ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಆಗಸ್ಟ್ ೨೦೦೮

 ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೮-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ:  ಇಲ್ಲ 

ಸಾಧಾರಣ ಕಳ್ಳತನ: ೦೧

  •   ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೮-೨೦೦೮ ರಂದು ಬೆಳಿಗ್ಗೆ  ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮುಖ್ಯೆಪೇದೆ-೭೨, ೧೦೯ ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿದ್ದಾಗ ೧೧೦೦ ಗಂಟೆಯಲ್ಲಿ ಬಂದ ಖಚಿತ ಮಾಹಿತಿಯ ಮೇರೆಗೆ ಬುಲೆನ್ಸ್ ಶಾಫ್ಟ್ ಕಡೆ ಬಿಜಿಎಂಎಲ್‌ಗೆ ಸೇರಿದ ಬುಲೆನ್ಸ್ ಶಾಫ್ಟ್‌ನ ವೈಂಡಿಂಗ್ ರೂಮ್‌ನಲ್ಲಿರುವ ಯಂತ್ರೋಪಕರಣವನ್ನು ಕೆ.ಜಿ.ಎಫ್. ಆಂಡ್ರಸನ್‌ಪೇಟೆಯ ವಾಸಿಗಳಾದ ನಯಾಜ್‌ಪಾಷ, ರವಿ ಮತ್ತು ರಿಯಾಜ್‌ಪಾಷ ರವರುಗಳು ಗ್ಯಾಸ್ ಕಟರ್‌ನಿಂದ ಕಟ್‌ ಮಾಡು ಕಳವು ಮಾಡುತ್ತಿದ್ದು, ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದ್ದು, ಸಿಬ್ಬಂದಿಯವರೊಂದಿಗೆ ಆಸಾಮಿಗಳನ್ನು ಸುತ್ತುವರೆದು ದಸ್ತಗಿರಿಮಾಡಿರುತ್ತಾರೆ.

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೮-೩೦೦೮ ರಂದು ೨೦೪೫ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ರಾಬರ್ಟ್‌‌ಸನ್‌ಪೇಟೆ, ೬ನೇ ಕ್ರಾಸ್, ನರಸಿಂಹಯ್ಯ ಕಾಂಪೌಂಡ್ ವಾಸಿ ಶ್ರೀ ರವಿಕುಮಾರ್‍ (೪೪) ಬಿನ್ ಲೇಟ್ ವೈ.ಎಂ.ವೆಂಕಟಪ್ಪ ಎಂಬುವರು ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೮-ಕೆ-೪೦೪೪ ರಲ್ಲಿ ಬೆಮೆಲ್ ನಗರದ ಆಲದಮರದಿಂದ ರಾಬರ್ಟ್‌‌ಸನ್‌ಪೇಟೆಗೆ ಹೋಗಲು ಬಂಗಾರಪೇಟೆ-ಕೆ.ಜಿ.ಎಫ್. ಮುಖ್ಯ ರಸ್ತೆಯ ಶ್ರೀ ಪೊನ್‌ಮಲೈ ದೇವಾಲಯ ಮುಂಭಾಗ ಬರುತ್ತಿರುವಾಗ ದ್ವಿಮುಖ ರೋಡ್ ಡಿವೈಡರ್‌ಗೆ ಸ್ವತಃ ಡಿಕ್ಕಿ ಹೊಡೆದ ಪ್ರಯುಕ್ತ ರವಿಕುಮಾರ್‍ ಕೆಳಕ್ಕೆ ಬಿದ್ದು ತಲೆಗೆ ರಕ್ತಗಾಯವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ.        

-ಸಾಧಾರಣ: ೦೧

  •    ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೮-೨೦೦೮ ರಂದು ೧೧೦೦ ಗಂಟೆ ಸಮಯದಲ್ಲಿ ಹಂಗಳಗ್ರಾಮದ ವಾಸಿ ಶ್ರೀ ವೆಂಕಟಪ್ಪ (೫೦) ಮತ್ತು ಕೃಷ್ಣಪ್ಪ, ಲಕ್ಷ್ಮಮ್ಮ, ವೆಂಕಟಲಕ್ಷ್ಮಮ್ಮ ಎಂಬುವರುಗಳು ಅದೇ ಗ್ರಾಮದ ಅಜರತ್ ರವರ ಆಟೋ ಸಂಖ್ಯೆ ಕೆಎ-೦೩-೧೬೭೮ ರಲ್ಲಿ ಗುಟ್ಟಹಳ್ಳಿಯಿಂದ ಹಂಗಳ ಗ್ರಾಮಕ್ಕೆ ಹೋಗುತ್ತಿದ್ದಾಗ, ಹುಲ್ಕೂರು ಗ್ರಾಮಕ್ಕೆ ಹೋಗುವ ಶ್ರೀ ಆಂಜಿನೇಯ್ಯಸ್ವಾಮಿ ದೇವಾಲಯ ಬಳಿ ತಿರುವಿನಲ್ಲಿ ಸದರಿ ಆಟೋವಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪ್ರಯುಕ್ತ ಸದರಿ ಆಟೋ ತಲೆಕೆಳಗಾಗಿ ಬಿದ್ದಿದ್ದು ಎಲ್ಲರಿಗೂ ರಕ್ತಗಾಯವಾಗಿರುತ್ತದೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ       

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply