ದಿನದ ಅಪರಾಧಗಳ ಪಕ್ಷಿನೋಟ ೨೪ನೇ ಡಿಸೆಂಬರ್‍ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೧೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ    

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ:  ೦೧

  •           ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಗೋಲ್ಕೊಂಡ ಶಾಫ್ಟ್‌ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೩.೧೨.೨೦೦೮ ರಂದು ರಾತ್ರಿ ಸೂರ್ಯ ಬಿನ್‌ ಲೇಟ್‌ ಕಾಣಿಯಪ್ಪನ್‌, ರಮೇಶ್‌ ಬಿನ್‌ ರಂಗನಾಥನ್‌, ನಂದಿ ಮತ್ತು ರಮೇಶ್‌ ಎಲ್ಲಾ ಅಶೋಕನಗರ ವಾಸಿಗಳು ಗೋಲ್ಕಂಡ ಶಾಫ್ಟ್‌ನಲ್ಲಿ ೪ ಕಬ್ಬಿಣದ ಪೈಪುಗಳನ್ನು ಕಳ್ಳತನ ಮಾಡಿಕೊಂಡು ಕೆಇವಿ-೫೯೨೯ ಆಟೋದಲ್ಲಿ ಹಾಕಿಕೊಂಡು ರಾಬರ್ಟ್‌‌ಸನ್‌ಪೇಟೆ ಎಂ.ಜಿ. ಮಾಕೆರ್ಟ್‌‌ನಲ್ಲಿ ಮಾರಾಟ ಮಾಡಲು ಬಂದು ಪೊಲೀಸರಿಗೆ ಸಿಕ್ಕಿಬಿದ್ದಿರುತ್ತಾರೆ. 

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ             

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •         ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಹನುಮಂತ ನಗರ, ಬೇತಮಂಗಲದಲ್ಲಿ ಸಂಭವಿಸಿರುತ್ತದೆ. ಇದೇ ಗ್ರಾಮದ ವಾಸಿ ಶ್ರೀಮತಿ ಜಯಮ್ಮ ಕೋಂ ಷಣ್ಮುಗಂ(೫೧) ರವರು ತನ್ನ ತಂಗಿ ಮಗ ಮುರಳಿ ಎಂಬುವರೊಂದಿಗೆ ಮಾತನಾಡುತ್ತಿರುವಾಗ ಇದೇ ಗ್ರಾಮದ ವಾಸಿ ಅಬ್ಬು ಎಂಬುವರ  ಮಗಳು ಕೋಮಲ ರವರು ಏಕೆ ನಮ್ಮ ಜಮೀನಿನಲ್ಲಿ ಬೋರ್‌ ಹಾಕಲು ಬಿಡುತ್ತಿಲ್ಲವೆಂದು ಜಗಳ ಮಾಡಿ ಚಪ್ಪಲಿಯಿಂದ ಹೊಡೆದು ಹಾಗೂ ಸುರೇಶ್‌, ಮಂಜುಳ ಮತ್ತು ರತ್ನಮ್ಮ ಎಂಬುವರುಗಳು ಹೊಡೆದು ಮೈ ನೋವು ಉಂಟು ಮಾಡಿರುತ್ತಾರೆ. 

ಇತರೆ: ೦೧

  •           ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಅಪರಾಧಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಬಸ್‌ ನಿಲ್ದಾಣದಲ್ಲಿ ಸಂಭವಿಸಿರುತ್ತದೆ. ಅನಿಲ್‌ಕುಮಾರ್‌ ಬಿನ್‌ ವೆಂಕಟಗಿರಿಯಪ್ಪ, ಕೆ.ಎಸ್‌.ಆರ್‌.ಟಿ.ಸಿ. ನಿರ್ವಹಕ, ಕೆ.ಜಿ.ಎಫ್‌ ಡಿಪ್ಪೋ ರವರು ಕೆ.ಜಿ.ಎಫ್‌ ನಿಂದ ಬಂಗಾರಪೇಟೆಗೆ ತನ್ನ ಬಸ್ಸಿನಲ್ಲಿ ಇದ್ದ ಪ್ರಯಾಣಿಕರಿಗೆ ಟೀಕೆಟ್‌ ನೀಡುತ್ತಿದ್ದು, ಶಿವರಾಜ್‌ ಬಿನ್‌ ಮಸಲ್‌ಮಣಿ, ಚಾಂಪಿಯನ್‌ ರೀಫ್ಸ್‌, ಕೆ.ಜಿ.ಎಫ್‌ ರವರಿಗೆ ೮.೦೦ಗಳ ಟಿಕೇಟ್‌ ನೀಡಿ ರೂ ೧೦೦.೦೦ ಗಳಿಗೆ ಚಿಲ್ಲರೆಯನ್ನು ನೀಡುವಷ್ಟರಲ್ಲಿ ತಡವಾಯಿತೆಂದು ಜಗಳ ಮಾಡಿ ತಲೆಯಿಂದ ನಿರ್ವಹಕರಿಗೆ ಗುದ್ದಿ ಗಾಯಪಡಿಸಿರುತ್ತಾನೆ. 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •              ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಗಾಜಗ ಗ್ರಾಮದಲ್ಲಿ ಸಂಭವಿಸಿರುತ್ತದೆ. ಕುಮಾರಿ ನಾಗವೇಣಿ ಬಿನ್‌ ರಾಮಚಂದ್ರಪ್ಪ(೧೬) ಎಂಬುವರು ದಿನಾಂಕ: ೨೦.೧೨.೨೦೦೮ ರಂದು ಬೂದಿಕೋಟೆಯಲ್ಲಿರುವ ಶಾಲೆಗೆ ತಡವಾಗಿ ಮನೆಗೆ ಬಂದಿದ್ದರಿಂದ ನಾಗವೇಣಿಯವರ ತಾಯಿಯವರು ಬೈದು ಹೊಡೆದಿದ್ದರಿಂದ ದಿನಾಂಕ: ೨೨.೧೨.೨೦೦೮ ರಂದು ಬೆಳಿಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷವನ್ನು ಸೇವಿಸಿ ಕೋಲಾರದ ಎಸ್‌.ಎನ್‌.ಆರ್‌. ಆಸ್ಪತ್ರೆಯಲ್ಲಿ ದಾಖಲಾಗಿ ದಿನಾಂಕ: ೨೪.೧೨.೨೦೦೮ ರಂದು ರಾತ್ರಿ ೧.೦೦ ಗಂಟೆ ಮೃತಪಟ್ಟಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply