ದಿನದ ಅಪರಾಧಗಳ ಪಕ್ಷಿನೋಟ ೨೯ನೇ ಜನವರಿ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೧-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮಾರಿಕುಪ್ಪಂನ ಹಾಂಕಾಕ್ಸ್ ಬ್ಲಾಕ್‌ನಲ್ಲಿನ ಮನೆ ಸಂಖ್ಯೆ ೧೧೦ ರಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೮-೦೧-೨೦೦೯ ರಂದು ಸಂಜೆ ೭೦೦ ಗಂಟೆ ಸಮಯದಲ್ಲಿ ಹಾಂಕಾಕ್ಸ್ ಬ್ಲಾಕ್‌ನ ಮನೆ ಸಂಕ್ಯೆ ೧೧೦ ರ ವಾಸಿ ಶ್ರೀ ನಂದಕುಮಾರ್‍ ಬಿನ್ ವರಮುನಿಸ್ವಾಮಿ ಎಂಬುವರು ತಮ್ಮ ಮನೆಗೆ ಬೀಗವನ್ನು ಹಾಕಿಕೊಂಡು ಸ್ವಂತ ಕೆಲಸದ ಮೇಲೆ ರಾಬರ್ಟ್‌‌ಸನ್‌ಪೇಟೆಗೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ೧೦೩೦ ಗಂಟೆಗೆ ಮನೆಗೆ ವಾಪಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಹಿಂಬಾಗದಲ್ಲಿರುವ ಕಿಟಕಿಯನ್ನು ಮುರಿದು ಒಳಗೆ ಪ್ರವೇಶಿಸಿ ಗಾಡ್ರೇಜ್ ಬೀರುವಿನಲ್ಲಿದ್ದ ಬಂಗಾರದ ೩ ಜೊತೆ ವಾಲೆ ೪ ಉಂಗುರಗಳು, ಡೈಮಂಡ್ ಓಲೆ, ಮಾಟಿ, ಬೆಳ್ಳಿ ಕಾಲು ಜೈನು ಸುಮಾರು ೨೦,೦೦೦/- ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು, ಕಾಮಸಮುದ್ರಂ ಹೋಬಳಿ, ಅರವುಬಾಲಯ್ಯನವಂಕ ಅರಣ್ಯ ಪ್ರದೇಶದಲ್ಲಿ ಸಂಭವಿಸಿರುತ್ತದೆ. ದಿನಂಕ: ೨೭-೦೧-೨೦೦೯ ರಂದು ರಾತ್ರಿ ಅರವುಬಾಲಯ್ಯನವಂಕ ಅರಣ್ಯ ಪ್ರದೇಶದ ಕೆ.ಎಸ್.ಎಫ್-೧ ನೇ ಬ್ಲಾಕ್ ನಲ್ಲಿ ಅರಣ್ಯ ಇಲಾಕೆಯ ಕಾಮಗಾಗಿಗಳು ನಡೆಯುತ್ತಿದ್ದು, ಸದರಿ ಕಾಮಗಾರಿಗಾಗಿ ಬಾಡಿಗೆಗೆ ಪಡೆದಿದ್ದ ರೀಪ್ಸರ್‍ ವಾಹನಕ್ಕೆ (ಬಿ.ಇ.ಎಂ.ಎಲ್-ಡಿ-೮೦೧೨) ಅಳವಡಿಸಿದ್ದ ೩೦,೦೦೦/- ರೂ ಬೆಲೆ ಬಾಳುವ ಬ್ಯಾಟರಿ ಮತ್ತು ಟೂಬ್ ಕಿಟ್ಟನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆ.  

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ:  ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ 

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೧-೨೦೦೮ ರಂದು ಬಂಗಾರಪೇಟೆ ತಾಲೂಕು, ಬೇತಮಂಗಲ ಹೋಬಳಿ, ಬೆಟ್ಕೂರು ಗ್ರಾಮದ ವಾಸಿ ಕುಮಾರಿ: ವಿಜಯಕುಮಾರಿ ಬಿನ್ ವೆಂಕಟಪ್ಪ, ೧೪ ವರ್ಷ ಎಂಬುವಳು ಬೆಳಿಗ್ಗೆ ೦೯೦೦ ಗಂಟೆ ಸಮಯದಲ್ಲಿ ಗುಟ್ಟಹಳ್ಳಿ ಸರ್ಕಾರಿ ಪ್ರಾರ್ಥಮಿಕ ಶಾಳೆಗೆ ಹೀಗಿ ಬರುವುದಾಗಿ ಹೋದವಳು ಮತ್ತೆ ಮನೆಗೆ ವಾಪಸ್ಸು ಬಂದಿರುವುದಿಲ್ಲ. ಈ ಬಗ್ಗೆ ಹಲವಾರು ಕಡೆಗಳಲ್ಲಿ ಹುಡುಕಾಡಿದರು ಪತ್ತೆಯಾಗದ ಕಾರಣ ಆಕೆಯ ತಂದೆ ಠಾಣೆಯಲ್ಲಿ ದೂರು ನೀಡಿರುತ್ತಾರೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply