ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಡಿಸೆಂಬರ್‌ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೧೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ    

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ:  ೦೧

  •               ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೆಂಗನೂರಿನ ಶ್ರೀ. ಆಂಜನೇಯಸ್ವಾಮಿ ದೇವಾಲಯದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೬.೧೨.೨೦೦೮ ರಂದು ರಾತ್ರಿ ಯಾರೋ ಕಳ್ಳರು ಶ್ರೀ. ಅಂಜನೇಯಸ್ವಾಮಿ ದೇವಸ್ಥಾನದ ಹುಂಡಿಯ ಬೀಗವನ್ನು ಮುರಿದು ಸುಮಾರು ೧೫೦೦೦.೦೦ ರಿಂದ ೨೦೦೦೦.೦೦ರೂಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ:  ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •            ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹೆಂಗಸು ನಾಪತ್ತೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು  ಮನೆ ಸಂಖ್ಯೆ ೨೯೮೮ ಅಮರಾವತಿ ನಗರ, ಬಂಗಾರಪೇಟೆಯಲ್ಲಿ ಸಂಭವಿಸಿರುತ್ತದೆ. ಶ್ರೀ. ಮುನಿಯಪ್ಪ @ ಬಾಬು ಬಿನ್‌ ನಾರಾಯಣಗೌಡ(೩೬), ಅಮರಾವತಿ ನಗರ ರವರ ಪತ್ನಿಯಾದ ಶ್ರೀಮತಿ ಅಂಬಿಕಾ ಕೋಂ ಮುನಿಯಪ್ಪ (೨೪) ಎಂಬುವರು ದಿನಾಂಕ: ೨೦.೧೨.೨೦೦೮ ರಂದು ಮದ್ಯಾಹ್ನ ಸುಮಾರು ೧.೪೫ ಗಂಟೆ ಸಮಯದಲ್ಲಿ ಆಸ್ಪತ್ರೆಗೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply