ದಿನದ ಅಪರಾಧಗಳ ಪಕ್ಷಿನೋಟ ೨೫ನೇ ಜೂನ್ ೨೦೦೮

 ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೭-೨೦೦೮ ರಂದು ಮದ್ಯಾನ ಸತ್ಯಶೀಲನ್ ಮಾಜಿ ಎಕ್ಸ್‌ಎಲ್ ಏಜೆಂನ್ಸಿಯ ಸೆಕ್ಯೂರಿಟಿ ಸೂಪರ್‌ವೈಸರ್‍ ರವರು ನಕಲಿ ಬೀಗದಕೈಯಿಂದ ಬಿ.ಜಿ.ಎಂ.ಎಲ್ ಸಂಸ್ಥೆಗೆ ಸೇರಿದ ಸೆಕ್ಯೂರಿಟಿ ಕಛೇರಿಯ ಬೀಗವನ್ನು ತೆಗೆದು ಒಳಗೆ ರಾಷ್ರೀಯ ನಾಕರ ಭಾವ ಚಿತ್ರಗಳನ್ನು, ಒಂದು ಟೈಪ್‌ರೈಟರ್‍ ಮತ್ತು ಪೀಠೋಪಕರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲಾ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •    ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೭-೨೦೦೮ ರಂದು ೧೨೪೫ ಗಂಟೆ ಸಮಯದಲ್ಲಿ ಆಟೋರಿಕ್ಷಾ ಸಂಖ್ಯೆ ಕೆಎ-೦೩-೪೬೫ರ ಚಾಲಕನು ಆಟೋದಲ್ಲಿ ಮತ್ತೊಬ್ಬ ಆಸಾಮಿಯನ್ನು ಕುಳ್ಳರಿಸಿಕೊಂಡು ಕೆ.ಜಿ.ಎಫ್. ಕಡೆಯಿಂದ ದಾಸರಹೊಸಹಳ್ಳಿ ಕಡೆ ಹೋಗಲು ಹೆಚ್.ಜೆ.ಆರ್‍ ಕಲ್ಯಾಣ ಮಂಟಪ ಮುಂಭಾಗ ಹೋಗುತ್ತಿರುವಾಗ ಎದರುಗಡೆಯಿಂದ ಅಂದರೆ ಬಂಗಾರಪೇಟೆ ಕಡೆಯಿಂದ ಕೆ.ಎಸ್.ಆರ್‍.ಟಿ.ಸಿ ಬಸ್ಸು ಸಂಖ್ಯೆ ಕೆಎ-೦೭-ಎಫ್-೧೧೦೧ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದರುಗಡೆಯಿಂದ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದ ಪ್ರಯುಕ್ತ ಆಟೋದಲ್ಲಿ ಮುರಳಿ ಮತ್ತು ಬಾಲುರವರಿಗೆ ರಕ್ತಗಾಯಗಳಾಗಿದ್ದು, ಸದರಿ ಗಾಯಾಳುಗಳನ್ನು ರಾಬರ್ಟ್‌‌ಸನ್‌ಪೇಟೆ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಮುರಳಿ ಎಂಬುವರು ಮೃತ್ ಪಟ್ಟಿರುತ್ತಾರೆ.

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೭-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ಮಸ್ಕಂ ಬಳಿ ಮಸ್ಕಂ ವಾಸಿ ದೇವರಾಜ್ ಬಿನ್ ಲಕ್ಷ್ಮಯ್ಯ ಮತ್ತು ಹುಕ್ಕನಹಳ್ಳಿ ಗ್ರಾಮದ ವಾಸಿ ಶ್ರೀನಿವಾಸ್ ರವರಿಗೆ ಜಮೀನು ತಕರಾರು ಇದ್ದು, ಆಸ್ಥಳದಲ್ಲಿ ೧ನೇ ಪಾರ್ಟಿ ಮತ್ತು ೨ನೇ ಪಾರ್ಟಿ ರವರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಒಬ್ಬರಿಗೊಬ್ಬರು ಗಲ್ಲಾಪಟ್ಟಿ ಹಿಡಿದು ಎಳೆದಾಡಿ ಗುದ್ದಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply