ದಿನದ ಅಪರಾಧಗಳ ಪಕ್ಷಿನೋಟ ೧೮ನೇ ಸೆಪ್ಟೆಂಬರ್‍ ೨೦೦೮

September 18, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ೦೧ 

  •        ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಕಾರಹಳ್ಳಿ ಕೆರೆ ಕಟ್ಟೆಯ ಮೇಲೆ ಸಂಭವಿಸಿರುತ್ತದೆ. ದಿನಾಂಕ: ೧೭.೦೯.೨೦೦೮ ರಂದು ರಾತ್ರಿ ೮.೪೫ ಗಂಟೆಯಲ್ಲಿ ಶ್ರೀಮತಿ. ಚಿಲ್ಲಿಬಾಯಿ ಕೋಂ ಬಲರಾಮ್‌ಸಿಂಗ್‌, ಗಾಯತ್ರಿ ದೇವಸ್ಥಾನ ಬಳಿ, ಅಮರಾವತಿ ಲೇ ಔಟ್, ಬಂಗಾರಪೇಟೆ ವಾಸಿ ರವರು ತನ್ನ ಅಕ್ಕ ಶ್ರೀಮತಿ ಗೌರಿಬಾಯಿ ರವರ ಜೊತೆಯಲ್ಲಿ ಕೆರೆಕೋಡಿಗೆ ಕಾರಹಳ್ಳ ಕೆರೆ ಕಟ್ಟೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ಅಪರಿಚಿತ ಆಸಾಮಿಯು ಅವರ ಹಿಂದುಗಡೆಯಿಂದ ಬಂದು ಚಿಲ್ಲಿಬಾಯಿ ರವರ ಬಾಯಿ ಮುಚ್ಚಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತುಕೊಂಡು ನಂತರ ಗೌರಿಬಾಯಿರವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾನೆ.

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •         ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾದಾರಣ ಕಳ್ಳತನ್ನಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ೬ನೇ ಕ್ರಾಸ್, ಗೀತಾ ರಸ್ತೆ, ರಾಬರ್ಟ್‌‌ಸನ್‌ಪೇಟೆಯಲ್ಲಿ ಸಂಭವಿಸಿರುತ್ತದೆ. ಶ್ರೀ. ಶ್ರೀನಿವಾಸ ಮೂರ್ತಿ ಬಿನ್ ಕೃಷ್ಣಮೂರ್ತಿ, ನಂ. ೧೪೬೫, ೬ನೇ ಕ್ರಾಸ್ ಗೀತಾ ರಸ್ತೆ, ರಾಬರ್ಟ್‌‌ಸನ್‌ಪೇಟೆ ರವರು ದಿನಾಂಕ: ೧೭.೦೯.೨೦೦೮ ರಂದು ಮದ್ಯಾಹ್ನ ಸುಮಾರು ೩.೩೦ ಗಂಟೆಯಲ್ಲಿ ತನ್ನ ಬಜಾಜ್ ಪಲ್ಸ್‌ರ್‌ ವಾಹನ ಸಂಖ್ಯೆ ಕೆಎ-೦೮-ಹೆಚ್‌-೯೦೦೭ ಅನ್ನು ಮನೆಯ ಹತ್ತಿರ ನಿಲ್ಲಿಸಿ ಊಟ ಮಾಡಿಕೊಂಡು ಬಂದು ನೋಡಲಾಗಿ ಯಾರೋ ಕಳ್ಳರು ವಾಹನವನ್ನು ಕಳವು ಮಾಡಿಕೊಂಡಿರುತ್ತಾರೆ. ಬೆಲೆ ಸುಮಾರು ೩೫೦೦೦/- ಗಳಾಗಿರುತ್ತದೆ. 

ವಾಹನ ಕಳ್ಳತನ: ಇಲ್ಲ     

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ      

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೭ನೇ ಸೆಪ್ಟೆಂಬರ್‌ ೨೦೦೮

September 17, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ: ೦೧

  •   ಚಾಂಪಿಯನ್‌ರೀಪ್ಸ್ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೦೯-೨೦೦೮ ರಂದು ಕೆ.ಜಿ.ಎಫ್. ಡಿ.ಎ.ಆರ್‍. ವಸತಿ ಗೃಹದ ವಾಸಿ ಎಪಿಸಿ ೧೫೧ ಶ್ರೀ ಆನಂದಕುಮಾರ್‍.ಯು ಎಂಬುವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿ ದಿನಾಂಕ ೧೭-೦೯-೨೦೦೮ ರಂದು ೦೪೦೦ ಗಂಟೆಗೆ ವಾಪಸ್ಸು ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಬಾತ್ ರೂಂ ಕಿಟಕಿಯ ಮುಂಖಾತರ ಮನೆಯೊಳಗೆ ಹೋಗಿ ಸ್ಕೂಲ್ ಬ್ಯಾಗ್‌ನಲ್ಲಿಟ್ಟಿದ ಸುಮಾರು ೧೮ ರಿಂದ ೨೦ ಗ್ರಾಂನಷ್ಟು ಬಂಗಾರದ ಒಡವೆ ಹಾಗೂ ರೂಮಿನಲ್ಲಿಟ್ಟಿದ್ದ ಸಿಪಿಯು ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ     

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ      

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಇಸ್ಟೆಟ್ ಆಟ ಆಟುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೯-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಪಿ.ಎಸ್.ಐ ಬೆಮೆಲ್ ನಗರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಚಿನ್ನಕೋಟೆ ಗ್ರಾಮಕ್ಕೆ ಸೇರಿದ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ನೇರಳೇಕೆರೆ ವಾಸಿಗಳಾದ ಜಗದೀಶ್, ವೆಂಕಟೇಶಪ್ಪ, ಲಕ್ಷ್ಮಯ್ಯ, ಗಂಗಪ್ಪ ಮತ್ತು ರಾಮಚಂದ್ರ ಎಂಬುವರುಗಳು ಅಂದರ್‍ ಬಾಹರ್‍ ಆಟ ಆಟುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ಮಾಡಿ ಆರೋಪಿಗಳನ್ನು ಮತ್ತು ಜೂಜಾಟಕ್ಕೆ ಇಟ್ಟಿದ್ದ ೧೦೦೦ ರೂ ಹಣ ೩ ಮೊಬೈಲ್ ಪೋನ್‌ಗಳು ಮತ್ತು ಇಸ್ಟೈಟ್ ಎಲೆಗಳನ್ನು ವಶಪಡಿಸಿಕೊಂಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •       ರಾಟರ್ಬ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೯-೨೦೦೮ ರಂದು ೦೬-೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ರಾಬರ್ಟ್‌ಸನ್‌ಪೇಟೆ, ಬೌರಿಲಾಲ್‌ಪೇಟೆಯ ಜಯರಾಂ ಕಾಂಪೌಂಡ್ ವಾಸಿ ಶ್ರೀ ಶೇಖರ್‍ ಬಿನ್ ರಾಮದಾಸ್‌ ರವರ ಮಗಳು ಅನಿತ(೧೩) ಎಂಬುವಳು ಮನೆಯಿಂದ ಆಟವಾಡಲು ಹೋಗಿ ಮತ್ತೆ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ   

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •      ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಪೂಗಾನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಶ್ರೀ. ಗೋಪಾಲ ಬಿನ್ ಲೇಟ್ ಚಿಕ್ಕವೆಂಕಟರಾಮಪ್ಪ, ಪೂಗಾನಹಳ್ಳಿ ರವರ ತಾಯಿ ಲಕ್ಷ್ಮಿದೇವಮ್ಮ ಈಗ್ಗೆ ಸುಮಾರು ೬ ತಿಂಗಳಿಂದ ಮೈ ಹುಷಾರಿಲ್ಲದೆ ಇದ್ದು, ದಿನಾಂಕ: ೧೬.೦೯.೨೦೦೮ ರಂದು ಸಂಜೆ ೦೫-೩೦ ಗಂಟೆ ಸಮಯಲ್ಲಿ ವಾಂತಿ ಮಾಡಿಕೊಂಡು ತುಂಬ ಅಸ್ವಸ್ಥಳಾಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಟೋ ಹುಡುಕಾಡುತ್ತಿದ್ದಾಗ ಲಕ್ಷ್ಮಿದೇವಮ್ಮ  ಜೀವನದಲ್ಲಿ ಜಿಗುಪ್ಸೆ ಹೊಂದಿ ವಿಷೇಸಿ ಸೇವಿಸಿ ಮೃತಪಟ್ಟಿರುತ್ತಾಳೆ.
  • ಚಾಂಪಿಯನ್‌ರೀಪ್ಸ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಇ.ಟಿ ಬ್ಲಾಕ್ ಮನೆ ಸಂಖ್ಯೆ ೫೦೬ ವಾಸಿ ಶ್ರೀ ಅಣ್ಣಾದೊರೈ (೫೨) ಬಿನ್ ಲೇಟ್ ರತಿನಂ ಎಂಬಾತನಿಗೆ ಪೈಲ್ಸ್ ಖಾಯಿಲೆ ಮತ್ತು ಬೆನ್ನು ಮೂಳೆ ನೋವು ಹಾಗೂ ಕಾಲು ನೋವು ಇದ್ದುದ್ದರಿಂದ ಚಿಕಿತ್ಸೆ ಕೊಡಿಸಿದರೂ ಗುಣಮುಖನಾಗದೆ ಇದ್ದು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ ೧೬-೦೯-೨೦೦೮ ರಂದು ೨೨೦೦ ಗಂಟೆಯಿಂದ ೧೭-೦೯-೨೦೦೮ ರ ೦೯೩೦ ಗಂಟೆಯ ಮದ್ಯೆ ಆತನು ಮಲಗುವ ಕೋಣೆಯ ಮೇಲ್ಚಾವಣಿ ಮರದ ತರಾಯಿಗೆ ನೈಲಾನ್ ದಾರದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೬ನೇ ಸೆಪ್ಟೆಂಬರ್‍ ೨೦೦೮

September 16, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ     

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ      

-ಸಾಧಾರಣ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾಧಾರಭ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೯-೨೦೦೮ ರಂದು ೦೮೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಜಾನುಗುಟ್ಟ ಗ್ರಾಮದ ವಾಸಿ ಗುಮ್ಮಡಿ @ ಜೆ.ಎನ್.ಶ್ರೀನಿವಾಸ ಬಿನ್ ನಾರಾಯಣಪ್ಪ ಎಂಬುವರು ತನ್ನ ಜೀಪ್ ಸಂಖ್ಯೆ ಕೆಆರ್‌ಎನ್-೫೩೩೦ ರಲ್ಲಿ ಕಾಮಸಮುದ್ರಂ ವಾಸಿ ಶ್ರೀ ಮಂಜುನಾಥ್ ರವರ ಮಗಳು ಹಾಗೂ ಇತರೆ ಶಾಲಾ ಮಕ್ಕಳನ್ನು ಹತ್ತಿಸಿಕೊಂಡು ಕಾಮಸಮುದ್ರಂನಿಂದ ಕೆ.ಜಿ.ಎಫ್‌ಗೆ ಬಂಗಾರಪೇಟೆ ರಸ್ತೆಯಲ್ಲಿ ಹೋಗುತ್ತಿರುವಾಗ ನಲ್ಲಗುಟ್ಟಹಳ್ಳಿ ಗ್ರಾಮದ ಬಳಿ ಜೀಪನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಕಾರಣ ಜೀಪು ರಸ್ತೆಯ ಪಕ್ಕದ ಹಳ್ಳಕ್ಕೆ ಉರಳಿ ಬಿದ್ದು, ಜೀಪಿನಲ್ಲಿದ್ದ ಮಕ್ಕಳು ಕೆಳಕ್ಕೆ ಬಿದ್ದು ತಲೆ, ಮುಖ ಮತ್ತು ಮೈಮೇಲೆ ರಕ್ತಗಾಯವಾಗಿರುತ್ತದೆ.  

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೯-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬಳ್ಳಗಿರಿ ಗ್ರಾಮದ ವಾಸಿಗಳಾದ ಶ್ರೀಮತಿ ಕಮಲಮ್ಮ, ಮುನಿಯಪ್ಪ, ವೆಂಕಟೇಶ, ಸುಬ್ರಮಣಿ ಮತ್ತು ಕ್ರಿಷ್ಣಮೂರ್ತಿ ಎಂಬುವರುಗಳು ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡು ಅದೇ ಗ್ರಾಮದ ಶ್ರೀಮತಿ ಚೌಡಮ್ಮ ಮತ್ತು ಆಕೆಯ ಗಂಡ ಮುನಿವೆಂಕಟಪ್ಪ ಎಂಬುವರುಗಳು ತೋಟದಲ್ಲಿದ್ದಾಗ ದೊಣ್ಣೆಗಳಿಂದ ಮುನಿವೆಂಕಟಪ್ಪನ ಎಡ ಬುಜಕ್ಕೆ ಹೊಡೆದು ಪ್ರಾಣ ಬೆದರಿಕೆಹಾಕಿರುತ್ತಾರೆ.  

ಹಲ್ಲೆ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ದೂರು ಪ್ರತಿದೂರು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೯-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಮಾರಿಕುಪ್ಪಂ ನಾರ್ಥ ಗಿಲ್ಬರ್ಟ್ಸ್‌ ಬಳಿ ಅದೇ ಕೇರಿಯ ಪ್ರದೀಫ್ ಮತ್ತು ಶ್ರೀಮತಿ ಲಲ್ಲಿ ಕೋಂ ಲೇಟ್ ತಬಮಣಿ ಎಂಬುವರುಗಳು ಜಗಳವಾಡಿ ಹೊಡೆದಾಡಿಕೊಂಡಿರುತ್ತಾರೆ.

ಇತರೆ: ೦೨

  •   ರಾಟರ್ಬ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೯-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್  ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯ ಮುಖ್ಯಪೇದೆ ೫೯, ಪೇದೆ ೧೬೨ ಮತ್ತು ೬೯ ರವರು ೨ನೇ ಬ್ಲಾಕ್‌ನಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ೨ನೇ ಬ್ಲಾಕ್ ವಾಸಿಗಳಾದ ಸಂಪತ್, ಡಿಕ್ಕಿ ಮತ್ತು ಪುರುಶೋತಂ ಎಂಬುವರುಗಳು ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಪೇದೆ ೬೯ ಶ್ರೀ ಗಜೇಂದ್ರ ರವರ ಸಮವಸ್ತ್ರದ ಕುತ್ತಿಗೆ ಪಟ್ಟಿ ಹಿಡಿದೆಳೆದಾಡಿ ದೊಣ್ಣೆಯಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಿಡಿಯೋ ಫಾರ್ಲರ್‌ನಲ್ಲಿ ಅಶ್ಲೀಲ ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೯-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಪಿ.ಎಸ್.ಐ ಶ್ರೀ ಸಿ.ಬಿ.ಶಿವಸ್ವಾಮಿ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಬಂಗಾರಪೇಟೆಯ ಕಾರೋನೇಷನ್ ರಸ್ತೆಯಲ್ಲಿರುವ ಮಾರ್ಡನ್ ವಿಡಿಯೋ ಫಾರ್ಲರ್‌ನಲ್ಲಿ ಅಶ್ಲಿಲಕರ ಚಿತ್ರ ಪ್ರದರ್ಶಸುತ್ತಿರುತ್ತಾರೆಂತ ಬಂದ ಮಾಹಿತಿ ಮೇರೆಗೆ ಸಿಬ್ಬಂದಿ ಸಮೇತ ಸ್ಥಳಕ್ಕೆ ದಾಳಿ ಮಾಡಿ ೨ ಡಿವಿಡಿ ಪ್ಲೆಯರ್‍, ಒಂದು ಪ್ರಜೆಕ್ಟ್ರ್ ಮತ್ತು ೫ ಸಿಡಿಗಳನ್ನು ಅಮಾನತ್ತು ಪಡಿಸಿರುತ್ತಾರೆ.      

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ರಾಟರ್ಬ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೯-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ರಾಬರ್ಟ್‌ಸನ್‌ಪೇಟೆ, ಬೌರಿಲಾಲ್‌ಪೇಟೆಯ ಮನೆ ಸಂಖ್ಯೆ ೨೦೬ ರ ವಾಸಿ ಶ್ರೀ ಶಿವಕುಮಾರ್‍ ರವರ ಮಗ ಶಕ್ತಿವೇಲು (೧೩) ಎಂಬುವನು ಮನೆಯಿಂದ ಆಟವಾಡಲು ಹೋಗಿ ಮತ್ತೆ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.   

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ  

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೫ನೇ ಸೆಪ್ಟೆಂಬರ್‍ ೨೦೦೮

September 15, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೦೯-೨೦೦೮ ರಂದು ಬೆಮೆಲ್ ನಗರ, ಬಿ ಟೈಪ್, ಮನೆ ಸಂಖ್ಯೆ ೫೬ ರ ವಾಸಿ ಶ್ರೀ ಮಹೇಶ್ (೩೩) ಬಿನ್ ಹೆಚ್.ಜಿ.ಕುಲಕರ್ಣಿ ಎಂಬುವರು ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಕೋಲಾರಕ್ಕೆ ಹೋಗಿದ್ದು, ನಂತರ ದಿನಾಂಕ ೧೪-೦೯-೨೦೦೯ ರಂದು ರಾತ್ರಿ ೨೧೧೫ ಗಂಟೆಗೆ ಬಂದು ಮನೆಯ ಬಾಗಿಲನ್ನು ತೆಗೆದು ನೋಡಲಾಗಿ ಈ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ನಕಲಿ ಕೀಲಿಯನ್ನು ಉಪಯೋಗಿಸಿ ಮನೆಯ ಒಳಗೆ ಪ್ರವೇಶ ಮಾಡಿ ಮನೆಯ ಬೆಡ್‌ರೂಮಿನಲ್ಲಿದ್ದ ಕಂಪ್ಯೂಟರ್‍ ಟೇಬಲ್ ಡ್ರಾನಲ್ಲಿಟ್ಟಿದ್ದ ಬೀರುವಿನ ಬೀಗಗಳನ್ನು ತೆಗೆದುಕೊಂಡು ಬೀರುವನ್ನು ತೆಗೆದು ಅದರಲ್ಲಿಟ್ಟಿದ್ದ ಮೂರು ಬಂಗಾರದ ಬಳೆಗಳು, ಒಂದು ಕತ್ತಿನ ಸರ, ನಾಲ್ಕು ಬಂಗಾರದ ಓಲೆಗಳು, ಒಂದು ಜೊತೆ ಬಂಗಾರದ ಮಾಟಿಗಳು, ಒಂದು ಪಿಲಿಪ್ಸ್ ಡಿವಿಡಿ ಪ್ಲೇಯರ್‍ ಮತ್ತು ಒಂದು ಡಿಜಿಟಲ್ ಕ್ಯಾಮರಾ ಎಲ್ಲಾ ಒಟ್ಟು ಬೆಲೆ ೫೦,೦೦೦/- ರೂ ಬೆಲೆ ಬಾಳುವುದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ೦೧

