ದಿನದ ಅಪರಾಧಗಳ ಪಕ್ಷಿನೋಟ ೨೪ನೇ ಜನವರಿ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೧-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೧-೨೦೦೯ ರಂದು ಬೆಳಿಗ್ಗೆ ೧೦೫೦ ಗಂಟೆಯಲ್ಲಿ ಮಾರಿಕುಪ್ಪಂ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಮೈಸೂರು ಮೈನ್ಸ್‌ ಮಿಲ್‌ನ ಸೆಕ್ಯೂರಿಟಿ ಗಾರ್ಡ್‌ ಶ್ರೀ ಜಯವೇಲು ಎಂಬುವರು ಗಸ್ತುನಲ್ಲಿದ್ದಾಗ ಸಂಪತ್‌ ಅಲಿಯಾಸ್ ಕೋಳಿ ಸಂಪತ್ (೪೧) ಬಿನ್ ಲೇಟ್‌ ನಟರಾಜ್‌, ಕೆ.ಜಿ.ಎಫ್. ಎಂಬುವರು ಸುಮಾರು ೨೦ ಕೆ.ಜಿ. ರಷ್ಟಿನ ಕಬ್ಬಿಣದ ೬ ತುಂಡುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವುದನ್ನು ಕಂಡು ಪೊಲೀಸ್ ಠಾಣೆಗೆ ಸದರಿ ಸಂಪತ್‌ ರವರನ್ನು ಠಾಣೆಗೆ ಕರೆತಂದು ದೂರು ನೀಡಿರುವ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ:  ಇಲ್ಲ

-ಸಾಧಾರಣ:  ೦೨

  •         ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ-ಕೋಲಾರ ತಿರುವು ಬಳಿ ಸಂಬವಿಸಿರುತ್ತದೆ ದಿನಾಂಕ: ೨೩.೦೧.೨೦೦೯ ರಂದು ೪.೪೫ ಗಂಟೆ ಸಮಯದಲ್ಲಿ ವೆಂಕಟೇಶ್‌ ಬಿನ್‌ ನಾರಾಯಣಪ್ಪ ತನ್ನ ವಾಹನ ಕ್ಯಾಂಟರ್‌ ಕೆಎ-೦೮-೨೫೪೯ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀ. ಕುಮಾರ್‌ ಬಿನ್‌ ಲೇಟ್‌ ರಾಮು ಎಂಬುವರ ವಾಹನ ಕಾರ್‌  ಸಂಖ್ಯೆ ಕೆಎ-೦೪-ಎಂಇ-೫೧೦ ಡಿಕ್ಕಿಹೊಡೆದು ವಾಹನವನ್ನು ಜಖಂಗೊಳಿಸಿರುತ್ತಾರೆ.
  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಅನಿಗಾನಹಳ್ಳಿ ಗ್ರಾಮದ ಬಳಿ ಸಂಬವಿಸಿರುತ್ತದೆ. ದಿನಾಂಕ: ೨೩.೦೧.೨೦೦೯ ರಂದು ರಾತ್ರಿ ೮.೧೦ ಗಂಟೆಯಲ್ಲಿ ಶ್ರೀ. ನಾಗರಾಜರೆಡ್ಡಿ ಬಿನ್‌ ಮುನಿವೆಂಕಟಪ್ಪ(೩೧) ಗಾಜಗ ಗ್ರಾಮ ರವರು ತನ್ನ ವಾಹನ ಸಂಖ್ಯೆ ಎಪಿ-೦೪-ಸಿ-೯೬೧೬ ಅನ್ನು ಚಲಾಯಿಸಿಕೊಂಡು ಬರುತ್ತಿವಾಗ ಕೆ.ಎಸ್‌.ಆರ್‌.ಟಿ. ಬಸ್ಸ ಸಂಖ್ಯೆ ಕೆಎ-೦೭-ಎಫ್‌-೧೦೩೭ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಯಿಸಿಕೊಂಡು ಬಂದು ಡಿಕ್ಕಿಪಡಿಸಿ ವಾಹನವನ್ನು ಜಖಂಗೊಳಿಸಿರುತ್ತಾರೆ. 

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •            ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಹಂಚಳ ಗ್ರಾಮದ ಪೀಲ್ಡ್‌ ಮಾರ್ಷಲ್‌ ಶಾಲೆಯ ಬಳಿ ಸಂಭವಿಸಿರುತ್ತದೆ.  ದಿನಾಂಕ: ೨೩.೦೧.೨೦೦೯ ರಂದು ೯.೩೦ ಗಂಟೆ ಸಮಯದಲ್ಲಿ ಶ್ರೀ. ಎಂ. ಚಂದ್ರಶೇಖರ್‌, ಅದ್ಯಕ್ಷರು, ಪೀಲ್ಡ್‌ ಮಾರ್ಷಲ್‌ ಶಾಲೆಯವರು ತಮ್ಮ ಶಾಲೆಗೆ ಸೇರಿದ ಜಮೀನು ಸರ್ವೆ ನಂ ೧೧ ರಲ್ಲಿ ಮುಳ್ಳು ತಂತಿಗಳ ಬೇಲಿ ಹಾಕುವಾಗ ನಾರಾಯಸ್ವಾಮಿ ಬಿನ್‌ ಮುನಿಯಪ್ಪ, ಶ್ರೀನಿವಾಸಗೌಡ ಮಾವಹಳ್ಳಿ ಮತ್ತು ವೆಂಕಟೇಶ್‌ ಹುನ್ಕುಂದ ಗ್ರಾಮದವರುಗಳು ಮತ್ತು ಇನ್ನು ೧೦ ಜನರು ಸೇರಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಕೆಸಲಕ್ಕೆ ಅಡ್ಡಿ ಮಾಡಿ ಪ್ರಾಣ ಬೆದರಿಕೆಯಾಕಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply