ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕಾರನೇಷನ್ ಟೌನ್, ರಾಬರ್ಟ್‌ಸನ್‌ಪೇಟೆ ಯಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೨.೧೦.೨೦೦೮ ರಂದು ರಾತ್ರಿ ಆರ್. ರಾಜ ಬಿನ್ ಎನ್. ರಾಜು(೩೬), ರತ್ನಮ್ಮ ಟೀಚರ್ ಕಾಂಪೌಂಡ್, ಕಾರನೇಷನ್ ಟೌನ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ಎಂಬುವರ ಮನೆಯ ಪಕ್ಕದಲ್ಲಿರುವ ಕೊಠಡಿಯ ಬಾಗಿಲಿನ ಬೀಗವನ್ನು ಮುರಿದು ಬಂಗಾರದ ಒಡವೆಗಳು ರೇಷ್ಮೆ ಸೀರೆಗಳು ನಗದು ಹಣ ೧೦೦೦೦/-ಗಳು ಒಟ್ಟು ೧,೩೦,೦೦೦/-ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಪೈಪ್ ಲೈನ್ , ರಾಬರ್ಟ್‌ಸನ್‌ಪೇಟೆ, ಶ್ರೀಮತಿ ಆರತಿ ಕೋಂ ಪೃತ್ವಿರಾಜ್ (೨೯) ಎನ್.ಟಿ ಬ್ಲಾಕ್, ಉರಿಗಾಂ ರವರು ೩ ವರ್ಷಗಳ ಹಿಂದೆ ಪೃತ್ವಿರಾಜ್ ಎಂಬುವರ ಜೊತೆ ಮದುವೆಯಾಗಿದ್ದು, ಒಂದು ಗಂಡು ಮಗು ಸಹ ಇದ್ದು, ನೀವು ಕೂರೂಪಿ ಬೇರೆ ಮದುವೆಯಾಗುವುದಾಗಿ ತಿಳಿಸಿ ಇಲ್ಲವಾದಲ್ಲಿ ಹಣ ತಂದು ಕೊಡು ಎಂತ ಹೇಳಿ ಪ್ರತಿ ದಿನ ಮಾನಸಿಕ ಹಿಂಸೆ ದೈಹಿಕ ಹಿಂಸೆ ನೀಡುತ್ತಿರುತ್ತಾರೆಂತ ದೂರು ನೀಡಿದ್ದು, ಅದರಂತೆ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿರುತ್ತದೆ.
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೧೦-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಮಾರಿಕುಪ್ಪಂ ಗ್ರಾಮದ ವಾಸಿ ಬಾಲಪ್ಪ ಮತ್ತು ಗೋಪಮ್ಮ ಎಂಬುವರುಗಳು ಅದೇ ಗ್ರಾಮದ ರಾಮಪ್ಪ ಬಿನ್ ಲೇಟ್ ಮುನಿವೆಂಕಟಪ್ಪ ಎಂಬುವರ ಪತ್ನಿ ಲಕ್ಷ್ಮಮ್ಮ ಎಂಬುವರ ಖಾಲಿ ನಿವೇಶನದಲ್ಲಿ ಬೆಳೆದು ನಿಂತಿದ್ದ ೨ ಪರಂಗಿ ಗಿಡಗಳನ್ನು ಕತ್ತರಿಸಿ ಇದನ್ನು ಲಕ್ಷ್ಮಮ್ಮ ಕೇಳಿದಕ್ಕೆ ಮಚ್ಚನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿ ಅದೇ ಮಚ್ಚಿನಿಂದ ಎಡಕಣ್ಣಿನ ಬಳಿ ತಾಕಿಸಿ ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮಾರುತಿ ನಗರ, ಬೆಮೆಲ್ ನಗರದಲ್ಲಿ ಸಂಭವಿಸಿರುತ್ತದೆ. ಶ್ರೀ. ಅಬ್ದುಲ್ ಸತ್ತಾರೆ ಬಿನ್ ಮಹ್ಮದ್ ಪೀರಾನ್, ಬೆಮೆಲ್ ನೌಕರ ರವರ ಮಗಳಾದ ಕುಮಾರಿ ನೌಶೀನ್ ತಾಜ್ ಬಿನ್ ಅಬ್ದುಲ್ ಸತ್ತಾರ್ ರವರು ದಿನಾಂಕ: ೨೧.೧೦.೨೦೦೮ ರಂದು ಮದ್ಯಾಹ್ನ ೩.೩೦ ಗಂಟೆಗೆ ಬೆಮೆಲ್ ನಗರದ ಎಲ್ ಡಬ್ಲ್ಯೂಎಫ್ ಸೆಂಟರ್‌ನಲ್ಲಿ ಕಂಪ್ಯೂಟರ್ ಕ್ಲಾಸ್‌ಗೆಂದು ಹೋದವಳು ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


