ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬ್ಯಾಟರಾಯನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಶ್ರೀಮತಿ ರಾಜಮ್ಮ ಕೋಂ ಬಾಲಕೃಷ್ಣನಾಯ್ಡು(೪೫) ಇವರ ಮಗ ಮಂಜುನಾಥ ಬಿನ್ ಬಾಲಕೃಷ್ಣನಾಯ್ಡು(೨೮) ರವರೊಡನೆ ಸಂಸಾರದ ವಿಚಾರದಲ್ಲಿ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದು, ದಿನಾಂಕ: ೨೭.೧೧.೨೦೦೮ ರಂದು ಮದ್ಯಾಹ್ನ ೦೧.೩೦ ಗಂಟೆ ಸಮಯದಲ್ಲಿ ಪನಃ ಗಲಾಟೆ ಮಾಡಿ ಒಂದು ದೊಣ್ಣೆಯಿಂದ ರಾಜಮ್ಮ ರವರ ಎಡ ಮೊಣಕೈ ಮೇಲೆ ಹೊಡೆದು ಗಾಯಪಡಿಸಿರುತ್ತಾನೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಸೂರಜ್ ಮಲ್ ಸರ್ಕಲ್ ನಲ್ಲಿ ನಡೆದಿರುತ್ತದೆ. ದಿನಾಂಕ: ೨೯.೧೧.೨೦೦೮ ರಂದು ೨.೧೦ ಗಂಟೆ ಸಮದಯಲ್ಲಿ ಖಾಸಗಿ ಬಸ್ ಸಂಖ್ಯೆ ಕೆಎ-೫೩-೩೭೩೮ರ ವಾಹನ ಚಾಲಕ ಮಂಜುನಾಥ್ ಬಿನ್ ವೆಂಕಟಪ್ಪ(೩೫) ಮಿಂಡಹಳ್ಳಿ ರವರು ಬಸ್ಸನ್ನು ಅತಿವೇಗವಾಗಿ ರಸ್ತೆಯಲ್ಲಿ ಇತರೇ ವಾಹನಗಳೀಗೆ ಹಾಗೂ ಸಾರ್ವಜನಿಕರಿಗೆ ಡಿಕ್ಕಿ ಹೊಡೆಯುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದಿದ್ದು, ಪರಿಶೀಲಿಸಿ ಬಸ್ಸಿನ ಪರ್ಮಿಟ್ ಕೇಳಲಾಗಿ ಬೆಂಗಳೂರು-ಮುಳಬಾಗಿಲು ಮಾರ್ಗದ ಪರ್ಮಿಟ್ ಇರುವುದಾಗಿ ತಿಳಿಸಿದ್ದರಿಂದ ಪಂಚಾಯ್ತಿದಾರರ ಸಮಕ್ಷಮ ಬಸ್ಸನ್ನು ಅಮಾನತ್ತು ಪಡಿಸಿರುತ್ತದೆ.
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


