ದಿನದ ಅಪರಾಧಗಳ ಪಕ್ಷಿನೋಟ ೨೮ನೇ ಅಕ್ಟೋಬರ್‌ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ       

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ       

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ೦೨

  •      ಬೇತಮಂಗಳ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಎ. ಮೋತಕಪಲ್ಲಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಇದೇ ಗ್ರಾಮದ ವಾಸಿ ಶ್ರೀ. ದೊರೈಬಾಬು ಬಿನ್‌ ನಾಗಪ್ಪ ನಾಯ್ಡು ರವರು ದಿನಾಂಕ: ೨೭.೧೦.೨೦೦೮ ರಂದು ಸಂಜೆ ೪.೩೦ ಗಂಟೆ ಸಮಯದಲ್ಲಿ ತನ್ನ ಮನೆಯ ಬಳಿ ಹಸುಗಳಿಗೆ ಹುಲ್ಲನ್ನು ಹಾಕಿ ಬರುತ್ತಿರುವಾಗ ಅದೇ ಗ್ರಾಮದ ವಾಸಿಗಳಾದ ದಿವಾಕರ್‌ ನಾಯ್ಟು ಮತ್ತು ಸುಧಾಕರ ನಾಯ್ಡು ರವರುಗಳು ವಿನಾಕಾರಣ ಜಗಳ ಮಾಡಿ ಒಂದು ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
  •         ಬೇತಮಂಗಳ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಅಡಂಪಲ್ಲಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಶ್ರೀ. ಚಂದಪ್ರ ಬಿನ್‌ ಮುನಿಯಪ್ಪ ಎಂಬುವರು ದಿನಾಂಕ: ೨೭.೧೦.೨೦೦೮ ರಂದು ೧೯.೦೦ ಗಂಟೆ ಸಮಯದಲ್ಲಿ ತನ್ನ ಹೊಲದ ಮನೆ ಕಡೆ ಹೋಗಿ ಕಡಳೆ ಕಾಯಿ ಗಿಡಗಳನ್ನು ಮನೆಯಲ್ಲಿ ಹಾಕುತ್ತಿರುವಾಗ ಇದೇ ಗ್ರಾಮದ ವಾಸಿಗಳಾದ ರಾಮಪ್ಪ, ರಮೇಶ್‌, ಸುಬ್ರಮಣಿ ಮತ್ತು ಗುರಪ್ಪ ಎಂಬುವರುಗಳು ಎಕಾ ಏಕಿಯಾಗಿ ಬಂದು ಮಚ್ಚಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ     

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •       ಉರಿಗಾಂ ಪೊಲೀಸ್‌ ಹುಡುಗಿ ನಾಪತ್ತೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಎಂ.ಎಲ್‌. ಬ್ಲಾಕ್‌, ಉರಿಗಾಂ ನಲ್ಲಿ ಸಂಭವಿಸಿರುತ್ತದೆ. ಶ್ರೀ. ಕೆ. ಸುಂದರರಾಜನ್‌ ಬಿನ್‌ ಲೇಟ್‌ ಕಂದಸ್ವಾಮಿ ರವರ ಮಗಳಾದ ಕುಮಾರಿ ಮಣೆಮಗಲೆ ಎಂಬುವರು ಗೋಲ್ಡನ್‌ ಸಿಟಿ ಕಾಲೇಜ್‌ ಆಫ್‌ ಪ್ರೊಪೆಷನ್‌ ಸ್ಟಡೀಸ್‌ನಲ್ಲಿ ಡಿಪ್ಲಮೋ ಮಾಡುತ್ತಿದ್ದು, ದಿನಾಂಕ: ೨೪.೧೦.೨೦೦೮ ರಂದು ಒಡವೆಗಳನ್ನು ಧರಿಸಿಕೊಂಡು ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ಹೋದಳು ಮನೆಗೆ ವಾಪಸ್ಸು ಬಂದಿರುವುದಿಲ್ಲ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply