ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೧೨-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನದ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೧೨-೨೦೦೮ ರಂದು ಬೆಳಿಗ್ಗೆ ಕೆ.ಜಿ.ಎಫ್. ನಗರದ ಕೆನರಾ ಬ್ಯಾಂಕಿನ ನೆಲಮಹಡಿಯಲ್ಲಿ ಶ್ರೀ ಭಾಸ್ಕರನ್, ಸೀನಿಯರ್ ಮ್ಯಾನೇಜರ್, ಕೆನರಾ ಬ್ಯಾಂಕ್, ರಾಬರ್ಟ್‌ಸನ್‌ಪೇಟೆ ಕೆ.ಜಿ.ಎಫ್. ರವರು ದ್ವಿಚಕ್ರ ವಾಹನ ಬಜಾಜ್ ಬಾಕ್ಸರ್ ಸಂಖ್ಯೆ: ಕೆಎ-೦೮-ಹೆಚ್-೭೭೧೮ ಅನ್ನು ನಿಲ್ಲಿಸಿದ್ದು, ಸಂಜೆ ನೋಡಿದಾಗ ಯಾರೋ ಕಳ್ಳರು ಸದರಿ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫.೧೧.೨೦೦೮ ರಂದು ಬೆಳಿಗ್ಗೆ ೧೧೩೦ ಗಂಟೆಯಲ್ಲಿ ವೆಂಕಟಾಚಲಪತಿ ಬಿನ್ ಪಾಪಣ್ಣ, ವಾಸ: ವಿ.ಎಲ್ಲಾಗರಂ ಗ್ರಾಮ, ವಿ.ಕೋಟ ಮಂಡಲ್, ಕುಪ್ಪಂ ತಾಲೂಕು, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ ರವರು ಆಟೋ ಸಂಖ್ಯೆ: ಎಪಿ-೦೩-ಎಕ್ಸ್-೪೩೦೪ ಅನ್ನು ಕೋತೆಗಾನಪಲ್ಲಿ ಕ್ರಾಸ್ ಸಮೀಪ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಆಟೋ ಸ್ಕಿಡ್ ಆಗಿ ನೆಲಕ್ಕೆ ಉರುಳಿ ಬಿದ್ದಿದ್ದರಿಂದ ಸದರಿ ಆಟೋ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಶ್ರೀ ರವಿಕುಮಾರ್ ಬಿನ್ ಗೋವಿಂದಪ್ಪ, ವಾಸ: ವಿ.ಎಲ್ಲಾಗರಂ ಗ್ರಾಮ, ವಿ.ಕೋಟ ಮಂಡಲ್, ಕುಪ್ಪಂ ತಾಲೂಕು, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ ರವರಿಗೆ ರಕ್ತಗಾಯಗಳಾಗಿರುತ್ತವೆ. ನಂತರ ಮೇಲ್ಕಂಡ ಆಟೋ ಚಾಲಕ ಆಟೋವನ್ನು ನಿಲ್ಲಿಸದೆ ಹೊರಟು ಹೋಗಿರುತ್ತಾನೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


