ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೧೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ದೊಡ್ಡವಲಗಮಾದಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಶ್ರೀ ಆಲಿಖಾನ್ ಬಿನ್ ಲೇಟ್ ಬಾಬಾಜಾನ್(೨೫) ಎಂಬುವರು ದಿನಾಂಕ: ೨೧.೧೨.೨೦೦೮ ರಂದು ರಾತ್ರಿ ೧.೦೦ ಗಂಟೆ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ಮಕ್ಕಳನ್ನು ಬಂಗಾರಪೇಟೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಮತ್ತೆ ಬೆಳಗಿನ ಜಾವ ೪.೦೦ ಗಂಟೆ ವಾಪಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬೆಡ್ ರೂಮಿನ ಬಾಗಿಲಿನ ಬೀಗವನ್ನು ಮುರಿದು ೪ ಬಂಗಾರದ ಉಂಗುರುಗಳು, ೧ ಬಂಗಾರದ ನಕ್ಲೆಸ್ ಮತ್ತು ಇತರೆ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಬೆಲೆ ಸುಮಾರು ೨೪,೦೦೦.೦೦ ಗಳಾಗಿರುತ್ತದೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಐಸಂದ್ರ ಮಿಟ್ಟೂರು ಗ್ರಾಮದಲ್ಲಿ ಸಂಭವಿಸಿರುತ್ತದೆ. ಇದೇ ಗ್ರಾಮದ ವಾಸಿ ಶ್ರೀಮತಿ ಗೋವಿಂದಮ್ಮ ಕೋಂ ಲೇಟ್ ರಾಮಚಂದ್ರಪ್ಪ ರವರು ದಿನಾಂಕ: ೨೨.೧೨.೨೦೦೮ ರಂದು ಸಂಜೆ ೬.೦೦ ಗಂಟೆ ಸಮಯದಲ್ಲಿ ಗ್ರಾಮದ ಕೆರೆಯಲ್ಲಿ ಬಟ್ಟೆಗಳನ್ನು ಹೊಗೆದುಕೊಂಡು ಬರುತ್ತಿರುವಾಗ ಇದೇ ಗ್ರಾಮದ ವಾಸಿ ಶ್ರೀನಿವಾಸ ಎಂಬುವರು ಜಮೀನು ವಿಚಾರದಲ್ಲಿ ಹಿಂದುಗಡೆಯಿಂದ ಬಂದು ಗೋವಿಂದಮ್ಮನ್ನು ದಬ್ಬಿಕೊಂಡು ಕೆಟ್ಟ ಮಾತುಗಳಿಂದ ಬೈದು ನಿನ್ನನ್ನು ಸಾಯಿಸುವ ತನಕ ಬಿಡುವುದಿಲ್ಲವೆಂದು ಒಂದಿ ಕಲ್ಲಿನಿಂದ ಜಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಲಮಂದೆ ಗ್ರಾಮದಲ್ಲಿ ಸಂಭವಿಸಿರುತ್ತದೆ. ವೆಂಕಟರಾಮಪ್ಪ ಬಿನ್ ಕಿಟ್ಟಪ್ಪ(೫೦), ಬಲಮಂದೆ ಗ್ರಾಮದ ವಾಸಿಯರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸದರಿಯವರ ಪತ್ನಿ ಶ್ರೀಮತಿ ನರಸಮ್ಮ ಕೋಂ ವೆಂಕಟರಾಮಪ್ಪ(೪೦) ಎಂಬುವರು ದಿನಾಂಕ: ೨೨.೧೨.೨೦೦೮ ರಂದು ಮದ್ಯಾಹ್ನ ೧.೦೦ ಗಂಟೆ ಸಮಯದಲ್ಲಿ ಕೂಲಿ ಆಳುಗಳಿಗೆ ಊಟ ತಂದು ನೀರು ತರಲು ಪಕ್ಕದಲ್ಲೇ ಇದ್ದ ಬಾವಿಗೆ ಹೋಗಿದ್ದು, ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


