ದಿನದ ಅಪರಾಧಗಳ ಪಕ್ಷಿನೋಟ ೨೦ನೇ ಆಗಸ್ಟ್‌ ೨೦೦೮

 ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೮-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ:  ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ಇಲ್ಲ 

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ  

ಇತರೆ: ೦೨

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅತ್ಮಹತ್ಯೆಗೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೦೮-೨೦೦೮ ರಂದು ಬಂಗಾರಪೇಟೆ ತಾಲೂಕಿನ ಲಕ್ಷ್ಮೀಸಾಗರದ ವಾಸಿಗಳಾದ ಲತಮ್ಮ (೧೯) ಬಿನ್ ಜಗನ್ ಎಂಬುವರನ್ನು ಸೀನಪ್ಪ ಅಲಿಯಾಸ್ ಶ್ರೀನಿವಾಸ್ ಎಂಬುವನು ಪ್ರೀತಿಸಿ ಮದುವೆ ಮಾಡಿಕೊಳ್ಳುತ್ತೇನೆಂತ ನಂಬಿಸಿ ಮೋಸ ಮಾಡಿರುತ್ತಾನೆಂತ ಲತಮ್ಮ ಮತ್ತು ಅವರ ಚಿಕ್ಕಪ್ಪ ನಂಜುಂಡ (೨೬) ಬಿನ್ ಮುನಿವೆಂಕಟಪ್ಪ ಎಂಬುವರುಗಳು ಬೇತಮಂಗಲ ಪೊಲೀಸ್ ಠಾಣೆ ಮುಂಭಾಗದಲ್ಲಿ ಜಿಗುಪ್ಸೆಗೊಂಡು ಇಬ್ಬರೂ ಸೀಮೆಎಣ್ಣೆ ಮೈ ಮೇಲೆ ಸುರಿದುಕೊಂಡು ಆತ್ಯಹತ್ಯೆಗೆ ಪ್ರಯತ್ತಿಸಿರುತ್ತಾರೆ.
  •   ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ಅಶ್ಲೀಲ ಸಿ.ಡಿ.ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೦೮-೨೦೦೮ ರಂದು ಸಂಜೆ ೧೯೦೦ ಗಂಟೆ ಸಮಯದಲ್ಲಿ ವಿಜಯನಗರದ ಮ್ಯೂಸಿಕ್ ವಲ್ಡ್ ಸೆಂಟರ್‌ನಲ್ಲಿ ಚಿನ್ನಸೋಮಲಿಂಗಂ (೩೨) ಬಿನ್ ಲೇಟ್ ಸೋಮಣ್ಣ ಎಂಬುವನು ಅಶ್ಲೀಲ ಸಿ.ಡಿ.ಗಳು ಮಾರಾಟ ಮಾಡುತ್ತಿದ್ದಾನೆಂತ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ದಾಳಿ ಮಾಡಿ ೦೭ ಅಶ್ಲೀಲ ಸಿ.ಡಿ. ಗಳು, ಒಂದು ಡಿ.ವಿ.ಡಿ. ಮತ್ತು ಒಂದು ಟಿ.ವಿ. ಹಾಗೂ ೧,೫೧೦/- ರೂ.ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ       

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply