ದಿನದ ಅಪರಾಧಗಳ ಪಕ್ಷಿನೋಟ ೨೯ನೇ ಆಗಸ್ಟ್ ೨೦೦೮

 ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೮-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ:  ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ     

-ಸಾಧಾರಣ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೮-೨೦೦೮ ರಂದು ೧೮೪೫ ಗಂಟೆ ಸಮಯದಲ್ಲಿ ರಾಬರ್ಟ್‌‌ಸನ್‌ಪೇಟೆ, ಸುಮತಿ ನಗರ, ೩ನೇ ಕ್ರಾಸ್ ಮನೆ ಸಂಖ್ಯೆ ೪೪ ರ ವಾಸಿ ಶ್ರೀ ವೇಣುಗೋಪಾಲ್ ಬಿನ್ ಲೇಟ್ ಸ್ವಾಮಿ ಕಣ್ಣು ಎಂಬುವರು ತನ್ನ ವಾಚ್ ರಿಪೇರಿ ಮಾಡಿಸಲು ಜನರಲ್ ಆಸ್ಪತ್ರೆ ಮುಂಭಾಗ ನಡೆದುಕೊಂಡು ಬರುತ್ತಿದ್ದಾಗ ರಾಯಲ್ ಎನ್‌ಫೀಲ್ಡ್ ಬುಲೇಟ್ ವಾಹನ ಸಂಖ್ಯೆ ಸಿಟಿಕೆ-೧೨೧೫ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವೇಣು ಹಿಂಬದಿಗೆ ಡಿಕ್ಕಿ ಹೊಡೆದ ಪ್ರಯುಕ್ತ ವೇಣುರವರು ಕೆಳಗೆ ಬಿದ್ದು ತಲೆಗೆ ರಕ್ತಗಾಯವಾಗಿರುತ್ತದೆ.  

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ      

ಇತರೆ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಂಶಯಸ್ಪದವಾಗಿ ಕಂಡ ವ್ಯಕ್ತಯ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೮-೨೦೦೮ ರಂದು ೦೨೪೫ ಗಂಟೆ ಸಮಯದಲ್ಲಿ ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಮುಖ್ಯ ಪೇದೆ ೦೩ ಶ್ರೀ ಸುಬ್ರಮಣಿ  ಮತ್ತು ಸಿಪಿಸಿ ೧೬೨  ರವರು ರಾತ್ರಿ ಗಸ್ತಿನಲ್ಲಿದ್ದಾಗ ರಾಬರ್ಟ್‌‌ಸನ್‌ಪೇಟೆಯ ಸ್ವರ್ಣನಗರದ ಗಣೇಶ ದೇವಾಲಯ ಆವರಣದಲ್ಲಿ ಉತ್ತರ ಪ್ರದೇಶ ಮಾಹುಬದ ವಾಸಿ ಹಸ್ಮುಖ್ ಮೋತಿಲಾಲ್ ರಾಜ್‌ಪೂರ್‍ ಬಿನ್ ಲೇಟ್ ಮಹುಬ ಬಂಡಲಾಲ್ ಖಾನ್ ಎಂಬುವನು ಕತ್ತಲಲ್ಲಿ ಅವಿತುಕೊಂಡಿದ್ದು, ಗಸ್ತಿನಲ್ಲಿದ್ದವರನ್ನು ನೋಡಿ ಸ್ಥಳದಿಂದ ಈಡಲು ಯತ್ನಿಸಿದಾಗ ಸಂಶಯದಿಂದ ಹಿಡಿದುಕೊಂಡು ಪ್ರಶ್ನಿಸಲಾಗಿ ಆ ಸ್ಥಳದಲ್ಲಿ ಆವೇಳೆಯಲ್ಲಿ ಇರುವುದರ ಬಗ್ಗೆ ಸರಿಯಾದ ಸಮಜಾಯಿಷಿ ನೀಡಿರುವುದಿಲ್ಲ. ಆದ್ದರಿಂದ ಆರೋಪಿ ಕಳ್ಳತನ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿರುತ್ತಾನೆಂದು ಸಂಶಯದ ಮೇರೆಗೆ ಆವನಿಂದ ಉಂಟಾಗುವ ಅಪರಾಧವನ್ನು ತಪ್ಪಿಸುವ ಸಲುವಾಗಿ ಠಾಣೆಗೆ ಹಾಜರ್‍ ಪಡಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ       

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply