ದಿನದ ಅಪರಾಧಗಳ ಪಕ್ಷಿನೋಟ ೨೧ನೇ ಜೂನ್ ೨೦೦೮

June 21, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ   

ವಾಹನ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೦೬-೨೦೦೮ ರಂದು ರಾತ್ರಿ ಸುಮಾರು ೧೨:೩೦ ಗಂಟೆ ಸಮಯದಲ್ಲಿ  ಬಂಗಾರಪೇಟೆ ಸೇಠ್ ಕಾಂಪೌಂಡ್ ವಾಸಿ ಶ್ರೀಮತಿ ನಸಿರೀನ್ ಬೇಗಂ ಕೋಂ ಅಜಮತ್ತುಲ್ಲಾ ಎಂಬುವರು ತಮ್ಮ ಬಜಾಜ್ ಪ್ಲಾಟಿನಂ ಮೋಟಾರ್‍ ಸೈಕಲ್ ಸಂಖ್ಯೆ ಕೆಎ-೦೮-ಜೆ-೮೩೬೯  ಸುಮಾರು ೩೨,೦೦೦/- ರೂಗಳು ಬೆಲೆಬಾಳುವುದನ್ನು ತಮ್ಮ ಮನೆಯ ಕಾಂಪೌಂಡಿನಲ್ಲಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.       

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ     

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ಇಲ್ಲ  

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೇಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೦-೦೬-೨೦೦೮ ರಂದು ೧೭೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ದಾಸೇಗೌಡನೂರು ಗ್ರಾಮದ ವಾಸಿ ಶ್ರೀ ಮುನಿಯಪ್ಪ ಬಿನ್ ಸುಬ್ಬಣ್ಣ ಎಂಬುವರು ಜೆ.ಸಿ.ಬಿಯನ್ನು ಬೆನ್ನವಾರ ಸಮೀಪವಿರುವ ಮೂಲರೇವು ಗ್ರಾಮದ ಮಾಲೀಕ ಪ್ರಕಾಶ್ @ ಬುಜ್ಜಿಶೇಟ್ಟಿ ರವರ ಮನೆಯ ಹತ್ತಿರ ಬಿಡಲು ಬೇತಮಂಗಲದಿಂದ ಜೆ.ಸಿ.ಬಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ನಕ್ಕನಹಳ್ಳಿ ಗ್ರಾಮದ ಹತ್ತಿರ ಎಟಿಸಿ ಬಸ್ಸಿಗೆ ರಸ್ತೆ ಬಿಡಲಿಲ್ಲವೆಂಬ ವಿಚಾರದಲ್ಲಿ ಕರಡಗೂರು ಗ್ರಾಮದ ವಾಸಿಗಳಾದ ಸುರೇಶ್ ಮತ್ತು ಗೋಪಿ ಎಂಬುವರುಗಳು ಮುನಿಯಪ್ಪನೊಂದಿಗೆ ಜಗಳ ತೆಗೆದು ಕೆಟ್ಟಮಾತುಗಳಿಂದ ಬೈದು ಮತ್ತು ಒಂದು ಕಬ್ಬಿಣದ ರಾಡಿನಿಂದ ಮುನಿಯಪ್ಪನ ತಲೆಯ ಹಿಂಭಾಗ ಹೊಡೆದು ಮೂಗುಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.    

ಇತರೆ: ೦೧

  •   ಚಾಂಪಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದವಾಗಿ ಕಳ್ಳತ ಮಾಡುತ್ತಿದ್ದ ವ್ಯಕ್ತಗಳ ಮೇಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೬-೨೦೦೮ ರಂದು ೧೧೩೦ ಗಂಟೆ ಸಮಯದಲ್ಲಿ ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯ ಎಎಸ್‌ಐ ರವರಾದ ಸೈಯದ್ ಗೌಸ್ ಎಂಬುವರು ಠಾಣೆಯ ಸತಹದ್ದಿನಲ್ಲಿ ಗಸ್ತು ಮಾಡುತ್ತಿದ್ದಾಗ ವಿಲಿಯಂ ರಿಚರ್ಡ್‌ ಶಾಲೆಯ ಬಳಿ ಕೆ.ಜಿ.ಎಫ್. ಆಂಡ್ರಸನ್‌ಪೇಟೆಯ ಮಸ್ಕಂ ವಾಸಿಗಳಾದ ಸುಂದರ್‍ ಬಿನ್ ಆರೋಕ್ಯ ದಾಸ್ ಮತ್ತು ಅರವಿಂದ್ ಬಿನ್ ದಾಸ್ ಎಂಬುವರುಗಳು ಕಬ್ಬಿಣದ ಪ್ಲೇಟನ್ನು ಮತ್ತು ೦೧ ಕಬ್ಬಿಣದ ಪೈಪುನ್ನು ಅವರ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿದ್ದು, ಗಸ್ತಿನಲ್ಲಿದ ಎಎಸ್‌ಐ ರವನ್ನು ನೋಡಿ ಓಡಲು ಪ್ರಯತ್ನಿಸಿದಾಗ ಒಬ್ಬನನ್ನು ಹಿಡಿದು ಕೇಳಲಾಗಿ ಸಮಂಜಸಕವಾದ ಉತ್ತರ ನೀಡಿರುವುದಿಲ್ಲ. ಸದರಿ ವಸ್ತುಗಳ ಕಳುವಿಗೆ ಸಂಬಂಧಪಟ್ಟವರಾಗಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ   

ವ್ಯಕ್ತಿ ಕಾಣೆ ಪ್ರಕರಣಗಳು: ೦

  •   ರಾಬರ್ಟ್‌‌ನಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೦೬-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ರಾಬರ್ಟ್‌‌ಸನ್‌ಪೇಟೆಯ ಇರುದಿಯಪುರಂ ವಾಸಿ ನವೀನ್ ಕುಮಾರ್‍ @ ರಾಜ್ (೩೦) ಬಿನ್ ಲೇಟ್ ಸಿದ್ದಾರ್ಥ, ಮಾನಸಿಕ ಅಸ್ವಸ್ಥರಾಗಿದ್ದು ಮನೆಯಿಂದ ಹೊರಗಡೆ ಹೋದವರು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡಗಿ ನಾಪತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧-೦೫-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ದೇಸಿಹಳ್ಳಿಯ ದಿಡೀರ್‍ ನಗರದ ವಾಸಿ ಕುಮಾರಿ ಮಂಜುಳ (೧೪) ಬಿನ್ ಪುಟ್ಟಪ್ಪ ಎಂಬುವಳು ಸರ್ಕಾರಿ ಜೂನಿಯರ್‍ ಕಾಲೇಜಿಗೆ ಹೋಗುವುದಾಗಿ ಹೇಳಿ ಹೋದವಳು ಇದುವರಿವಿಗೂ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾಳೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೦ನೇ ಜೂನ್ ೨೦೦೮

