ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೧೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲಿನ ದೌಜ್ಯನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ದೇಶಿಹಳ್ಳಿ, ಬಂಗಾರಪೇಟೆಯಲ್ಲಿ ಸಂಭವಿಸಿರುತ್ತದೆ. ಶ್ರೀಮತಿ. ಶೋಭಾ ಕೋಂ ಎಂ.ಆರ್. ನಾರಾಯಣಸ್ವಾಮಿ, ದೇಶಿಹಳ್ಳಿ ರವರು ದಿನಾಂಕ: ೨೭.೧೨.೨೦೦೮ ರಂದು ಎಂ.ಆರ್. ನಾರಾಯಣಸ್ವಾಮಿ ಬಿನ್ ಲೇಟ್ ರಂಗಸ್ವಾಮಿ, ೭ನೇ ಕ್ರಾಸ್, ವಿವರಸ್ ಕಾಲೋನಿ, ಗೊಡ್ಡಗೆರೆ, ಬನ್ನೇರಘಟ್ಟ ರಸ್ತೆ, ಬೆಂಗಳೂರು ರವರೊಂದಿಗೆ ಮದುವೆಯಾಗಿದ್ದು, ನಾರಾಯಸ್ವಾಮಿ ಮತ್ತು ಆತನ ತಾಯಿ ಶ್ರೀಮತಿ ಮುನಿಲಕ್ಷ್ಮ್ಮ ರವರುಗಳು ಶೋಬಾ ರವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ದಿನಾಂಕ: ೨೭.೧೨.೨೦೦೮ ರಂದು ರಾತ್ರಿ ೮.೦೦ ಗಂಟೆ ಸಯದಲ್ಲಿ ಸದರಿಯವರುಗಳು ಶೋಭ ರವರ ಮನೆಯ ಬಳಿ ಬಂದು ಒಂದು ರಾಡಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ನಲ್ಲಗುಟ್ಟಹಳ್ಳಿ ಗ್ರಾಮದ ಬಳಿ ಸಂಭವಿಸಿರುತ್ತದೆ. ಶ್ರೀ. ಮುನಿರಾಜು ಬಿನ್ ನಾರಾಯಣಪ್ಪ(೨೩), ಚಿಂತಗುಮ್ಮನಹಳ್ಳಿ ಗ್ರಾಮದ ವಾಸಿ ರವರು ತನ್ನ ವಾಹನ ಸಂಖ್ಯೆ ಕೆಎ-೦೨-ಇಪಿ-೫೬೩೬ ಬಜಾಜ್ ಸಿ.ಟಿ. ೧೦೦ ಅನ್ನು ಕಾಮಸಮುದ್ರಂ ಗೆ ಹೋಗಲು ನಲ್ಲಗುಟ್ಟಹಳ್ಳಿ ಗ್ರಾಮದ ಚಲಾಯಿಸಿಕೊಂಡು ಬರುತ್ತಿರುವಾಗ ಟಾಟಾ ಸಮೋ ಸಂಖ್ಯೆ ಕೆಎ-೨೫-ಎನ್‌೫೨೮೮ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪ್ರಯುಕ್ತ ಮುನಿರಾಜು ರವರು ಕೆಳೆಗೆ ಬಿದ್ದು ರಕ್ತಗಾಯಗಳಾಗಿರುತ್ತವೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕಳ್ಳಭಟ್ಟಿ ಸಾರಾಯಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಚಿಕ್ಕಕಳವಂಚಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೮.೧೨.೨೦೦೮ ರಂದು ರಾತ್ರಿ ೭.೦೦ ಗಂಟೆ ಸಮದಯಲ್ಲಿ ಶ್ರೀ. ಬಿ.ಕೆ. ಮದುಸೂದನ್, ಪಿ.ಎಸ್.ಐ. ಕಾಮಸಮುದ್ರಂ ಪೊಲೀಸ್ ಠಾಣೆಗೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಚಿಕ್ಕಕಳವಂಚಿ ಗ್ರಾಮದ ಕೆ.ವಿ.ರಮೇಶ್ ಬಿನ್ ವೀರಭದ್ರಪ್ಪ (೩೫) ರವರ ಮನೆಯ ಮೇಲೆ ದಾಳಿ ಮಾಡಲಾಗಿ ಒಂದು ಕ್ಯಾನಿನಲ್ಲಿ ೫ ಲೀಟರ್‌ನಷ್ಟು ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಇಟ್ಟುಕೊಂಡಿದ್ದು, ಮಾಲು ಸಮೇತ ಅಮಾನತ್ತು ಪಡಿಸಿ ಕಾನೂನಿನ ಕ್ರಮಜರುಗಿಸಿರುತ್ತದೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


