ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೦೮-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೦೮-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಪಾಕರಹಳ್ಳಿ ಗ್ರಾಮದ ವಾಸಿ ಸಾಕಪ್ಪ, ಮುನಿನಾರಾಯಣಪ್ಪ, ಅಮರಮ್ಮ, ನಾಗರಾಜ ಮತ್ತು ದೊಡ್ಡಕುಮಾರ್ ರವರುಗಳು ಜಮೀನನ್ನು ಮಾರಾಟ ಮಾಡುವ ವಿಷಯದಲ್ಲಿ ಸಾಕಪ್ಪನವರ ಪತ್ನಿ ಶ್ರೀಮತಿ ಪಾರ್ವತಮ್ಮ ಜಮೀನು ಮಾರಾಟ ಮಾಡಬಾರದೆಂದು ಅಡ್ಡಿ ಪಡಿಸಿದಕ್ಕೆ ೫ ಜನ ಸೇರಿ ಪಾರ್ವತಮ್ಮನನ್ನು ಒಂದು ಮಚ್ಚಿನಿಂದ ತಲೆಗೆ ಮತ್ತು ಹಿಟ್ಟಿನ ಕೋಲಿನಿಂದ ಮೈಮೇಲೆ ಹೊಡೆದು ರಕ್ತಗಾಯಪಡಿಸಿ ಸಾಯಿಸಿರುತ್ತಾರೆ.
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ದೂರು ಪ್ರತಿ ದೂರಿಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೦೮-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ರಾಬರ್ಟ್‌ಸನ್‌ಪೇಟೆ, ಗೌತಂನಗರ, ೪ನೇ ಕ್ರಾಸ್, ಮನೆ ಸಂಖ್ಯೆ ೪೨೯ರ ವಾಸಿ ಮೇರಿ ಫ್ರಾನ್ಸಿಸ್ ಎಂಬುವರು ರಾಬರ್ಟ್‌ಸನ್‌ಪೇಟೆ, ಸುಮತಿನಗರ, ೩ನೇ ಕ್ರಾಸ್ ವಾಸಿ ಅಮಲೂರ್ ಪವಂ ಎಂಬುವರ ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಅಮಲೂರ್ ಮತ್ತು ಇನ್ನೀಬ್ಬರು ಸೇರಿಕೊಂಡು ಮೇರಿ ರವರೊಂದಿಗೆ ವಿನಾ ಕಾರಣ ಜಗಳ ಕಾದು, ಕೆಟ್ಟ ಮಾತುಗಳಿಂದ ಬೈದುಕೊಂಡಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


