ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೧೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕಣಿವೆಕಲ್ಲು ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೪.೧೨.೨೦೦೮ ರಂದು ರಾತ್ರಿ ೯.೩೦ ಗಂಟೆ ಸಮಯದಲ್ಲಿ ಇದೇ ಗ್ರಾಮದ ವಾಸಿಗಳಾದ ಅರುಣ್ ಕುಮಾರ್ ಬಿನ್ ಶಂಕರಪ್ಪ ಮತ್ತು ಮಂಜುನಾಥ್ ಬಿನ್ ಸುಬ್ರಮಣಿ ಎಂಬುವರುಗಳು ಲಕ್ಷ್ಮಯ್ಯ ಎಂಬುವರೊಂದಿಗೆ ಜಗಳ ಮಾಡುತ್ತಿದ್ದು, ಶ್ರೀ. ವೆಂಕಟೇಶಪ್ಪ ಬಿನ್ ಲೇಟ್ ನ್ಯಾತಪ್ಪ(೩೮) ಎಂಬುವರು ಜಗಳ ಬಿಡಿಸಲು ಹೋದಾಗ ಸದರಿಯವರುಗಳು ಒಂದು ಕಬ್ಬಿಣದ ರಾಡ್‌ನಿಂದ ಹೊಡೆದು ರಕ್ತಗಾಯಪಡಿಸಿ ಪ್ರಾಣ ಬೆದರಿಕೆಯಾಕಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಐನೋರಹೊಸಹಳ್ಳಿ ಗ್ರಾಮದಲ್ಲಿ ಸಂಬವಿಸಿರುತ್ತದೆ. ಶ್ರೀಮತಿ ಲಕ್ಷ್ಮಮ್ಮ ಕೋಂ ಮುನಿಯಪ್ಪ(೪೮), ಐನೋರಹೊಸಹಳ್ಳಿ ಗ್ರಾದ ವಾಸಿಯವರ ಮಗಳಾದ ಕುಮಾರಿ: ಶಾಂತ ಬಿನ್ ಮುನಿಯಪ್ಪ(೨೦) ಎಂಬುವರಿಗೆ ಹೊಟ್ಟೆ ನೋವು ಮತ್ತು ಎದೆನೋವು ಬರುತ್ತಿದ್ದು, ಇದನ್ನು ತಳಾಲಾರದೆ ಜೀವನದಲ್ಲಿ ಜಿಗೂಪ್ಸೆಗೊಂಡು ದಿನಾಂಕ: ೨೩.೧೨.೨೦೦೮ ರಂದು ಸಂಜೆ ೫.೦೦ ಗಂಟೆ ಸಮಯದಲ್ಲಿ ಇಲಿಗಳಿಗೆ ಹಾಕುವ ಔಷದಿಯನ್ನು ಸೇವಿಸಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿ ದಿನಾಂಕ: ೨೫.೧೨.೨೦೦೮ ರಂದು ಬೆಳಿಗ್ಗೆ ೩.೧೫ ಗಂಟೆ ಮೃತಹೊಂದಿರುತ್ತಾಳೆ.
-
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


