ದಿನದ ಅಪರಾಧಗಳ ಪಕ್ಷಿನೋಟ ೩೦ನೇ ಡಿಸೆಂಬರ್‍ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೧೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ    

ಮನೆಗಳ್ಳತನ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೨-೨೦೦೮ ರಂದು ರಾತ್ರಿ ಬಂಗಾರಪೇಟೆ ತಾಲೂಕಿನ ಡಿ.ಪಿ.ಹಳ್ಳಿ ಸರ್ಕಾರಿ ಶಾಲೆಯಲ್ಲಿ ಯಾರೋ ಕಳ್ಳರು ಶಾಲಾ ಕಚೇರಿಯ ಪಕ್ಕದ ಕಂಪ್ಯೂಟರ್‌ ಕೊಠಡಿಯ ಹಾಗೂ ಅದರ ಪಕ್ಕದ ಮತ್ತೊಂದು ಕೊಠಡಿಯ ಬಾಗಿಲುಗಳ ಬೀಗಗಳನ್ನು ಮುರಿದು ಕೊಠಡಿಗಳಲ್ಲಿರುವ ೮ ಕುರ್ಚಿಗಳು, ೨ ಫ್ಯಾನ್‌ ಸೆಟ್‌ ಹಾಗೂ ಇತರೆ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ:  ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸ/ವಂಚನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್.ನ ಆಂಡ್ರಸನ್‌ಪೇಟೆ ವಾಸಿಗಳಾದ ನಯಾಜ್‌ ಬಿನ್ ಲೇಟ್‌ ಜಲೀಲ್‌, ಫಯಾಜ್‌ ಬಿನ್ ಲೇಟ್‌ ಜಲೀಲ್‌, ಇಲಿಯಾಜ್‌ ಬಿನ್ ಲೇಟ್‌ ಜಲೀಲ್‌ ಮತ್ತು ರೆಹಮಾನ್‌ ಎಂಬುವರುಗಳು ಬೆಂಗಳೂರು ವಾಸಿಯಾದ ಶ್ರೀ ಹುಸೇನ್‌ ಮೋಹಿನ್‌ ಫಾರೂಕ್‌ ಬಿನ್ ಕೆ.ಎಂ.ಹುಸೇನ್‌ ಎಂಬುವರಿಗೆ ಸೇರಿದ ಖಾತೆ ನಂ. ೮೨೮ ಅಸೆಸ್‌ಮೆಂಟ್ ನಂ. ೯೦೬ ರಲ್ಲಿನ ಖಾಲಿ ನಿವೇಶನವನ್ನು ಮೋಸದಿಂದ ಲಪಟಾಯಿಸಲು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ, ಸೈಟಿನಲ್ಲಿ ಅಕ್ರಮ ಪ್ರವೇಶಮಾಡಿ ಶ್ರೀ ಹುಸೇನ್‌ ಮೋಹಿನ್‌ ಫಾರೂಕ್‌ ರವರ ತಂದೆ-ತಾಯಿ ರವರುಗಳನ್ನು ಹೊರಗೆ ಓಡಿಸಲು ಪ್ರಯತ್ನಪಟ್ಟು ಅವಮಾನಗೊಳಿಸಿ, ಪ್ರಾಣಬೆದರಿಕೆ ಹಾಕಿರುತ್ತಾರೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಕೇಸು ಮತ್ತು ಪ್ರತಿಕೇಸು ದಾಖಲಾಗಿರುತ್ತದೆ.  ಈ ಕೃತ್ಯವು ಬಂಗಾರಪೇಟೆ ತಾಲೂಕಿನ ತಂಗೇಡಿಮಿಟ್ಟ ಕೊತ್ತಿಂಡ್ಲು ಗ್ರಾಮದಲ್ಲಿ ನಡೆದಿರುತ್ತದೆ. ದಿನಾಂಕ ೩೦-೧೨-೨೦೦೮ ರಂದು ಬೆಳಿಗ್ಗೆ ಸುಮಾರು ೦೬೩೦ ಗಂಟೆಯಲ್ಲಿ ಶ್ರೀ ಚಂದ್ರಶೇಖರ್‌ ಬಿನ್ ವೆಂಕಟಪ್ಪ, ವಯಸ್ಸು ೨೪ ವರ್ಷ, ತಂಗೇಡಿಮಿಟ್ಟ ಕೊತ್ತಿಂಡ್ಲು ಗ್ರಾಮ ರವರಿಗೂ ಮತ್ತು ಅದೇ ಗ್ರಾಮದ ವಾಸಿಗಳಾದ ರಾಮುಡು ಬಿನ್ ಗಂಗಪ್ಪ, ಪೆದ್ದನ್ನ ಬಿನ್ ಗಂಗಲಪ್ಪ ಎಂಬುವರುಗಳಿಗೆ ಹಣಕಾಸಿನ ವಿಚಾರದಲ್ಲಿ ಜಗಳಗಳಾಗಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ರಕ್ತಗಾಯಪಡಿಸಿಕೊಂಡಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply