ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
- ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಕಾರೋನೆಷನ್ ರಸ್ತೆಯ ಕಾರಹಳ್ಳಿ ಕೆರೆಕಟ್ಟೆಯ ಬಳಿ ಸಂಭವಿಸಿರುತ್ತದೆ. ದಿನಾಂಕ: ೨೪.೧೧.೨೦೦೮ ರಂದು ೧೧.೪೫ ಗಂಟೆ ಸಮಯದಲ್ಲಿ ಬಂಗಾರಪೇಟೆ ಪೊಲಿಸ್ ಠಾಣೆಯ ಅಪರಾಧ ಪಿಎಸ್‌ಐ ಶ್ರೀ. ಮುನಿವೆಂಕಟಯ್ಯ ಮತ್ತು ಸಿಬ್ಬಂದಿಯವರು ಗಸ್ತಿನಲ್ಲಿದ್ದಾಗ ಸೀನ @ ಮೊಟ್ಟೆ ಸೀನ ಎಂಬುವರು ಒಂದು ಟಿ.ವಿ.ಯನ್ನು ಕಾರಹಳ್ಳಿ ಕೆರೆಕಟ್ಟೆಯ ಮೇಲೆ ತೆಗೆದುಕೊಂಡು ಹೋಗುತ್ತಿದ್ದಾಗ ಗುಮಾನಿ ಬಂದು ವಿಚಾರಸಲಾಗಿ ಕಳ್ಳತನ ಮಾಡಿಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರಿಂದ ದಾವೆ ದಾಖಲು ಮಾಡಿ ಕಾನೂನು ಕ್ರಮಕೈಗೊಂಡಿರುತ್ತದೆ.
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಸೇಠ್ ಕಾಂಪೌಂಡ್ ಬಂಗಾರಪೇಟೆಯಲ್ಲಿ ಸಂಭವಿಸಿರುತ್ತದೆ. ಮಂಜುನಾಥಚಾರಿ, ಸಿ ರಹೀಂ ಕಾಂಪೌಡ್, ರೆಡ್ಡಮ್ಮ ಬಿಲ್ಡಿಂಗ್ ವಾಸಿ ರವರು ಈಗ್ಗೆ ಒಂದು ವರ್ಷದ ಹಿಂದೆ ಕುಮಾರಿ ರತ್ನಮ್ಮ ಬಿನ್ ವೆಂಕಟರಾಮಪ್ಪ (೨೧) ಶೆಟ್ಟಿಕೊತ್ತನೂರು, ಕೋಲಾರ ತಾಲೂಕು ಎಂಬುವರನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಮನೆಯಲ್ಲಿ ಇಟ್ಟುಕೊಂಡು ಅಕ್ರಮವಾಗಿ ಆಕೆಯನ್ನು ಗರ್ಭವತಿಯಾಗಿ ಮಾಡಿ, ದಿನಾಂಕ: ೨೩.೧೧.೨೦೦೮ ರಂದು ರಾತ್ರಿ ತನ್ನ ಸ್ನೇಹಿತ ಶಂಕರ್ ಎಂಬುವರಿಗೆ ಮೊಬೈಲ್ ನಂಬರ್‌ಅನ್ನು ಕೊಟ್ಟ ವಿಚಾರದಲ್ಲಿ ರತ್ನಮ್ಮನೊಂದಿಗೆ ಜಗಳ ಮಾಡಿ, ಹೊಡೆದು ಪ್ರಾಣ ಬೆದರಿಕೆಹಾಕಿ ಮದುವೆಮಾಡಿಕೊಳ್ಳುವುದಿಲ್ಲವೆಂದು ಹೇಳಿ ಮನೆಯಿಂದ ಹೊರಹಾಕಿರುತ್ತಾನೆ.
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ರಾಮಯ್ಯ ಕಾಲೋನಿ, ಅಶೋಕನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್. ಶ್ರೀಮತಿ. ಅಂಡಾಲ್ ಕೋಂ ಕನಕರಾಜ್, ರಾಮಯ್ಯ ಕಾಲೋನಿ ವಾಸಿಯ ತಮ್ಮನಾದ ಅಪ್ಪು(೩೨) ಎಂಬುವರು ತನ್ನ ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದು, ಮೃತನ ಹೆಂಡತಿ ೫ ವರ್ಷಗಳ ಹಿಂದೆ ಸಂಸಾರದ ವಿಚಾರದಲ್ಲಿ ಜಗಳ ಮಾಡಿಕೊಂಡು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದು, ಈ ವಿಷಯದಲ್ಲಿ ಬೇಸರ ಮಾಡಿಕೊಂಡು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡು ಕುಡಿತದಿಂದ ಹೊಟ್ಟೆನೋವು ಬಂದು ನರಳುತ್ತಿದ್ದು, ದಿನಾಂಕ: ೨೩.೧೧.೨೦೦೮ ರಂದು ರಾತ್ರಿ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


