ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೯-೨೦೦೮ ರಂದು ಸಂಜೆ ೧೯೪೫ ಗಂಟೆಯಲ್ಲಿ ಕೆ.ಜಿ.ಎಫ್.ನ ಆಂಡ್ರಸನ್‌ಪೇಟೆಯಲ್ಲಿರುವ ಕೃಷ್ಣ ಹೋಟೆಲ್ ನಲ್ಲಿ ೧)ಶರತ್ ಬಿನ್ ಮುನಿಯ, ೨)ಮಣಿದನ್, ೩)ಮಣಿ, ೪)ಪೀಟರ್ ಎಲ್ಲರೂ ೨ನೇ ಬ್ಲಾಕ್, ಆಂಡ್ರಸನ್‌ಪೇಟೆ ವಾಸಿಗಳು ತಿನ್ನುತ್ತಿದ್ದಾಗ ಶ್ರೀ ಬಿಲ್ಲ (೨೬) ಬಿನ್ ಲೇಟ್ ಯಾಕುಬ್, ಲೂರ್ದನಗರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್. ರವರು ನೀರು ಕೊಡಲು ನಿರಾಕರಿಸಿದ್ದಕ್ಕೆ ಇವರನ್ನು ಮೇಲ್ಕಂಡ ನಾಲ್ಕೂ ಜನರು ಚಾಕು, ಕೋಲು ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ೦೨ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೨-೦೯-೨೦೦೮ ರಂದು ಬೆಳಿಗ್ಗೆ ೧೧೩೦ ಗಂಟೆಯಲ್ಲಿ ಬಂಗಾರಪೇಟೆ ತಾಲೂಕಿನ ಪೊಟ್ಟೀಪಲ್ಲಿ ಗ್ರಾಮದಲ್ಲಿ ಆಸ್ತಿ ವಿಚಾರದಲ್ಲಿ ಕೆ.ಜಿ.ಎಫ್.ನ ಸ್ವರ್ಣಾನಗರದ ವಾಸಿ ಶ್ರೀ ನರಸಿಂಹರೆಡ್ಡಿ ಬಿನ್ ಮುನಿರೆಡ್ಡಿ ರವರಿಗೂ ಪೊಟ್ಟೇಪಲ್ಲಿ ಗ್ರಾಮದ ವಾಸಿಗಳಾದ ಗೋಪಾಲ್‌ರೆಡ್ಡಿ ಮತ್ತು ಮುನಿರೆಡ್ಡಿ ಎಂಬುವರುಗಳಿಗೆ ಜಗಳ ಆಗಿ ಕಲ್ಲಿನಿಂದ ಹೊಡೆದುಕೊಂಡು ರಕ್ತಗಾಯಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕೇಸು ಮತ್ತು ಪ್ರತಿ ಕೇಸು ದಾಖಲಾಗಿರುತ್ತದೆ.
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೯-೨೦೦೮ ರಂದು ರಾತ್ರಿ ೨೧೦೦ ಗಂಟೆಯಲ್ಲಿ ಕೆನಡೀಸ್ ಕರಿಮಾರಿಯಮ್ಮ ಲೈನ್‌ನಲ್ಲಿ ಶ್ರೀ ಎಸ್.ಅನ್ಬು (೩೬) ಬಿನ್ ಲೇಟ್ ಷಣ್ಮುಗಂ, ಕರಿಮಾರಿಯಮ್ಮ ಲೈನ್ ರವರೊಂದಿಗೆ ೧)ರಮೇಶ್, ೨)ಸಂತೋಷ್, ೩)ಸಂಪತ್ ರವರು ಹಳೆ ದ್ವೇಷದಿಂದ ಜಗಳ ಕಾದು ಕಟ್ಟಿಗೆ ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೯-೨೦೦೮ ರಂದು ರಾತ್ರಿ ೧೯೩೦ ಗಂಟೆಯಲ್ಲಿ ಕೆ.ಜಿ.ಎಫ್.ನ ರಾಬರ್ಟ್‌ಸನ್‌ಪೇಟೆಯಲ್ಲಿರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಬೋರಿಲಾಲ್‌ಪೇಟೆ ವಾಸಿಗಳಾದ ಸುರೇಶ್, ವಿಜಿ ಮತ್ತು ಇತರರು, ಶ್ರೀನಿವಾಸ (೨೩) ಬಿನ್ ಗಂಗಾಧರಚಾರಿ, ಪೆದ್ದಪಲ್ಲಿ ರವರ ಬಳಿ ಸುರೇಶ್ ರವರ ಹೆಂಡತಿಗೆ ಪೋನ್ ಮಾಡಿದ ವಿಚಾರದಲ್ಲಿ ಜಗಳ ತೆಗೆದು ಸ್ಟೀಲ್ ಬಳೆಯಿಂದ ಮುಖಕ್ಕೆ ಹೊಡೆದು ರಕ್ತಗಾಯಪಡಿಸಿ ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ೦೨ ಪ್ರಕರಣಗಳು ದಾಖಲಾಗಿರುತ್ತವೆ. ದಿನಾಂಕ ೨೨-೦೯-೨೦೦೮ ರಂದು ಬಂಗಾರಪೇಟೆ ಠಾಣೆಯ ಸರಹದ್ದಿನ ಹುದುಕುಳ ವೃತ್ತದ ಬಳಿ ಅತಿವೇಗವಾಗಿ ಚಲಾಯಿಸುತ್ತಿದ್ದ ಷಣ್ಮುಗ ಕಂಪನಿಯ ಬಸ್ ಸಂಖ್ಯೆ: ೧)ಕೆಎ-೦೮-೩೦೯೮ ಮತ್ತು ೨)ಕೆಎ-೦೮-ಎ-೪೭೭೭ ಗಳನ್ನು ನಿಲ್ಲಿಸಿ ಪರಿಶೀಲಿಸಲಾಗಿ ಪರವಾನಗಿಯ ನಿಯಮಗಳನ್ನು ಉಲ್ಲಂಘಿಸಿ ಪ್ರಯಾಣಿಕರನ್ನು ಚಲಾಯಿಸುತ್ತಿದ್ದರಿಂದ ಎರಡೂ ಬಸ್ಸುಗಳ ವಿರುದ್ಧ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