  •       ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದ್ವಿಚಕ್ರ ವಾಹನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೯-೨೦೦೮ ರಂದು ರಾತ್ರಿ ೧೯೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಚಾಂಪಿಯನ್‌ರೀಫ್ಸ್, ಡಿ.ಎ.ಆರ್‍., ಮನೆ ಸಂಖ್ಯೆ ೫೦ರ ವಾಸಿ ಶ್ರೀ ರಾಮಯ್ಯ ಎಂಬುವರು ತನ್ನ ಟಿವಿಎಸ್ ಸೂಪರ್‍ ವಾಹನ ಸಂಖ್ಯೆ ಕೆಎ-೦೮-ಜೆ-೮೯೮ ದ್ವಿಚಕ್ರ ವಾಹನವನ್ನು ರಾಬರ್ಟ್‌‌ಸನ್‌ಪೇಟೆ ನಗರ ಸಭೆ ಬಸ್ ನಿಲ್ದಾಣದಲ್ಲಿ ಶೌಚಾಲಯದ ಮುಂದೆ ನಿಲ್ಲಿಸಿ ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ತನ್ನ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: 

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ      

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ   

ಹಲ್ಲೆ: ಇಲ್ಲ

ಇತರೆ: ಇಲ್ಲ   

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ  

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೪ನೇ ಸೆಪ್ಟೆಂಬರ್‍ ೨೦೦೮

September 14, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ೦೧

  •       ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದ್ವಿಚಕ್ರ ವಾಹನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್.ನ ಮಹಾವಿಷ್ಣು ಕಲ್ಯಾಣ ಮಂಟಪದ ಮುಂಭಾಗ ಸಂಭವಿಸಿರುತ್ತದೆ. ದಿನಾಂಕ ೧೨-೦೯-೨೦೦೮ ರಂದು ರಾತ್ರಿ ೨೧೦೦ ಗಂಟೆಯಲ್ಲಿ ಕೆ.ಜಿ.ಎಫ್.ನ ಪೈಪ್‌ ಲೈನಿನ ವಾಸಿ ಶ್ರೀ ಮುಖೇಶ್ ದಾಮೋಧರನ್ ಬಿನ್ ದಾಮೋಧರನ್ ಎಂಬುವರು ತನ್ನ ಬಾಬತ್ತು ಬಜಾಜ್‌ ಕೆಬಿ ೧೦೦ ಎಂಬ ದ್ವಿಚಕ್ರ ವಾಹನ ಸಂಖ್ಯೆ: ಟಿಎನ್-೨೩-ಜಡ್-೫೧೩೧ ಅನ್ನು ಮಹಾವಿಷ್ಣು ಕಲ್ಯಾಣ ಮಂಟಪದ ಮುಂಭಾಗ ನಿಲ್ಲಿಸಿದ್ದನ್ನು ಯಾರೋ ದುಷ್ಕರ್ಮಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: 

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೯-೨೦೦೮ ರಂದು ರಾತ್ರಿ ಸುಮಾರು ೨೧೪೫ ಗಂಟೆಯಲ್ಲಿ ವಿಜಯನ್ ಎಂಬುವರು ತನ್ನ ಸ್ನೇಹಿತನ ಫಿಯರೋ ಮೋಟಾರ್‌ ಸೈಕಲ್‌ನ್ನು ಕೆ.ಜಿ.ಎಫ್.ನ ಸೌತ್‌ ಟ್ಯಾಂಕ್‌ ಬಳಿ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವಾಹನವು ಸ್ಕಿಡ್‌ ಆಗಿ ಕೆಳಗೆ ಬಿದ್ದಿದ್ದರಿಂದ ಸದರಿಯವರ ತಲೆಗೆ ಒಳಗಾಯವಾಗಿದ್ದು, ದಿನಾಂಕ ೧೪-೦೯-೨೦೦೮ ರಂದು ಬೆಳಗಿನ ಜಾವ ೦೩೩೦ ಗಂಟೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಸಿ.ಎಸ್.ಐ. ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮದ್ಯೆ ಮೃತಪಟ್ಟಿರುತ್ತಾನೆ.    

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ   

ಹಲ್ಲೆ: ಇಲ್ಲ

ಇತರೆ: ಇಲ್ಲ   

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ  

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೩ನೇ ಸೆಪ್ಟೆಂಬರ್‌ ೨೦೦೮

September 13, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ: ೦೧

  •       ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮನೆಗಳ್ಳನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಪುಣ್ಯಕೋಟಿ ಕಾಂಪೌಂಡ್, ೪ನೇ ಬ್ಲಾಕ್, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್‌ ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೨-೦೯-೨೦೦೮ ರಂದು ರಾತ್ರಿ ೧೦.೦೦ ಗಂಟೆಗೆ ಶ್ರೀಮತಿ. ಶಾಂತಿ ಕೋಂ ವೇಲು(೪೦) ಎಂಬುವರು ಎಂದಿನಂತೆ ಮನೆಯ ವರಾಂಡ ಬಾಗಿಲಿಗೆ ಚಿಲಕವನ್ನು ಹಾಕಿ ಮಲಗಿದಾಗ ಯಾರೋ ಕಳ್ಳರು ಮನೆಯ ಹಾಲ್‌ನಲ್ಲಿದ್ದ ಹಿತ್ತಾಳೆ ಪಾತ್ರೆ ಸಾಮಾನುಗಳು ಮತ್ತು ಒಂದು ನೋಕಿಯಾ ಮೊಬೈಲ್ ಪೋನ್‌ ಒಟ್ಟು ಬೆಲೆ ಸುಮಾರು ೧೦,೦೦೦/-ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ೦೧

  •       ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮನೆಗಳ್ಳನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮನೆ.ನಂ. ೧೪೯೭, ಇರುದಿಯಪುರಂ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್‌ ನಲ್ಲಿ ಸಂಭವಿಸಿರುತ್ತದೆ. ಶ್ರೀ. ಬೋನಿಬೋಸ್, ನಂ. ೧೪೯೭, ಇರುದಿಯಪುರಂ, ರಾಬರ್ಟ್‌‌ಸನ್‌ಪೇಟೆ ರವರ ಮನೆಯ ಮೇಲೆ ಅಳವಡಿಸಿದ್ದ ಸೋಲಾರ್‍ ವಾಟರ್‌ ಹೀಟರ್‍ ಮತ್ತು ಅದರ ಸಲಕರಣೆಗಳನ್ನು ದಿನಾಂಕ: ೦೩.೦೯.೨೦೦೮ ರಂದು ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. 

 

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: 

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ   

ಹಲ್ಲೆ: ಇಲ್ಲ

ಇತರೆ: ಇಲ್ಲ   

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •       ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗ ನಾಪತ್ತೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಚಿಕ್ಕಅಂಕಡಂಲ್ಲಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಇದೇ ಗ್ರಾಮದ ವಾಸಿ ರಾಮಪ್ಪ ಬಿನ್ ಲೇಟ್ ಮುನಿಶಾಮಪ್ಪ(೭೦) ಎಂಬುವರ ಮಗ ಅಮರೇಶ ಬಿನ್ ರಾಮಪ್ಪ(೧೪) ಎಂಬುವರು ದಿನಾಂಕ: ೧೦.೦೯.೨೦೦೮ ರಂದು ಬೆಳಿಗ್ಗೆ ೧೦.೦೦ ಗಂಟೆ ಸಮಯದಲ್ಲಿ ತಮ್ಮ ಹಸುಗಳನ್ನು ಮೇಯಿಸಿಕೊಂಡು ಬರುವುದಾಗಿ ಹೇಳಿ ಚಿಕ್ಕಅಂಕಡಂಲ್ಲಿ ಕೆರೆಯ ಕಡೆಗೆ ಹೋದವನು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •       ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ತೊಂಗಲ್ ಗ್ರಾಮದ ಹತ್ತಿರ ಸಂಭವಿಸಿರುತ್ತದೆ. ಡಿ. ಗೋವಿಂದರಾಜು ಬಿನ್ ಲೇಟ್ ದೇಕಪ್ಪ(೩೮), ಎಂ.ಆರ್‌. ಕೊತ್ತೂರು ಗ್ರಾಮದ ವಾಸಿರವರಿಗೆ ೨-೩ ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು, ಚಿಕಿತ್ಸೆ ಪಡೆಸಿದರು ಸಹ ಹೊಟ್ಟೆನೋವು ಕಡಿಮೆಯಾಗದೆ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: ೧೨.೦೯.೨೦೦೮ ರಂದು ಮನೆಗೆ ಬಂದು ಹೊಟ್ಟೆ ನೋವು ತಾಳಲು ಆಗುತ್ತಿಲ್ಲ ಎಂದು ತನ್ನ ಪತ್ನಿಗೆ ತಿಳಿಸಿ ಮದ್ಯಪಾ ಮಾಡಿ ಮಲಗಿಕೊಂಡಿದ್ದು, ಮದ್ಯರಾತ್ರಿಯಲ್ಲಿ ಮನೆಯಿಂದ ಹೊರಗೆ ಹೋಗಿ ತೊಂಗಲ್ ಗ್ರಾಮದ ಹತ್ತಿರ ಹುಂಗೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.    

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೨ನೇ ಸೆಪ್ಟೆಂಬರ್‍ ೨೦೦೮

September 12, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ:  ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: 

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ     

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೦೯-೨೦೦೮ ರಂದು ೨೦೪೫ ಗಂಟೆ ಸಮಯದಲ್ಲಿ ಬಂಗಾರಪೇಟೆ ದೇಶಿಹಳ್ಳಿ ವಾಸಿ ಶ್ರೀಮತಿ ಚಂದ್ರಮ್ಮ ಕೋಂ ಲೇಟ್ ಕಂದಸ್ವಾಮಿ ಮತ್ತು ಶ್ರೀಮತಿ ಲಕ್ಷ್ಮೀ ಎಂಬುವರುಗಳು ಬಂಗಾರಪೇಟೆಯಲ್ಲಿರುವ ಹೋಟಲ್‌ನಲ್ಲಿ ಊಟ ಕಟ್ಟಿಸಿಕೊಂಡು ಶ್ರೀನಿವಾಸ ಹೋಟೆಲ್ ಮುಂದೆ ಹೋಗುತ್ತಿದ್ದಾಗ ಆಟೋರಿಕ್ಷಾ ಸಂಖ್ಯೆ ಕೆಎ-೦೬-ಎ-೧೪೧೯ರ ಚಾಲಕ ವಾಹನವನ್ನು ಬೂದುಕೋಟೆ ವೃತ್ತದ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲಕ್ಷ್ಮೀ ರವರಿಗೆ ಡಿಕ್ಕಿಹೊಡೆದ ಪ್ರಯುಕ್ತ ತಲೆಗೆ ಮತ್ತು ಮೈಮೇಲೆ ತರಚಿದ ರಕ್ತಗಾಯವಾಗಿರುತ್ತದೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ   

ಹಲ್ಲೆ: ಇಲ್ಲ

ಇತರೆ: ಇಲ್ಲ   

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ     

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೦೨

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಟಾರ್‌ ವಾಹನ ಅಧಿನಿಯಮದಡಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೯-೨೦೦೮ ರಂದು ಮದ್ಯಾಹ್ನ ೧೨೨೦ ಗಂಟೆಯಲ್ಲಿ ಶ್ರೀ ಬಿ.ಅಶೋಕ್‌ಕುಮಾರ್‍, ಪಿ.ಎಸ್.ಐ. ರವರು ರಾಬರ್ಟ್‌‌ಸನ್‌ಪೇಟೆಯ ಸೂರಜ್‌ಮಲ್‌ ಸರ್ಕಲ್‌ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಎಂ.ಬಿ.ಎಸ್. ಬಸ್‌ ಸಂಖ್ಯೆ: ಕೆಎ-೦೭-೬೬೧೧ ಅನ್ನು ಅದರ ಚಾಲಕ ಅಪ್ಜಲ್‌ ಅಹ್ಮದ್‌ (೩೦) ಬಿನ್ ಮೊಹ್ಮದ್‌ ಸರ್ದಾರ್‍, ಬಂಗಾರಪೇಟೆ ರವರು ಅತಿವೇಗದಿಂದ ಚಲಾಯಿಸಿಕೊಂಡು ಬಂದಿದ್ದನ್ನು ಕಂಡು ನಿಲ್ಲಿಸಿ ಪರಿಶೀಲಿಸಲಾಗಿ ರಹದಾರಿ ಇಲ್ಲದೆ ಬಸ್ಸಿನ ನಿರ್ವಾಹಕ ವೇಣುಗೋಪಾಲ್‌ರೆಡ್ಡಿ ಬಿನ್ ಎನ್.ಜಿ.ರಾಮಯ್ಯ, ಮುದುವಾಡಿ ಗ್ರಾಮ, ಕೋಲಾರ ಇವರು ಬಸ್ಸಿನಲ್ಲಿ ಕೆ.ಜಿ.ಎಫ್. ನಿಂದ ಬೆಂಗಳೂರಿಗೆ ಕೋಲಾರ ಮಾರ್ಗವಾಗಿ ಹೋಗುವ ಸುಮಾರು ೪೫ ಜನ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿದ್ದರಿಂದ ಪಿ.ಎಸ್.ಐ. ರವರು ಸ್ವತಃ ಪ್ರಕರಣ ದಾಖಲು ಮಾಡಿರುತ್ತಾರೆ.
  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಟಾರ್‌ ವಾಹನ ಅಧಿನಿಯಮದಡಿ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೯-೨೦೦೮ ರಂದು ಮದ್ಯಾಹ್ನ ೧೨೫೦ ಗಂಟೆಯಲ್ಲಿ ಶ್ರೀ ಬಿ.ಅಶೋಕ್‌ಕುಮಾರ್‍, ಪಿ.ಎಸ್.ಐ. ರವರು ರಾಬರ್ಟ್‌‌ಸನ್‌ಪೇಟೆಯ ಸೂರಜ್‌ಮಲ್‌ ಸರ್ಕಲ್‌ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಷಣ್ಮುಗ ಬಸ್‌ ಸಂಖ್ಯೆ: ಕೆಎ-೦೮-೩೪೪೭ ಅನ್ನು ಅದರ ಚಾಲಕ ವೆಂಕಟಪತಿ (೪೨) ಬಿನ್ ಲಕ್ಷ್ಮಪ್ಪ, ಕೆ.ಜಿ.ಎಫ್. ರವರು ಅತಿವೇಗದಿಂದ ಚಲಾಯಿಸಿಕೊಂಡು ಬಂದಿದ್ದನ್ನು ಕಂಡು ನಿಲ್ಲಿಸಿ ಪರಿಶೀಲಿಸಲಾಗಿ ರಹದಾರಿ ಇಲ್ಲದೆ ಬಸ್ಸಿನ ನಿರ್ವಾಹಕ ಸೋಮಣ್ಣ (೩೬) ಬಿನ್ ನೆಡುಪಣ್ಣ, ಚಿಂಚಾಂಡ್ಲಹಳ್ಳಿ ಇವರು ಬಸ್ಸಿನಲ್ಲಿ ಕೆ.ಜಿ.ಎಫ್. ನಿಂದ ಬೆಂಗಳೂರಿಗೆ ಕೋಲಾರ ಮಾರ್ಗವಾಗಿ ಹೋಗುವ ಸುಮಾರು ೪೯ ಜನ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿದ್ದರಿಂದ ಪಿ.ಎಸ್.ಐ. ರವರು ಸ್ವತಃ ಪ್ರಕರಣ ದಾಖಲು ಮಾಡಿರುತ್ತಾರೆ.

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೧ನೇ ಸೆಪ್ಟೆಂಬರ್‍ ೨೦೦೮

September 11, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೧-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ:  ಇಲ್ಲ 

ಸಾಧಾರಣ ಕಳ್ಳತನ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಳಾಗಿರುತ್ತದೆ. ದಿನಾಂಕ ೧೦-೦೯-೨೦೦೮ ರಂದು ೨೧೩೦ ಗಂಟೆ ಸಮಯದಲ್ಲಿ ಬೆಮೆಲ್ ನಗರ ಆಫೀಸರ್‍ ವಸತಿ ಗೃಹದ ಬಿ ೧೩, ೧೪ ಮತ್ತು ೧೫ರ ಬಳಿ ಅಳವಡಿಸಿದ ಕಾಸ್ಟಿಂಗ್ ಪೈ ಅನ್ನು ಮುನಿಯಪ್ಪ @ ಮುತ್ತುರಾಜು ಬಿನ್ ಲೇಟ್ ಎಲ್ಲಪ್ಪ, ಬಂಗಾರಪೇಟೆ ರವರು ಹೊಡೆದು ಕಳವು ಮಾಡುತ್ತಿದ್ದಾಗ ಬೆಮೆಲ್ ಸೆಕ್ಯೂರಿಟಿ ರವರು ಆರೋಪಿ ಮತ್ತು ಮಾಲು ಸಮೇತ ಠಾಣೆಗೆ ಹಾಜರುಪಡಿಸಿರುತ್ತಾರೆ.  

ವಾಹನ ಕಳ್ಳತನ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೦೯-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಉರಿಗಾಂನ ಟಾಪ್ ಲೈನ್ ವಾಸಿ ಶ್ರೀ ಷಣ್ಮುಗಂ ಎಂಬುವರು  ರಾಬರ್ಟ್‌‌ಸನ್‌ಪೇಟೆಯಲ್ಲಿರುವ ಕಾಮತ್ ಲ್ಯಾಬಾರೆಟರಿ ಮುಂದೆ ತನ್ನ ಟಿವಿಎಸ್ ಸೂಪರ್‍ ಕೆಎ-೦೮-ಹೆಚ್‌-೬೩೫೬ ದ್ವಿಚಕ್ರ ವಾಹನವನ್ನು ಬೀಗ ಹಾಕಿ ನಿಲ್ಲಿಸಿ ಒಳಗೆ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ವಾಹನವನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: 

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ     

-ಸಾಧಾರಣ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೧೧-೦೯-೨೦೦೮ ರಂದು ೦೬೩೦ ಗಂಟೆ ಸಮಯದಲ್ಲಿ ಟ್ರಾಕ್ಟರ್‍ ‍ ಸಂಖ್ಯೆ ಎಟಿಎನ್-೩೨೭೩ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಟ್ರಾಕ್ಟರ್‍ ಟ್ರಾಲಿಯಲ್ಲಿ ಕುಳಿತಿದ್ದ ಚೆಂಬರಸನಹಳ್ಳಿ ಗ್ರಾಮದ ಗಂಗಿರೆಡ್ಡಿ ಬಿನ್ ಪೀಲ್ಲಾ ರೆಡ್ಡಿ ಎಂಬುವರು ಕೆಳಕ್ಕೆ ಬಿದ್ದು ರಕ್ತಗಾಯವಾಗಿರುತ್ತದೆ. ಚಾಲಕ ವಾಹನವನ್ನು ನಿಲ್ಲಿಸದೇ ಹೊರಟುಹೋಗಿರುತ್ತಾನೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ   

ಹಲ್ಲೆ: ಇಲ್ಲ

ಇತರೆ: ೦೧

  •     ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೦೯-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬಳ್ಳಗೆರೆ ಗ್ರಾಮದ ಶ್ರೀಮತಿ ಕಮಲಮ್ಮ ಎಂಬುವರು ಅದೇ ಗ್ರಾಮದ ಶ್ರೀನಿವಾಸ್ ಮತ್ತು ಮಂಜುನಾಥ್ ಎಂಬುವರ ಮೇಲೆ ಠಾಣೆಯಲ್ಲಿ ದೂರು ನೀಡಿದ ವಿಚಾರದಲ್ಲಿ ಕೆಟ್ಟ ಮಾತುಗಳಿಂದ ಬೈದು ಮಚ್ಚು ತೋರಿಸಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ     

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೦ನೇ ಸೆಪ್ಟೆಂಬರ್‍ ೨೦೦೮

September 10, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ:  ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: 

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •     ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್‌ ಆಂಡ್ರಸನ್‌ಪೇಟೆಯ ಶ್ರೀರಾಮ ದೇವಸ್ಥಾನದ ಬಳಿ ಸಂಭವಿಸಿರುತ್ತದೆ.  ದಿನಾಂಕ: ೦೯-೦೯-೨೦೦೮ ರಂದು ಮದ್ಯಾಹ್ನ ೩-೪೫ ಗಂಟೆ ಸಮಯದಲ್ಲಿ ಆರೋಗ್ಯರಾಜ್ @ ರಾಜ ಬಿನ್ ಥಾಮಸ್(೩೯), ಆಂದ್ರಲೈನ್, ಆಂಡ್ರಸನ್‌ಪೇಟೆ ಮತ್ತು ಅಲೆಕ್ಸ್‌ ಬಿನ್ ಅರುಳಪ್ಪ, ಆಂದ್ರಲೈನ್, ಆಂಡ್ರಸನ್‌ಪೇಟೆ ಎಂಬುವರುಗಳು ನಿವೇಶನ ವಿಚಾರದಲ್ಲಿ ತಮ್ಮ ಸಂಬಂಧಿಕ ಜೊತೆಯಲ್ಲಿ ಪಂಚಾಯ್ತಿ ಸೇರಿ ನಿವೇಶನದ ವಿಚಾರದಲ್ಲಿ ಜಗಳ ಮಾಡಿಕೊಂಡು ಮಾರಕಸ್ತ್ರಗಳಿಂದ ಹೊಡೆದುಕೊಂಡು ರಕ್ತಗಾಯಪಡಿಸಿಕೊಂಡು ಪ್ರಾಣ ಬೆದರಿಕೆಗಳನ್ನು ಹಾಕಿಕೊಂಡು ವಾದಿ ಪ್ರತಿವಾದಿ ಪ್ರಕರಣಗಳು ದಾಖಲಾಗಿರುತ್ತದೆ.

ಹಲ್ಲೆ: ಇಲ್ಲ

ಇತರೆ: ೦೧

  •     ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ತಯಾರಿಕೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಗಾಜಕ ಕೆರೆಯ ಬಳಿ ಸಂಭವಿಸಿರುತ್ತದೆ. ದಿನಾಂಕ: ೦೯-೦೯-೨೦೦೮ ರಂದು ಮದ್ಯಾಹ್ನ ಸುಮಾರು ೧೨.೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಗಾಜಕ ಕೆರೆಯ ಕಟ್ಟೆಯ ಬಳಿ ವೆಂಕಟಸ್ವಾಮಿ ಬಿನ್ ಲೇಟ್ ಚಿನ್ನಪ್ಪ(೩೦), ಕೊಮ್ಮೇನಹಳ್ಳಿ ಮತ್ತು ವೆಂಕಟರಾಮ ಬಿನ್ ಕೃಷ್ಣಪ್ಪ, ಕೊಮ್ಮೇನಹಳ್ಳಿ ಗ್ರಾಮದ ವಾಸಿಗಳು ಅಕ್ರಮವಾಗಿ ತಯಾರಿಸುತ್ತಿದ್ದ ರೂ. ೧೦೦೦/- ಬೆಲೆಬಾಳುವ ೫ ಲೀಟರ್‍ ಕಳ್ಳಭಟ್ಟಿ ವಶಪಡಿಸಿಕೊಂಡು ವೆಂಕಟಸ್ವಾಮಿ ರವರನ್ನು ದಸ್ತಗಿರಿ ಮಾಡಲಾಗಿರುತ್ತದೆ. 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •       ಬಂಗಾರಪೇಟೆ ಪೊಲೀಸ್ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೯/೧೦-೦೯-೨೦೦೮ ರಂದು ರಾತ್ರಿ ಶ್ರೀಮತಿ ಜಯಮ್ಮ ರವರ ಗಂಡನಾದ ವೆಂಕಟೇಶಪ್ಪ ಬಿನ್ ಗಂಟ್ಲಪ್ಪ(೫೫), ತಮಟಗೆರೆ ಗ್ರಾಮದ ವಾಸಿ ರವರು ಸುಮಾರು ೭ ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು, ನೋವಿನ ಬಾದೆಯನ್ನು ತಳಲಾರದೆ ತನ್ನ ಹೊಲದ ಹೊಂಗೆ ಮರಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೯ನೇ ಸೆಪ್ಟೆಂಬರ್‍ ೨೦೦೮

September 9, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೯-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ:  ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: 

-ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ     

-ಸಾಧಾರಣ: ೦೨

  •   ರಾಬರ್ಟ್‌‌ನಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೯-೨೦೦೮ ರಂದು ೨೧೪೫ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ರಾಬರ್ಟ್‌‌ಸನ್‌ಪೇಟೆ ಆಂದ್ರಲೈನ್, ೬ನೇ ಕ್ರಾಸ್ ವಾಸಿ ಶ್ರೀ ಜೋಸ್ವ (೨೭) ಬಿನ್ ಚಿನ್ನಪ್ಪಯ್ಯ ಎಂಬುವರು ರಾಬರ್ಟ್‌‌ನಸ್‌ಪೇಟೆಯ ೬ನೇ ಕ್ರಾಸ್ ರಸ್ತೆಯಲ್ಲಿ ಆಶೀರ್ವಾದ ಟೈಲರ್‍ ಅಂಗಡಿಯ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಆಟೋ ಸಂಖ್ಯೆ ಕೆಎ-೧೪-೩೦೦೮ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜೋಸ್ವ ರವರಿಗೆ ಡಿಕ್ಕಿ ಪಡಿಸಿದರ ಪ್ರಯುಕ್ತ ಅವರಿಗೆ ಎಡ ಮೊಣಕಾಲಿನ ಕೆಳಗೆ ಹಾಗೂ ಎಡ ಮೊಣಕೈ ಬಳಿ ರಕ್ತಗಾಯವಾಗಿರುತ್ತದೆ.
  • ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೯-೨೦೦೮ ರಂದು ೨೧೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಉರಿಗಾಂ ಎನ್.ಟಿ ಬ್ಲಾಕ್ ವಾಸಿ ನೂರುಲ್ಲಾ ಬಿನ್ ಅಮಾನುಲ್ಲಾ ಎಂಬುವರು ಆಟೋ ಸಂಖ್ಯೆ ಕೆಎ-೦೮-೧೯೦೧ ರ ಚಾಲಕ ಪೈರೋಜ್ ಎಂಬುವರೊಂದಿಗೆ ರಾಬರ್ಟ್‌‌ನಸ್‌ಪೇಟೆ ಕಡೆಗೆ ಹೋಗಲು ಹೋಗುತ್ತಿರುವಾಗ ಎದರುಗಡೆಯಿಂದ ಆಟೋ ಸಂಖ್ಯೆ ಎಂಹೆಚ್‌-೦೨-೪೮೪೧ ರ ಚಾಲಕ ಸದರಿ ಆಟೋವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಣಾಮ ನೂರುಲ್ಲಾ ರವರಿಗೆ ರಕ್ತಗಾಯವಾಗಿರುತ್ತದೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ 

ಹಲ್ಲೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೯-೨೦೦೮ ರಂದು ೨೦೧೫ ಗಂಟೆ ಸಮಯದಲ್ಲಿ ಬೇತಮಂಗಲ ಹಳೇ ಬಡಾವಣೆಯ ಮಸೀದಿ ರಸ್ತೆಯ ವಾಸಿ ಶ್ರೀ ಸಲೀಮ್ ಬಿನ್ ಅಬ್ದುಲ್‌ಸಬಾನ್ ಎಂಬುವರು ರಂಜಾನ್ ಹಬ್ಬದ ಪ್ರಯುಕ್ತ ಬೇತಮಂಗಲದ ಹಳೇಬಡಾವಣೆಯಲ್ಲಿರುವ ಮಸೀದಿಗೆ ಹೋಗಿ ಪ್ರರ್ಥನೆ ಸಲ್ಲಿಸಿ ಬರುತ್ತಿದ್ದಾಗ ಬೇತಮಂಗಲದ ವಾಸಿಗಳಾದ ಇಮ್ರಾನ್, ಮುನಾವರ್‍, ಜಬ್ಬಿ ಮತ್ತು ಖಲೀಮುಲ್ಲಾ ಎಂಬುವರುಗಳು ಪಾನ್ ಪರಾಗ್ ತಿಂದು ಸಲೀಮ್ ಮೇಲೆ ಉಗಿದ ಪ್ರಯುಕ್ತ ಸಲೀಮ್ ಅವರನ್ನು ಕೇಳಲಾಗಿ ಕಲ್ಲುಗಳಿಂದ ಹೊಡೆದು ರಕ್ತಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.  

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.