ದಿನದ ಅಪರಾಧಗಳ ಪಕ್ಷಿನೋಟ ೨೬ನೇ ಡಿಸೆಂಬರ್‌ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೧೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ    

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ:  ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧

  •              ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ಮೇಲಿನ ದೌಜ್ಯನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲ ಹೋಬಳಿ ನಲ್ಲೂರು ಗ್ರಾಮದಲ್ಲಿ ಸಂಭವಿಸಿರುತ್ತದೆ. ಶ್ರೀಮತಿ ಸವಿತಾ ಕೋಂ ಎನ್‌.ವಿ.ಬಾಬು(೨೭) ನಲ್ಲೂರು ರವರು ಇದೇ ಗ್ರಾಮದ ವಾಸಿ ಎನ್‌.ವಿ.ಬಾಬುರೊಂದಿಗೆ ದಿನಾಂಕ: ೦೪.೦೨.೨೦೦೭ ರಂದು ಮದುವೆಯಾಗಿದ್ದು, ಮದುವೆ ಕಾಲದಲ್ಲಿ ಸವಿತಾ ರವರಿಗೆ ೫೦೦ ಗ್ರಾಂ ಚಿನ್ನದ ವಡವೆಗಳು, ರೂ. ೭,೨೫,೦೦೦.೦೦ ಗಳನ್ನು ಮತ್ತು ಬಾಬುರವರಿಗೆ ೬೫ ಗ್ರಾಂ ಚಿನ್ನದ ವಡವೆಗಳನ್ನು ನೀಡಿದ್ದು, ಮದುವೆ ಕಾಲದಲ್ಲಿ ಸವಿತಾ ರವರ ಹೆಸರಿನಲ್ಲಿ ೧೦ ಲಕ್ಷಗಳ ವಿಮೆ ಇದೆಯೆಂದು ತಿಳಿಸಿದ್ದು, ಪ್ರಸ್ತುತ ೨ ಲಕ್ಷಗಳ ವಿಮೆ ಇದೆಯೆಂದು ತಿಳಿದು ಬಾಬು ರವರು ಉಳಿದ ಮೊತ್ತದ ವಿಮೆಯನ್ನು ತೆಗೆದುಕೊಂಡು ಬಾ ಎಂದು ಹೇಳಿ  ತನ್ನ ಅತ್ತೆ ನಾಸಮ್ಮ ಬಾವ ಶಿವಪ್ರಸಾದ್‌ ರವರುಗಳು ಚುಚ್ಚು ಮಾತುಗಳನ್ನಾಡಿ ವರದಕ್ಷಿಣೆ ತಂದರೆ ಮಾತ್ರ ಬೆಂಗಳೂರಿಗೆ ಕರೆದುಕೊಂಡು ಹೋಗಿ ಸಂಸಾರ ಮಾಡುವುದಾಗಿ ಕಿರುಕಿಳ ನೀಡಿದ್ದರಿಂದ  ಸವಿತಾ ರವರು ಮಾನಸಿಕವಾಗಿ ನೊಂದು ನಿದ್ರ ಮಾತ್ರೆಗಳನ್ನು ತೆಗೆದುಕೊಂಡು ಆರ್‌.ಎಲ್‌ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ: ೦೧

  •             ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಈಡನ್ಸ್‌ ಸ್ಕೂಲ್‌, ಮಾರಿಕುಪ್ಪಂ ಬಳಿ ಸಂಭವಿಸಿರುತ್ತದೆ. ಶ್ರೀಮತಿ ಜಾಯ್ಸ್‌ ಬೇಬಿ(೪೦) ಜನತಾ ಆಶ್ರಯ ಮನೆಗಳು, ರಾಜೇಶ್‌ ಕ್ಯಾಂಪ್‌ ರವರು ದಿನಾಂಕ: ೨೫.೧೨.೨೦೦೮ ರಂದು ಸಂಜೆ ೬.೦೦ ಗಂಟೆ ಸಮಯದಲ್ಲಿ ಆಂಡ್ರಸನ್‌ಪೇಟೆಯಿಂದ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂಭಾಗದಿಂದ ನವೀನ್‌ ಕುಮಾರ್‍ ಬಿನ್‌ ಪೆರುಮಾಳ್‌, ವಾಸ ರಾಜೇಶ್‌ ಕ್ಯಾಂಪ್‌ ಮಾರಿಕುಪ್ಪಂ ವಾಸಿ ರವರು ತನ್ನ ದ್ವಿಚಕ್ರ ವಾಹನ ಸವಾರ ಅತಿವೇಗ ಮತ್ತು ಅಜಾಗೂರುಕತೆಯಿಂದ ವಾಹನವನ್ನು ಚಲಾಯಿಸಿ ಡಿಕ್ಕಿ ಪಡಿಸಿ ವಾಹನವನ್ನು ನಿಲ್ಲಿಸದೆ ಹೋಗಿರುತ್ತಾನೆ. ಡಿಕ್ಕಿ ಹೊಡೆದ ಪರಿಣಾಮ ಜಾಯ್ಸ್‌ಬೇಬಿ ರವರಿಗೆ ಮೈಲೆ ರಕ್ತಗಾಯಗಳಾಗಿರುತ್ತವೆ. 

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •            ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹುಡುಗ ನಾಪತ್ತೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಸೇಠ್‌ ಕಾಂಪೌಂಡ್‌ನಲ್ಲಿ ನಡೆದಿರುತ್ತದೆ. ಶ್ರೀಮತಿ ಗುಲ್ಜಾರ್‌ ಬೇಗಂ ಕೋಂ ಸಲೀಂ ಪಾಷ(೩೦) ಎಂಬುವರ ಮಗನಾದ ಫೈಜಲ್‌ ಪಾಷ (೧೪) ರವರು ಸರಿಯಾಗಿ ಶಾಲೆಗೆ ಹೋಗದೆ ಇದ್ದು, ದಿನಾಂಕ: ೧೪.೧೨.೨೦೦೮ ರಂದು ಶಾಲೆಗೆ ಹೋಗುವುದಾಗಿ ತಿಳಿಸಿ ಹೋದವನ್ನು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply