ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೦೨-೨೦೦೯ ರಂದು ಸಂಜೆ ೦೬.೦೦ ಗಂಟೆಯಲ್ಲಿ ಕೆ.ಜಿ.ಎಫ್, ರಾಬರ್ಟ್‌ಸನ್‌ಪೇಟೆ, ಉರಿಗಾಂಪೇಟೆಯ ಅಗರಬತ್ತಿ ಸ್ಟ್ರೀಟ್ ವಾಸಿ ಶ್ರೀ ಲೋಗನಾಥನ್ ಬಿನ್ ಮುನಿಸ್ವಾಮಿ ಎಂಬುವರು ಕೆ.ಜಿ.ಎಫ್-ಕ್ಯಾಸಂಬಳ್ಳಿ ರಸ್ತೆಯ ಮೂರನೇ ಮೈಲಿ ಬಳಿ ಇರುವ ತಂಗುದಾಣದ ಸಮೀಪ ಬಸ್‌ಗಾಗಿ ಕಾಯುತ್ತಿದ್ದಾಗ ಕ್ಯಾಸಂಬಳ್ಳಿ ಕಡೆಯಿಂದ ಶ್ರೀನಿವಾಸರೆಡ್ಡಿ ಎಂಬುವರು ತನ್ನ ಹಿರೋಹೊಂಡಾ ರೈಡರ್ ಸಂಖ್ಯೆ ಕೆಎ-೦೮-೪೪೬೨ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಕಾರ್ ಸಂಖ್ಯೆ ಕೆಎ-೦೯-ಎಂಇ-೧೭೧೭ಗೆ ಡಿಕ್ಕಿ ಹೊಡೆದ ಪ್ರಯುಕ್ತ ಶ್ರೀನಿವಾಸರವರು ವಾಹನದ ಸಮೇತ ಕೆಳಗೆ ಬಿದ್ದು ಆತನ ತುಟಿ ಮತ್ತು ಗಡ್ಡದ ಮೇಲೆ ರಕ್ತಗಾಯವಾಗಿರುತ್ತದೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜೂಜಾಟ ಕಾಯ್ದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೦೨-೨೦೦೯ ರಂದು ಉರಿಗಾಂ ಪೊಲೀಸ್ ಠಾಣೆಯ ಸರಹದ್ದು ಎನ್.ಟಿ.ಎಂ ಸ್ಕೂಲ್ ಮುಂಭಾಗದ ಮೈದಾನದಲ್ಲಿ ವಿದ್ಯೂತ್ ದೀಪದ ಬೆಳಕಿನಲ್ಲಿ ಕೆ.ಜಿ.ಎಫ್ ಉರಿಗಾಂ ಓಲ್ಡ್ ಓರಿಯಂಟಲ್ ಲೈನ್ ವಾಸಿಗಳಾದ ವೇಲು, ರಾಕೇಂದ್ರನ್ ಮತ್ತು ಆಂಥೋನಿ ಎಂಬುವರುಗಳು ೫೨ ಇಸ್ಪೆಟ್ ಎಲೆಗಳಿಂದ ಅಂದರ್ ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದವರನ್ನು ಉರಿಗಾಂ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀ ಕೆ.ಎ.ಆದೇಪ್ಪ ರವರು ಆರೋಪಿಗಳನ್ನು ಮತ್ತು ಇಸ್ಪೆಟ್ ಎಲೆಗಳನ್ನು ವಶಕ್ಕೆ ತೆಗೆದುಕೊಂಡಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


