ದಿನದ ಅಪರಾಧಗಳ ಪಕ್ಷಿನೋಟ ೨೬ನೇ ಫೆಬ್ರವರಿ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ   

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ೦೨

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೬-೦೨-೨೦೦೯ ರಂದು ಬೆಳಿಗ್ಗೆ ೭.೨೫ ಗಂಟೆ ಸಮಯದಲ್ಲಿ ಉರಿಗಾಂ ಪೊಲೀಸ್ ವ್ಯಾಪ್ತಿಯಲ್ಲಿರುವ ಕೃಷ್ಣಾವರಂನ ಶ್ರೀ ಪಸಲುಗಂಗಮ್ಮ ದೇವಾಲಯ ಕೆ.ಜಿ.ಎಫ್- ಬೆತಮಂಗಲ ರಸ್ತೆಯಲ್ಲಿ ಕೆ.ಎಸ್.ಆರ್‍.ಟಿ.ಸಿ ಬಸ್ ಸಂಖ್ಯೆ ಕೆಎ-೦೭-ಎಫ್-೧೧೭೪ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದರುಗಡೆಯಿಂದ ಬರುತ್ತಿದ್ದ ಎನ್.ಎಂ.ಡಿ ಖಾಸಗೀ ಬಸ್  ಸಂಖ್ಯೆ ಟಿ.ಎನ್-೩೨-ಎನ್-೦೩೯೯೩ ವಾಹನದ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಎರಡು ಬಸ್‌ಗಳ ಮುಂಭಾಗ ಜಕಂಗೊಂಡಿರುತ್ತದೆ ಮತ್ತು ಅದರಲ್ಲಿದ್ದ ೨೫  ಪ್ರಯಾಣಿಕರಿಗೆ ರಕ್ತಗಾಯಗಳಾಗಿರುತ್ತವೆ.
  • ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೬-೦೨-೨೦೦೯ ರಂದು ಬೆಳಿಗ್ಗೆ ೮.೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ರಾಬರ್ಟ್‌‌ಸನ್‌ಪೇಟೆಯ ೪ನೇ ಬ್ಲಾಕ್ ಮನೆ ಸಂಖ್ಯೆ ೨೩೫/೧ ರ ವಾಸಿ ಗೋವಿಂದನ್ ಎಂಬುವರು ಎಂದಿನಂತೆ ವಾಣಿ ವಿಧ್ಯಾಶಾಲೆಗೆ ಕರ್ತವ್ಯಕ್ಕೆ ಹೋಗುತ್ತಿದ್ದು, ಸೂರಾಜಮುಲ್ ವೃತ್ತದ ಅಶೋಕ್ ಸ್ಟೋರ್‍ ಮುಂಭಾಗ ರಸ್ತೆ ದಾಟುತಿದ್ದಾಗ ಬಂಗಾರಪೇಟೆ ಕಡೆಯಿಂದ ರಾಬರ್ಟ್‌‌ಸನ್‌ಪೇಟೆ ನಗರಸಭಾ ಬಸ್ ನಿಲ್ದಾಣದ ಕಡೆಗೆ ಹೋಗುವ ಕೆ.ಎಸ್.ಆರ್‍.ಟಿ.ಸಿ ಬಸ್ ಸಂಖ್ಯೆ ಕೆಎ-೦೭-ಎಫ್-೧೧೯೧ ರ ಚಾಲಕ ವಾಹನವನ್ನು ಅತಿವೇಹ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೋವಿಂದನ್‌ರವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಗೋವಿಂದನ್‌ ರವರು ಕೆಳಕ್ಕೆ ಬಿದ್ದು ತಲೆಗೆ ರಕ್ತಗಾಯವಾಗಿರುತ್ತದೆ.

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಉರಿಗಾಂ   ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೬-೦೨-೨೦೦೯ ರಂದು ಬೆಳಿಗ್ಗೆ ೮.೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಹೆಂಡ್ರೀಸ್ ೨ನೇ ಲೈನ್ ಮನೆ ಸಂಖ್ಯೆ ೧೦೫ ವಾಸಿ ಶ್ರೀ ಸುನೀಲ್ (೨೦) ಬಿನ್ ಶ್ರೀಧರ್‍ ಎಂಬುವರು ಮನೆಯಲ್ಲಿದ್ದಾಗ ಅದೇ ಕೇರಿಯ ತನ್ನ ಭಾವ ಸೆಲ್ವರಾಜ್ ಮತ್ತಿಬ್ಬರು ಸೇರಿ ನಿಮ್ಮ ಅಕ್ಕ (ಸೆಲ್ವರಾಜ್ ರವರ ಪತ್ನಿ)  ಸೌಧಿಯಲ್ಲಿ ಕೆಲಸಕ್ಕೆ ಹೋಗುತ್ತಿಲ್ಲವೆಂದು ಸುನೀಲ್‌ನೊಂದಿಗೆ ಜಗಳ ತೆಗೆದು ಮತ್ತು ಕೈಗಳಿಂದ ಹೊಡೆದಿರುತ್ತಾರೆ.          

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply