ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬-೦೨-೨೦೦೯ ರಂದು ಮದ್ಯಾಹ್ನ ೧.೩೦ ಗಂಟೆಗೆ ಶ್ರೀಮತಿ ಮಾರ್ಗರೇಟ್ ಸೈಮನ್ ರಾಜು, ಮನೆ ಸಂಖ್ಯೆ ೮೭೦, ೬ನೇ ಕ್ರಾಸ್, ಆಂಗ್ಲೋ ಇಂಡಿಯನ್ ಕಾಲೋನಿ, ರಾಬರ್ಟ್‌ಸನ್‌ಪೇಟೆ ಎಂಬುವರು ತನ್ನ ಮಗಳ ಜೊತೆ ತಮಿಳು ನಾಡಿನ ವೇಳಾಂಕಣಿ ಚರ್ಚ್‌ಗೆ ಹೋಗಲು ಮನೆಗೆ ಬೀಗ ಹಾಕಿಕೊಂಡು ಹೋಗಿ ದಿನಾಂಕ: ೧೦-೦೨-೨೦೦೯ ರಂದು ಬೆಳಿಗ್ಗೆ ೮.೩೦ ಗಂಟೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಬೇಡ್ ರೂಮ್‌ನಲ್ಲಿದ್ದ ಬೀರೂವನ್ನು ತೆಗೆದು ಅದರಲ್ಲಿದ್ದ ಸುಮರು ೨೪,೨೫೦/- ರೂ ಬೆಲೆ ಬಾಳಿವ ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೮-೦೨-೨೦೦೯ ರಂದು ರಾತ್ರಿ ಸುಮಾರು ೧೯೩೦ ಗಂಟೆ ಸಮಯದಲ್ಲಿ ಶ್ರೀ. ನಾಗರಾಜ ಬಿನ್ ವೆಂಕಟೇಶಪ್ಪ, ೨೫ ವರ್ಷ, ಮಾಗೊಂದಿ ಗ್ರಾಮ, ಬಂಗಾರಪೇಟೆ ತಾಲೂಕು ರವರ ಮನೆಯ ಮುಂದೆ ಇದ್ದ ಸಾರ್ವಜನಿಕ ನಲ್ಲಿಯನ್ನು ಕಿತ್ತು ಹಾಕಲು ಅದೇ ಗ್ರಾಮದ ವಾಸಿಗಳಾದ ಸಾಕಪ್ಪ, ಮುನಿಬೀಮಪ್ಪ, ವೆಂಕಟಮ್ಮ ಎಂಬುವರುಗಳು ಸೇರಿ ನಾಗರಾಜಪ್ಪರವನ್ನು ಕೆಟ್ಟ ಮಾತುಗಳಿಂದ ಬೈದು ಒಂದು ಬ್ಲೇಡಿನಿಂದ ಬಲಗೈಗೆ ಕೊಯ್ದಿರುತ್ತಾರೆ ಇತ್ಯಾದಿ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


