ದಿನದ ಅಪರಾಧಗಳ ಪಕ್ಷಿನೋಟ ೨೨ನೇ ಆಗಸ್ಟ್‌ ೨೦೦೮

 ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೮-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ:  ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ಇಲ್ಲ 

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •    ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಕೆಸಿರೆಡ್ಡಿಗಾನಹಳ್ಳಿಯಲ್ಲಿ ಸಂಭಂವಿಸಿರುತ್ತದೆ.  ದಿನಾಂಕ: ೧೮.೦೮.೨೦೦೮ ರಂದು ರಾತ್ರಿ ೧.೦೦ ಗಂಟೆ ಸಮಯದಲ್ಲಿ ಕೆಸಿರೆಡ್ಡಿಗಾನಹಳ್ಳಿ ವಾಸಿಗಳಾದ ಕೃಷ್ಣಪ್ಪ ಮತ್ತು ಅಂಗಡಿ ರಾಜಪ್ಪನಿಗೆ ಗಲಾಟೆಯಾಗಿದ್ದು, ಈ ವಿಷಯವನ್ನು ಶ್ರೀ. ಸುಬ್ರಮಣಿ ಬಿನ್‌ ಸೋಮಸುಂದರ್‌ , ಕೆ.ಜಿ. ಹಳ್ಳಿ, ಬೆಂಗಳೂರು ರವರು ವಿಚಾರ ಮಾಡುತ್ತಿದ್ದಾಗ, ಅದೇ ಗ್ರಾಮದ ವಾಸಿಗಳಾದ ಶ್ರೀರಾಮಪ್ಪ, ರಮೇಶ ಅಮರನಾರಾಯಣ ಮತ್ತು ತಿಪ್ಪಯ್ಯ ರವರುಗಳು ನೀನು ಕೃಷ್ಣಪ್ಪನಿಗೆ ಸಹಾಯ ಮಾಡಲು ಬೆಂಗಳೂರಿನಿಂದ ಬಂದಿದ್ದಿಯ ಎಂತ ಜಗಳ ಕಾದು ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ. ಇತ್ಯಾದಿ.

ಇತರೆ: ೦೧

  •      ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯ ಕಲಾಪಗಳಿಗೆ ಅಡಚಣೆ ಉಂಟು ಮಾಡಿದಂತೆ ಒಂದು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೨.೦೮.೨೦೦೮ ರಂದು ಬೆಳಿಗ್ಗೆ ೧೧.೪೫ ಸಮಯದಲ್ಲಿ ಕೆ.ಜಿ.ಎಫ್‌ ಅಪರ ಮತ್ತು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಸಿ.ಸಿ. ಸಂಖ್ಯೆ ೭೭೪/೨೦೦೮ರಲ್ಲಿನ ಆರೋಪಿ ಬಾಬು ಅನ್ನು ಬೆಂಗಾವಲು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಬಾಬು ತನ್ನ ಚಪ್ಪಲಿಯನ್ನು ಪ್ರಿಸೈಡಿಂಗ್‌ ಅಫೀಸರ್‌ ಕಡೆ ಎಸೆದು ನ್ಯಾಯಾಲಯದ ಕಲಾಪಗಳಿಗೆ ಅಡಚಣೆ ಉಂಟು ಮಾಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ       

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply