ದಿನದ ಅಪರಾಧಗಳ ಪಕ್ಷಿನೋಟ ೧೭ನೇ ಅಕ್ಟೋಬರ್‍ ೨೦೦೮

October 17, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ        

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ   

-ಸಾಧಾರಣ: ಇಲ್ಲ    

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೧೦-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮುದುಗುಳಿ ಗ್ರಾಮದಲ್ಲಿರುವ ಸಾರ್ವಜನಿಕ ನಲ್ಲಿಯಲ್ಲಿ ನೀರು ಹಿಡುಯುವ ವಿಚಾರದಲ್ಲಿ ಶ್ರೀ ಚೌಡಪ್ಪ ಬಿನ್ ನಡುಪಣ್ಣನವರ ಅಕ್ಕನಿಗೂ ಮತ್ತು ಅದೇ ಗ್ರಾಮದ ಜಯಪ್ಪರವರ ಮಗಳಾದ ಕುಮಾರಿ ಚಂದ್ರಕಲಾ ರವರಿಗೂ ಬಾಯಿ ಮಾತುಗಳ ಜಗಳವಾಗಿದ್ದು, ಅದೇ ದಿನ ೧೬೩೦ ಗಂಟೆ ಸಮಯದಲ್ಲಿ ಜಯಪ್ಪ, ಚಂದ್ರಕಲಾ ಮತ್ತು ರಮಾದೇವೆ ಎಂಬುವರುಗಳು ಚೌಡಪ್ಪನವರ ಮನೆಯ ಮುಂದೆ ಬಂದು ಅವರ ಅಕ್ಕನನ್ನು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದಿರುತ್ತಾರೆ.           

ಇತರೆ: ಇಲ್ಲ         

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ        ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೬ನೇ ಅಕ್ಟೋಬರ್‍ ೨೦೦೮

October 16, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೧೦-೨೦೦೮ ರಂದು ೧೧೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕಾಮಸಮುದ್ರಂ ವಾಸಿ ಶ್ರೀ ಸೈಯದ್ ನವೀದ್ ಬಿನ್ ಸೈಯದ್ ಅಮೀರ್‍ ಎಂಬುವರು ತನ್ನ ತಮ್ಮನ ಮದುವೆಗೆ ಹೋಗುವ ಸಲುವಾಗಿ ಬೊಂಪಲ್ಲಿ ಗ್ರಾಮದ ನಾರಾಯಣಪ್ಪರವರ ಮನೆಯ ಮುಂದೆ ಟ್ರಾಕ್ಟರ್‍ ಸಂಖ್ಯೆ ಕೆಎ-೦೮-೭೧೩ ಮತ್ತು ಅದರ ಟ್ರಾಲಿ ಸಂಖ್ಯೆ ೭೩೨ ಅನ್ನು ನಿಲ್ಲಿಸಿ ಹೋಗಿದ್ದು, ನಂತರ ದಿನಾಂಕ ೧೫-೧೦-೨೦೦೮ ರಂದು ಮದುವೆಯಿಂದ ವಾಪಸ್ಸು ಬಂದು ಟ್ರಾಕ್ಟರ್‌ನ್ನು ಚಲಾಯಿಸಲು ಪ್ರಯತ್ನಿಸಿದಾಗ ಟ್ರಾಕ್ಟರ್‍ ಸ್ಟಾರ್ಟ್‌ ಆಗದೆ ಇದ್ದು ನಂತರ ಪರಿಶಿಲಿಸಿದಾಗ ಟ್ರಾಕ್ಟರ್‌ಗೆ ಅಳವಡಿಸಿದ ಬ್ಯಾಟರಿ ಸಂಖ್ಯೆ ಮ್ಯಾಕ್ಸ್ ಮ್ಯಾನ್-ಎನ್-೭೦-ಜಡ್‌ನ್ನು ಯೋರೋ ಕಳ್ಳರು ಕಳಚಿ ಕಳವು ಮಾಡಿಕೊಂಡು ಹೋಗಿರುತ್ತಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ        

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ   

-ಸಾಧಾರಣ: ಇಲ್ಲ    

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ಇಲ್ಲ        

ಇತರೆ: ಇಲ್ಲ         

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ        ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೫ನೇ ಅಕ್ಟೋಬರ್‍ ೨೦೦೮

October 15, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ        

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ   

-ಸಾಧಾರಣ: ಇಲ್ಲ    

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ಇಲ್ಲ        

ಇತರೆ: ಇಲ್ಲ         

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೨

  •   ಆಂಡಸ್ರನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬ್ಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೧೦-೨೦೦೮ ರಂದು ಪಿ.ಎಸ್.ಐ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಬಂಗಾರಪೇಟೆ ತಾಲೂಕು ದೊಡ್ಡಗಾಂಡ್ಲಹಳ್ಳಿ ಮತ್ತು ನಲ್ಲಗಟ್ಟೂರು ಮದ್ಯ ಇರುವ ನಾರಾಯಣಪ್ಪರವರ ತೋಟದ ಬಳಿ ದಾಳಿ ಮಾಡಲು ಹೋದಾಗ ಹುಲ್ಲಿನ ಮಂಚೆ ಕೆಳಗಿದ್ದ ನಲ್ಲಗಟ್ಟೂರು ಗ್ರಾಮದ ವಾಸಿ ನಾರಾಯಣಪ್ಪ  ಓಡಲು ಪ್ರಯತ್ನಿಸಿದಾಗ ಹಿಂಬಾಲಿಸಿ ಹಿಡಿದು ಹುಲ್ಲಿನ ಮಂಚೆ ಕೆಳಗಿಟ್ಟಿದ್ದ ೧೦ ಲೀಟರ್‍ ಪ್ಲಾಸ್ಟಿಕ್ ಕ್ಯಾನು ಸುಮಾರು ೧೦೦೦/- ರೂ ಬೆಲೆ ಬಾಳುವ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿರುತ್ತಾರೆ.
  •  ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬ್ಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೧೦-೨೦೦೮ ರಂದು ಸಂಜೆ ೦೭೦೦ ಗಂಟೆ ಸಮಯದಲ್ಲಿ ಪಿ.ಎಸ್.ಐ (ಕಾ & ಸು), ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಅಂಬೇಡ್ಕರ್‍ ನಗರದಲ್ಲಿ ಭಾವಾನಿ ಎಂಬುವರ ಮನೆಯ ಬಳಿ ಭವಾನಿ ಅಕ್ರಮಗಿ ಪ್ಲಾಸ್ಟಿಕ್ ಬಿಂದಿಗೆಯಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ದಾಸ್ತಾನು ಮಾಡಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ        ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೪ನೇ ಅಕ್ಟೋಬರ್‍ ೨೦೦೮

October 14, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ        

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ   

-ಸಾಧಾರಣ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೧೦-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಪಿಚ್ಚಹಳ್ಳಿ ಗ್ರಾಮದ ಪ್ರಕಾಶರೆಡ್ಡಿ ರವರ ಟ್ರಾಕ್ಟರ್‍ ಸಂಖ್ಯೆ ಎಪಿ-೦೪-ಜಿ-೫೩೧೧ರ ವಾಹನದಲ್ಲಿ ಪೆಡದಂಪಲ್ಲಿ ಗ್ರಾಮದ ವಾಸಿ ಶ್ರೀ ಮುನನೀರಪ್ಪ (೨೮) ಬಿನ್ ಮುನಿಯಪ್ಪ ಹಾಗೂ ಮಂಜುನಾಥ್ ಬಿನ್ ಗೋವಿಂದಪ್ಪ, ವೆಂಕಟ್ರಾಮಪ್ಪ ಮತ್ತು ರಮೇಶ ಎಂಬುವರುಗಳು ಊರುಕುಂಟೆಮುಟ್ಟೂರು ಗ್ರಾಮದ ಬಳಿಯಿರುವ ಬಂಡೆಯ ಕಲ್ಲು ಚಪ್ಪಡಿಗಳ ತುಂಡುಗಳನ್ನು ಟ್ರಾಕ್ಟರಿನಲ್ಲಿ ಲೋಡು ಮಾಡಿಕೊಂಡು ಕಮ್ಮಸಂದ್ರ ಗ್ರಾಮಕ್ಕೆ ಬರುತ್ತಿರುವಾಗ ಮಾರ್ಗ ಮದ್ಯದಲ್ಲಿನ ನಲ್ಲೂರು ತೋಪು ಬಳಿ ಟ್ರಾಕ್ಟರ್‍ ಚಾಲಕನಾದ ಮಂಜುನಾಥ ಎಂಬುವನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪ್ರಯುಕ್ತ ರಸ್ತೆಯ ಎಡಬಾಗದ ತಗ್ಗಿನಲ್ಲಿ ಟ್ರಾಕ್ಟರ್‍ ಪಲ್ಟಿಹೊಡೆದು ಟ್ರಾಕ್ಟರ್‌ನಲ್ಲಿದ್ದವರಿಗೆ ರಕ್ತಗಾಯವಾಗಿರುತ್ತದೆ.  

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ಇಲ್ಲ        

ಇತರೆ: ಇಲ್ಲ         

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ        ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೩ನೇ ಅಕ್ಟೋಬರ್‍ ೨೦೦೮

October 13, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಜುಂಜನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೨-೧೦-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಜುಂಜನಹಳ್ಳಿ ಗ್ರಾಮದ ವಾಸಿ ವೆಂಕಟಪ್ಪ @ ಚಿನ್ನಪ್ಪ ಬಿನ್ ಲಕ್ಷ್ಮಯ್ಯ ಎಂಬುವನು ತನ್ನ ಅಳಿಯನಾದ ನಾರಾಯಣಸ್ವಾಮಿ ಬಿನ್ ರುದ್ರಪ್ಪ (೩), ಕಾಡು ಕೆಚ್ಚನಹಳ್ಳಿ, ಮುಳಬಾಗಲು ತಾಲೂಕು ಎಂಬುವರನ್ನು ಹರಿತವಾದ ಮಚ್ಚನಿಂದ ಆತನ ಅಳಿಯನನ್ನು ಹೊಡೆದು ರುಂಡವನ್ನು ಬೇರ್ಪಡಿಸಿರುತ್ತಾನೆ. ವೆಂಕಟಪ್ಪನು ತನ್ನ ಅಳಿಯನನ್ನು ಕೊಲೆಮಾಡಲು ಆತನ ಅಳಿಯನು ಆತನ ಮಗಳನ್ನು ದೈಹಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದರಿಂದ ಆಕೆಯು ದಿನಾಂಕ ೧೨-೧೦೨೦೦೮ ರಂದು ತೋಟದ ಬಾವಿಯಲ್ಲಿ ಬಿದ್ದು ಸತ್ತಿದ್ದು, ಇದಕ್ಕೆ ಅಳಿಯನೇ ಕಾರಣವೆಂದು ದುಃಖ ಮತ್ತು ಆವೇಶ ಬರಿತನಾಗಿ ನಾರಾಯಣಸ್ವಾಮಿಯನ್ನು ಕೊಲೆ ಮಾಡಿರುತ್ತಾನೆ.   

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧ 

  •         ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಜುಂಜನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಶ್ರೀಮತಿ ಲಕ್ಷಮ್ಮ ಕೋಂ ವೆಂಕಟಪ್ಪ @ ಚಿನ್ನಪ್ಪ(೪೮) ಜುಂಜನಹಳ್ಳಿ ಗ್ರಾಮದ ವಾಸಿಯ ಮಗಳಾದ ಶ್ರೀಮತಿ ಕಂತಮ್ಮನ್ನು(೨೫) ಈಗ್ಗೆ ೧೦ ವರ್ಷಗಳ ಹಿಂದೆ ನಾರಾಯಣಸ್ವಾಮಿ ಬಿನ್‌ ರತ್ನಪ್ಪ (೩೦), ಕಾಡುಕೆಚ್ಚನಹಳ್ಳಿ, ಮುಳಬಾಗಿಲು ತಾಲೂಕು ರವರಿಗೆ ಮದುವೆ ಮಾಡಿಕೊಟ್ಟಿದ್ದು, ನಾರಾಯಸ್ವಾಮಿ ಕಂತಮ್ಮನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುದ್ದು, ದೆಸರಾ ಹಬ್ಬಕ್ಕೆ ಕಂತಮ್ಮ ತನ್ನ ಗಂಡ ನಾರಾಯಣಸ್ವಾಮಿಯೊಂದಿಗೆ ತನ್ನ ತವರು ಮನೆಯಾದ ಜುಂಜನಹಳ್ಳಿಗೆ ಬಂದು ಮನೆಯಲ್ಲಿ ಗಲಾಟೆ ಮಾಡಿಕೊಂಡು ತನ್ನ ಗಂಡನ ಹಿಂಸೆಯನ್ನು ತಳಲಾರದೆ ದಿನಾಂಕ: ೧೨.೧೦.೨೦೦೮ ರಂದು ಬೆಳಿಗ್ಗೆ ೧೦.೦೦ ಗಂಟೆ ಸಮಯದಲ್ಲಿ ತನ್ನ ತಾಯಿಯವರ ತೋಟದ ಬಾವಿಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ.

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ   

-ಸಾಧಾರಣ: ಇಲ್ಲ 

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ಇಲ್ಲ        

ಇತರೆ: ಇಲ್ಲ         

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ        ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೨ನೇ ಅಕ್ಟೋಬರ್‍ ೨೦೦೮

October 12, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ   

-ಸಾಧಾರಣ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೧೦-೨೦೦೮ ರಂದು ಬೆಳಿಗ್ಗೆ ೦೬೦೦ ಗಂಟೆಯಲ್ಲಿ ಶ್ರೀ ಮುನಿಸ್ವಾಮಿ ಬಿನ್ ಸಿ.ಕೃಷ್ಣಪ್ಪ, ವಯಸ್ಸು ೪೧ ವರ್ಷ, ವಾಸ ನಂ. ೧೬, ಮುನಿರೆಡ್ಡಿ ಲೇಔಟ್‌, ಬೊಮ್ಮಸಂದ್ರ, ಆನೇಕಲ್‌ ತಾಲೂಕು, ಬೆಂಗಳೂರು ಜಿಲ್ಲೆ ಎಂಬುವರು ಇಂಡಿಕಾ ಕಾರ್‍ ಸಂಖ್ಯೆ: ಕೆಎ-೫೧-೮೩೬೧ನ್ನು ಕುಪ್ಪಂ-ಕೆ.ಜಿ.ಎಫ್. ಮುಖ್ಯ ರಸ್ತೆಯಲ್ಲಿ ಘಟ್ಟಮಾದಮಂಗಲ ಗ್ರಾಮದ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದರಿಂದ ರಸ್ತೆಯ ಬದಿಯಲ್ಲಿ ಬ್ರಿಡ್ಜ್‌ನೊಳಗೆ ತಲೆಕೆಳಗಾಗಿ ಬಿದ್ದು ಕಾರಿನ ಮುಂಭಾಗ ಮತ್ತು ಇತರೆ ಭಾಗಗಳು ಜಖಂಗೊಂಡು, ಚಾಲಕನ ಎದೆಗೆ ಒಳಗಾಯಗಳಾಗಿರುತ್ತವೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕಿನ ಮರಗಲ್‌ ಗ್ರಾಮದಲ್ಲಿ ಈ ಕೃತ್ಯವು ನಡೆದಿರುತ್ತದೆ. ದಿನಾಂಕ ೧೧-೧೦-೨೦೦೮ ರಂದು ರಾತ್ರಿ ೨೧೧೫ ಗಂಟೆಯಲ್ಲಿ ಮರಗಲ್‌ ಗ್ರಾಮದ ವಾಸಿಗಳಾದ ಮಂಜಪ್ಪ, ಪದ್ಮಮ್ಮ ಕೋಂ ಮಂಜಪ್ಪ ಮತ್ತು ಗಂಗಮ್ಮ ಎಂಬುವರುಗಳು ಉದ್ದೇಶ ಪೂರ್ವಕವಾಗಿ ಮನೆಯ ವಿಚಾರದಲ್ಲಿ ಜಗಳ ತೆಗೆದು ಒಂದು ಬ್ಲೇಡಿನಿಂದ ಶ್ರೀ ಅಮರೇಶ ಬಿನ್ ಚಿನ್ನಪ್ಪ, ವಯಸ್ಸು ೨೬ ವರ್ಷ, ವಾಸ: ಮರಗಲ್‌ ಗ್ರಾಮ ರವರ ಎರಡೂ ಕೈಗಳ ಮೇಲೆ ಹೊಡೆದು ರಕ್ತಗಾಯಪಡಿಸಿ, ನಂತರ ಮೋರಿಯಲ್ಲಿ ತಳ್ಳಿ ರಕ್ಷಗಾಯಪಡಿಸಿರುತ್ತಾರೆ.      

ಇತರೆ: ಇಲ್ಲ         

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ        ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೧ನೇ ಅಕ್ಟೋಬರ್‍ ೨೦೦೮

October 11, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೧-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್. ಆಂಡ್ರಸನ್‌ಪೇಟೆಯ ಸುಸೈಪಾಳ್ಯಂ ಡೌನ್ ಬಳಿ ಸಂಭವಿಸಿರುತ್ತದೆ. ದಿನಾಂಕ ೦೯-೧೦-೨೦೦೮ ರಂದು ೧೧೩೦ ಗಂಟೆ ಸಮಯದಲ್ಲಿ ಆಂಡ್ರಸನ್‌ಪೇಟೆಯ ೨ನೇ ಬ್ಲಾಖ್ ವಾಸಿ ರಾಜೇಶ್ ಕಣ್ಣನ್ ಬಿನ್ ಸಾಮರಾಜ್ ಎಂಬುವನು ತನ್ನ ತಾಯಿ ಅಂಬಿಗಾರವರನ್ನು ರಾಬರ್ಟ್‌‌ಸನ್‌ಪೇಟೆ ಬಸ್ ನಿಲ್ದಾಣದಿಂದ ತನ್ನ ಮನೆಗೆ ತನ್ನ ಟಿ.ವಿ.ಎಸ್. ವಾಹನದಲ್ಲಿ ಕುಳ್ಳರಿಸಿಕೊಂಡು ಸುಸೈಪಾಳ್ಯಂ ಡೌನ್ ಬಳಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಕೊಂಡು ಬಂದು ವಾಹನವು ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದದ್ದರಿಂದ ಹಿಂದೆ ಕುಳಿತಿದ್ದ ತನ್ನ ತಾಯಿಯವರಿಗೆ ತಲೆಯ ಮೇಲೆ ರಕ್ತಗಾಯವಾಗಿ ಹಿಂದು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.     

-ಸಾಧಾರಣ: ಇಲ್ಲ   

-ಮೋಸ/ವಂಚನೆ ಪ್ರಕರಣಗಳು: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಮೋಸ/ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಉರಿಗಾಂ ಎನ್.ಟಿ ಬ್ಲಾಕ್, ಮನೆ ನಂ. ೪೧೬/ಎ ವಾಸಿ ಜಾನ್ ಪಾಲ್ ಬಿನ್ ದಯಾಳನ್ ಎಂಬುವನು ಹಿಂದುಳಿದ ವರ್ಗಗಳ ಪ್ರಮಾಣ ಪತ್ರವನ್ನು ಪಡೆಯುವ ಸಲುವಾಗಿ ಬಂಗಾರಪೇಟೆ ತಾಲೂಕು ಕಛೇರಿಯ ಹಿಂದುಳಿದ ವರ್ಗಗಳ ಜಾತಿ/ಆದಾಯ ಪತ್ರವನ್ನು ನೀಡುವ ವಹಿಯ ಕ್ರಮ ಸಂಖ್ಯೆ ೧೩೪೨/೨೦೦೮-೦೯ ದಿನಾಂಕ ೦೬-೦೭-೨೦೦೮ ರಂದು ನಮೂನೆ-ಇ ಅನ್ನು ಅಕ್ರಮ ದಾಖಲೆಗಳನ್ನು ಸೃಷ್ಟನೆ ಮಾಡಿ ತಹಶಿಲ್ದಾರ್‍ ರವರ ಸಹಿಯನ್ನು ನಕಲು ಮಾಡಿ ಸರ್ಕಾರಕ್ಕೆ ವಂಚನೆ ಮಾಡುವ ಉದ್ದೇಶದಿಂದ ಹಿಂದುಳಿದ ಪ್ರಮಾಣ ಪತ್ರವನ್ನು ಸೃಷ್ಟನೆ ಮಾಡಿರುತ್ತಾನೆ.  

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ಇಲ್ಲ       

ಇತರೆ: ಇಲ್ಲ         

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹೆಂಗಸು ಮತ್ತು ಮಗು ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೧೦-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ದಾಸರಹೊಸಹಳ್ಳಿ  ಗ್ರಾಮದ ವಾಸಿ ಶ್ರೀ ಮುನಿವೆಂಕಟಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ ೩೦-೦೯-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ತನ್ನ ಮಗಳಾದ ಶ್ರೀಮತಿ ಪ್ರಭಾ ಕೋಂ ಮಂಜುನಾಥ (೨೮) ಮತ್ತು ಆಕೆಯ ಮಗ ಮಧು (೩) ಎಂಬುವರುಗಳು ತನ್ನ ತಂದೆಯ ಮನೆಯಿಂದ ಮೆಡಿಕಲ್ ಶಾಫ್‌ಗೆ ಹೋಗಿ ಮಾತ್ರೆ ತರುವುದಾಗಿ ಹೇಳಿ ಹೋದವರು ಇದುವರೆವಿಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲ.          ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೩

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆಯ ಶ್ರೀನಿವಾಸಗೌಡ ತೋಟದ ವಾಸಿ ಶ್ರೀಮತಿ ಮುನಿಯಮ್ಮ (೪೫) ಎಂಬಾಕೆಗೆ ಈಗ್ಗೆ ಸುಮಾರು ವರ್ಷದಿಂದ ಹೊಟ್ಟೆನೋವು ಇದ್ದು, ದಿನಾಂಕ ೦೮-೧೦-೨೦೦೮ ರಂದು ಹೊಟ್ಟೆನೋವು ಜಾಸ್ತಿಯಾಗಿದ್ದರಿಂದ ಈಕೆಯನ್ನು ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ಸಾಖಲು ಮಾಡಿದ್ದು, ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ ೧೦-೧೦-೨೦೦೮ ರಂದು ಮೃತಪಟ್ಟಿರುತ್ತಾರೆ.
  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೧೦-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಹಾರೋಹಳ್ಳಿ ಗ್ರಾಮದ ವಾಸಿ ಶ್ರೀ ಕೃಷ್ಣಪ್ಪ ಬಿನ್ ರಾಮಪ್ಪ ಎಂಬುವರು ತನ್ನ ಹೊಲದಲ್ಲಿ ಹುಲ್ಲು ಮೆದೆಯನ್ನು ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಯಾವುದೋ ಹಾವು ಕಚ್ಚಿದ್ದು, ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ಸಾಗಿಸಿದ್ದು ಚಿಕಿತ್ಸೆ ಪಲಿಸದೆ ಮೃತಪಟ್ಟಿರುತ್ತಾರೆ.
  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೧೦-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಆರ್‍.ಹೆಚ್ ರಸ್ತೆ, ಬೆಮೆಲ್ ನೌಕರ ಮನೆ ನಂ. ೧೪೮ ರ ವಾಸಿ ಶ್ರೀ. ಕೆ.ಭಾಸ್ಕರ್‍ ಎಂಬುವರು ಬಂಗಾರಪೇಟೆಯ ಕೆ.ಇ.ಬಿ ಹಿಂದೆ ಕಟ್ಟಿಸುತ್ತಿದ್ದ ತನ್ನ ಮನೆಗೆ ಕಂಬಿಯನ್ನು ಎತ್ತಿಕೊಡುತ್ತಿದ್ದಾಗ ಆಕಸ್ಮಿಕವಾಗಿ ಕೆ.ಇ.ಬಿ ಲೈನ್‌ಗೆ ಕಂಬಿಯು ತಾಕಿದ್ದು, ಇದರ ಪರಿಣಾಮ ಪಕ್ಕದಲ್ಲಿದ್ದ ಪ್ರಕಾಶ್‌ಗೆ ಹಾಗೂ ಭಾಸ್ಕರ್‌ಗೆ ತೀವ್ರ ಗಾಯವಾಗಿ  ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ಸಾಗಿಸಿದ್ದು ಚಿಕಿತ್ಸೆ ಪಲಿಸದೆ ಬಾಸ್ಕರ್‍ ಮೃತಪಟ್ಟಿರುತ್ತಾರೆ.    

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೦ನೇ ಅಕ್ಟೋಬರ್‍ ೨೦೦೮

October 10, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ    

-ಸಾಧಾರಣ: ಇಲ್ಲ   

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •       ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ವಟ್ರಕುಂಟೆ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೯.೧೦.೨೦೦೮ ರಂದು ರಾತ್ರಿ ೭.೦೦ ಗಂಟೆ ಸಮಯದಲ್ಲಿ ಅಜಮತ್ ಪಾಷಾ ಬಿನ್‌ ಖಲೀಲ್‌ ಪಾಷ(೨೫) ರವರು ತಮ್ಮ ಮನೆಯ ಮುಂದೆ ನಿಂತ್ತಿದ್ದಾಗ ಅಮರೇಶ ಬಿನ್‌ ಬೈಚಪ್ಪ, ಮಂಜುನಾಥ್ ಬಿನ್‌ ಮುನಿಯಪ್ಪ, ಪಿಳ್ಳೇಗೌಡ ಬಿನ್‌ ಮುನಿಬೈಚಪ್ಪ, ಕೆಂಚಾಪುರ ವಾಸಿಗಳು ಹೀರೋಹೊಂಡಾ ಗಾಡಿಯಲ್ಲಿ ಹೋಗುತ್ತಿದ್ದಾಗ ಅಜಮತ್‌ ಪಾಷ ರವರು ಗಾಡಿಯನ್ನು ನಿಲ್ಲಿಸಿ ನಿಧನವಾಗಿ ಹೋಗಿ ಎಂದು ತಿಳಿಸಿದಾಗ ಈ ವಿಚಾರದಲ್ಲಿ ಜಗಳ ಮಾಡಿ ಕೊಂಡು ಎರಡು ಕಡೆಯವರು ಅಕ್ರಮ ಕೂಟಕಟ್ಟಿಕೊಂಡು ಹೊಡೆದಾಡಿಕೊಂಡು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದಾವೆ ಪ್ರತಿ ದಾವೆ ದಾಖಲಾಗಿರುತ್ತದೆ.

ಹಲ್ಲೆ: ೦೨

  •       ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಸಿದಂತೆ ದಾವೆ ಪ್ರತಿ ದಾವೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು  ಮಹದೇವಪುರ ಗ್ರಾಮದಲ್ಲಿ  ಸಂಭವಿಸಿರುತ್ತದೆ. ದಿನಾಂಕ: ೦೯.೧೦.೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಮಹದೇವಪುರ ಗ್ರಾಮದಲ್ಲಿ ಶ್ರೀ ವೆಂಕಟರಮಣಸ್ವಾಮಿ ದೇವರ ಉತ್ಸವ ನಡೆಯುತ್ತಿದ್ದು, ಉತ್ಸವ ಹೊರಡುವುದು ತಡೆಯಾದ ವಿಚಾರದಲ್ಲಿ ಅದೇ ಗ್ರಾಮದ ಗೋವಿಂದಪ್ಪ ಬಿನ್ ಚಂಗಪ್ಪ ಮತ್ತು ರಮೇಶ ಬಿನ್ ಬೊಡೆನ್ನ ಎಂಬುವರುಗಳು ಗುಂಪು ಕಟ್ಟಿಕೊಂಡು ಜಗಳವಾಡಿ  ಹೊಡೆದಾಡಿಕೊಂಡು ರಕ್ತಗಾಯಗಳನ್ನು ಮಾಡಿಕೊಂಡು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದಾವೆ ಪ್ರತಿ ದಾವೆ ದಾಖಲಾಗಿರುತ್ತದೆ.
  •        ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ನಗರ ಸೇಠ್‌ ಕಾಂಪೌಂಡ್ ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೯.೧೦.೨೦೦೮ ರಂದು  ಸಂಜೆ ೭.೦೦ ಗಂಟೆ ಸಮಯದಲ್ಲಿ ಶ್ರೀ. ಇಕ್ಬಾಲ್ ಪಾಷ ಬಿನ್‌ ಸಾಬ್‌ಜೀಸಾಬ್(೩೨)  ಮುನ್ನಾಪಾಷಾ ಬಿನ್‌ ಸಾಬ್‌ಜೀಸಾಬ್‌ ಸೇಠ್‌, ಸೇಠ್‌ ಕಾಂಪೌಂಡ್, ಬಂಗಾರಪೇಟೆ ವಾಸಿಗಳು ಮತ್ತು ಸೈಯದ್‌ ಜಮೀರ್‌ ಬಿನ್‌ ಸೈಯದ್‌ ಹಿಮಾಮ್‌(೨೦) ರಹಮತ್‌ ನಗರ, ಕೋಲಾರ ರವರುಗಳು ಉದ್ದೇಶಪೂರ್ವಕವಾಗಿ ಜಗಳ ಮಾಡಿಕೊಂಡು ಕಬ್ಬಿಣದ ರಾಡಿಗಳಿಂದ ಹೊಡೆದಾಡಿಕೊಂಡು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದಾವೆ ಪ್ರತಿ ದಾವೆ ದಾಖಲಾಗಿರುತ್ತದೆ. 

ಇತರೆ: ಇಲ್ಲ       

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ        ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೯ನೇ ಅಕ್ಟೋಬರ್‍ ೨೦೦೮

October 9, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೯-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ    

