ದಿನದ ಅಪರಾಧಗಳ ಪಕ್ಷಿನೋಟ ೧೮ನೇ ಜುಲೈ ೨೦೦೮

 ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ 

-ಸಾಧಾರಣ: ಇಲ್ಲ 

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೭-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್., ಆಂಡ್ರಸನ್‌ಪೇಟೆಯ ಸುಸೈಪಾಳ್ಯ ವಾಸಿ ಪಾಪ ಮತ್ತು ಸುರೇಶ್ ಎಂಬುವರುಗಳು ಸಂಜಯ್ ಗಾಂಧಿ ನಗರ ವಾಸಿ ಚಂದರ್‍ @ ಚಂದ್ರಶೇಖರ್‍ ಎಂಬುವರೊಂದಿಗೆ ರಾಬರ್ಟ್‌‌ಸನ್‌ಪೇಟೆಯ ಆರ್‍.ಕೆ.ಮಾರ್ಕೆಟ್ ಬಳಿ ವಿನಾ ಕಾರಣ ಜಗಳ ತೆಗೆದು ಒಂದು ಸೋಡಾ ಬಾಟಲಿನಿಂದ ಚಂದರ್‍ ರವರ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
  • ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೭-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್., ಸಂಜಯ್ ಗಾಂಧಿ ನಗರ ವಾಸಿ ಚಂದರ್‍ @ ಚಂದ್ರಶೇಖರ್‍ ಎಂಬುವರು  ಆಂಡ್ರಸನ್‌ಪೇಟೆಯ ಸುಸೈಪಾಳ್ಯ  ವಾಸಿ ಪಾಪ ಮತ್ತು ಸುರೇಶ್ ಎಂಬುವರೊಂದಿಗೆ ರಾಬರ್ಟ್‌‌ಸನ್‌ಪೇಟೆಯ ಆರ್‍.ಕೆ.ಮಾರ್ಕೆಟ್ ಬಳಿ ವಿನಾ ಕಾರಣ ಜಗಳ ತೆಗೆದು ಒಂದು ಬ್ಲೇಡಿನಿಂದ ಪಾಪ ಮತ್ತು ಸುರೇಶ್ ರವರಿಗೆ ಕೈಗಳ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply