ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೨
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೦೭-೨೦೦೮ ರಂದು ಸಂಜೆ ೧೭೩೦ ರಂದು ಬಂಗಾರಪೇಟೆ ತಾಲೂಕಿನ ಕೀಲುಕೊಪ್ಪ ಗ್ರಾಮದ ವಾಸಿಗಳಾದ ಶ್ರೀ ತ್ಯಾಗರಾಜ್ ಬಿನ್ ಮುನಿಯಪ್ಪ ಮತ್ತು ನಾರಾಯಣಪ್ಪ ಬಿನ್ ಮುನಿಸ್ವಾಮಿ ಎಂಬುವರುಗಳು ಮೋಟಾರ್ ಸೈಕಲ್ ಸಂಖ್ಯೆ: ಕೆಎ-೦೭-ಜೆ-೫೩೩೪ರಲ್ಲಿ ಬಂಗಾರಪೇಟೆ ಪಟ್ಟಣದಲ್ಲಿನ ಸಹರಾ ನರ್ಸಿಂಗ್ ಹೋಂ ಮುಂದೆ ಹೋಗುತ್ತಿದ್ದಾಗ ಕ್ಯಾಂಟರ್ ನಂ. ಕೆಎ-೧೯-೯೬೧೨ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪ್ರಯುಕ್ತ ತ್ಯಾಗರಾಜ್ ಮತ್ತು ನಾರಾಯಣಪ್ಪ ರವರುಗಳಿಗೆ ರಕ್ತಘಾಯಗಳಾಗಿರುತ್ತವೆ.
ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೦೭-೨೦೦೮ ರಂದು ೧೮೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ಕೆ.ಜಿ.ಎಫ್. ನಗರದ ಕೆನಡೀಸ್ ಲೈನ್ ವಾಸಿಯಾದ ಸರವಣನ್ ಎಂಬುವರ ಮಗ ಓಂ ಪ್ರಕಾಶ್ (೧೩) ರವರು ಉರಿಗಾಂ ಬಳಿಯಿರುವ ಸುಭಾಷಿಣಿ ಸರ್ಕಲ್ ಬಳಿ ನಡೆದು ಹೋಗುತ್ತಿದ್ದಾಗ ಅಕ್ರಂ ಬಿನ್ ಸುಕುರ್‌ಸಾಬ್ (೨೮) ರವರು ಮಿನಿ ಬಸ್ ಸಂಖ್ಯೆ: ಕೆಎ-೦೬-ಎ-೧೯೪೮ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಓಂ ಪ್ರಕಾಶ್ ಎಂಬ ಹುಡುಗನಿಗೆ ಡಿಕ್ಕಿ ಹೊಡೆದು ರಕ್ತಘಾಯಪಡಿಸಿರುತ್ತಾನೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ಕೆ.ಜಿ.ಎಫ್. ನಗರದ ಇಂಗ್ಲೀಷ್ ಮೆಸ್ ಕ್ವಾಟರ್ಸ್, ಮಾರಿಕುಪ್ಪಂನಲ್ಲಿ ನಡೆದಿರುತ್ತದೆ. ದಿನಾಂಕ ೧೧-೦೭-೨೦೦೮ ರಂದು ೨೨೧೫ ಗಂಟೆಯಲ್ಲಿ ಪ್ರೇಮ್‌ಕುಮಾರ್ (೨೪) ಬಿನ್ ಪ್ರಭಾಕರ್ ಹೆನ್ರಿ, ಇಂಗ್ಲೀಷ್ ಮೆಸ್ ಕ್ವಾರ್ಟರ್ಸ್ ರವರು ಹಳೆ ವೈಷಮ್ಯದಿಂದ ಶ್ರೀ ದೇವನ್ಬು (೬೩) ಬಿನ್ ಸಾಮಿಯಲ್ ಮತ್ತು ಸೆಲೋಮಿಯ ಬಳಿ ಜಗಳ ವಾಡಿ ಒಂದು ಚಾಕುವಿನಿಂದ ದೇವನ್ಬು ಮತ್ತು ಸೆಲೋಮಿಯ ರವರುಗಳಿಗೆ ತಿವಿದು ರಕ್ತಘಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾನೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


