ದಿನದ ಅಪರಾಧಗಳ ಪಕ್ಷಿನೋಟ ೨೩ನೇ ಜುಲೈ ೨೦೦೮

 ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲಾ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ 

-ಸಾಧಾರಣ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೭-೨೦೦೮ ರಂದು ೧೫೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು, ಶೆಟ್ಟಿಕೊತ್ತನೂರು ಗ್ರಾಮದ ವಾಸಿ ಶ್ರೀ ಬ್ಯೆಚ್ಚೇಗೌಡ ಬಿನ್ ಲೇಟ್ ಮುನಿಶಾಮಪ್ಪ ಎಂಬುವರು ತನ್ನ ಚಿಕ್ಕಪ್ಪನ ಮಗನಾದ ನಾಗರಾಜ್ ಎಂಬುವರ ಟಿವಿಎಸ್ ಸೂಪರ್‍ ಎಕ್ಸ್‌ಎಲ್ ವಾಹನ ಸಂಖ್ಯೆ ಕೆಎ-೦೩-ಇಡಿ-೪೦೩೪ ರಲ್ಲಿ ಹಿಂದುಗಡೆ ಕುಳಿತುಕೊಂಡು ಕೆ.ಜಿ.ಎಫ್.-ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿರುವ ಲ್ಯಾಂಡ್‌ಮಾರ್ಕ್‌ ಹೋಟೆಲ್ ಮುಂಭಾಗ ಬಂಗಾರಪೇಟೆ ಕಡೆ ಹೋಗುತ್ತಿರುವಾಗ ಹಿಂದೆಗಡೆಯಿಂದ ಬಳಿ ಬಣ್ಣದ ಮಾರುತಿ ಓಮನಿ ಕಾರು ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಹಿಸಿಕೊಂಡು ಬಂದು ಟಿವಿಎಸ್ ಸೂಪರ್‍ ಗೆ ಡಿಕ್ಕಿ ಹೊಡೆದ ಪರಿಣಾಮ ನಾಗರಾಜ್ ಕೆಳಕ್ಕೆ ಬಿದ್ದು ತಲೆಗೆ ರಕ್ತಗಾಯವಾಗಿರುತ್ತದೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೭-೨೦೦೮ ರಂದು ೧೧೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬಿಳ್ಳೇರಹಳ್ಳಿ ಗ್ರಾಮದ ವಾಸಿ ಶ್ರೀ ವೆಂಕಟರಾಮಪ್ಪ ತನ್ನ ಗ್ರಾಮದ ಚಂಗಲರಾಯಪ್ಪ ರವರ ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿಗಳಾದ ಚಿಂಗಲರಾಯಪ್ಪ, ಮಂಜುನಾಥ, ಕಮಲಮ್ಮ ಮತ್ತು ಸುಜಾತ ಎಂಬುವರುಗಳು ಹಳೇ ವೈಷಮ್ಯದಿಂದ ವೆಂಕಟರಾಮಪ್ಪನವರೊಂದಿಗೆ ಜಗಳ ತೆಗೆದು ಒಂದು ಕಲ್ಲು ಮತ್ತು ಕುಡುಗೋಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.  

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬ್ಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೭-೨೦೦೮ ರಂದು ೧೧೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್.ನ ಅಬ್ಕಾರಿ ಜಾರಿ & ಲಾಟರಿ ನಿಷೇದ ವಿಭಾಗದ ಪಿ.ಐ ಶ್ರೀ ರಮೇಶ್ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ರಾಬರ್ಟ್‌‌ಸನ್‌ಪೇಟೆಯ ಶ್ರೀರಾಮನಗರದಲ್ಲಿರುವ ದೊರೈಸ್ವಾಮಿ ಎಂಬುವರು ತನ್ನ ಮನೆಯಲ್ಲಿ ಸಾರಾಯಿಯನ್ನು ತಯಾರಿಸುತ್ತಿದ್ದವರನ್ನು ಮತ್ತು ೪ ಪ್ಲಾಸ್ಟಿಕ್ ಬಿಂದಿಗೆಯಲ್ಲಿದ್ದ ಸುಮಾರು ೮೦ ಲೀಟರ್‌ನಷ್ಟು ಕಳ್ಳಭಟ್ಟಿ ಸಾರಾಯಿಯನ್ನು ವಶ ಪಡಿಸಿಕೊಂಡಿರುತ್ತಾರೆ.    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬೆಂಗಳೂರು, ವಿಜಯನಗರ, ಗೋವಿಂದರಾಜ ನಗರದ ಮನೆ ಸಂಖ್ಯೆ ೧೧೬ ರ ವಾಸಿ ರಮೇಶ್ (೩೨) ಎಂಬುವರಿಗೆ ಪೈಲ್ಸ್ ಕಾಯಿಲೆ ಮತ್ತು ಹೊಟ್ಟೆ ನೋವಿನಿಂದ ನರಳುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ ೨೩-೦೭-೨೦೦೮ ರಂದು ಬೆಳಿಗ್ಗೆ ಯಾವುದೋ ವಿಷ ಸೇವನೆ ಮಾಡಿ ಆಂಡ್ರಸನ್‌ಪೇಟೆಯ ಶ್ರೀರಾಮ ದೇವಾಲಯದ ಬಳಿ (ರಮೇಶ್ ರವರ ಪತ್ನಿಯ ಮನೆ) ಇರುವ ಮಾವನ ಮನೆಯ ಮುಂದೆ ಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಮೃತ ಪಟ್ಟಿರುತ್ತಾನೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply