ದಿನದ ಅಪರಾಧಗಳ ಪಕ್ಷಿನೋಟ ೩೦ನೇ ಆಗಸ್ಟ್ ೨೦೦೮

 ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೮-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ:  ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ಇಲ್ಲ    

-ಮೋಸ/ವಂಚನೆ ಪ್ರಕರಣಗಳು: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಮೋಸ/ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೩-೨೦೦೪ ರಂದು ಕೆ.ಜಿ.ಎಫ್, ಮಾರಿಕುಪ್ಪಂ, ವಿಓಸಿ ನಗರ, ನಂ. ೧೮೭ ವಾಸಿ ಎಂ.ರಾಜು ಬಿನ್ ಮನ್ಮದನ್ ಎಂಬಾತನು ಜಾತಿ ಪ್ರಮಾಣ ಪತ್ರವನ್ನು ತಾಲೂಕು ದಂಡಾಧಿಕಾರಿಗಳು, ಬಂಗಾರಪೇಟೆ ಮತ್ತು ೮ನೇ ತರಗತಿ ವ್ಯಾಸಂಗ ಮಾಡಿರುವುದಾಗಿ ಪ್ರಮಾಣ ಪತ್ರವನ್ನು ಸರ್ಕಾರಿ ಬಾಲಕ ಜೂನಿಯರ್‍ ಕಾಲೇಜು, ಕೆ.ಜಿ.ಎಫ್. ನಲ್ಲಿ ನಕಲಿ ದಾಖಲಾತಿಗಳನ್ನು ಪಡೆದು ಸಿ.ಆರ್‍.ಪಿ.ಎಫ್ ಅಧಿಕಾರಿಗಳಲ್ಲಿ ಹಾಜರುಪಡಿಸಿರುವುದಾಗಿ ಆರೋಪಣೆಯಾಗಿರುತ್ತದೆ. ಜಾತಿ ಪ್ರಮಾಣ ಪತ್ರ ಮತ್ತು ವ್ಯಾಸಂಗ ಮಾಡಿದ ಪ್ರಮಾಣ ಪತ್ರಗಳನ್ನು ಬಂಗಾರಪೇಟೆ ಮತ್ತು ಕೆ.ಜಿ.ಎಫ್.ನಲ್ಲಿ ಪಡೆದಿದ್ದು, ಈ ಎರಡು ಪ್ರಮಾಣ ಪತ್ರಗಳನ್ನು ಸಿ.ಆರ್‍.ಪಿ.ಎಫ್ ಗ್ರೂಫ್ ಸೆಂಟರ್‍, ಯಲಹಂಕ, ಬೆಂಗಳೂರಿನಲ್ಲಿ ಹಾಜರುಪಡಿಸಿರುವ ಅಂಶಗಳಾಗಿರುತ್ತದೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ      

ಇತರೆ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಆಕ್ಟ್‌ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೮-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಗೆನ್ನೇರಹಳ್ಳಿ ವಾಸಿ ಶ್ರೀ ಸಂದಮುನಿಸ್ವಾಮಿ ಬಿನ್ ಅಖಿಲಾಂಡಮುನಿಸ್ವಾಮಿ ಎಂಬುವರು ತಮ್ಮ ಕಾರ್ಯಕರ್ತರೊಂದಿಗೆ (ಬಿ.ಜೆ.ಪಿ) ಕೆ.ಜಿ.ಎಫ್‌ಗೆ ಹೋಗಲು ಸ್ಕೂಲ್ ಆಫ್ ಮೈನ್ಸ್ ಹತ್ತಿರ ಬರುತ್ತಿದ್ದಾಗ ಬೆಂಗಳೂರು ಎಕ್ಸ್‌ಪ್ರಸ್ ಪತ್ರಿಕೆಯ ಸಂಪಾಧಕ ಶ್ರೀನಿವಾಸ ಎಂಬುವರು ತನ್ನ ೨-೩ ಜನ ಸಹಚರರೊಂದಿಗೆ ಸ್ಕೂಲ್ ಆಪ್ ಮೈನ್ಸ್ ಗೋಡೆಯ ಮೇಲೆ ಮುನಿರತ್ನಿಂ ನಾಯ್ಡು ರವರಿಗೆ ಅವಮಾನವಾಗುವ ಮತ್ತು ಅವರ ಮಾನಕ್ಕೆ ಕುಂದು ಬರುವ ರೀತಿ ಲೇಖನ ಬರೆದಿದ್ದ, ಈ ಬಗ್ಗೆ ಸಂದಮುನಿಸ್ವಾಮಿ ಪ್ರಶ್ವಿಸಿದಕ್ಕೆ, ಶ್ರೀನಿವಾಸ ಸಂದಮುನಿಸ್ವಾಮಿಯನ್ನು ”ಹೊಲೆಯ ಮಾದಿಗ ನನ್ನ ಮಗನೆ ನೀನು ನಾಯ್ಡುಗೆ ಸಪೋರ್ಟ್‌ ಮಾಡುತ್ತೀಯಾ, ನಿನ್ನನ್ನು ನೋಡುತ್ತೇನೆ ಹೋಗೋ ಹೆಚ್ಚಿಗೆ ಮಾತನಾಡಿದರೆ ನಿನ್ನ ಮೇಲೆ ಸಹಾ ನನ್ನ ಪತ್ರಿಕೆಯಲ್ಲಿ ಕೆಟ್ಟದಾಗಿ ಬರೆಯುತ್ತೇನೆ” ಎಂದು ಜಾತಿ ನಿಂದನೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ       

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply