September 29, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ನಾರ್ಥ್‌ಟ್ಯಾಂಕ್ ಬ್ಲಾಕ್, ಉರಿಗಾಂನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೮.೦೯.೨೦೦೮ ರಂದು ರಾತ್ರಿ ಸುಮಾರು ೯.೦೦ ಗಂಟೆ ಸಯಮದಲ್ಲಿ ಶ್ರೀ. ಶ್ರೀಧರ್ ಬಿನ್ ಲೇಟ್ ಚೊಕ್ಕಲಿಂಗಂ(೩೭), ನಂ ೧೪೭, ನಾರ್ಥ್‌ಟ್ಯಾಂಕ್ ಬ್ಲಾಕ್ ವಾಸಿರವರ ಮಾವನಾದ ಜಯರಾಜ್ ಮನೆಯ ಮುಂದೆ ಜಯಕುಮಾರ್, ರವಿ, ಸೇಟ್, ದೊರೈ, ಶಂಕರ್, ಡ್ಯಾನಿಯಲ್, ರಾಜ ಮತ್ತು ವಿಕ್ಕಿ ಎಲ್ಲಾರೂ ಸ್ವಾಮಿನಾಥಪುರಂ ಮತ್ತು ಆಂದ್ರಲೈನ್ ವಾಸಿಗಳು ಅಕ್ರಮ ಗುಂಪು ಕಟ್ಟಿಕೊಂಡು ಉದ್ದೇಶಪೂರ್ವಕವಾಗಿ ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಜಯರಾಜ್ ರವರೊಂದಿಗೆ ಜಗಳತೆಗೆದು ಗಲಾಟೆ ಮಾಡುತ್ತಿದ್ದಾಗ ಶ್ರೀಧರ್ ಪತ್ನಿ ಶಕೀಲಾ ಮತ್ತು ಸತೀಶ್ ಕುಮಾರ್ ರವರುಗಳು ಜಗಳ ಬಿಡಿಸಲು ಹೋದಾಗ ಅವರುಗಳಿಗೆ ದೊಣ್ಣೆಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಹಲ್ಲೆ: ೦೨
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮರಾಠ ಹೊಸಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಶ್ರೀ. ತಿಮ್ಮನ ಬೋವಿ ಬಿನ್ ಲೇಟ್ ಮುನಿಬೋವಿ(೬೫) ರವರು ದಿನಾಂಕ: ೨೮.೦೯.೨೦೦೮ ರಂದು ಮದ್ಯಾಹ್ನ ೨.೦೦ ಗಂಟೆಯ ಸಮಯದಲ್ಲಿ ಗ್ರಾಮದ ನಡಬಂಡೆಯಲ್ಲಿ ೪ ದಿನಗಳ ಹಿಂದೆ ಕಲ್ಲು ಹೊಡೆಯುವ ಸಾಮಾನುಗಳನ್ನು ಇಟ್ಟು ಬಂದಿದ್ದು, ಈ ದಿನ ಮದ್ಯಾಹ್ನ ಸಾಮಾನುಗಳನ್ನು ನೋಡಿಕೊಂಡು ಬರಲು ಹೋಗಿದ್ದಾಗ ಸದರಿ ಸ್ಥಳದಲ್ಲಿ ಸಾಮಾನುಗಳು ಇಲ್ಲದೆ ಇದ್ದು, ಅಲ್ಲಿಯೇ ಕುರಿಗಳನ್ನು ಮೇಯಿಸುತ್ತಿದ್ದ ಶವಣ ದೊಡ್ಡಪ್ಪ ರವರನ್ನು ಸಾಮಾನುಗಳ ಬಗ್ಗೆ ಕೇಳಲಾಗಿ ಆತ ಜಗಳಕ್ಕೆ ಬಂದು ಆತನ ಕೈಯಲ್ಲಿದ್ದ ಮೇಕೆಗಳಿಗೆ ಸೊಪ್ಪನ್ನು ಹೊಡೆಯುವ ಮಚ್ಚಿನಿಂದ ತಿಮ್ಮನನ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿರುತ್ತಾನೆ.
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೯-೨೦೦೮ ರಂದು ಬೆಳಿಗ್ಗೆ ೦೯-೧೫ ಗಂಟೆಯಲ್ಲಿ ಶ್ರೀ. ಬಾಬು ಬಿನ್ ಅಬ್ದಲ್ ಲತೀಫ್, ಇಂದಿರಾ ಆಶ್ರಯ ಬಡಾವಣೆ, ಬಂಗಾರಪೇಟೆ ವಾಸಿ ತನ್ನ ಮನೆಯಲ್ಲಿರುವಾಗ ಅದೇ ಬಡಾವಣೆ ವಾಸಿಗಳಾದ ಸರ್ದಾರ್, ಖಾಲೀಲ್, ಸೀರಾಜ್ ಮತ್ತು ಗುಲ್ನಾಜ್ ಎಂಬುವರುಗಳು ಉದ್ದೇಶ ಪೂರ್ವಕವಾಗಿ ಜಗಳ ಮಾಡಿ ಕೈಗಳಿಂದ ಮತ್ತು ದೊಣ್ಣೆಯಿಂದ ತಲೆಗೆ ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
September 28, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೨
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೯-೨೦೦೮ ರಂದು ೧೮೩೦ ಗಂಟೆಯಲ್ಲಿ ಬಂಗಾರಪೇಟೆ ತಾಲೂಕಿನ ಕಂಗಾಂಡ್ಲಹಳ್ಳಿ ಕ್ರಾಸ್ ಬಳಿ ಶ್ರೀ ಎಂ.ಪಿ.ಮುನಿಸ್ವಾಮಿ ಶೆಟ್ಟಿ ಬಿನ್ ಪಾಪಣ್ಣ ಶೆಟ್ಟಿ, ವಾಸ: ಕೊಂಗನಪಲ್ಲಿ, ಆಂಧ್ರಪ್ರದೇಶ ರಾಜ್ಯ ರವರು ಮೋಟಾರ್ ಸೈಕಲ್ ಸಂಖ್ಯೆ: ಕೆಎ-೦೮-ಕೆ-೩೩೧೨ರಲ್ಲಿ ಕಂಗ್ಲಾಂಡ್ಲಹಳ್ಳಿ ಗ್ರಾಮದಿಂದ ಕೆ.ಜಿ.ಎಫ್. ಕಡೆಗೆ ಬರುತ್ತಿದ್ದಾಗ, ಒಂದು ಅಂಬಾಸಿಡರ್ ಕಾರ್‌ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ಮೋಟಾರ್ ಸೈಕಲ್‌ಗೆ ಡಿಕ್ಕಿಪಡಿಸಿದ್ದರಿಂದ ಎಂ.ಪಿ.ಮುನಿಸ್ವಾಮಿ ರವರಿಗೆ ರಕ್ತಗಾಯಗಳಾಗಿರುತ್ತದೆ. ಕಾರಿನ ಚಾಲಕ ಕಾರ್‌ನ್ನು ನಿಲ್ಲಿಸದೆ ಹೊರಟು ಹೋಗಿದ್ದು, ಕಾರಿನ ಸಂಖ್ಯೆ ಮತ್ತು ಚಾಲಕ ಯಾರೆಂಬುದು ಗೊತ್ತಿರುವುದಿಲ್ಲ.
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬/೦೯/೨೦೦೮ ರಂದು ಕೋಲಾರ ತಾಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮದ ವಾಸಿಗಳಾದ ಶ್ರೀ ನಾರಾಯಣಸ್ವಾಮಿ (೩೨) ಬಿನ್ ವೆಂಕಟಸ್ವಾಮಪ್ಪ ಮತ್ತು ಶ್ರೀನಿವಾಸ ಎಂಬುವರು ಹೀರೋ ಹೊಂಡಾ ಮೋಟಾರ್ ಸೈಕಲ್ ಸಂಖ್ಯೆ: ಕೆಎ-೦೭-ಕ್ಯೂ-೧೫೯೯ ರಲ್ಲಿ ಬರುತ್ತಿದ್ದಾಗ ಕೋಲಾರ-ಬಂಗಾರಪೇಟೆ ಮುಖ್ಯರಸ್ತೆ, ಹುದುಕುಳ ಗೇಟ್‌ನಲ್ಲಿ ಆಟೋ ಸಂಖ್ಯೆ: ಕೆಎ-೩೬-೪೫೨೩ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಮೋಟಾರ್ ಸೈಕಲ್‌ಗೆ ಡಿಕ್ಕಿಪಡಿಸಿದ್ದರಿಂದ ಶ್ರೀ ನಾರಾಯಣಸ್ವಾಮಿ ಮತ್ತು ಶ್ರೀನಿವಾಸ ರವರುಗಳಿಗೆ ರಕ್ತಗಾಯಗಳಾಗಿರುತ್ತವೆ. ಆಟೋವನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುತ್ತಾನೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೯-೨೦೦೮ ರಂದು ೧೬೦೦ ಗಂಟೆಯಲ್ಲಿ ಶ್ರೀಮತಿ ಮುನಿಯಮ್ಮ (೫೫) ಕೋಂ ಮುನಿಯಪ್ಪ, ಬ್ಯಾಡಬೆಲೆ, ಬಂಗಾರಪೇಟೆ ತಾಲೂಕು ರವರು ತಮ್ಮ ಗ್ರಾಮದ ಬಳಿ ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಬರುತ್ತಿದ್ದಾಗ, ಅದೇ ಗ್ರಾಮದ ವಾಸಿಗಳಾದ ಮುನೀಂದ್ರ ಮತ್ತು ಚಿನ್ನಮ್ಮ ಎಂಬುವರುಗಳು ತಮ್ಮ ಜಮೀನುನಲ್ಲಿ ಕುರಿಗಳನ್ನು ಏಕೆ ಮೇಯಿಸಿದ್ದು ಎಂತ ಶ್ರೀಮತಿ ಮುನಿಯಮ್ಮ ರವರೊಂದಿಗೆ ಜಗಳ ಕಾದು, ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೯-೨೦೦೮ ರಂದು ಬೆಳಿಗ್ಗೆ ೦೯೦೦ ಗಂಟೆಯಲ್ಲಿ ಶ್ರೀಮತಿ ಅಕೈಲ (೨೮) ಕೋಂ ಶರೀಪ್, ವಾಸ: ದೇಶಿಹಳ್ಳಿ, ಬಂಗಾರಪೇಟೆ ತಾಲೂಕು ರವರು ತನ್ನ ಮನೆಯಲ್ಲಿ ತನ್ನ ಗಂಡನೊಂದಿಗೆ ದೂರವಾಣಿಯಲ್ಲಿ ಜೋರಾಗಿ ಮಾತನಾಡುತ್ತಿದ್ದಾಗ ಅದೇ ಗ್ರಾಮದ ವಾಸಿಗಳಾದ ಅಶೋಕ್ ಬಿನ್ ರಾಮಕೃಷ್ಣಪ್ಪ ಮತ್ತು ರತಿದೇವಿ ಕೋಂ ಅಶೋಕ್ ಎಂಬುವರು ತಮ್ಮನ್ನೇ ಬೈಯುತ್ತಿರುವುದಾಗಿ ತಿಳಿದು ಶ್ರೀಮತಿ ಅಕೈಲ ರವರನ್ನು ಕೈ ಮತ್ತು ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
September 27, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಡಕಾಯತಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬/೨೭-೦೯-೨೦೦೮ ರಂದು ೦೧೪೫ ಗಂಟೆ ಸಮಯದಲ್ಲಿ ನಾಲ್ಕು ಜನ ಅಪರಿಚಿತ ದುಷ್ಕರ್ಮಿಗಳು ಬಂಗಾರಪೇಟೆ ತಾಲೂಕು ಓಂಕಾರ ದೇವಸ್ಥಾನದ ಕಾವಲುಗಾರ ಚಿಕ್ಕಪಿಳ್ಳಪ್ಪ ಎಂಬುವರನ್ನು ಕಬ್ಬಿಣದ ರಾಡಿನಿಂದ ಕಾಲಿನ ಮೇಲೆ ಹೊಡೆದು ಗಾಯಪಡಿಸಿ ಕೈಗಳನ್ನು ಕಟ್ಟಿಹಾಕಿ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರಭಟ್ ರವರ ಮನೆಯ ಬಾಗಿಲನ್ನು ಮುರಿದು ಮನೆಯ ಒಳಗಡೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿ ಮಲಗಿದ್ದ ಉದಯಕುಮಾರ್‌ಭಟ್ ರವರ ಕೆನ್ನೆಗೆ ಕೈಯಿಂದ ಹೊಡೆದು ಕಾವಲುಗಾರನನ್ನು ಮತ್ತು ಉದಯಕುಮಾರ್ ಇಬ್ಬರನ್ನು ಟಾಯ್‌ಲೇಟ್ ಒಳಗಡೆ ಅಕ್ರಮವಾಗಿ ಕೂಡಿಹಾಕಿ ನಂತರ ಸದರಿ ಮನೆಯ ಕೊಠಡಿಯ ಬೀಗವನ್ನು ಕಿತ್ತುಹಾಕಿ ಒಳಗೆ ಪ್ರವೇಶಿಸಿ ಬೀರುವನ್ನು ಕಿತ್ತು ಅದರಲ್ಲಿದ್ದ ನಗದು ರೂ ೫೦೦೦/-, ೩೫ ಗ್ರಾಂ ಚಿನ್ನದ ಸರ, ಮೂರು ಉಂಗುರಗಳು, ಮೂರು ಕೈ ಬಳೆಗಳನ್ನು ಮತ್ತು ಒಂದು ಕೆ.ಜಿ. ಬೆಳ್ಳಿಯ ಪೂಜೆ ಸಾಮಾನುಗಳು ಒಟ್ಟು ರೂ ೮೮೦೦೦/- ಗಳನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ.
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹುಡಗಿ ಕಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೯-೨೦೦೮ ರಂದು ೦೯೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್., ಉರಿಗಾಂನ ಕೋರಮಂಡಳ್, ಬಾಲ್‌ಘಾಟ್ ಲೈನ್, ಮನೆ ಸಂಖ್ಯೆ ೦೮ರ ವಾಸಿ ಕುಮಾರಿ ಪ್ರಿಯ (೧೮) ಬಿನ್ ಪೆರುಮಾಳ್ ಎಂಬುವಳು ಕೆ.ಜಿ.ಎಫ್.ನ ಎಫ್.ಜಿ.ಸಿ ಕಾಲೇಜಿಗೆ ಹೋಗಿದ್ದು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
Uncategorized |
Permalink
Posted by spkgf
September 26, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೯-೨೦೦೮ ರಂದು ೧೫೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್, ಉರಿಗಾಂ ಅಂಚೆ, ಕೃಷ್ಣಾಪುರ ಗ್ರಾಮದ ವಾಸಿ ಶ್ರೀ ಶೇಕ್ ಅಬ್ದುಲ್ ಬಿನ್ ಶೇಕ್ ಮೆಹಬೂಬ್ ಎಂಬುವರು ಬಂಗಾರಪೇಟೆ ತಾಲೂಕು ನಾಗಶೆಟ್ಟಿಹಳ್ಳಿ ಗ್ರಾಮದ ಬಳಿ ಇರುವ ಸ.ನಂ. ೯೩ ರ ಜಮೀನಿನಲ್ಲಿ ಟ್ರಾಕ್ಟರ್ ನಿಂದ ಮಣ್ಣು ಇಳಿಸುತ್ತದ್ದಾಗ ಬೇತಮಂಗಲ ವಾಸಿ ಎಂ.ಮುನಿವೆಂಕಟಪ್ಪ ಎಂಬುವನು ಶೇಕ್ ರವರನ್ನು ಕುರಿತು ಈ ಜಮೀನಿನಲ್ಲಿ ಮಣ್ಣು ಇಳಿಸಬಾರದೆಂತ ಜಗಳ ತೆಗೆದು ಇಲ್ಲಿ ಮಣ್ಣು ಇಳಿಸಿದರೆ ನಿನ್ನನ್ನು ಪತ್ತೆ ಇಲ್ಲದೆ ಮಾಡುತ್ತೇನೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
September 25, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
September 24, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕನ್ನ ಕಳವಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣದ ದಾಖಲಾಗಿರುತ್ತದೆ. ದಿನಾಂಕ ೨೪-೦೯-೨೦೦೮ ರಂದು ಬೆಳಿಗ್ಗೆ ಸುಮಾರು ೦೪೦೦ ಗಂಟೆಯಲ್ಲಿ ಯಾರೋ ದುಷ್ಕರ್ಮಿಗಳು ಬಂಗಾರಪೇಟೆ ತಾಲೂಕಿನ ಬಡಮಾಕನಹಳ್ಳಿ-ಜಯಮಂಗಲ ಕ್ರಾಸ್‌ನಲ್ಲಿರುವ ವಿಮಲ ಹೃದಯ ವಿದ್ಯಾಸಂಸ್ಥೆ ಕಛೇರಿಯ ಬಾಗಿಲಿನ್ನು ಹೊಡೆದು ಒಳಗೆ ಪ್ರವೇಶಿಸಿ ಒಂದು ಹೆಚ್.ಸಿ.ಎಲ್. ಕಂಪ್ಯೂಟರ್, ಎರಡು ಸಿ.ಪಿ.ಯು ಮತ್ತು ಒಂದು ಯು.ಪಿ.ಎಸ್. ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೯-೨೦೦೮ ರಂದು ಬೆಳಿಗ್ಗೆ ಸುಮಾರು ೦೯೩೦ ಗಂಟೆಯಲ್ಲಿ ಶ್ರೀ ಗೋವಿಂದಪ್ಪ ಬಿನ್ ಮುನಿಯಪ್ಪ, ವಯಸ್ಸು ೪೫ ವರ್ಷ, ವಾಸ: ದೆಬ್ಬನಹಳ್ಳಿ ಗ್ರಾಮ, ಬಂಗಾರಪೇಟೆ ತಾಲೂಕು ರವರ ಬಾಬತ್ತು ಜಮೀನಿನಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನು ಹುಣಸನಹಳ್ಳಿ ಗ್ರಾಮದ ನಂಜಪ್ಪ ಎಂಬುವರು ಕಟಾವು ಮಾಡುತ್ತಿದ್ದು, ಇದನ್ನು ಕೇಳಿದ ಶ್ರೀ ಗೋವಿಂದಪ್ಪನನ್ನು ನಂಜಪ್ಪ ರವರು ಒಂದು ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾನೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
September 23, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೯-೨೦೦೮ ರಂದು ರಾತ್ರಿ ೨೦೧೫ ಗಂಟೆಯಲ್ಲಿ ಬಂಗಾರಪೇಟೆ ತಾಲೂಕಿನ ಬೇತಮಂಗಲ ಗ್ರಾಮದ ವಾಸಿಗಳಾದ ಜೋಸಲಿ ಕೋಂ ಮಗಿ, ಮಗಿ ಹಾಗೂ ಇತರೆ ಇಬ್ಬರು ಅಂಗಳ ಗ್ರಾಮದ ಶ್ರೀಮತಿ ನೀಲಮ್ಮ ಎಂಬುವರೊಂದಿಗೆ ಜಗಳ ಕಾದು ರಾಡು ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ. ಈ ಕೃತ್ಯವು ಅಂಗಳ ಗ್ರಾಮದಲ್ಲಿ ನಡೆದಿರುತ್ತದೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
September 22, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೯-೨೦೦೮ ರಂದು ಸಂಜೆ ೧೯೪೫ ಗಂಟೆಯಲ್ಲಿ ಕೆ.ಜಿ.ಎಫ್.ನ ಆಂಡ್ರಸನ್‌ಪೇಟೆಯಲ್ಲಿರುವ ಕೃಷ್ಣ ಹೋಟೆಲ್ ನಲ್ಲಿ ೧)ಶರತ್ ಬಿನ್ ಮುನಿಯ, ೨)ಮಣಿದನ್, ೩)ಮಣಿ, ೪)ಪೀಟರ್ ಎಲ್ಲರೂ ೨ನೇ ಬ್ಲಾಕ್, ಆಂಡ್ರಸನ್‌ಪೇಟೆ ವಾಸಿಗಳು ತಿನ್ನುತ್ತಿದ್ದಾಗ ಶ್ರೀ ಬಿಲ್ಲ (೨೬) ಬಿನ್ ಲೇಟ್ ಯಾಕುಬ್, ಲೂರ್ದನಗರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್. ರವರು ನೀರು ಕೊಡಲು ನಿರಾಕರಿಸಿದ್ದಕ್ಕೆ ಇವರನ್ನು ಮೇಲ್ಕಂಡ ನಾಲ್ಕೂ ಜನರು ಚಾಕು, ಕೋಲು ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ೦೨ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೨-೦೯-೨೦೦೮ ರಂದು ಬೆಳಿಗ್ಗೆ ೧೧೩೦ ಗಂಟೆಯಲ್ಲಿ ಬಂಗಾರಪೇಟೆ ತಾಲೂಕಿನ ಪೊಟ್ಟೀಪಲ್ಲಿ ಗ್ರಾಮದಲ್ಲಿ ಆಸ್ತಿ ವಿಚಾರದಲ್ಲಿ ಕೆ.ಜಿ.ಎಫ್.ನ ಸ್ವರ್ಣಾನಗರದ ವಾಸಿ ಶ್ರೀ ನರಸಿಂಹರೆಡ್ಡಿ ಬಿನ್ ಮುನಿರೆಡ್ಡಿ ರವರಿಗೂ ಪೊಟ್ಟೇಪಲ್ಲಿ ಗ್ರಾಮದ ವಾಸಿಗಳಾದ ಗೋಪಾಲ್‌ರೆಡ್ಡಿ ಮತ್ತು ಮುನಿರೆಡ್ಡಿ ಎಂಬುವರುಗಳಿಗೆ ಜಗಳ ಆಗಿ ಕಲ್ಲಿನಿಂದ ಹೊಡೆದುಕೊಂಡು ರಕ್ತಗಾಯಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕೇಸು ಮತ್ತು ಪ್ರತಿ ಕೇಸು ದಾಖಲಾಗಿರುತ್ತದೆ.
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೯-೨೦೦೮ ರಂದು ರಾತ್ರಿ ೨೧೦೦ ಗಂಟೆಯಲ್ಲಿ ಕೆನಡೀಸ್ ಕರಿಮಾರಿಯಮ್ಮ ಲೈನ್‌ನಲ್ಲಿ ಶ್ರೀ ಎಸ್.ಅನ್ಬು (೩೬) ಬಿನ್ ಲೇಟ್ ಷಣ್ಮುಗಂ, ಕರಿಮಾರಿಯಮ್ಮ ಲೈನ್ ರವರೊಂದಿಗೆ ೧)ರಮೇಶ್, ೨)ಸಂತೋಷ್, ೩)ಸಂಪತ್ ರವರು ಹಳೆ ದ್ವೇಷದಿಂದ ಜಗಳ ಕಾದು ಕಟ್ಟಿಗೆ ಮತ್ತು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೯-೨೦೦೮ ರಂದು ರಾತ್ರಿ ೧೯೩೦ ಗಂಟೆಯಲ್ಲಿ ಕೆ.ಜಿ.ಎಫ್.ನ ರಾಬರ್ಟ್‌ಸನ್‌ಪೇಟೆಯಲ್ಲಿರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಬೋರಿಲಾಲ್‌ಪೇಟೆ ವಾಸಿಗಳಾದ ಸುರೇಶ್, ವಿಜಿ ಮತ್ತು ಇತರರು, ಶ್ರೀನಿವಾಸ (೨೩) ಬಿನ್ ಗಂಗಾಧರಚಾರಿ, ಪೆದ್ದಪಲ್ಲಿ ರವರ ಬಳಿ ಸುರೇಶ್ ರವರ ಹೆಂಡತಿಗೆ ಪೋನ್ ಮಾಡಿದ ವಿಚಾರದಲ್ಲಿ ಜಗಳ ತೆಗೆದು ಸ್ಟೀಲ್ ಬಳೆಯಿಂದ ಮುಖಕ್ಕೆ ಹೊಡೆದು ರಕ್ತಗಾಯಪಡಿಸಿ ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ೦೨
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
September 19, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೦೯-೨೦೦೮ ರಂದು ೨೦೪೫ ಗಂಟೆ ಸಮಯದಲ್ಲಿ ಸತೀಶ್ @ ಕುಟ್ಟಿ ಎಂಬುವನು ತನ್ನ ಆಟೋ ಸಂಖ್ಯೆ ಕೆಎ-೦೬-ಎ-೧೪೯೧ ಅನ್ನು ಬಂಗಾರಪೇಟೆಯ ಶ್ರೀನಿವಾಸ ಹೋಟಲ್ ಮುಂಭಾಗದ ಮುಖ್ಯೆ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಸಿ ಬಂಗಾರಪೇಟೆ ದೇಶಿಹಳ್ಳಿ ವಾಸಿ ಶ್ರೀಮತಿ ಲಕ್ಷ್ಮಿ (೩೨) ಕೋಂ ವೆಂಕಟೇಶ್ ಎಂಬುವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಲಕ್ಷ್ಮಿಯವರ ತಲೆಗೆ ರಕ್ತಗಾಯವಾಗಿದ್ದು, ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ ೧೮-೦೯-೨೦೦೮ ರಂದು ಮೃತ ಪಟ್ಟಿರುತ್ತಾರೆ.
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೦೯-೨೦೦೮ ರಂದು ೦೯೫೦ ಗಂಟೆ ಸಮಯದಲ್ಲಿ ನಾರಾಯಣಸ್ವಾಮಿ ಎಂಬುವರು ಬೋಲೆರೋ ವಾಹನ ಸಂಖ್ಯೆ ಕೆಎ-೫೨-ಎಂ-೪೪೫ ವಾಹನ ಚಾಲಕನಾಗಿದ್ದು ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆ ಹಂಚಾಳ ಗೇಟ್ ಬಳಿ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಹಂಚಾಳದ ಶಾಲೆಯಲ್ಲಿ ೮ನೇ ತರಗತಿ ವಿದ್ಯಾಬ್ಯಾಸ ಮಾಡುತ್ತಿರುವ ವಿಧ್ಯಾರ್ಥಿ ವಿಜಯ್ ಕುಮಾರ್ @ ಅಜಯ್ ಎಂಬುವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ರಕ್ತಗಾಯವಾಗಿದ್ದು, ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ಮೃತ ಪಟ್ಟಿರುತ್ತಾರೆ.
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf