ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲಾ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೭-೨೦೦೮ ಕ್ಕೆ ಸುಮಾರು ೮ ವರ್ಷಗಳ ಹಿಂದೆ ಮುಳಬಾಗಲು ತಾಲೂಕು ವಾಸಿ ಶ್ರೀಮತಿ ಚಂದ್ರಕಳಾ ಎಂಬುವರನ್ನು ಬಂಗಾರಪೇಟೆ ತಾಲೂಕು ಕೇತಗಾನಹಳ್ಳಿ ಗ್ರಾಮದ ವಾಸಿ ನಾಗರಾಜಪ್ಪ ಬಿನ್ ಚಿನ್ನಪ್ಪ ಎಂಬುವರೊಂದಿಗೆ ಮದುವೆಯಾಗಿದ್ದು, ಒಂದೆರಡು ವರ್ಷ ಹಂಡ ಹೆಂಡತಿ ಅನ್ಯೋನ್ಯವಾಗಿದ್ದು ಅವರಿಗೆ ಒಂದು ಹಂಡು ಮತ್ತು ಒಂದು ಹೆಣ್ಣು ಮಕ್ಕಳಾಗಿದ್ದು, ನಂತರದ ದಿನಗಳಲ್ಲಿ ಸದರಿ ಚಂದ್ರಕಳಾರವರಿಗೆ ಆಕೆಯ ಗಂಡ ಮತ್ತು ಗಂಡನ ಅಣ್ಣ ವೆಂಕಟೇಶಪ್ಪ ರವರು ಆಗಾಗ ಕಟ್ಟಮಾತುಗಳಿಂದ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ತವರಿಗೆ ಹೋಗಿ ಹಣ ತೆಗೆದುಕೊಂಡು ಬರುವಂತೆ ಒತ್ತಾಯಿಸುತ್ತಿದ್ದರಿಂದ ಚಂದ್ರಕಳಾ ರವರು ಮಾನಸಿಕ ಹಿಂಸೆ ತಾಳಲಾರದೆ ದಿನಾಂಕ ೨೫-೦೭-೨೦೦೮ ರಂದು ೧೨೩೦ ಗಂಟೆಯಲ್ಲಿ ನೇಣುಹಾಕಿಕೊಂಡು ಮೃತ ಮಟ್ಟಿರುತ್ತಾಲೆ.
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೭-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಬೆಂಗಳೂರಿನ ಹೊಸ ತಿಪ್ಪಸಂದ್ರ ವಾಸಿ ಶ್ರೀ ವಿಕ್ರಮ್ ಬಿನ್ ಶ್ರೀನಿವಾಸ್ ಎಂಬುವರು ತನ್ನ ಕಾರ್ ಸಂಖ್ಯೆ ಕೆಎ-೦೭-ಎಂ-೧೬೯೯ ಅನ್ನು ರಾಬರ್ಟ್‌ಸನ್‌ಪೇಟೆಯ ಬಿ.ಎಂ. ರಸ್ತೆಯಲ್ಲಿರುವ ಕಾರ್ಪೋರೇಷನ್ ಬ್ಯಾಂಕಿನ ಸಮೀಪ ರಸ್ತೆಯ ಎಡಬದಿಯಲ್ಲಿ ನಿಲ್ಲಿಸುತ್ತಿದ್ದಾಗ ಆಟೋ ಸಂಖ್ಯೆ ಕೆಎ-೦೮-೧೫೯೯ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಹಿಸಿಕೊಂಡು ಬಂದು ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿರುತ್ತಾರೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೭-೨೦೦೮ ರಂದು ಶ್ರೀ ವೆಂಕಟೇಶ್.ಆರ್, ಪಿ.ಎಸ್.ಐ, ಬೇತಮಂಗಲ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಗಳೊಂದಿಗೆ ಬಂಗಾರಪೇಟೆ ತಾಲೂಕು ವೆಂಗಸಂದ್ರ ಗ್ರಾಮದ ಬಜಂತ್ರಿ ಪಿಳ್ಳಣ್ಣ ರವರ ಜಮೀನಿನಲ್ಲಿರುವ ಹುಣಸೇ ಮರದ ಕೆಳಗೆ ಕೃಷ್ಣ ಬಿನ್ ಚಿಕ್ಕವೆಂಕಟಪ್ಪ, ಬೇತಮಂಗಲ, ವೆಂಕಟೇಶ್ ಬಿನ್ ಪಿಳ್ಳಪ್ಪ, ಬಡಮಾಕನಹಳ್ಳಿ ಮತ್ತು ನಾರಾಯಣಸ್ವಾಮಿ ಬಿನ್ ಗೋವಿಂದಪ್ಪ, ಬಲಮಾಕನಹಳ್ಳಿ ಗ್ರಾಮದವರುಗಳು ಯಾವಯದೇ ರಹದಾರಿ ಇಲ್ಲದೆ ಜೂಜಾಟ ಆಡುತ್ತಿದ್ದವರನ್ನು ಮತ್ತು ಜೂಜಾತಕ್ಕೆ ಬಳಿಸಿದ ೫೨ ಕಾರ್ಡ್ಸ್ ಮತ್ತು ಜೂಜಾಟಕ್ಕೆ ಪಣವಾಗಿಟ್ಟಿದ್ದ ರೂ ೧೨೭೦/- ಗಳನ್ನು ವಷಪಡಿಸಿಕೊಂಡಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