June 20, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ      

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ     

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ಇಲ್ಲ  

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ    

ಇತರೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಪ್ರವೇಶ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೮-೦೬-೨೦೦೮ ರಂದು ೧೮೦೦ ಗಂಟೆಯಲ್ಲಿ ಬಂಗಾರಪೇಟೆ ತಾಲೂಕಿನ ಕಾರಹಳ್ಳಿ ಗ್ರಾಮದ ವಾಸಿಗಳಾದ ಕುಪ್ಪರಾಜ್‌, ರವಿಶಂಕರ್‍, ರವಿ ಮತ್ತು ರಮೇಶ್ ಎಂಬುವರು ಬಂಗಾರಪೇಟೆ ಪಟ್ಟಣ ವಿಜಯನಗರದ ವಾಸಿಯಾದ ಶ್ರೀ ವೆಂಕಟೇಶ್ ಬಿನ್ ಸೂರಪ್ಪ ಚಾರಿ ಎಂಬುವರಿಗೆ ಸೇರಿದ ಕಾರಹಳ್ಳಿ ಗ್ರಾಮದ ಬಳಿಯಿರುವ ಸರ್ವೆ ನಂ. ೧೮೯/೧ರ ಜಮೀನುನಲ್ಲಿ ಅತಿಕ್ರಮ ಪ್ರವೇಶ ಮಾಡಿ ಕಲ್ಲು ಕೂಚಗಳನ್ನು ಹೊಡೆದು ಹಾಕಿ, ವೆಂಕಟೇಶ್ ರವರಿಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ   

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩.೦೬.೨೦೦೮ ರಂದು ಬೆಳಿಗ್ಗೆ ೮-೩೦ ಗಂಟೆ ಸಮಯದಲ್ಲಿ ಅಪ್ಪೇನಹಳ್ಳಿ ಗ್ರಾಮದ ವಾಸಿ ರಾಮಚಂದ್ರಪ್ಪ ರವರ ಮಗಳಾದ ಕುಮಾರಿ ಉಮಾದೇವಿ(೧೭) ಪಿ.ಯು.ಸಿ ವ್ಯಾಸಾಂಗ ಎಂಬುವಳು ಮನೆಯಿಂದ ಕೆ.ಜಿ.ಎಫ್‌ ಕಾಲೇಜಿಗೆ ಬಂದವಳು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿರುತ್ತಾಳೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೨

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕಿನ ಆಲಗಾನಹಳ್ಳಿ ಗ್ರಾಮದ ವಾಸಿ ಶ್ರೀ ವೆಂಕಟಮುನಿಯಪ್ಪ (೫೫) ಎಂಬುವರು ದಿನಾಂಕ ೧೯-೦೬-೨೦೦೮ ರಂದು ಸಂಜೆ ೧೭೩೦ ಗಂಟೆಯಲ್ಲಿ ಹುಲಿಬೆಲೆ ಕೆರೆಯಲ್ಲಿ ಮಣ್ಣು ಎತ್ತುವಾಗ ಮಣ್ಣು  ಆಕಸ್ಮಿಕವಾಗಿ ಶ್ರೀ ವೆಂಕಟಮುನಿಯಪ್ಪ ಎಂಬುವರ ಮೇಲೆ ಬಿದ್ದುದ್ದರಿಂದ ತೀವ್ರವಾದ ಘಾಯಗಳಾಗಿ ಇವರು ಮೃತಪಟ್ಟಿರುತ್ತಾರೆ.   
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಅಸ್ವಾಭಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕಿನ ಕಾವರ್‍ನಹಳ್ಳಿ ಗ್ರಾಮದ ವಾಸಿ ಶ್ರೀ ಗಂಗಪ್ಪ (೩೦) ಬಿನ್ ಲೇಟ್ ರಾಮಪ್ಪ ಎಂಬುವರು ತನಗೆ ಅನಾರೋಗ್ಯವಾಗಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ ೨೦-೦೬-೨೦೦೮ ರಂದು ಬೆಳಿಗ್ಗೆ ೦೯೪೦ ಗಂಟೆಯಲ್ಲಿ ನೇರಳೆಕೆರೆ ಬಸ್‌ ಗೇಟ್‌ ಸಮೀಪ ಯಾವುದೋ ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೬-೨೦೦೮ ರಂದು ಮದ್ಯಾಹ್ನ ೧೨೩೦ ಗಂಟೆಯಲ್ಲಿ ಬಂಗಾರಪೇಟೆ ತಾಲೂಕಿನ ನಾಗಶೆಟ್ಟಿಹಳ್ಳಿ ಗ್ರಾಮದ ವಾಸಿ ಕು: ಮೇನಕಾ (೧೩) ಬಿನ್ ರಾಮಪ್ಪ ಎಂಬುವರು ತಮ್ಮ ಮನೆಯಲ್ಲಿ ಟೇಪ್‌ರೆಕಾರ್ಡ್‌‌ನ್ನು ಹಾಕಲು ವೈರುಗಳನ್ನು ಕೈಯಲ್ಲಿ ಹಿಡಿದುಕೊಂಡು ಸ್ವಿಚ್‌ನಲ್ಲಿ ಅಡವಡಿಸಲು ಹೋದಾಗ ವಿದ್ಯುತ್ ಸ್ಪರ್ಶವಾಗಿ ಮೈಮೇಲಿದ್ದ ಬಟ್ಟೆಗಳಿಗೆ ತಗಲಿ ಮೈಯೆಲ್ಲಾ ಸುಟ್ಟಿದ್ದು, ಕೆ.ಜಿ.ಎಫ್. ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಯಿಂದ ಗುಣಮುಖಳಾಗದೆ ದಿನಾಂಕ ೨೦-೦೬-೨೦೦೮ ರಂದು ಬೆಳಿಗ್ಗೆ ೦೫೨೦ ಗಂಟೆಯಲ್ಲಿ ಮೃತಪಟ್ಟಿರುತ್ತಾಳೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೯ನೇ ಜೂನ್ ೨೦೦೮

June 19, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ      

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ     

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ಇಲ್ಲ  

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ    

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ   

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೆಂಗಸು ನಾಪತ್ತೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೫-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಗುಟ್ಟಹಳ್ಳಿ ಗ್ರಾಮದ ವಾಸಿ ಶ್ರೀ ವೆಂಕಟರಮಣಚಾರಿ ಬಿನ್ ಕೃಷ್ಣಚಾರಿ ಹಾಗೂ ಅವರ ಹೆಂಡತಿ ಶ್ರೀಮತಿ ಸೀರಾಲಕ್ಷ್ಮಿಗೆ ಸಂಸಾರದ ವಿಷಯದಲ್ಲಿ ಜಗಳ ಬಂದಿದ್ದರಿಂದ ಸೀತಾಲಕ್ಷ್ಮಿಯು ಕೋಪಗೊಂಡು ಮನೆಯಿಂದ ಹೊರಟು ಹೋಗಿದ್ದು ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.

ಕಾಣೆಯಾದ ಹೆಂಗಸಿನ ಚಹರೆ:

ಹೆಸರು: ಸೀತಾಲಕ್ಷ್ಮಿ, ವಯಸ್ಸು: ೪೫ ವರ್ಷ, ಗಂಡನ ಹೆಸರು: ವೆಂಕಟಾಚಾರಿ, ಬಣ್ಣ: ಕೆಂಪು, ಎತ್ತರ: ೫.೬ ಅಡಿ, ಭಾಷೆ: ಕನ್ನಡ, ತಮಿಳು ಮತ್ತು ತೆಲಗು ಮಾತನಾಡುತ್ತಾರೆ.

ಅಸ್ವಾಭಾವಿಕ ಮರಣದ ಪ್ರಕರಣಗಳು:ಇಲ್ಲ   

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೮ನೇ ಜೂನ್

June 18, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ      

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ     

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ಇಲ್ಲ  

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ    

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ   

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಹುಳಿಬೆಲೆ ಗ್ರಾಮದ ವಾಸಿ ಶ್ರೀ ರಾಜಪ್ಪ (೩೭) ಬಿನ್ ವೆಂಕಟೇಶಪ್ಪ ಎಂಬುವರು ಬಂಗಾರಪೇಟೆಯಲ್ಲಿ ಆಟೋಚಾಲಕನಾಗಿದ್ದು, ಬಂಗಾರಪೇಟೆಯಿಂದ ದಿನಾಂಕ ೧೭-೦೬-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಕುಡಿದು ಮನೆಗೆ ಬಂದು ನೀರು ಕೇಳಿ ಕುಡಿದು ಮೃತ ಪಟ್ಟಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೭ನೇ ಜೂನ್

June 17, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ      

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ     

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ     

-ಸಾಧಾರಣ: ಇಲ್ಲ  

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ    

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೬-೨೦೦೮ ದೊಡ್ಡಗಾಂಡ್ಲಹಳ್ಳಿ ಗ್ರಾಮದ ರಂಗಪ್ಪ ಎಂಬುವರು ತಮ್ಮ ಚಿಲ್ಲರೆ ಅಂಗಡಿಯಲ್ಲಿ ಪರವಾನಿಗೆ ಇಲ್ಲದೆ ಬ್ರಾಂದಿ ಬಾಟಲ್‌ಗಳು ಮತ್ತು ಕಳ್ಳಭಟ್ಟಿ ಸಾರಾಯಿಯನ್ನು ಮಾರಾಟ ಮಾಡುತ್ತಿರುತ್ತಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ೧೫೦೦ ಗಂಟೆ ಸಮಯದಲ್ಲಿ ಶ್ರೀ ಪ್ರಸಾದ್, ಪಿ.ಎಸ್.ಐ., ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಆರೋಪಿರವರ ಚಿಲ್ಲರೆ ಅಂಗಡಿಯಲ್ಲಿ ೧೨ ಕ್ವಾಟರ್‍ ಬಾಟಲ್ ಸೂಪರ್‍ ಜಾಕ್ ವಿಸ್ಕಿ ಮತ್ತು ೫ ಲೀಟರ್‍ ಕಳ್ಳಭಟ್ಟಿ ಸಾರಾಯಿಯನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
  •   ರಾಬರ್ಟ್‌‌ಸನ್‌‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೬-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ಶ್ರೀ ಶಿವಮಲವಯ್ಯ, ಪಿ.ಎಸ್.ಐ. (ಕಾ&ಸು), ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ೨ನೇ ಬ್ಲಾಕ್, ೬ನೇ ಕ್ರಾಸ್, ರಾಬರ್ಟ್‌‌ಸನ್‌ಪೇಟೆಯಲ್ಲಿರುವ ದಿವ್ಯನಾದನ್ ರವರು ತಮ್ಮ ಮನೆಯ ಬಳಿ ೨ ಪ್ಲಾಸ್ಟಿಕ್ ಬಾಟೆಲ್‌ನಲ್ಲಿ ಸುಮಾರು ೩ ಲೀಟರ್‌ನಷ್ಟು ಕಳ್ಳಭಟ್ಟಿ ಸಾರಾಯಿಯನ್ನು ಮಾರಾಟ ಮಾಡಲು ಪ್ರಯತ್ನಿಸುತ್ತದ್ದಾಗ ಪಿ.ಎಸ್.ಐ. ರವರು ಮತ್ತು ಸಿಬ್ಬಂದಿಗಳು ದಾಳಿ ಮಾಡಿ ಆರೋಪಿಯನ್ನು ಮತ್ತು ಮಾಲು ವಶ ಪಡಿಸಿಕೊಂಡಿರುತ್ತಾರೆ. 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೬ನೇ ಜೂನ್ ೨೦೦೮

June 16, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೬-೨೦೦೮ ರಂದು ರಾತ್ರಿ ಯಾರೋ ಕಳ್ಳರು ಬಂಗಾರಪೇಟೆ ಟೌನ್, ಅಮರಾವತಿ ನಗರದ ಮನೆ ಸಂಖ್ಯೆ ೪೭೭೪ ರ ವಾಸಿ ಶ್ರೀ ಎ.ಆರ್‍ಮುಗಂ ಎಂಬುವರ ಮನೆಯ ಕಾಂಪೌಡ್‌ನಲ್ಲಿ ನಿಲ್ಲಿಸಿದ್ದ ಟಿವಿಎಸ್ ಹೆವಿಡ್ಯೂಟಿ ವಾಹನ ಸಂಖ್ಯೆ ಕೆಎ-೦೮-ಹೆಚ್-೮೨೯೬, ಬೆಲೆ ೧೦,೦೦೦/- ರೂ ಬಾಳುವುದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

ವಾಹನ ಕಳ್ಳತನ: ಇಲ್ಲ      

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ     

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ರಾಬರ್ಟ್‌‌ಸನ್‌ಪೇಟೆ ಸ್ಟೇಷನ್ ರಸ್ತೆಯ ಮೈದು ಪೆಟ್ರೋಲ್ ಬಂಕ್ ಹತ್ತಿರ ಸಂಭವಿಸಿರುತ್ತದೆ. ದಿನಾಂಕ ೧೫-೦೬-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಅಶೋಕ ನಗರದ ’ಸಿ’ ಬ್ಲಾಕ್, ಮನೆ ಸಂಖ್ಯೆ ೨೪ ರ ವಾಸಿ  ಶ್ರೀ ಹರಿಕೃಷ್ಣ (೨೫) ಎಂಬುವರು ತನ್ನ ಮೋಟಾರು ಸೈಕಲ್ ಸಂಖ್ಯೆ ಸಿಕೆಡಿ ೧೧೮೯ ವಾಹನದಲ್ಲಿ ಸ್ಟೇಷನ್ ರಸ್ತೆಯಲ್ಲಿ ತನ್ನ ಅತ್ತೆ ಮನೆಗೆ ಎನ್‌ಟಿ ಬ್ಲಾಕ್‌ಗೆ ಹೋಗುತ್ತಿರುವಾಗ ಉರಿಗಾಂ ಕಡೆಯಿಂದ ಒಂದು ಮಿನಿ ಬಸ್ ಸಂಖ್ಯೆ ಕೆಎ-೦೬-ಎ-೧೯೪೮ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೈದು ಪೆಟ್ರೋಲ್ ಬಂಕ್ ಮುಂದೆ ಡಿಕ್ಕಿ ಹೊಡೆಸಿ, ಹರಿಕೃಷ್ಣ ರವರು ಕೆಳಗೆ ಬಿದ್ದು ತಲೆಗೆ ತೀರ್ವವಾದ ಗಾಯವಾಗಿದ್ದು ಆಸ್ಪತ್ರೆಗೆ ಸಾಗಿಸುವಾಗ ಮೃತ ಪಟ್ಟಿರುತ್ತಾನೆ.   

-ಸಾಧಾರಣ: ೦೧

  •    ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಕೆಂಪಾಪುರ ಗ್ರಾಮದ ಬಸ್ ನಿಲ್ದಾಣದ ಬಳಿ ಸಂಭವಿಸಿರುತ್ತದೆ. ದಿನಾಂಕ ೧೬-೦೬-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ನ ಉರಿಗಾಂಪೇಟೆಯ ಸೋಮೇಶ್ವರ ಬ್ಲಾಕ್ ವಾಸಿ ಶ್ರೀ ದೇವರಾಜ್ (೪೨) ಎಂಬುವರು ಕುಪ್ಪಂ ನಿಂದ ಮಿನಿರಲ್ ವಾಟರ್‍ ಕ್ಯಾನ್‌ಗಳನ್ನು ತುಂಬಿಸಿಕೊಂಡು ತಮ್ಮ ವಾಹನದಲ್ಲಿ ಬರುತ್ತಿದ್ದು, ಕೆಂಪಾಪುರ ಬಸ್ ನಿಲ್ದಾಣದ ಬಳಿ ವಾಹನವನ್ನು ನಿಲ್ಲಿಸಿ ಟೀ ಕುಟಿದು ಹೋಗುವಾಗ ಹಿಂದೆಯಿಂದ ಲಾರಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪ್ರಯುಕ್ತ ದೇವರಾಜ್ ರವರ ಎದೆಯ ಬಾಗ ಮತ್ತು ಎದೆಯ ಕೆಳಬಾಗದಲ್ಲಿ ಗಾಯವಾಗಿರುತ್ತದೆ.

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಮಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ನಕ್ಕನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ  ೧೫-೦೬-೨೦೦೮ ರಂದು ೧೮೧೫ ಗಂಟೆ ಸಮಯದಲ್ಲಿ ಗೋಪಿನಾಥ್ ಬಿನ್ ನಾರಾಯಣರೆಡ್ಡಿ, ಕೆಸಿರೆಡ್ಡಿಗಾಂಡ್ಲಹಳ್ಳಿ ಗ್ರಾಮದ ವಾಸಿ ಕೆಎ-೨೦-೮೩೬೬ ರ ಬಸ್ಸಿನ ಚಾಲಕನಾಗಿ ಜೆ.ಕೆ.ಪುರಂ ನಿಂದ ಕೆ.ಜಿ.ಎಫ್. ಗೆ ಬರಲು ನಕ್ಕನಹಳ್ಳಿ ಗೇಟ್ ಬಳಿ ಬರುತ್ತಿರುವಾಗ ಕರಡಗೂರು ವಾಸಿಗಳಾದ ಶಿವಾರೆಡ್ಡಿ ಬಿನ್ ಆಂಜಿನಯ್ಯರೆಡ್ಡಿ, ಆನಂದ, ಸೋಮರಾಮರೆಡ್ಡಿ  ಎಂಬುವರುಗಳು ಬಸ್‌ನ್ನು ತಡೆದು ಚಾಲಕನನ್ನು ಕೆಳಕ್ಕೆ ಎಳೆದು ರೌಡಿ ಮಾಮೂಲು ಕೊಡು ಎಂತ ಆತನಿಗೆ ಹೊಡೆದು ಪ್ರಣ ಬೆದರಿಕೆ ಹಾಕಿ ಬಸ್ಸಿನ ಮುಂದಿನ ಗ್ಲಾಸನ್ನು ಹೊಡೆದು ಜಕಂಗೊಳಿಸಿರುತ್ತಾರೆ ಹಾಗೂ ಅದೇ ಸಮಯದಕ್ಕೆ ಕೆ.ಜಿ.ಎಫ್. ಕಡೆದಯಿಂದ ಬರುತ್ತಿದ್ದ ಟಿಎನ್-೪೯-ಇ-೯೯೫೫ ರ ಬಸ್ಸಿನ ಮುಂದಿನ ಗ್ಲಾಸನ್ನು ಸಹ ಹೊಡೆದು  ಜಕಂ ಗೊಳಿಸಿರುತ್ತಾರೆ.
  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೬-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ಮಾರುತಿ ನಗರದಲ್ಲಿ ಅದೇ ಕೇರಿಯ ನಾರಾಯಣ ಬಿನ್ ರಾಮದಾಸಪ್ಪ ಎಂಬುವರು ಬಂಗಾರಪೇಟೆಯ ಬೀವಿನಗರದ ವಾಸಿ ಶ್ರೀ ಸುಬ್ರಮಣಿಯವರೊಂದಿಗೆ ಜಗಳ ತೆಗೆದು ಒಂದು ದೊಣ್ಣೆಯಿಂದ ತಲೆ ಮತ್ತು ಬಲಕಾಲಿಗೆ ಹೊಡೆದು ರಕ್ತಗಾಯಪಡಿರುತ್ತಾನೆ.  

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೬-೨೦೦೮ ರಂದು ಶ್ರೀ ವಿ.ಲಕ್ಷ್ಮಯ್ಯ, ಪಿ.ಐ., ಡಿಸಿಐಬಿ, ಡಿಪಿಓ, ಕೆ.ಜಿ.ಎಫ್ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಬಂಗಾರಪೇಟೆ ತಾಲೂಕು ಬೋಡೇನಹಳ್ಳಿ ಗ್ರಾಮದಲ್ಲಿ ಆರಿಮಾನ ಹಳ್ಳಿ ಗ್ರಾಮದ ವಾಸಿಗಳಾದ ಬೀರಪ್ಪ ಬಿನ್ ಚಂದ್ರಪ್ಪ ಮತ್ತು ದಿವಾಕರ ಬಿನ್ ಬನಪಲ್ಲಪ್ಪ ಎಂಬುವರಗಳು ಯಾವುದೇ ರಹದಾರಿಯಿಲ್ಲದೆ ಪ್ಲಾಸ್ಟಿಕ್ ಕ್ಯಾನಿನಲ್ಲಿ ಸುಮಾರು ೫೦ ಲೀಟರ್‌ನಷ್ಟು (ಹೆಂಡ) ಸೇಂದಿಯನ್ನು ಬೋಡೇನಹಳ್ಳಿ ಗ್ರಾಮದ ಬಳಿ ಮಾರಾಟ ಮಾಡಲು ಅಕ್ರಮವಾಗಿ ಸ್ವಾದೀನದಲ್ಲಿ ಇಟ್ಟುಕೊಂಡಿದ್ದವರನ್ನು ಸುತ್ತುವರೆದು ೨೦೦೦/- ರೂ ಬಾಲುವ ಸೇಂದಿಯನ್ನು ವಶಪಡಿಸಿಕೊಂಡಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೪ನೇ ಜೂನ್ ೨೦೦೮

June 14, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮನೆ ಸಂಖ್ಯೆ ೨೭೨, ಕುವೆಂಪುನಗರ, ದಾಸರಹೊಸಹಳ್ಳಿಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೨-೦೬-೨೦೦೮ ರಂದು ೧೦೦ ಗಂಟೆಯ ಸಮಯದಲ್ಲಿ ಶ್ರೀಮತಿ ಜಯಕಾಂತಮ್ಮ ಕೋಂ ದೇವೇಂದ್ರನಾಥ, ಮನೆ ಸಂಖ್ಯೆ ೨೭೨, ಕುವೆಂಪುನಗರ, ದಾಸರಹೊಸಹಳ್ಳಿ ಎಂಬುವರು ತಮ್ಮ ಮನೆಗೆ ಬೀಗ ಹಾಕಿಕೊಂಡು ತಮಿಳಿನಾಡಿನ ಕೆ.ವಿ.ಕುಪ್ಪಂಗೆ ಹೋಗಿ ದಿನಾಂಕ ೧೩-೦೬-೨೦೦೮ ರಂದು ೧೩೦೦ ಗಂಟೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಆಯುದದಿಂದ ತನ್ನ ಮನೆಯ ಹಿಂಬಾಗಿಲನ್ನು ಜಖಂ ಮಾಡಿ ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಮೂರು ಗಾಡ್ರೇಜ್ ಬೀರುಗಳನ್ನು ಹೊಡೆದು ಅದರಲ್ಲಿದ್ದ ೧೦ ಹಳೆಯ ರೇಷ್ಮೆ ಸೀರೆಗಳು ಮತ್ತು ೫ ಹೊಸ ರೇಷ್ಮೆ ಸೀಗೆಗಳು ಹಾಗೂ ಕೆಲವು ಕಂಚಿನ ಪಾತ್ರೆಗಳನ್ನು ಕಳುವುಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ ೨೦,೦೦೦/- ರೂ ಬಾಳುತ್ತದೆ.

ಸಾಧಾರಣ ಕಳ್ಳತನ: ೦೧

  •   ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರಿತ್ತದೆ. ಈ ಕೃತ್ಯವು ಬೆಸ್ಕಾಂ ಕಛೇರಿಯ ಆವರಣ, ಚಾಂಪಿಯನ್‌ರೀಫ್ಸ್, ಕೆ.ಜಿ.ಎಫ್. ನಲ್ಲಿ ಸಂಭವಿಸಿರುತ್ತದೆ. ದಿನಾಂಕ ೦೯-೦೬-೨೦೦೮ ರಂದು ರಾತ್ರಿ ಯಾರೋ ಕಳ್ಳರು ಬೆಸ್ಕಾಂ ಕಛೇರಿಯ ಆವರಣದೊಳಗೆ ಪ್ರವೇಶಿಸಿ ಬೋರ್‌ವೆಲ್ ಬಳಿಯಿಂದ ಪ್ಯಾನಲ್ ಬೋರ್ಡ್‌‌ಗೆ ಅಳವಡಿಸಿದ್ದ ೧೫೦+೧೫೦ ಮೀಟರ್‍ ಕೇಬಲ್ ಒಟ್ಟು ೩೦೦ ಮೀಟರ್‍ ವೈರ್‌ ಅನ್ನು ಕತ್ತರಿಸಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕೇಬಲ್ ವೈರ್‍ ಬೆಲೆ ೪೩೦೦/- ರೂಗಳಾಗುತ್ತದೆ.

ವಾಹನ ಕಳ್ಳತನ: ಇಲ್ಲ      

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ     

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ವೆಂಕಟಾಪುರ ಗೇಟ್ ಬಳಿ, ಬೇತಮಮಂಲ ವಿ.ಕೋಟ ಮುಖ್ಯ ರಸ್ತೆಯಲ್ಲಿ ಸಂಭವಿಸಿರುತ್ತದೆ. ಗೋನಮಾಕನಹಳ್ಳಿ ಗ್ರಾಮ, ವಿ.ಕೋಟ ಬಂಡಲ್, ಆಂದ್ರಪ್ರದೇಶದ ವಾಸಿ ಶ್ರೀ ಚಂದ್ರಚಾರಿ ಮತ್ತು ಆತನ ಪತ್ನಿ ಶ್ರೀಮತಿ ಸುಶೀಲಮ್ಮ ಎಂಬುವರುಗಳು ಸೀತಂಪಲ್ಲಿ ಗ್ರಾಮದಲ್ಲಿ ತಮ್ಮ ಮಾವನಾದ ಮೋಹನ್ ರವರ ನಿಚ್ಛಿತಾರ್ಥ ಕಾರ್ಯಕ್ರವನ್ನು ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ವಾಹನ ಸಂಖ್ಯೆ ಕೆಎ-೦೩-ವಿ-೬೮೯೩ ರಲ್ಲಿ ಹೋಗುತ್ತಿರುವಾಗ ವೆಂಕಟಾಪುರ ಗೇಟ್ ಬಳಿ ವಿ.ಕೋಟೆ ಕಡೆಯಿಂದ ಒಬ್ಬ ವ್ಯಕ್ತಿಯು ಆತನ ದ್ವಿವಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಹಿಸಿಕೊಂಡು ಬಂದು ಚಂದ್ರಚಾರಿ ರವರ ವಾಹನಕ್ಕೆ ಡಿಕ್ಕಿ ಹೊಡೆದು, ಇದರ ಪರಿಣಾಮ ಚಂದ್ರಚಾರಿ ರವರು ವಾಹನ ಸಮೇತ ಕೆಲಕ್ಕೆ ಬಿದ್ದುದ್ದರಿಂದ ಇಬ್ಬರಿಗೂ ರಕ್ತಗಾಯವಾಗಿರುತ್ತದೆ. ಚಂದ್ರಾಚಾರಿ ರವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಮೃತ ಪಟ್ಟಿರುತ್ತಾರೆ.  

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  • ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಮಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಕರುಡಗೂರು ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೦-೦೩-೨೦೦೮ ರಂದು ಕರುಡಗೂರು ಗ್ರಾಮದ ವಾಸಿ ಶ್ರೀ ರಾಮಚಂದ್ರರೆಡ್ಡಿ (೫೫) ಎಂಬುವರ ಜಮೀನಿಗೆ ಅದೇ ಗ್ರಾಮದ ವಾಸಿಗಳಾದ ಯರಮರೆಡ್ಡಿ ಮತ್ತು ನಾಗಮ್ಮ ಎಂಬುವರುಗಳು ಅತಿಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿದ್ದ ೧೦,೦೦೦/- ರೂ ಬೆಲೆಬಾಳುವ  ಮರಗಳಲ್ಲಿನ ಹುಣಸೆ ತೆಗೆದುಕೋಂಡು ಹೋಗಿರುತ್ತಾರೆ ಮತ್ತು ದಿನಾಂಕ ೩೦-೦೩-೨೦೦೮ ರಂದು ಆರೋಪಿಗಳು ರಾಮಚಂದ್ರರೆಡ್ಡಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಉಳುಮೆ ಮಾಡಲು ಪ್ರಯತ್ನಿಸಿದಾಗ ಕೈಗಳಿಂದ ಹೊಡೆದು ಸಾಯಿಸುವಾದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
  • ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಮಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು  ನಂ. ಸಿ, ೧೩, ಬೋರಿಲಾಲ್‌ಪೇಟೆ ಕಾಂಪೌಂಡ್, ರಾಬರ್ಟ್‌‌ಸನ್‌ಪೇಟೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೩-೦೬-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ನಂ. ಸಿ ೧೩, ಬೋರಿಲಾಲ್‌ಪೇಟೆ ವಾಸಿ ಶ್ರೀ ಕುಮಾರ್‍ @ ಉಡುಮ್ ಕುಮರ್‍ ಎಂಬುವರು ಮನೆಯಲ್ಲಿರುವಾಗ ಅದೇ ಕೇರಿಯ ಫಯಾಜ್, ಪರ್ವೇಜ್ ಮತ್ತು ಬಷೀರ್‍ ಎಂಬುವರುಗಳು ಮನೆಯೊಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಪೋಟೋಗಳನ್ನು ಹೊಡೆದು ನಾಶ ಪಡಿಸಿ, ಫಯಾಜ್ ರವರು ಕುಮಾರ್‍ ರವರನ್ನು ಒಂದು ಹೊಣ್ಣೆಯಿಂದ ಹೊಡೆದು ಗಾಯಪಡಿಸಿ ಮತ್ತು ಪರ್ವೇಜ್ ಮತ್ತು ಬಷೀರ್‍ ರವರುಗಳು ಮೈಮೇಲೆ ಹೊಡೆದು ನೋವುಂಟುಮಾಡಿ ಕೆಟ್ಟ ಮಾತುಗಳಿಂದ ಬೈದು ದುಡ್ಡು ಕೊಡದಿದ್ದರೆ ಸಾಯಿಸುವುದಾಗು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೩ನೇ ಜೂನ್‌ ೨೦೦೮

June 13, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮನೆ ಸಂಖ್ಯೆ ಬಿ. ಟೈಪ್ ಆಫೀಸರ್‍ ಕ್ವಾಟ್ರಸ್, ಬೆಮೆಲ್ ನಗರದಲ್ಲಿ ಸಂಭವಿಸಿರುತ್ತದೆ. ಶ್ರೀ. ಮೋಹನ್ ಬಿನ್ ಎನ್‌.ಆರ್‍. ಜಗತಾಪ್(೫೯) ಆಫೀಸರ್ ಕ್ವಾಟ್ರಸ್, ಬೆಮೆಲ್‌ನಗರ ರವರು ದಿನಾಂಕ: ೧೨-೦೬-೨೦೦೮ ರಂದು ಸಂಜೆ ೧೬೦೦ ಗಂಟೆಯಲ್ಲಿ ತನ್ನ ವಾಸದ ಮನೆಗೆ ಬೀಗ ಹಾಕಿಕೊಂಡು ಬಂಗಾರಪೇಟೆ ಹೋಗಿ ಸಂಜೆ ೭-೪೫ ಗಂಟೆಗೆ ಬಂದು ನೋಡಲಾಗಿ ಯಾರೋ ದುಷ್ಕರ್ಮಿಗಳು ತನ್ನ ಮನೆಯ ಮುಂಬಾಗಿಲನ್ನು ಯಾವುದೇ ಆಯುದದಿಂದ ಮುರಿದು ಮನೆಯಲ್ಲಿದ್ದ ರೂ. ೩೪೦೦೦/- ಗಳ ಬೆಲೆಬಾಳುವ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ      

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ     

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆಯ ಪಿ.ಆರ್‍.ಎಸ್. ಮಿಲ್ ಮುಂಭಾಗ ರಸ್ತೆಯಲ್ಲಿ  ಈ  ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೦೬-೨೦೦೮ ರಂದು ಸಂಜೆ ೧೯೩೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ- ಕೆ.ಜಿ.ಎಫ್ ಮುಖ್ಯ ರಸ್ತೆಯಲ್ಲಿ ಅನಿಲ್ ಮಿಲ್ ಎದುರುಗಡೆ ಲಾರಿ ಸಂಖ್ಯೆ ಕೆಎ-೦೮-ಬಿ-೯೮೦ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿಗೆ ಬಂದ ಟಿ.ವಿ.ಎಸ್. ಸಂಖ್ಯೆ ಕೆಎ-೦೩-೬೪೯೯ರ ಚಾಲಕ ಆಶ್ವತ್ಥ ಬಿನ್ ಮುನಿಸ್ವಾಮಪ್ಪ(೪೫) ಚಿನಪನಹಳ್ಳಿ ಗ್ರಾಮದ ರವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಅಶ್ವತ್ಥ ರವರಿಗೆ ರಕ್ತಗಯಾವಾಗಿರುತ್ತದೆ. ಲಾರಿ ಚಾಲಕ ವಾಹನವನ್ನು ನಿಲ್ಲಿಸದೆ ಹೋಗಿರುತ್ತಾನೆ. 

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

  ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಚಾಂಪಿಯನ್‌ ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಹುಡುಗ ನಾಪತ್ತೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬೆಂಗಳೂರಿನ ವಾಸಿಯಾದ ಶ್ರೀ ವೆಂಕಟೇಶ್ (೧೭) ರವರು ಕೆ.ಜಿ.ಎಫ್.ನ ನ್ಯೂ ಲೈಪ್‌ ಸೆಂಟರ್‍, ವೆಸ್ಲೀ ಮ್ಯಾನ್ ಬಿ.ಜಿ.ಎಂ.ಎಲ್ ಗೆಸ್ಟ್ ಹೌಸ್ ಹಿಂಭಾಗ ಇಲ್ಲಿ ಹಾಲಿ ವಾಸವಿದ್ದು, ಇಲ್ಲಿಂದ ದಿನಾಂಕ ೨೯-೦೩-೨೦೦೮ ರಂದು ಬೆಳಿಗ್ಗೆ ೦೮೦೦ ಗಂಟೆ ಸಮಯದಲ್ಲಿ ಓಡಿ ಹೋದವನು ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ. 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೨ನೇ ೨೦೦೮

June 12, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ      

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ     

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್‌ ನ ಸತ್ತಾರ್‍ ಸರ್ಕಲ್ ಬಳಿ ಈ  ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೦೬-೨೦೦೮ ರಂದು ಸಂಜೆ ೧೭೪೫ ಗಂಟೆ ಸಮಯದಲ್ಲಿ ಈಶ್ವರ್‍ ಬಿನ್ ಲೇಟ್ ವೆಂಕಟೇಶ್(೨೭), ಕೋಡುಗುರ್ಕಿ ಗ್ರಾಮದ ವಾಸಿ ಶಾಹೀನ್ ಬಸ್ ಸಂಖ್ಯೆ ಕೆಎ-೦೮-೧೭೧ ವಾಹನವನ್ನು ಬಂಗಾರಪೇಟೆ ಕಡೆಯಿಂದ ಕೆ.ಜಿ.ಎಫ್ಗೆ ಬರಲು ಉರಿಗಾಂ ಸತ್ತಾರ್‍ ಸರ್ಕಲ್ ತಿರುವಿನಲ್ಲಿ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಕ್ಷಣ ಬ್ರೇಕ್ ಹಾಕಿದ್ದರಿಂದ ಬಸ್ಸಿನ ಮುಂಭಾದ ಬಾಗಿಲಿನಲ್ಲಿದ್ದ ಕೃಷ್ಣ ಬಿನ್ ವೆಂಕಟೇಶ(೧೨) ಹೂವಳ್ಳಿಗ್ರಾಮ, ಕೋಲಾರ ರವರು ಕೆಳಗೆ ಬಿದ್ದು ಬಸ್ಸಿನ ಚಕ್ರ ಎರಡೂ ಕಾಲುಗಳ ಮೇಲೆ ಹರಿದು ತೀವ್ರ ತರಹದ ರಕ್ತಗಾಯಗಳಾಗಿರುತ್ತೆ.

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •   ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಸುಮತಿ ಜೈನ್ ಶಾಲೆ, ಗೌತಮ್ ನಗರ, ಕೆ.ಜಿ.ಎಫ್ ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೧.೦೬.೨೦೦೮ ರಂದು ೧೩೪೫ ಗಂಟೆ ಸಮಯದಲ್ಲಿ ಶ್ರೀ. ಚಂದ್ರಶೇಖರ್‍ ಬಿನ್ ವೀರಭದ್ರಪ್ಪ(೪೩) ವೆಂಗಸಂದ್ರ ಗ್ರಾಮ ರವರು ಸುಮತಿ ಜೈನ್ ಶಾಲೆಯ ಮುಖ್ಯೋಪದ್ಯಾಯರು ಕೊಠಡಿಯಲ್ಲಿದ್ದಾಗ ಶ್ರೀ. ಮುನಿರತ್ನಂನಾಯ್ಡು ಕಂಗಂಡ್ಲಹಳ್ಳಿ ವಾಸಿ ಎಂಬುವರು ಬಂದು ಚುನಾವಣಾ ಸಂದರ್ಭದಲ್ಲಿ ತಮ್ಮಗೆ ವಿರೋದವಾಗಿ ಮತ ಪ್ರಚಾರ ಮಾಡಿರುತ್ತಾರೆಂತ ಜಗಳ ಕಾದು ಕೈಯಿಂದ ಹೊಡೆದು ಕಟ್ಟ ಮಾತುಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆ.    
  •   ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಸುಮತಿ ಜೈನ್ ಶಾಲೆ, ಗೌತಮ್ ನಗರ, ಕೆ.ಜಿ.ಎಫ್ ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೧.೦೬.೨೦೦೮ ರಂದು ೧೩೪೫ ಗಂಟೆ ಸಮಯದಲ್ಲಿ ಶ್ರೀ. ಮುನಿರತ್ನಂ ನಾಯ್ಟು ಬಿನ್ ದೊರೈಸ್ವಾಮಿ ನಾಯ್ಡು(೫೮)  ಕಂಗಾಂಡ್ಲ ಹಳ್ಳಿ ರವರು ಕೆ.ಜಿ.ಎಫ್ ಶಾಸಕರ ಪರವಾಗಿ ಸುಮತಿಜೈನ್ ಶಾಲೆಗೆ ಭೇಟಿ ನೀಡಿ ಶಾಲೆಯ ಕುಂದುಕೊರತೆಗಳ ಬಗ್ಗೆ ಉಪದ್ಯಾಯರಾದ ಶ್ರೀ. ಚಂದ್ರಶೇಖರ್‍ ರವರು ವಿಚಾರಣೆ ಮಾಡಿದಾಗ  ವಿನಾಕಾರಣ ಜಗಳ ಮಾಡಿ ಕೆಟ್ಟ ಮಾತುಗಳಿಂದ ಬೈದು ಕೊಲೆ ಬೆದರಿಕೆಯಾಕಿರುತ್ತಾರೆ.

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಸಾಗಿಸುವ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕಾಮಸಮುದ್ರಂ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೨-೦೬-೨೦೦೮ ರಂದು ಬೆಳಿಗ್ಗೆ ಸುಮಾರು ೬-೦೦ಗಂಟೆ ಸಮಯದಲ್ಲಿ ಶ್ರೀನಿವಾಸ್ ಬಿನ್ ವೆಂಕಟಸ್ವಾಮಿ(೪೦) ಮುಸ್ಟ್ರಹಳ್ಳಿ ಗ್ರಾಮ ವಾಸಿ ಯಾವುದೇ ರಹದಾರಿ ಇಲ್ಲದೆ ಅಕ್ರಮವಾಗಿ ಸುಮಾರು ೮೦೦ ಗ್ರಾಂ ಒಣಗಿದ ಗಾಂಜಾ ಸೊಪ್ಪನ್ನು ಕಾಮಸಮುದ್ರಂ ರೈಲ್ವೆ ನಿಲ್ದಾಣದಿಂದ ಜಾನುಗುಟ್ಟೆ ಸರ್ಕಲ್ ಕಡೆ ಎತ್ತಿಕೊಂಡು ಹೋಗುತ್ತಿದ್ದವನನ್ನು ಹಿಡಿದು ದಸ್ತಗಿರಿ ಮಾಡಿ ಕಾನೂನು ಕ್ರಮಕೈಗೊಂಡಿರುತ್ತದೆ. 

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

  ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೧ ನೇ ಜೂನ್ ೨೦೦೮

June 11, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೧-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ      

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ     

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಟೌನ್ ಕೋಲಾರ ಮುಖ್ಯ ರಸ್ತೆಯ ಪಿ.ಆರ್‍.ಎಸ್ ವೇಬ್ರಿಡ್ಜ್  ಮುಂಭಾಗ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೦-೦೬-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ಲಾರಿ ಸಂಖ್ಯೆ ಕೆಎ-೦೧-ಎಇ-೫೦೬೦ರ ವಾಹನವನ್ನು ಅದರ ಚಾಲಕ ಕೋಲಾರ-ಬಂಗಾರಪೇಟೆ ಮುಖ್ಯ ರಸ್ತೆಯ ಪಿ.ಆರ್‍.ಎನ್ ವೇಬ್ರಿಡ್ಜ್ ಮುಂಭಾಗ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಂಗಾರಪೇಟೆ ಸಿ ರಹಿಂ ಕಾಂಪೌಂಡ್ ವಾಸಿ ಶ್ರೀ ಶೇಕ್ ರವರ ಮೋಟರ್‍ ಸೈಕಲ್ ಸಂಖ್ಯೆ ಕೆಎ-೦೫-ಇಪಿ-೨೬೯೩ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಮೋಟಾರ್‍ ಸೈಕಲ್ ಸವಾರ ಯೂಸೂಫ್ ಮತ್ತು ಹಿಂದೆ ಕುಳಿತಿದ್ದ ಶೇಖ್ ನವಾಚ್ ಎಂಬುವರಿಗೆ ರಕ್ತಗಾಯವಾಗಿರುತ್ತದೆ.

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ತೂಕಲ್ಲು ರಾಮಾಪುರ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೦-೦೬-೨೦೦೮ ರಂದು ೨೪೦೦ ಗಂಟೆ ಸಮಯದಲ್ಲಿ ತೂಕಲ್ಲು ರಾಮಾಪುರ ಗ್ರಾಮದ ವಾಸಿ ಶ್ರೀ ವೆಂಕಟರಾಮಪ್ಪ (೪೫) ಬಿನ್ ವೆಂಕಟೇಶಪ್ಪ ಎಂಬುವರು ತಮ್ಮ ಮನೆಯಲ್ಲಿ ಮಲಗಿರುವಾಗ ಹೊಸ ಮನೆಯ ವಿಷಯವಾಗಿ ಅದೇ ಗ್ರಾಮದ ಕೃಷ್ಣಮೂರ್ತಿಯು ಇತರೆ ಆರು ಜನರನ್ನು ಅಕ್ರಮ ವಾಗಿ ಗುಂಪು ಕಟ್ಟಿಕೊಂಡು ವೆಂಕಟರಾಮಪ್ಪ ರವರ ಮನೆಯ ಬಳಿಗೆ ಮಾರಕಾಸ್ತ್ರಗಳೊಂದಿಗೆ ಬಂದು ಸಿಮೆಂಟ್ ಶೀಟ್ ಮತ್ತು ಗೋಡೆಗಳನ್ನು ಕೆಡವಿ ಸುಮಾರು ೨೫,೦೦೦/- ರೂಗಳಷ್ಟು ಆಸ್ತಿ ನಷ್ಟಮಾಡಿ ಕೃಷ್ಣಮೂರ್ತಿ ರವರಿಗೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ.

ಹಲ್ಲೆ: ಇಲ್ಲ    

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹುಡುಗ ಕಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಬೆಮೆಲ್ ನಗರದ ಕತ್ತಿಹಳ್ಳಿಯ ಮನೆ ಸಂಖ್ಯೆ ೨೭/ಎ ರಲ್ಲಿ  ಈ ಕೃತ್ಯ ಸಂಬವಿಸಿರುತ್ತದೆ. ದಿನಾಂಕ ೦೪-೦೬-೨೦೦೮ ರಂದು ೧೪೦೦ ಗಂಟೆ ಸಮಯದಲ್ಲಿ ಕತ್ತಿಹಳ್ಳಿಯ ಮನೆ ಸಂಖ್ಯೆ ೨೭/ಎ ರ ವಾಸಿ ಸಂತೋಷ.ಆರ್‍ (೧೫) ಬಿನ್ ರಾಮಣ್ಣ.ಆರ್‍. ಎಂಬುವನು ಮನೆಯಿಂದ ಹೊರಗಡೆ ಹೋದವನು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.

ಕಾಣೆಯಾದ ಹುಡುಗನ ಚಹರೆ: ಹೆಸರು ಸಂತೋಷ್, ವಯಸ್ಸು-೧೫, ತಂದೆಯ ಹೆಸರು-ರಾಮಣ್ಣ, ಬಣ್ಣ-ಗೋದಿ ಮೈ ಬಣ್ಣ, ಎತ್ತರ-೪.೫, ಉಡುಪು-ಜೀನ್ಸ್ ಪ್ಯಾಂಟ್ ಮತ್ತು ನೀಲಿ ಪ್ಯಾಂಟ್ ದರಿಸಿರುತ್ತಾನೆ. ಕನ್ನಡ ಮತ್ತು ತೆಲುಗು ಬಾಷೆ ಮಾತನಾಡುತ್ತಾನೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.