ದಿನದ ಅಪರಾಧಗಳ ಪಕ್ಷಿನೋಟ ೧೫ನೇ ಜುಲೈ ೨೦೦೮

 

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ 

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ 

-ಸಾಧಾರಣ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೭-೨೦೦೮ ರಂದು ೧೫೧೫ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಕೋರಮಂಡಲ್, ೭ ವೆಸಲಿನ್ ಬ್ಲಾಕ್ ವಾಸಿ ಶ್ರೀ ವಿವೇಕಾನಂದ (೨೨) ಮತ್ತು ಅವರ ಅಣ್ಣ ಬಾಬಾಜಿ ಎಂಬುವರುಗಳು ತಮ್ಮ ಬಜಾಜ್ ಡಿಸ್ಕವರ್‍ ಮೋಟಾರು ಸೈಕಲ್ ಸಂಖ್ಯೆ ಕೆಎ-೦೪-ಇಕೆ-೧೭೮೦ ರಲ್ಲಿ ಉರಿಗಾಂ ಕಡೆಯಿಂದ ರಾಬರ್ಟ್‌‌ಸನ್‌ಪೇಟೆ ಕಡೆ ಹೋಗುತ್ತಿದ್ದಾಗ ಹಿಂಭಾಗದಿಂದ ಟಾಟಾ ಸುಮೊ ಸಂಖ್ಯೆ ಕೆಎ-೩೬-ಎ-೫೫೫೬ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಓವರ್‍ ಟೇಕ್ ಮಾಡಿ ತಕ್ಷಣ ಟಾಟಾ ಸುಮೋ ವಾಹನದ ಚಾಲಕ ನಿಲ್ಲಿಸಿದ್ದರಿಂದ ಮೋಟಾರು ಸೈಕಲ್ ಟಾಟಾ ಸುಮೋಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿರುತ್ತಾರೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೩

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲ ಬಸ್ ನಿಲ್ದಾಣದ ಬಳಿ ಎಲೆಕ್ಟ್ರಿಕಲ್ ಅಂಗಡಿ ಬಳಿ ನಡೆದಿರುತ್ತದೆ. ದಿನಾಂಕ ೧೪-೦೭-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಬೇತಮಂಗಲ, ಹಳೇ ಬಡಾವಣೆ ವಾಸಿ ಶ್ರೀ ಅಬ್ಬಾಸ್ ಬಿನ್ ಈಸಾಬೇಗ್ ಎಂಬುವರು ತನ್ನ ಎಲೆಕ್ಟ್ರಿಕಲ್ ಅಂಗಡಿಯಲ್ಲಿದ್ದಾಗ ಬೇತಮಂಗಲ ನ್ಯೂಟೌನ್ ವಾಸಿ ಮೂರ್ತಿ @ ಕೃಷ್ಣಮೂರ್ತಿ ಎಂಬುವನು ಅಬ್ಬಾಸ್ ಬಳಿ ಬಂದು ಒಂದು ವಿದ್ಯುತ್ ಬಲ್ಬ್ ಬೇಕೆಂದು ಕೇಳಿ ಅದಕ್ಕೆ ಅಬ್ಬಾಸ್ ಬಲ್ಬ್ ನ್ನು ನೀಡಿ ಹಣ ಕೊಡುವಂತೆ ಕೇಳಿದಾಗ ಕೃಷ್ಣಮೂರ್ತಿ ಹಣವಿಲ್ಲವೆಂದು ತಿಳಿಸಿ ನಂತರ ಅಬ್ಬಾಸ್ ಸಾಲ ನೀಡುವುದಿಲ್ಲವೆಂತ ಹೇಳಿ ಬಲ್ಬ್ ಅನ್ನು ತೆಗೆದುಕೊಂಡಾಗ ಕೃಷ್ಣಮೂರ್ತಿ ಅಬ್ಬಾಸ್ ರವರನ್ನು ಮುಷ್ಟಿಯಿಂದ ಮುಖದಮೇಲೆ ಗುದ್ದಿರುತ್ತಾನೆ.
  • ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲ ಬಸ್ ನಿಲ್ದಾಣದ ಬಳಿ ಎಲೆಕ್ಟ್ರಿಕಲ್ ಅಂಗಡಿ ಬಳಿ ನಡೆದಿರುತ್ತದೆ. ದಿನಾಂಕ ೧೪-೦೭-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಬೇತಮಂಗಲ ನ್ಯೂಟೌನ್ ವಾಸಿ ಮೂರ್ತಿ @ ಕೃಷ್ಣಮೂರ್ತಿ ಎಂಬುವನು  ಬೇತಮಂಗಲ, ಹಳೇ ಬಡಾವಣೆ ವಾಸಿ ಶ್ರೀ ಅಬ್ಬಾಸ್ ಬಿನ್ ಈಸಾಬೇಗ್ ಎಂಬುವರ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಒಂದು ಬಲ್ಬ್ ತೆಗೆದುಕೊಂಡು ಮನೆಯಲ್ಲಿ ನೋಟಲಾಗಿ ಬಲ್ಬ್ ಉರಿಯದೆ ಇದ್ದು ಬೇರೆ ಬಲ್ಬ್ ಅನ್ನು ಕೊಡಬೇಕೆಂದು ಕೇಳಿದಾಗ ಅಬ್ಬಾಸ್ ಎಂಬುವನು ಕೃಷ್ಣಮೂರ್ತಿ ರವರ ಬಾಯಿಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.
  • ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಆಂಡ್ರಸನ್‌ಪೇಟೆಯ, ಓ.ಡ್ಯಾನಿಯಲ್ ರಸ್ತೆ, ಮಾರ್ಕೆಟ್ ಮುಂಭಾಗ  ನಡೆದಿರುತ್ತದೆ. ಬಂಗಾರಪೇಟೆ ತಾಲೂಕು ವಿಲೇಜ್ ಮಾರಿಕುಪ್ಪಂ ವಾಸಿ ಶ್ರೀ ಪ್ರಕಾಶ್ ಎಂಬುವರು ಆಂಡ್ರಸನ್‌ಪೇಟೆಯ ವಾಸಿ ರಮೇಶ್ ಬಿನ್ ನಾರಾಯಣ್ ರವರಿಗೆ ಟ್ರಾಕ್ಟರ್‍ ನಲ್ಲಿ ಮರಳು ಹೊಡೆದಿದ್ದು, ಅದರ ಬಾಕಿ ೭೫೦೦/- ರೂಗಳು ರಮೇಶ್ ಕೊಡಬೇಕಾಗಿದ್ದು, ದಿನಾಂಕ ೧೫-೦೭-೨೦೦೮ ರಂದು ೦೮೪೫ ಗಂಟೆ ಸಮಯದಲ್ಲಿ ರಮೇಶ್ ಓ.ಡ್ಯಾನಿಯಲ್ ರಸ್ತೆಯಲ್ಲಿ ಮಾರ್ಕೆಟ್ ಮುಂಬಾಗ ನಿಂತಿದ್ದಾಗ ಪ್ರಕಾಶ್ ಬಾಕಿ ಹಣ ರಮೇಶ್ ರವರನ್ನು ಕೇಳಿದಾಗ ”ನನ್ನ ಮಗನೆ ಎಲ್ಲರ ಮುಂದೆ ಸಾಲ ಕೇಳುತ್ತೀಯ ಎಂದು ಪ್ರಕಾಶ್ ರವರೊಂದಿಗೆ ಜಗಳ ಮಾಡಿ ಒಂದು ಕಲ್ಲಿನಿಂದ ಪ್ರಕಾಶ್ ತಲೆಯ ಬಲಭಾಗಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.    

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply