ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೭-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ರಾಬರ್ಟ್‌ಸನ್‌ಪೇಟೆ, ೪ನೇ ಕ್ರಾಸ್, ಮನೆ ಸಂಖ್ಯೆ ೯೨೦ ವಾಸಿ ಶ್ರೀ ಶಾಹಿದ್ ಉಮ್ರಾನ್ ಎಂಬುವರು ತಮ್ಮ ಬೇಕರಿ ಅಂಗಡಿಯನ್ನು ಮುಚ್ಚಿಕೊಂಡು ಮನೆಗೆ ಹೋಗಿದ್ದು, ನಂತರ ದಿನಾಂಕ ೧೭-೦೭-೨೦೦೮ ರಂದು ಬೆಳಿಗ್ಗೆ ೦೭೦೦ ಗಂಟೆ ಸಮಯದಲ್ಲಿ ಬೇಕರಿ ಬಳಿ ಬಂದು ನೋಡಲಾಗಿ ಯಾರೋ ಕಳ್ಳರು ಷಟ್ಟರ್ ಡೋರ್ ಅನ್ನು ತೆಗೆದು ಅಂಗಡಿಯೊಳಗೆ ಪ್ರವೇಶ ಮಾಡಿ ಗಲ್ಲಾಪೆಟ್ಟಿಯಲ್ಲಿರುವ ಹಣ ಬಿಸ್ಕಟ್ಸ್, ಸೀಗರೇಟ್ ಹಾಗೂ ಆಹಾರ ಪದಾರ್ಥಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಸುಮಾರು ರೂ ೩,೨೦೦/- ಗಳಾಗಿರುತ್ತದೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೭-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ತಮ್ಮಸಂದ್ರ ವಾಸಿ ರೇಡಿಯೋ ಮುನಿಯಪ್ಪ ಎಂಬುವರು ೫, ೬ ಜನಗಳ ಗುಂಪು ಕಟ್ಟಿಕೊಂಡು ಜಮೀನು ತಕರಾರು ವಿಷಯದಲ್ಲಿ ಅದೇ ಗ್ರಾಮದ ಗೋವಿಂದಪ್ಪನನ್ನು ನವರ ಮನೆಯ ಮುಂದೆ ಬಂದು ಗೋವಿಂದಪ್ಪನನ್ನು ಕಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಇತರೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ ಪಂಗಡಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೭-೨೦೦೮ ರಂದು ಸುಮಾರು ೧೪೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ತಿಮ್ಮಸಂದ್ರ ವಾಸಿ ಶ್ರೀ ಮುನೇಪ್ಪ ಬಿನ್ ಲೇಟ್ ಗುಲ್‌ಪ್ಪ ರವರಿಗೆ ಸೇರಿದ ಹೊಸ ಸರ್ವೇ ಸಂಖ್ಯೆ ೧೮೬ ರಲ್ಲಿ ಅದೇ ಗ್ರಾಮದ ವಾಸಿ ಗೋವಿಂದಪ್ಪ ಎಂಬುವರು ಹರಿಜನ ವ್ಯಕ್ತಗೆ ಸೇರಿದ ಜಮೀನಿನಲ್ಲಿ ಅಧಿಕ್ರಮ ಪ್ರವೇಶ ಮಾಡಿ ದೌರ್ಜನ್ಯದಿಂದ ಬಿತ್ತನೆಮಾಡುತ್ತಿದ್ದು, ಮುನೇಪ್ಪ ರವರ ಪತ್ನಿ ಈ ವಿಷಯವಾಗಿ ಕೇಳಲಾಗಿ ಗೋವಿಂದಪ್ಪ ಕೆಟ್ಟ ಮಾತುಗಳಿಂದ ಜಾತಿ ನಿಂದನೆ ಮಾಡಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೭-೨೦೦೮ ರಂದು ಬಂಗಾರಪೇಟೆ ತಾಲೂಕು ಪಿಚ್ಚಹಳ್ಳಿ ಗ್ರಾಮದ ವಾಸಿ ಕುಮಾರಿ ತ್ರಿವೇಣಿ (೧೭) ಬಿನ್ ತಮ್ಮರಾಯಪ್ಪ ಎಂಬುವಳು ತನ್ನ ಮನೆಯಲ್ಲಿ ಅಡಿಗೆ ಮಾಡಲು ಪಂಪ್ ಸ್ಟೌವ್ ಅನ್ನು ಪಂಪ್ ಮಾಡುತ್ತಿದ್ದಾಗ ಸ್ಟೌವ್ ಸಿಡಿದು ಬೆಂಕಿ ಜ್ವಾಲೆ ಬಟ್ಟೆಗೆ ಹಚ್ಚಿಕೊಂಡು ಮೈ ಸುಟ್ಟಗಾಯವಾಗಿ ಆಸ್ಪತ್ರೆಯಲ್ಲಿ ದಿನಾಂಕ ೧೭-೦೭-೨೦೦೮ ರಂದು ಮೃತ ಪಟ್ಟಿರುತ್ತಾರೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


