ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಅದಂ ಕಾಂಪೌಂಡ್ ಮೌಜಾನ್ ರಸ್ತೆ, ೨ನೇ ಕ್ರಾಸ್, ಆಂಡ್ರಸನ್‌ಪೇಟೆ, ಕೆ.ಜಿ.ಎಫ್. ದಿನಾಂಕ: ೨೫/೨೬.೧೦.೨೦೦೮ ರಂದು ರಾತ್ರಿ ಶ್ರೀ. ಸಾಹೀಬ್ ಖಾನ್ ಬಿನ್ ಅಹ್ನದ್‌ಖಾನ್, ನಂ. ೧೧೯೩, ಅದಂ ಕಾಂಪೌಂಡ್ ರವರ ಬೀಗ ಹಾಕಿದ್ದ ಮನೆಯ ಬೀಗವನ್ನು ಮುರಿದು ಬೀರುವಿನಲ್ಲಿದ್ದ ಒಂದು ಚಿನ್ನದ ಕತ್ತಿನ ಚೈನು ಮತ್ತು ಎರಡು ಚಿನ್ನದ ಉಂಗುರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಮೊತ್ತ ೨೪,೦೦೦/-ಗಳಾಗಿರುತ್ತದೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಗರುಡಾದ್ರಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಶ್ರೀಮತಿ ಪವಿತ್ರ ಕೋಂ ವರದರಾಜ್(೨೦) ಗರುಡಾದ್ರಹಳ್ಳಿ ಗ್ರಾಮ ರವರು ಆಂದ್ರಪ್ರದೇಶದ ಕುಪ್ಪಂ ತಾಲ್ಲೂಕಿನ ಅಡವಿಬೂದುಗೂರು ಗ್ರಾಮದ ವಾಸಿ ವರದರಾಜ್‌ರೊಂದಿಗೆ ದಿನಾಂಕ: ೧೮.೦೪.೨೦೦೩ ಮದುವೆಯಾಗಿದ್ದು, ಮದುವೆ ಕಾಲದಲ್ಲಿ ೮೦ ಗ್ರಾಂ ಚಿನ್ನದ ಒಡವೆಗಳನ್ನು ವರದಕ್ಷಿಣೆಯಾಗಿ ನೀಡಿದ್ದು, ಪ್ರಸ್ತುತ ಇನ್ನು ಹೆಚ್ಚಿಗೆ ವರದಕ್ಷಿಣೆ ಬೇಕೆಂದು ಪವಿತ್ರರವರನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿ, ಕಿರುಕುಳ ನೀಡಿ, ತವರು ಮನೆಗೆ ಕಳುಹಿಸಿ, ದಿನಾಂಕ: ೧೩.೧೦.೨೦೦೮ ರಂದು ಗರುಡಾದ್ರಿ ಹಳ್ಳಿಗೆ ಬಂದು ನನ್ನ ಜೊತೆ ಸಂಸಾರ ಮಾಡಬೇಕಾದರೆ ಒಂದು ಬೈಕು ಮತ್ತು ಒಂದು ಲಕ್ಷ ಹಣ ನೀಡಿದರೆ ಮನಗೆ ಬಾ ಇಲ್ಲವಾದಲ್ಲಿ ಹಾಗೇ ಬಂದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆಯಾಕಿರುತ್ತಾನೆ.
-ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂದಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ-ಕಾವರನಹಳ್ಳಿ ಮುಖ್ಯ ರಸ್ತೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೫.೧೦.೨೦೦೮ ರಂದು ಸಂಜೆ ೫.೦೦ ಗಂಟೆ ಸಮದಯಲ್ಲಿ ಶ್ರಿ. ಜಿ. ಗೋವಿಂದಪ್ಪ ಬಿನ್ ಗಂಗಪ್ಪ, ಕಾವರನಹಳ್ಳಿ ಗ್ರಾಮದ ವಾಸಿ ರವರ ಮಗನಾದ ಸಿಂಹಾದ್ರಿ(೧೦) ಎಂಬುವರು ಬಂಗಾರಪೇಟೆ-ಕಾವರನಹಳ್ಳಿ ಮುಖ್ಯ ರಸ್ತೆ ತಮ್ಮನಬೋವಿ ಕುಂಟೆ ಬಳಿ ನಿಂತ್ತಿದ್ದಾಗ ಬರ್ಕತ್ತುಲ್ಲಾ ಬಿನ್ ಚೋಟುಸಾಬ್(೧೯) ಹುನ್ಕುಂದ ಗ್ರಾಮದ ವಾಸಿ ತನ್ನ ಹಿರೋ ಹೊಂಡ ವಾಹನ ಸಂಖ್ಯೆ ಕೆಎ-೦೮-ಇಎಫ್-೭೩೭೯ ಅನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಿಂಹಾದ್ರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಎಡತೊಡೆ ಮುರಿದು ಗಾಯವಾಗಿರುತ್ತದೆ. ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಕೇಶವ ಎಂಬಾತನು ಕೆಳಗೆ ಬಿದ್ದು ಗಾಯಗಳಾಗಿರುತ್ತದೆ.
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಉಮಾಶಂಕರ್ ಥೀಯೇಟರ್ ಬಳಿ ಸಂಭವಿಸಿರುತ್ತದೆ. ಶ್ರೀ. ಸೆಂದಿಲ್ ಕುಮಾರ್ ಬಿನ್ ಲೇಟ್ ಸೆಲ್ವಂ(೨೪), ಮುತ್ತು ಕಾಂಪೌಂಡ್, ೪ನೇ ಬ್ಲಾಕ್ ರಾಬರ್ಟ್‌ಸನ್‌ಪೇಟೆ ವಾಸಿ ರವರು ದಿನಾಂಕ: ೨೬.೧೦.೨೦೦೮ ರಂದು ಬೆಂಗಳೂರಿನಿಂದ ರಾತ್ರಿ ೨.೦೦ಗಂಟೆಗೆ ಬಂಗಾರಪೇಟೆ ಬಂದು ಅಲ್ಲಿಂದ ಪರಿಚಯವಿರುವ ಆಟೋದಲ್ಲಿ ಬಂಗಾರಪೇಟೆಯಿಂದ ಕೆ.ಜಿ.ಎಫ್ ಕಡೆಗೆ ಬರುತ್ತಿರುವಾಗ ಆಟೋ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೆಮೆಲ್ ನಗರದ ಉಮಾಶಂಕರ್ ಥಿಯೇಟರ್ ಬಳಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸೆಂದಿಲ್ ರವರಿಗೆ ರಕ್ತಗಾಯಗಳಾಗಿರುತ್ತದೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಎನ್.ಟಿ. ಬ್ಲಾಕ್, ೨ನೇ ಡಿವಿಷನ್, ಉರಿಗಾಂ ಸಂಭವಿಸಿರುತ್ತದೆ. ಶ್ರೀ. ಸೌಂದರ್ ರಾಜ್ ಬಿನ್ ಮುನಿಸ್ವಾಮಿ (೪೫) ಎನ್.ಟಿ.ಬ್ಲಾಕ್ ವಾಸಿ ದಿನಾಂಕ: ೨೫.೧೦.೨೦೦೮ ರಂದು ರಾತ್ರಿ ೮.೦೦ ಗಂಟೆ ಸಮಯದಲ್ಲಿ ಕೆಸಲ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ತನ್ನ ಮನೆಯ ಪಕ್ಕದ ಕಳ್ಳಿ ಪೊದೆಯಲ್ಲಿ ತನ್ನ ಹೆಂಡತಿ ಜೊತೆಯಲ್ಲಿ ಅದೇ ಲೈನಿನ ವಾಸಿ ಪ್ರಭಾಕರ್ ಬಿನ್ ಜಾನ್ ಎಂಬುವರು ಮಾತನಾಡುತ್ತಿದ್ದು, ಅದನ್ನು ಕೇಳಲಾಗಿ ಪ್ರಭಾಕರ್ ಮತ್ತು ಅವರ ತಂದೆ ಜಾನ್ ರವರುಗಳು ಜಗಳ ಮಾಡಿ ಒಂದು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯ ಸಹರದ್ದಿನ ಮುರಳಿಚಾರಿ ಎಂಬುವರ ಜಮೀನಿನಲ್ಲಿ ದಿನಾಂಕ: ೨೬.೧೦.೨೦೦೮ ರಂದು ಬೆಳಿಗ್ಗೆ ೧೧.೦೦ ಗಂಟೆ ಸಮಯದಲ್ಲಿ ನಾರಾಯಣಚಾರಿ, ಬಾಬು, ನರೇಶ್, ಶ್ರೀನಿವಾಸ ಮತ್ತು ಚಂದ್ರ ಎಂಬುವರುಗಳು ಜಮೀನಿನ ಹುಣಸೆ ಮರದ ಕೆಳಗೆ ಕುಳಿತುಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜೂಜಾಡುತ್ತಿದ್ದವರನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮಕೈಗೊಳ್ಳಲಾಗಿದೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


