ದಿನಸ ಅಪರಾಧಗಳ ಪಕ್ಷಿನೋಟ ೨೭ನೇ ಜುಲೈ ೨೦೦೮

 ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೭-೨೦೦೮ ರಂದು ೦೧೩೦ ರಿಂದ ೦೬೦೦ ಗಂಟೆ ಸಮಯದಲ್ಲಿ ಯಾರೋ ಕಳ್ಳರು ಬಂಗಾರಪೇಟೆಯ ಬೂದಿಕೋಟೆ ರಸ್ತೆಯ ಮನೆ ಸಂ. ೩೨೧೭ ರ ವಾಸಿ ಶ್ರೀ ಸೈಯದ್ ಖತೀಬ್‌ಯಲ್ಲಾ ಎಂಬುವರ ಮನೆಯ ಕಾಂಪೌಂಡ್ ಮೇಲ್ಬಾಗ ಹತ್ತಿ ಮನೆಯ ಮೇಲೆ ಕಿಟಿಕಿಯಲ್ಲಿ ಒಂದು ನೀರಿನ ಪೈಪ್‌ಗೆ ಕಂಬಿಯನ್ನು ಕಟ್ಟಿ ಮನೆಯ ಶೋಕೇಷ್ ಮೇಲೆ ಇಟ್ಟಿದ್ದ ಒಂದು ಮಾಂಗಲ್ಯ ಸರ, ಒಂದು ಜೊತೆ ಚಿನ್ನದ ಕೈಬಳೆಗಳು ಹಾಗೂ ನಗದು ಹಣ ೯೫೦೦/- ರೂಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲಾ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ   

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ  

-ಸಾಧಾರಣ: ಇಲ್ಲ 

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ  

ಇತರೆ: ೦೨

  •   ಚಾಂಪಿಯನ್‌ರೀಪ್ಸ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೭-೨೦೦೮ ರಂದು ೧೧೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಚಾಂಪಿಯನ್‌ರೀಫ್ಸ್, ಡಬ್ಲ್ಯೂಟಿ ಬ್ಲಾಕ್, ಮನೆ ಸಂ. ೩೫೫ ಶ್ರೀ ಡ್ಯಾನಿಯಲ್ ಬಿನ್ ಸೆಲ್ವರಾಜ್ ಎಂಬುವರು ತನ್ನ ತಾಯಿಯವರ ವಾರ್ಷಿಕ ಪುಣ್ಯತಿಥಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆಹ್ವಾನ ಪತ್ರಿಕೆಯಲ್ಲಿ ಕೆ.ಜಿ.ಎಫ್ ಶಾಸಕರಾದ ಶ್ರೀ ವೈ.ಸಂಪಂಗಿ ರವರನ್ನು ಆಹ್ವಾನಿಸಿದ್ದು, ತನ್ನ ಲೈನಿನ ವಾಸಿ ನಗರಸಭೆ ಸದಸ್ಯರಾದ ಅಶೋಕ್ ಎಂಬಾತನು ಮನೆ ಬಳಿ ಇರುವ ರೀಡಿಂಗ್ ರೂಮಿನ ಬಳಿ ಕರೆದು ಇದು ನಮ್ಮ ಆರ್‍.ಪಿ.ಐ ಪಕ್ಷದ ಏರಿಯಾ, ಈ ಏರಿಯಾದೊಳಗೆ ಬಿ.ಜೆ.ಪಿ ಪಕ್ಷದವರನ್ನು ಕರೆಸಿದ್ದಿಯಾ ಎಂದು ಕೆಟ್ಟ ಮಾತುಗಳಿಂದ ಬೈದು ಕೈಯಿಂದ ತುಟಿಗಳ ಮೇಲೆ ಗುದ್ದಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
  • ಚಾಂಪಿಯನ್‌ರೀಪ್ಸ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೭-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್., ಚಾಂಪಿಯನ್‌ರೀಫ್ಸ್ ಇ.ಟಿ ಬ್ಲಾಕ್ ವಾಸಿ ಶ್ರೀ ಕುಮಾರ್‍ @ ಜಯಕುಮಾರ್‍ ಎಂಬುವರು ತಮ್ಮ ಮನೆಯ ಬಳಿ ನೀರು ಹಿಡಿಯುವ ವಿವಾರದಲ್ಲಿ ಜಗಳ ಬಿಡಿಸಲು ಹೋದಾಗ ಕಿರುಬಾಕರನ್‌, ರಾಮು ಮತ್ತು ಪ್ರವೀಣ್ ರವರು ತನ್ನ ತಮ್ಮನ ಮನೆಯ ಬಳಿಗೆ ಬಂದು ತನ್ನ ತಮ್ಮನ್ನು ಹೊಡೆದು ರಕ್ತಗಾಯಪಡಿಸಿರುತ್ತಾರೆ.   

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply