇಲೆ ಜಿಗುಪ್ಸೆಯಾಗಿ ಯಾವುದೋ ವಿಷ ಸೇವನೆ ಮಾಡಿದ್ದು, ಕೆ.ಜಿ.ಎಫ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ದಿನಾಂಕ ೧೧-೦೨-೨೦೦೯ ರಂದು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿರುತ್ತಾನೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೦ನೇ ಜನವರಿ ೨೦೦೯

February 10, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬-೦೨-೨೦೦೯ ರಂದು ಮದ್ಯಾಹ್ನ ೧.೩೦ ಗಂಟೆಗೆ ಶ್ರೀಮತಿ ಮಾರ್ಗರೇಟ್ ಸೈಮನ್ ರಾಜು, ಮನೆ ಸಂಖ್ಯೆ ೮೭೦, ೬ನೇ ಕ್ರಾಸ್, ಆಂಗ್ಲೋ ಇಂಡಿಯನ್ ಕಾಲೋನಿ, ರಾಬರ್ಟ್‌‌ಸನ್‌ಪೇಟೆ ಎಂಬುವರು ತನ್ನ ಮಗಳ ಜೊತೆ ತಮಿಳು ನಾಡಿನ ವೇಳಾಂಕಣಿ ಚರ್ಚ್‌‌ಗೆ ಹೋಗಲು ಮನೆಗೆ ಬೀಗ ಹಾಕಿಕೊಂಡು ಹೋಗಿ ದಿನಾಂಕ: ೧೦-೦೨-೨೦೦೯ ರಂದು ಬೆಳಿಗ್ಗೆ ೮.೩೦ ಗಂಟೆಗೆ ಬಂದು ನೋಡಲಾಗಿ  ಯಾರೋ ಕಳ್ಳರು ಮನೆ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಬೇಡ್ ರೂಮ್‌ನಲ್ಲಿದ್ದ ಬೀರೂವನ್ನು ತೆಗೆದು ಅದರಲ್ಲಿದ್ದ ಸುಮರು ೨೪,೨೫೦/- ರೂ ಬೆಲೆ ಬಾಳಿವ ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೮-೦೨-೨೦೦೯ ರಂದು ರಾತ್ರಿ ಸುಮಾರು ೧೯೩೦ ಗಂಟೆ ಸಮಯದಲ್ಲಿ ಶ್ರೀ. ನಾಗರಾಜ ಬಿನ್ ವೆಂಕಟೇಶಪ್ಪ, ೨೫ ವರ್ಷ, ಮಾಗೊಂದಿ ಗ್ರಾಮ, ಬಂಗಾರಪೇಟೆ ತಾಲೂಕು ರವರ ಮನೆಯ ಮುಂದೆ ಇದ್ದ ಸಾರ್ವಜನಿಕ ನಲ್ಲಿಯನ್ನು ಕಿತ್ತು ಹಾಕಲು ಅದೇ ಗ್ರಾಮದ ವಾಸಿಗಳಾದ ಸಾಕಪ್ಪ, ಮುನಿಬೀಮಪ್ಪ, ವೆಂಕಟಮ್ಮ ಎಂಬುವರುಗಳು ಸೇರಿ ನಾಗರಾಜಪ್ಪರವನ್ನು ಕೆಟ್ಟ ಮಾತುಗಳಿಂದ ಬೈದು ಒಂದು ಬ್ಲೇಡಿನಿಂದ ಬಲಗೈಗೆ ಕೊಯ್ದಿರುತ್ತಾರೆ ಇತ್ಯಾದಿ.      

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೮ನೇ ಫೆಬ್ರವರಿ ೨೦೦೯

February 8, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೮-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ೦೧

  •         ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್‌ ೬ನೇ ಕ್ರಾಸ್‌, ಆಂಗ್ಲೋ ಇಂಡಿಯನ್‌ ಕಾಲೋನಿ, ರಾಬರ್ಟ್‌‌ಸನ್‌ಪೇಟೆಯಲ್ಲಿ ಸಂಭವಿಸಿರುತ್ತದೆ. ಶ್ರೀ. ಪಾಲ್‌ ಮಿನಸ್‌ ಬಿನ್‌ ಅಶ್ಲೇ ಮಿನಸ್‌, ಹೆಚ್‌.ಬಿ.ಆರ್‌. ಲೇಔಟ್‌, ಬೆಂಗಳೂರು ರವರು ದಿನಾಂಕ: ೦೭.೦೨.೨೦೦೮ ರಂತ್ರ ರಾತ್ರಿ ೧೨.೦೦ ಗಂಟೆಗೆ ಸಮಯದಲ್ಲಿ ತನ್ನ ಕಾರ್‍ ಸಂಖ್ಯೆ ಕೆಎ-೦೧-ಎಂಎ-೬೯೭೩ರಲ್ಲಿ ಕೆ.ಜಿ.ಎಫ್‌ನ ತನ್ನ ಪತ್ನಿಯ ಮನೆಗೆ ಬಂದು ಮನೆಯ ಮುಂದೆ ನಿಲ್ಲಿಸಿ ಬೆಳಿಗ್ಗೆ ೬.೩೦ ಗಂಟಗೆ ನೋಡಲಾಗಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ೦೧

  •        ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕ್ಯಾಸಂಬಳ್ಳ-ಕೆ.ಜಿ.ಎಫ್‌ ಮುಖ್ಯ ರಸ್ತೆ ಸಂಪತ್‌ ಮಜಾಕ್‌ ಟೈಲ್ಸ್‌ ಬಳಿ ಸಂಭವಿಸಿರುತ್ತದೆ. ಶ್ರೀ. ಎ. ವಿನೋದ್ ಬಿನ್‌ ಅಯ್ಯನಾರ್‌(೨೪) ಪಚ್ಚಪ್ಪ ರಸ್ತೆ, ಆಂಡ್ರಸನ್‌ಪೇಟೆ ವಾಸಿ ರವರ ತಮ್ಮ ಅಶೋಕ್‌ ಎಂಬುವರು ದಿನಾಂಕ: ೦೭.೦೨.೨೦೦೯ ರಂದು ಮದ್ಯಾಹ್ನ ೧೩.೦೦ ಗಂಟೆ ಸಮಯದಲ್ಲಿ ತನ್ನ ಸ್ನೇಹಿತರಾದ ಪ್ರವೀಣ್‌ಕುಮಾರ್‌ ಮತ್ತು ಸತೀಶ್‌ ರವರುಗಳನ್ನು ತನ್ನ ಪಲ್ಸರ್‌ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೮-ಕೆ-೫೫೪೯ರಲ್ಲಿ ಕುಳ್ಳರಿಸಿಕೊಂಡು ಕ್ಯಾಸಂಬಳ್ಳ ಕಡೆಯಿಂದ ಬರುತ್ತಿರುವಾಗ ಸಂಪತ್‌ ಮಜಾಕ್‌ ಟೈಲ್ಸ್‌ ರವರ ಜಮೀನಿನ ಬಳಿ ಪಾರಂಡಹಳ್ಳಿ ಕಡೆಯಿಂದ ಯಾವುದೋ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದ ಪ್ರಯುಕ್ತ ಅಶೋಕ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಯ ಸವಾರರುಗಳಿಗೆ ತೀವ್ರವಾದ ಘಾಯಗಳಾಗಿರುತ್ತದೆ.

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ೦೧

  •       ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಬೂದಿಕೋಟೆ ಹೋಬಳಿ ಹುಕ್ಕುಂದ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೮.೦೨.೨೦೦೯ ರಂದು ಬೆಳಿಗ್ಗೆ ೮.೩೦ ಗಂಟೆ ಸಮಯದಲ್ಲಿ ಶ್ರೀ. ರಾಜೇಶ್‌ ಬಿನ್‌ ಬ್ಯಾಟಪ್ಪ(೨೫), ಹುಕ್ಕುಂದ ಗ್ರಾ ಮತ್ತು ಇದೇ ಗ್ರಾಮದ ವಾಸಿಗಳಾದ ಗೋವಿಂದಪ್ಪ ಬಿನ್‌ ಚಿಕ್ಕವರದಪ್ಪ, ಬಲವರದರಾಜು ಮತ್ತು ಕೃಷ್ಣಮೂರ್ತಿ ಎಂಬುವರುಗಳ ನಡುವೆ ಹುಣಸೆಕಾಯಿ ಉದರಿಸುವ ವಿಚಾರದಲ್ಲಿ ಜಗಳ ಮಾಡಿಕೊಂಡು ಗೋವಿಂದಪ್ಪ ಮತ್ತು ಇತರರು ಸೇರಿ ರಾಜೇಶ್‌ ರವರಿಗೆ ಕಲ್ಲು ಮತ್ತು ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿ ಸಾಯಿಸುವುದಾಗಿ ಪ್ರಾಣ ಬೆದರಿಕೆಯಾಗಿರುತ್ತಾರೆ.

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೭ ನೇ ಜನವರಿ ೨೦೦೯

February 7, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೭-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ:  ೦೧

  •    ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕ್ಯಾಸಂಬಳ್ಳ – ಕೆ.ಜಿ.ಎಫ್ ಮುಖ್ಯ ರಸ್ತೆ ಸಂಪತ್ ಮಜಾಕ್ ಟೈಲ್ಸ್ ರವರ ಜಮೀನು ಸಮೀಪ ಸಂಭವಿಸಿರುತ್ತದೆ. ದಿನಾಂಕ: ೦೭.೦೧.೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಶ್ರೀ. ಎ.ವಿನೋದ್ ಬಿನ್ ಅಯ್ಯನಾರ್‍ ೨೪ ವರ್ಷ ಮನೆ ಸಂಖ್ಯೆ ೩೮೯, ಪಚ್ಚಪ್ಪ ರಸ್ತೆ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ಮತ್ತು ಆತನ ಸ್ನೇಹಿತರಾದ ಪಲ್ಸ್ರ್‍ ದ್ವಚಕ್ರ ಮೋಟಾರು ವಾಹನ ಸಂ. ಕೆ.ಎ.-೦೮-ಕೆ-೫೫೪೯ ರಲ್ಲಿ ಸವಾರಿ ಮಾಡಿಕೊಂಡು ಕ್ಯಾಸಂಬಳ್ಳ – ಕೆ.ಜಿ.ಎಫ್ ಮುಖ್ಯ ರಸ್ತೆಯಲ್ಲಿ ಕೆ.ಜಿ.ಎಫ್‌ಗೆ ಬರುತ್ತಿರುವಾಗ ಸಂಪತ್ ಮಜಾಕ್ ಟೈಲ್ಸ್ ರವರ ಜಮೀನು ಸಮೀಪ ಯಾವುದೋ ವಾಹನ ಡಿಕ್ಕಿ ಹೊಡೆದ ಪ್ರಯುಕ್ತ ಸ್ಥಳದಲ್ಲಿಯೇ ಪಿರಿರ್ಯಾದಿ ತಮ್ಮ ಅಶೋಕ್ ಮೃತ ಪಟ್ಟಿರುತ್ತಾರೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ಇಲ್ಲ 

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೬ ನೇ ಜನವರಿ ೨೦೦೯

February 6, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೬-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ:  ೦೧

  •    ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್ – ಬಂಗಾರಪೇಟೆ ಮುಖ್ಯ ರಸ್ತೆ ಮುರುಗನ್ ದೇವಾಲಯದ ಎನ್.ಟಿ ಬ್ಲಾಕ್ ತಿರುವಿನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೬.೦೧.೨೦೦೮ ರಂದು ಬೆಳಿಗ್ಗೆ ೯.೨೦ ಗಂಟೆ ಸಮಯದಲ್ಲಿ ಕುಮಾರಿ ಸಂಧ್ಯಾ.ಆರ್‍ ಬಿನ್ ರವಿಕುಮಾರ್‍ (೨೦), ಮನೆ ಸಂಖ್ಯೆ ೩೨, ಸ್ವಾಮಿನಾಥಪುರಂ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ಎಂಬುವರು ತನ್ನ ಗೆಳತಿಯರೊಂದಿಗೆ ಉರಿಗಾಂನ ಎಫ್.ಜಿ.ಸಿ ಕಾಲೇಜಿಗೆ ಹೋಗಲು ಎನ್.ಟಿ ಬ್ಲಾಕಿನ ರಸ್ತೆಯ ಎಡಭಾಗದ ಪುಟ್ ಪಾತಿನ ಮೇಲೆ ಹೋಗುತ್ತಿರುವಾಗ ಟಿ.ವಿ.ಎಸ್. ವಿಕ್ಟರ್‍ ವಾಹನ ಸಂಖ್ಯೆ ಕೆ.ಎ-೦೮-ಜೆ-೬೪೦೩ ರ ಚಾಲಕ ವಿನೋದ್ ಬಿನ್ ಸಿ.ಎಸ್.ಸುಭ್ರಮಣ್ಯಂ ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಂಧ್ಯಾ ರವರಿಗೆ ಹಿಂದೆಯಿಂದ ಡಿಕ್ಕಿ ಹೊಡೆದ ಪ್ರಯುಕ್ತ ಸಂಧ್ಯಾ ರವರಿಗೆ ಹಿಂಭಾಗದ ಸೊಂಟಕ್ಕೆ ಮತ್ತು ತಲೆಗೆ ಮೂಗಗಾಯಗಳಾಗಿರುತ್ತವೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ಇಲ್ಲ 

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೫ನೇ ಜನವರಿ ೨೦೦೯

February 5, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೫-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ:  ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೪-೦೨-೨೦೦೯ ರಂದು ಸಂಜೆ ೧೭೦೦ ಗಂಟೆ ಸಮಯದಲ್ಲಿ ಶ್ರೀ ವೆಂಕಟರಾಮ ಬಿನ್ ಲಕ್ಷ್ಮಯ್ಯ, ವಾಸ: ಕ್ಯಾಸಂಬಳ್ಳ ಗ್ರಾಮ, ಬಂಗಾರಪೇಟೆ ತಾಲೂಕು ರವರು ಕ್ಯಾಸಂಬಳ್ಳ ಬಾರ್‌ಗೆ ಹೋಗಿದ್ದು, ಅವರೊಂದಿಗೆ ಬಾರಿನ ಆವರಣದಲ್ಲಿ ಮೀನು ಮಾರುತ್ತಿದ್ದ ವ್ಯಕ್ತಿಯೊಬ್ಬರು (ಹೆಸರು ಗೊತ್ತಿಲ್ಲ) ವಿನಾಕಾರಣ ಜಗಳ ಮಾಡಿ ಕೆಟ್ಟ ಮಾತುಗಳಿಂದ ಬೈದು ಒಂದು ದೊಣ್ಣೆಯಿಂದ ಹೊಡೆದು, ಎದೆಗೆ ಕಾಲುಗಳಿಂದ ಒದ್ದ ಗಾಯಗೊಳಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾನೆ.

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೪ನೇ ಜನವರಿ ೨೦೦೯

February 4, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೪-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೧-೨೦೦೯ ರಂದು ಬೆಳಿಗ್ಗೆ ಸುಮಾರು ೧೦೩೦ ಗಂಟೆಯಲ್ಲಿ ಎರಡೂವರೆ ವರ್ಷದ ಮೃತದೇಹವೊಂದು ಬಂಗಾರಪೇಟೆ ಬಸ್‌ ನಿಲ್ದಾಣದ ಬಳಿಯಿರುವ ಮುಳ್ಳಿನ ಗಿಡಗಳ ಬಳಿ ದೊರೆತಿದ್ದು, ಪರಿಶೀಲಿಸಿದಾಗ ಸದರಿ ಮೃತದೇಹದ ಮೇಲೆ ತೀವ್ರ ತರಹದ ಗಾಯಗಳು ಕಂಡು ಬಂದಿದ್ದು, ಮೃತಪಟ್ಟಿರುವ ಮೃತದೇಹವನ್ನು ಒಂದು ಸೀರೆ ಮತ್ತು ಟವಲ್‌ನಲ್ಲಿ ಸುತ್ತಿಟ್ಟಿದ್ದರಿಂದ ಯು.ಡಿ.ಆರ್‍. ನಂ.೦೫/೨೦೦೯ ಕಲಂ ೧೭೪(೩) ಸಿ.ಆರ್‍.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮಗುವಿನ ಹೆಸರು ಧನುಷಾ ಎಂತಲೂ, ಅವರ ತಾಯಿ ಸುಬ್ಬಮ್ಮ ಕೋಂ ಚಿಕ್ಕಪ್ಪಯ್ಯ ಅಲಿಯಾಸ್‌ ವೆಂಕಟರಾಮಯ್ಯ, ಭುವನಹಳ್ಳಿ ಗ್ರಾಮ, ಬಂಗಾರಪೇಟೆ ತಾಲೂಕು ರವರು ರಾಮನಾಯಕನಹಳ್ಳಿ ವಾಸಿಯಾದ ಮಂಜುನಾಥ ಎಂಬುವರೊಂದಿಗೆ ಅಕ್ರಮ ಸಂಬಂಧ ಇದ್ದು, ಈಗ್ಗೆ ಸುಮಾರು ೩ ತಿಂಗಳ ಹಿಂದೆ ಸದರಿ ಮಗುವಿನೊಂದಿಗೆ ಸುಬ್ಬಮ್ಮ ಮತ್ತು ಮಂಜುನಾಥ ರವರು ಎಲ್ಲಿಯೋ ಹೊರಟು ಹೋಗಿದ್ದು, ಅವರೇ ಸದರಿ ಮಗುವಿಗೆ ತೀವ್ರತರವಾದ ಗಾಯಗಳನ್ನುಂಟು ಮಾಡಿ ಕೊಲೆ ಮಾಡಿರುವುದಾಗಿ ತನಿಖಾಧಿಕಾರಿಯವರಿಗೆ ಕಂಡುಬಂದಿದ್ದರಿಂದ ಸದರಿ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಿಕೊಳ್ಳಲಾಗಿದೆ. 

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ:  ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೩-೦೨-೨೦೦೮ ರಂದು ರಾತ್ರಿ ಸುಮಾರು ೨೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ-ಬೂದಿಕೋಟೆ ಮುಖ್ಯರಸ್ತೆ ಗಾಜಗ ಗೇಟ್‌ ಸಮೀಪ ಲಾರಿ ಸಂಖ್ಯೆ: ಟಿಎನ್‌-೨೩-ಎ-೬೧೬೫ ಅನ್ನು ಅದರ ಚಾಲಕ ಪಿ.ದೊರೈರಾಜ್‌ ಎಂಬುವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಎದುರಿಗೆ ಬಂದ ಟಿವಿಎಸ್‌ ಎಕ್ಸೆಲ್‌ ಸಂಖ್ಯೆ: ಕೆಎ-೦೮-ಜೆ-೨೩೨೫ ಕ್ಕೆ ಡಿಕ್ಕಿ ಪಡಿಸಿದ್ದರಿಂದ ಸದರಿ ಸವಾರನಿಗೆ ಬಲಗಾಲಿನ ಪಾದಕ್ಕೆ ಮತ್ತು ಎಡ ಕಾಲಿಗೆ ರಕ್ತಗಾಯಗಳಾಗಿರುತ್ತವೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ಇಲ್ಲ

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ಶ್ರೀ ಶೇಖರ್‍ ಬಿನ್ ಲೇಟ್‌ ದೇವರಾಜ್‌, ವಯಸ್ಸು ೩೪ ವರ್ಷ, ಸಂಜಯಗಾಂಧಿ ನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್. ರವರು ಈಗ್ಗೆ ಸುಮಾರು ಒಂದೂವರೆ ತಿಂಗಳಿನಿಂದ ನಪುಂಸಕನಾಗಿದ್ದೇನೆಂದು ಮಾನಸಿಕ ಖಾಯಿಲೆಗೆ ಒಳಗಾಗಿ ಅದೇ ಯೋಚನೆಯಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ಗೀತಾರಸ್ತೆ ೪ನೇ ಕ್ರಾಸಿನಲ್ಲಿರುವ ಎಂ.ಜಿ.ಷಣ್ಮುಗಂ ಬಿಲ್ಡಿಂಗ್‌ನಲ್ಲಿ ಒಬ್ಬನೇ ರೂಂ ಮಾಡಿಕೊಂಡು ವಾಸವಾಗಿದ್ದು, ಈ ಬಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: ೦೩-೦೧-೨೦೦೯ ರಂದು ಸದರಿ ರೂಮಿನಲ್ಲಿ ಮೇಲ್ಛಾವಣಿಗೆ ಅಳವಡಿಸಿರುವ ಕಬ್ಬಿಣದ ಕೊಂಡಿಗೆ ಷರ್ಟಿನಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೨ನೇ ಫೆಬ್ರವರಿ ೨೦೦೯

February 2, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೨-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ  

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ:  ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ೦೨

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಯು ಬಂಗಾರಪೇಟೆ ತಾಲೂಕಿನ ದೊಡ್ಡೇರಿ ಗ್ರಾಮದ ಬಳಿ ನಡೆದಿರುತ್ತದೆ. ದಿನಾಂಕ ೦೨-೦೨-೨೦೦೯ ರಂದು ಬೆಳಿಗ್ಗೆ ೦೯೩೦ ಗಂಟೆ ಸಮಯದಲ್ಲಿ ಶ್ರೀ ನಾಗರಾಜ ಬಿನ್ ಬಿ.ವೆಂಕಟೇಶ್, ವಯಸ್ಸು ೨೫ ವರ್ಷ, ಮಾಗೊಂದಿ ಗ್ರಾಮ, ಬಂಗಾರಪೇಟೆ ತಾಲೂಕು ರವರು ತನ್ನ ತಮ್ಮಂದಿರೊಂದಿಗೆ ದೊಡ್ಡೇರಿ ಗ್ರಾಮದ ಕೆರೆಯ ಬಳಿ ಮಣ್ಣು ತುಂಬಲು ಹೋಗಿದ್ದು, ಅದೇ ಗ್ರಾಮದ ವಾಸಿಗಳಾದ ಅಶೋಕ್‌ರೆಡ್ಡಿ ಬಿನ್ ಗಂಟ್ಲರೆಡ್ಡಿ, ಮಂಜುನಾಥರೆಡ್ಡಿ ಬಿನ್ ಗಂಟ್ಲರೆಡ್ಡಿ ಮತ್ತು ಜಗನ್ನಾಥರೆಡ್ಡಿ ಬಿನ್ ಗಂಟ್ಲರೆಡ್ಡಿ ರವರುಗಳು ಏಕೋದ್ದೇಶದಿಂದ ಶ್ರೀ ನಾಗರಾಜ ಮತ್ತು ಅವರ ತಮ್ಮಂದಿರಾದ ಮಣಿಕಂಠ, ರಮೇಶ ಎಂಬುವರನ್ನು ಕೆಟ್ಟ ಮಾತುಗಳಿಂದ ಬೈದು ದೊಣ್ಣೆಯಿಂದ ಹೊಡೆದು ರಕ್ತಗಾಯ ಮತ್ತು ಮೈಕೈ ನೋವುಂಟು ಮಾಡಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.
  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಯು ಕೆ.ಜಿ.ಎಫ್.ನ ಲೂರ್ದನಗರದಲ್ಲಿ ನಡೆದಿರುತ್ತದೆ. ದಿನಾಂಕ ೦೧-೦೨-೨೦೦೯ ರಂದು ಸಂಜೆ ೧೯೦೦ ಗಂಟೆ ಸಮಯದಲ್ಲಿ ಶ್ರೀ ವಿಕ್ರಂ ಬಿನ್ ಯಾಕೂಬ್‌, ವಯಸ್ಸು ೨೨ ವರ್ಷ, ಲೂರ್ದನಗರ, ಕೆ.ಜಿ.ಎಫ್. ರವರು ರಾಬರ್ಟ್‌‌ಸನ್‌ಪೇಟೆಯಿಂದ ಮನೆಗೆ ಹೋಗಲು ಲೂರ್ದನಗರದಲ್ಲಿ ಅಪ್ಪೇನ್‌ ಎಂಬುವರ ಮನೆಯ ಬಳಿ ಹೋಗುತ್ತಿದ್ದಾಗ, ಅವರ ಎದುರಿಗೆ ಅಪ್ಪೇನ್‌ ಎಂಬುವರು ಬಂದು “ನನ್ನ ಮೇಲೆ ಕೇರಿಯ ಜನರಿಗೆ ಇಲ್ಲಸಲ್ಲದ ಸುಳ್ಳು ಆಪಾದನೆಗಳನ್ನು ಹೇಳಿದ್ದೀಯ” ಎಂದು ಜಗಳ ಕಾದು ಒಂದು ಚಾಕುವಿನಿಂದ ಅವರ ಎಡಗಡೆಯ ಕಣ್ಣು ಹುಬ್ಬಿನ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೧ನೇ ಫೆಬ್ರವರಿ ೨೦೦೯

