ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಬ್ಯಾಟರಾಯನ ಹಳ್ಳಿ ಬಳಿ ಸಂಭವಿಸಿರುತ್ತದೆ. ದಿನಾಂಕ: ೨೮.೧೧.೨೦೦೮ ರಂದು ೦೭.೩೦ ಗಂಟೆಗೆ ಶ್ರೀ. ಸುಬ್ರಮಣಿ ಬಿನ್ ದೊಡ್ಡಮುನಿಸ್ವಾಮಪ್ಪ, ಪೂಜಮಾಕನಹಳ್ಳಿ ಗ್ರಾಮದ ವಾಸಿ ತನ್ನ ಟಿ.ವಿ.ಎಸ್. ವಿಕ್ಟರ್ ವಾಹನದಲ್ಲಿ ಬೇತಮಂಗಲಕ್ಕೆ ಬರುತ್ತಿರುವಾಗ ಎದರುಗಡೆಯಿಂದ ಆಟೋ ಸಂಖ್ಯೆ ಕೆಎ-೦೮-೨೨೨೪ರ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದ ಪ್ರಯುಕ್ತ ಸುಬ್ರಮಣಿವರಿಗೆ ರಕ್ತಗಾಯಗಳಾಗಿರುತ್ತವೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಟಿಪ್ಪುನಗರದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೮.೧೧.೨೦೦೮ ರಂದು ೧೧.೦೦ ಗಂಟೆ ಸಮದಯಲ್ಲಿ ಟಿಪ್ಪುನಗರದ ವಾಸಿ ಶ್ರೀ. ಪ್ಯಾರೇಜಾನ್ ಬಿನ್ ಅಬ್ದುಲ್ ಎಂಬುವರಿಗೆ ೩ ತಿಂಗಳ ಹಿಂದೆ ಪರಂಗಿ ಹಣ್ಣು ಮಾರುವ ವಿಚಾರದಲ್ಲಿ ಅದೇ ಕೇರಿಯ ಖಾದರ್ ಮತ್ತು ಮುನೀರ್ ಎಂಬುವರುಗಳೊಂದಿಗೆ ಜಗಳವಾಗಿದ್ದು, ಈ ದಿನ ಅದೇ ವಿಚಾರವಾಗಿ ಖಾದರ್ ಮತ್ತು ಮುನೀರ್ ರವರುಗಳು ಪ್ಯಾರೇಜಾನ್‌ರೊಂದಿಗೆ ಜಗಳ ಮಾಡಿ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