-ಸಾಧಾರಣ: ೦೧

  •     ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಚಿಕ್ಕನಲ್ಲಗುಟ್ಟಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೬.೦೮.೨೦೦೮ ರಂದು ಬೆಳಿಗ್ಗೆ ೫.೦೦ ಗಂಟೆ ಸಮಯದಲ್ಲಿ ಶ್ರೀ. ಚಂದ್ರಪ್ಪ ಬಿನ್‌ ಲೇಟ್ ಮುನಿಯಪ್ಪ(೩೦) ಚಿಕ್ಕಕರಪನಹಳ್ಳಿ ಗ್ರಾಮದ ವಾಸಿ ರವರು ಇನ್ನಿಬರು ಕೂಲಿ ಕೆಸಲಗಾರರೊಂದಿಗೆ ಟ್ರಾಕ್ಟರ್‍ ಸಂಖ್ಯೆ ಕೆಎ-೦೭-ಟಿ-೨೨೪೨ರಲ್ಲಿ ಅದೇ ಗ್ರಾಮದ ಬಳಿ ಇರುವ ಕಾಲುವೆಯಲ್ಲಿ ಮರಳನ್ನು ತುಂಬಿಸಿ ಟ್ರಾಕ್ಟರ್‌ಗೆ ಲೋಡ್‌ ಮಾಡುವಾಗ ಟ್ರಾಕ್ಟರ್‌ ಚಾಲಕ ಅಜಾಗರೂಕತೆಯಿಂದ ಏಕಾಏಕಿ ಜೋರಾಗಿ ಹಿಂದಕ್ಕೆ ಚಲಾಯಿಸಿದ್ದರಿಂದ ಚಂದ್ರಪ್ಪ ರವರು ಕೆಳಗೆ ಬಿದ್ದು ಸೊಂಟಕ್ಕೆ ಬಲವಾದ ಗಾಯವಾಗಿರುತ್ತದೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •       ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ವೆಸಲಿನ್‌ ಬ್ಲಾಕ್, ಉರಿಗಾಂನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೮.೧೦.೨೦೦೮ ರಂದು ಮದ್ಯಾಹ್ನ ೧.೦೦ ಗಂಟೆ ಸಮಯದಲ್ಲಿ ಜಯಪ್ರಸಾದ ಬಿನ್‌ ಸತ್ಯಶೀಲನ್‌ ಎದರಯ ಮನೆಯ ವಾಸಿಗಳಾದ ಸಂತೋಷ್‌, ಪಾಪು, ಗಣೇಶ್ ಮತ್ತು ಸಂತೋಷ್‌ ಎಂಬುವರುಗಳು ಚರಂಡಿಯ ವಿಚಾರದಲ್ಲಿ ಜಗಳ ಮಾಡಿಕೊಂಡು ಹೊಡೆದಾಡಿಕೊಂಡು ರಕ್ತಗಾಯಗಳನ್ನು ಮಾಡಿಕೊಂಡು ಉರಿಗಾಂ ಪೊಲೀಸ್ ಠಾಣೆಯಲ್ಲಿ ದಾವೆ ಪ್ರತಿ ದಾವೆ ದಾಖಲಾಗಿರುತ್ತದೆ.

ಇತರೆ: ೦೧

  •         ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ವಿಜಯನಗರದಲ್ಲಿ ಸಂಭವಿಸಿರುತ್ತದೆ. ಮಗೇಶ್‌ ಬಿನ್‌ ವೆಂಕಟಾಸ್ವಾಮಿ, ಬಂಗಾರಪೇಟೆ ತಾಲೂಕು ರವರು ದಿನಾಂಕ: ೦೮.೧೦.೨೦೦೮ ರಂದು ರಾತ್ರಿ ೧.೩೦ ಗಂಟೆ ಸಮಯದಲ್ಲಿ ತನ್ನಷ್ಟಕ್ಕೆ ತಾನೇ ಬಂಗಾರಪೇಟೆಯ ತನ್ನ ಅಣ್ಣನ ಮನೆಯಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಸಾಯಲು ಪ್ರಯತ್ನಿಸಿರುತ್ತಾನೆ.

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಪಿ.ಎಸ್‌.ಐ. ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ದಿನಾಂಕ ೦೯.೧೦.೨೦೦೮ ರಂದು ಬೆಳಿಗ್ಗೆ ೧೦.೧೫ ಗಂಟೆಯಲ್ಲಿ ಚೌಡೇಪಲ್ಲಿ ಗ್ರಾಮದ ಹತ್ತಿರ ಪಾಲಾರ್‌ ಹೊಳೆಯಲ್ಲಿ ದೊರೈ(೫೦) ಬೆನ್ನವಾಗ ಗ್ರಾಮ ಮತ್ತು ವೇಲು ಬಿನ್ ದೊರೈ(೨೬) ಎಂಬುವರುಗಳು ಕಳ್ಳಭಟ್ಟಿ ಸಾರಾಯಿ ಕಾಯಿಸುತ್ತಿದ್ದು ಅದರ ಪಕ್ಕದಲ್ಲಿ ಎರಡು ಕ್ಯಾನುಗಳಲ್ಲಿ ೨೦ ಲೀಟರ್‍ ಕಳ್ಳಭಟ್ಟಿ ಸಾರಾಯಿ ತಯಾರಿಸಿಟಿದ್ದನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿರುತ್ತಾರೆ.  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ        ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೮ನೇ ಅಕ್ಟೋಬರ್‌ ೨೦೦೮

October 8, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೮-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಟಾರ್‌ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೧೦-೨೦೦೮ ರಂದು ೧೩೧೫ ಗಂಟೆಯಲ್ಲಿ ದೇವರಾಜ್‌ ಬಿನ್ ಕುಂಟಿ ವೆಂಕಟೇಶ್, ವಯಸ್ಸು ೩೫ ವರ್ಷ, ಪೊನ್ನೇಪಲ್ಲಿ ಗ್ರಾಮ, ಶಾಂತಿಪುರಂ ಮಂಡಲ್‌, ಆಂಧ್ರಪ್ರದೇಶ ರಾಜ್ಯ ಎಂಬುವರು ಬಜಾಜ್‌ ಡಿಸ್ಕವರ್‍ ಸಂಖ್ಯೆ: ಕೆಎ-೦೩-ಇಆರ್‍-೧೧೨೯ ಅನ್ನು ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯ ಸರಹದ್ದಿನ ಸ್ವರ್ಣಕುಪ್ಪಂ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದು, ಕರ್ತವ್ಯದಲ್ಲಿದ್ದ ಪಿ.ಸಿ. ೧೭೯ ಗೋಪಿ ಮತ್ತು ಪಿ.ಸಿ.೨೩೨ ಕೋನಪ್ಪರೆಡ್ಡಿ ಎಂಬುವರಿಗೆ ಅನುಮಾನ ಬಂದು ವಿಚಾರ ಮಾಡಲಾಗಿ ವಾಹನದ ಬಗ್ಗೆ ಸರಿಯಾದ ಮಾಹಿತಿ ನೀಡದೇ ಇದ್ದುದ್ದರಿಂದ ಕಳ್ಳತನದ ವಾಹನ ಇರಬಹುದು ಎಂದು ಅನುಮಾನ ಬಂದು ಸದರಿ ದೇವರಾಜ್‌ ಮತ್ತು ವಾಹನವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿರುತ್ತಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ    

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೧೦-೨೦೦೮ ರಂದು ೧೬೦೦ ಗಂಟೆಯಲ್ಲಿ ಬಂಗಾರಪೇಟೆ ತಾಲೂಕಿನ ಎಳೆಸಂದ್ರ ಗ್ರಾಮದ ವಾಸಿ ಮಂಜುನಾಥ ಎಂಬುವರು ಟಿ.ವಿ.ಎಸ್. ಮೊಪೆಡ್‌ ವಾಹನ ಸಂಖ್ಯೆ: ಕೆಎ-೦೮-ಇ-೧೭೬೪ರಲ್ಲಿ ಬೂದಿಕೋಟೆ ಕಡೆಗೆ ಹೋಗಲು ದೊಡ್ಡ ಎಳೆಸಂದ್ರ ಗ್ರಾಮದ ಬಳಿಯಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಕೃಷ್ಣಮೂರ್ತಿ ಬಿನ್ ರಾಮಪ್ಪ ಎಂಬುವರು ಮೋಟಾರ್‍ ಸೈಕಲ್‌ ನಂ. ಕೆಎ-೦೮-ಕೆ-೪೮೫೨ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ಟಿ.ವಿ.ಎಸ್.ಗೆ ಡಿಕ್ಕಿಪಡಿಸಿದ್ದರಿಂದ ಮಂಜುನಾಥರವರಿಗೆ ರಕ್ತ ಗಾಯಗಳಾಗಿರುತ್ತವೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕಿನ ಮೋತನೂರು ಗ್ರಾಮದ ವಾಸಿಗಳಾದ ವೆಂಕಟೇಶಪ್ಪ (೨೫) ಬಿನ್ ನ್ಯಾತಪ್ಪ ರವರಿಗೂ ಮತ್ತು ವೆಂಕಟೇಶ ಬಿನ್ ಅಪ್ಪಯ್ಯಪ್ಪ ರವರಿಗೂ ಜಮೀನಿನ ವಿಷಯದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಆ ಹಿನ್ನಲೆಯಲ್ಲಿ ದಿನಾಂಕ ೦೭-೧೦-೨೦೦೮ ರಂದು ೨೧೦೦ ಗಂಟೆಯಲ್ಲಿ ಮೋತನೂರು ಗ್ರಾಮದಲ್ಲಿ ಜಗಳವಾಗಿ ವೆಂಕಟೇಶ ಬಿನ್ ಅಪ್ಪಯ್ಯಪ್ಪ, ರಾಜಮ್ಮ, ಶಿವಮೋರ್ತಿ ಹಾಗೂ ಇತರೆ ೦೩ ಜನರು ಉದ್ದೇಶಪೂರ್ವಕವಾಗಿ ವೆಂಕಟೇಶಪ್ಪ (೨೫) ಬಿನ್ ನ್ಯಾತಪ್ಪ, ಮುರಗೇಶ್ ಬಿನ್ ನ್ಯಾತಪ್ಪ ಎಂಬುವರಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೧೦-೨೦೦೮ ರಂದು ೧೫೪೫ ಗಂಟೆಯಲ್ಲಿ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ಗ್ರಾಮದ ಬಸ್‌ ನಿಲ್ಧಾಣದ ಬಳಿ ಮಾದಮುತ್ತನಹಳ್ಳಿ ಗ್ರಾಮದ ವಾಸಿ ಚಿನ್ನಪ್ಪ ಬಿನ್ ಲೇಟ್ ವೆಂಕಟಪ್ಪ ಎಂಬುವರು ಒಂದು ಪ್ಲಾಸ್ಟಿಕ್‌ ಚೀಲದಲ್ಲಿ ೧೮೦ ಎಂ.ಎಲ್‌.ನ ಸೂಪರ್‍ ಜಾಕ್‌ ೦೬ ಬಾಟಲ್ ಮತ್ತು ನಂ.೧ ವಿಸ್ಕಿ ೦೭ ಬಾಟಲ್‌ಗಳನ್ನು ಹಾಕಿಕೊಂಡು ಯಾವುದೇ ಪರವಾನಗಿ ಇಲ್ಲದೆ ಸಾಗಿಸುತ್ತಿದ್ದಾಗ ಕರ್ತವ್ಯದಲ್ಲಿದ್ದ ಮುಖ್ಯಪೇದೆ ಆದಿನಾರಾಯಣ ಹಾಗೂ ಇವರ ಸಿಬ್ಬಂದಿಯವರು ಖುದ್ದಾಗಿ ಕಂಡು ಸದರಿ ವ್ಯಕ್ತಿ ಮತ್ತು ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿರುತ್ತಾರೆ.  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ        ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.