February 1, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೧-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ  

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ: ೦೧-೦೨-೨೦೦೯ ರಂದು ಬೆಳಿಗ್ಗೆ ೧೧೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ದೊಡ್ಡಗಾಂಡ್ಲಹಳ್ಳಿ ಗ್ರಾಮದ ವಾಸಿ ವೆಂಕಟಪ್ಪಗೌಡ ಎಂಬವರು ಶ್ರೀನಿವಾಸಸಂದ್ರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ನಿಂತುಕೊಂಡಿದ್ದಾಗ, ಕೆ.ಎಸ್.ಆರ್‍.ಟಿ.ಸಿ. ಬಸ್ ಸಂಖ್ಯೆ: ಕೆಎ-೦೯-ಎಫ್-೩೯೪೯ರ ಚಾಲಕ ಅಶ್ವತ್ಥಪ್ಪ ಎಂಬುವರು ಸದರಿ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಪಕ್ಕ ನಿಂತಿದ್ದ ವೆಂಕಟಪ್ಪಗೌಡ ಎಂಬುವರಿಗೆ ಡಿಕ್ಕಿ ಪಡಿಸಿದ್ದರಿಂದ ತೀವ್ರವಾದ ರಕ್ತ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕುಪ್ಪಂನ ಪಿ.ಇ.ಎಸ್.ಕಾಲೇಜ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದ ಸಮಯದಲ್ಲಿ ಮೃತಪಟ್ಟಿರುತ್ತಾನೆ.

-ಸಾಧಾರಣ:  ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ಇಲ್ಲ 

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೨

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೧-೨೦೦೯ ರಂದು ಮದ್ಯಾಹ್ನ ೧೪೦೦ ಗಂಟೆಯಲ್ಲಿ ಕೆ.ಜಿ.ಎಫ್. ಉರಿಗಾಂ ಪೇಟೆ ವಾಸಿ ಶ್ರೀ ಸಂಪತ್‌ಕುಮಾರ್‍ ಎಂಬುವರ ಮಗಳಾದ ಕು: ಸಿಂದು (೧೭) ಎಂಬುವರು ಸಿ.ಎಸ್.ಸಿ. ಕಂಪ್ಯೂಟರ್‌ ಸೆಂಟರ್‌, ಡಾ.ಪ್ರಸಾದ್‌ ಬಿಲ್ಡಿಂಗ್, ಕೆ.ಜಿ.ಎಫ್. ಇಲ್ಲಿಗೆ ಕಂಪ್ಯೂಟರ್‌ ತರಬೇತಿಗಾಗಿ ಹೋಗಿದ್ದು, ನಂತರ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೧-೨೦೦೯ ರಂದು ಸಂಜೆ ಸುಮಾರು ೧೮೦೦ ಗಂಟೆ ಸಮಯದಲ್ಲಿ ಎಂ.ಪ್ರತಾಪ್‌ ಬಿನ್ ಮಹೇಂದ್ರನ್‌, ವಯಸ್ಸು ೧೩ ವರ್ಷ, ಡೇವಿಡ್‌ ರಸ್ತೆ, ಬಂಗಾರಪೇಟೆ ರವರು ಟ್ಯೂಷನ್ಗೆ ಹೋಗಿದ್ದು, ನಂತರ ಮನೆಗೆ ವಾಪಸ್ಸಾಗದೆ ಕಾಣೆಯಾಗಿರುತ್ತಾನೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.