ದಿನದ ಅಪರಾಧಗಳ ಪಕ್ಷಿನೋಟ ೨೪ನೇ ೨೦೦೮

 ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೮-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ:  ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ಇಲ್ಲ 

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ      

ಇತರೆ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಂಶಯಸ್ಪದವಾಗಿ ಕಂಡ ವ್ಯಕ್ತಯ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೮-೨೦೦೮ ರಂದು ೦೩೦೦ ಗಂಟೆ ಸಮಯದಲ್ಲಿ ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯ ಮುಖ್ಯಪೇದೆ ೩೧ ಶ್ರೀ ರಾಮರೆಡ್ಡಿ ಮತ್ತು ಸಿಬ್ಬಂದಿಯಾದ ಸಿಪಿಸಿ ೧೭೯, ೩೨೩ ಮತ್ತು ೪೮ ರವರುಗಳು ರಾತ್ರಿ ವಿಷೇಶ ಗಸ್ತಿನಲ್ಲಿದ್ದಾಗ ರಾಬರ್ಟ್‌‌ನಸ್‌ಪೇಟೆ ಇರುದಿಯಪುರಂನ ಶ್ರೀ ಮಾರಿಯಮ್ಮ ದೇವಾಲಯ ಬಳಿ ಬಂಗಾರಪೇಟೆ, ಸೇಠ್ ಕಾಂಪೌಂಡ್ ವಾಸಿ ಮುಬಾರಕ್ (೨೨) ಬಿನ್ ಮೊಹಬೂಬ್ ಎಂಬುವನು ಕತ್ತಲಲ್ಲಿ ಅವಿತುಕೊಂಡಿದ್ದು ಗಸ್ತಿನಲ್ಲಿದ್ದವರನ್ನು ನೋಡಿ ಸ್ಥಳದಿಂದ ಈಡಲು ಯತ್ನಿಸಿದಾಗ ಸಂಶಯದಿಂದ ಹಿಡಿದುಕೊಂಡು ಪ್ರಶ್ನಿಸಿದಾಗ ಆ ಸ್ಥಳದಲ್ಲಿ ಆ ವೇಳಯಲ್ಲಿ ಇರುವುದರ ಬಗ್ಗೆ ಸರಿಯಾದ ಸಮಜಾಯಿಷಿ ನೀಡಿರುವುದಿಲ್ಲ. ಆದ್ದರಿಂದ ಆರೋಪಿ ಕಳ್ಳತನ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿರುತ್ತಾನೆಂದು ಸಂಶಯದ ಮೇರೆಗೆ ಆತನಿಂದ ಉಂಟಾಗುವ ಅಪರಾಧವನ್ನು ತಪ್ಪಿಸುವ ಸಲುವಾಗಿ ಠಾಣೆಗೆ ಹಾಜರ್‍ ಪಡಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗ ಕಾಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೦೮-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಇರದಿಯಪುರಂ, ಮನೆ ಸಂಖ್ಯೆ ೧೪೦೫ ವಾಸಿ ಸುಂದರ್‍ ರಾಜ್ ರವರ ಮಗನಾದ ಮಹೇಶ್ (೧೬) ಎಂಬುವನಿಗೆ ಬುದ್ದಿ ಮಂದವಾಗಿರುವುದರಿಂದ ಮನೆಯಿಂದ ಹೋದವನು ಮತ್ತೆ ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ       

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply