ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೦-೨೦೦೮ ರಂದು ರಾತ್ರಿ ೨೦೧೫ ಗಂಟೆ ಸಮಯದಲ್ಲಿ ಶ್ರೀ ಅಸ್ಗರ್ ಪಾಷ (೧೮) ಬಿನ್ ಜಾನ್‌ಪಾಷ, ಬಂಗಾರಪೇಟೆ ರವರು ಬಜಾಜ್ ಪ್ಲಾಟಿನಂ. ನಂ. ಕೆಎ-೫೧-ಕೆ-೫೩೮೬ರಲ್ಲಿ ಕೋಲಾರದ ಕಡೆ ಹುದುಕುಳ ಗೇಟ್ ಬಳಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕ್ಯಾಂಟರ್ ನಂ. ಕೆಎ-೦೫-ಸಿ-೭೬೫೯ರ ಚಾಲಕ ಸದರಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದರಿಂದ ಅಸ್ಗರ್‌ಪಾಷ ರವರಿಗೆ ರಕ್ತಗಾಯಗಳಾಗಿರುತ್ತದೆ. ಕ್ಯಾಂಟರ್‌ನ್ನು ಸ್ಥಳದಲ್ಲಿ ನಿಲ್ಲಿಸದೆ ಅದರ ಚಾಲಕ ಹೊರಟುಹೋಗಿರುತ್ತಾನೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೦-೨೦೦೮ ರಂದು ರಾತ್ರಿ ಸುಮಾರು ೧೯೩೦ ಗಂಟೆ ಸಮಯದಲ್ಲಿ ಶ್ರೀ ಆನಂದ್ (೨೩) ಬಿನ್ ನಾರಾಯಣಸ್ವಾಮಿ, ಮಾದಮುತ್ತನಹಳ್ಳಿ ಗ್ರಾಮ ರವರು ತನ್ನ ಗ್ರಾಮದಲ್ಲಿರುವ ಸೌಂಡ್ ಸಿಸ್ಟಂ ಅಂಗಡಿ ಬಳಿ ದೀಪಾವಳಿ ಹಬ್ಬದ ಪ್ರಯುಕ್ತ ಪೂಜೆ ಮಾಡಿ ಪಟಾಕಿ ಹೊಡೆಯುತ್ತಿದ್ದಾಗ ಹುನ್ಕುಂದ ಗ್ರಾಮದ ವಾಸಿ ರವಿ ಬಿನ್ ಲಕ್ಷ್ಮಪ್ಪ ಎಂಬುವರು ತನ್ನ ದ್ವಿಚಕ್ರ ವಾಹನದಲ್ಲಿ ಬಂದಾಗ ಆಕಸ್ಮಿಕವಾಗಿ ಪಟಾಕಿಯು ವಾಹನಕ್ಕೆ ತಗುಲಿದಾಗ ಸದರಿ ರವಿಯು ಆನಂದ್ ರವರ ಬಳಿ ಜಗಳ ತೆಗೆದು ಮಂಜುನಾಥ ಹಾಗೂ ಇತರೆ ೧೨ ಜನರನ್ನು ಕರೆದುಕೊಂಡು ಅಕ್ರಮಕೂಟ ಕಟ್ಟಿಕೊಂಡು ಕೈಗಳಲ್ಲಿ ಮಾರಕಾಯುಧಗಳನ್ನು ಹಿಡಿದುಕೊಂಡು ಬಂದು ಆನಂದ್ ರವರ ಮೈಕ್‌ಸೆಟ್ ಐಟಂಗಳನ್ನು ಹೊಡೆದು ನಾಶಪಡಿಸಿ, ಕೈಗಳಿಂದ ಆನಂದ್‌ಗೆ ಹೊಡೆದಿರುತ್ತಾರೆ.
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೧೦-೨೦೦೮ ರಂದು ಬೆಳಿಗ್ಗೆ ೧೦೩೦ ಗಂಟೆಯಲ್ಲಿ ಪಿ.ಎಸ್.ಐ., ಕಾಮಸಮುದ್ರಂ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯವರೊಂದಿಗೆ ಕನಮನಹಳ್ಳಿ ಗ್ರಾಮದ ಬಳಿ ಇರುವ ಗೋಕುಂಟೆ ಬಳಿಗೆ ಹೋಗಿ ನೋಡಲಾಗಿ, ಕನಮನಹಳ್ಳಿ ಗ್ರಾಮದ ವಾಸಿ ಮುನಿಯಪ್ಪ (೩೫) ಬಿನ್ ಮುನಿಬೀರಪ್ಪ ಎಂಬುವರು ೨ ಪ್ಲಾಸ್ಟಿಕ್ ಕ್ಯಾನುಗಳಲ್ಲಿ ೩೦ ಲೀಟರ್‌ನಷ್ಟು ಕಳ್ಳಬಟ್ಟಿ ಸಾರಾಯಿ ಮತ್ತು ಮತ್ತೊಂದು ಕ್ಯಾನಿನಲ್ಲಿ ಜಾಲಿ ಮರದ ಚಕ್ಕೆ ಇದ್ದು ಒಟ್ಟು ಬೆಲೆ ಸುಮಾರು ೧,೫೦೦/- ಹೊಂದಿದ್ದು, ಪೊಲೀಸರು ಸದರಿ ಮಾಲನ್ನು ಅಮಾನತ್ತುಪಡಿಸಿಕೊಂಡು ಕೇಸು ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


