ದಿನದ ಅಪರಾಧಗಳ ಪಕ್ಷಿನೋಟ ೧೩ನೇ ಜನವರಿ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ 

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ಇಲ್ಲ         

 ಇತರೆ: ೦೨

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವರದಕ್ಷೆಗೆ ಸಂಬಂಧಿಸಿದಂತೆ ಪ್ರಕರಣದ ದಾಖಲಾಗಿರುತ್ತದೆ. ದಿನಾಂಕ: ೧೨-೦೨-೨೦೦೯ ರಂದು ಬೆಳಿಗ್ಗೆ ೮.೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬೇತಮಂಗಲ ಹೋಬಳಿ, ಶ್ರೀನಿವಾಸಪುರ ಗ್ರಾಮದ ವಾಸಿ ಶ್ರೀ ರಾಮಕೃಷ್ಣಪ್ಪ ಬಿನ್ ಚಿನ್ನಪ್ಪಯ್ಯ ಎಂಬುವರ ಮಗಳಾದ ಮುಂಜುಳ ಈಗ್ಗೆ ೨ ವರ್ಷಗಳ ಹಿಂದೆ ಅದೇ ಗ್ರಾಮದ ವಾಸಿ ಸುಬ್ರಮಣಿ ಬಿನ್ ಚೆಂಗಪ್ಪ ಎಂಬುವರೊಂದಿಗೆ ಪ್ರೀತಿಸಿ ಮದುವೆಯಾಗಿದ್ದು, ೮ ತಿಂಗಳ ಗಂಡು ಮಗು ಸಹಾ ಇರುತ್ತದೆ. ಸುಮಾರು ತಿಂಗಳಿನಿಂದ ಸುಬ್ರಮಣಿ ತನ್ನ ಹೆಂಡತಿಯನ್ನು ತವರು ಮನೆಯಿಂದ ಹಣ ತರುವುಂದೆ ಹಾಕೆಯನ್ನು ಆಕೆಯ ತವರುಮನೆಯಲ್ಲೇ ಬಿಟ್ಟು ಬೆಂಗಳೂರಿಗೆ ಹೊರಟಿದ್ದು, ಮಂಜುಳ ಈ ವಿಷಯದಲ್ಲಿ ಮನನೋಂದು ಯಾವುದೋ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾಳೆ.
  • ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಮಾಜದಲ್ಲಿ ಶಾಂತಿ ಭಂಗಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಂಕ: ೧೩-೦೨-೨೦೦೯ ರಂದು ಬೆಳಿಗ್ಗೆ ೦೭.೩೦ ಗಂಟೆಗೆ ಮುಂಚೆ ಯಾರೋ ದುರಾತ್ಮರು ಕರಪತ್ರವನ್ನು ಮುದ್ರಿಸಿದ್ದು, ಅದರಲ್ಲಿ ಡಾ// ಬಿ.ಆರ್‍.ಅಂಬೇಡ್ಕರ್‍ ರವರ ಚಿತ್ರವನ್ನು ಅವಹೇಳನಕಾರಿಯಾಗಿ ಮುದ್ರಿಸಿ ಅಗೌರವ ಹಾಗೂ ಅವಮಾನ ಉಂಟುಮಾಡಿ ಮತೀಯ ಭಾವನೆ, ದ್ವೇಷ ಭಾವನೆಯಿಂದ ಅಘಾತ ಉಂಡು ಮಾಡಿ, ಸಮಾಜದಲ್ಲಿ ಶಾಂತಿ ಭಂಗವನ್ನು ಉಂಡು ಮಾಡುವ ಉದ್ದೇಶದಿಂದ ಕರ ಪತ್ರಗಳನ್ನು ಸೂರಾಜ್ ಸ್ಟಾರ್ಚ್‌ ಫ್ಯಾಕ್ಟರಿ ಹತ್ತಿರ, ಉರಿಗಾಂಪೇಟೆ ರಸ್ತೆ ಬದಿಯಲ್ಲಿ ಹಾಕಿರುತ್ತಾರೆ ಇತ್ಯಾದಿ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply