ದಿನಸ ಅಪರಾಧಗಳ ಪಕ್ಷಿನೋಟ ೩೦ನೇ ಜೂನ್ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ   

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •    ಬೆಮೆಲ್ ನಗರ ಪೊಲೀಸ್ ಠಾಣೆ ಮರಾಂತಿಕ ಅಪಘಾತಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.ಈ ಕೃತ್ಯವು ಬೆಮೆಲ್ ಕಾರ್ಖಾನೆಗೆ ಹೋಗುವ ರೈಲ್ವೆ ಕ್ರಾಸ್ ಬಳಿ ಸಂಭವಿಸಿರುತ್ತದೆ. ದಿನಾಂಕ: ೨೯-೦೬-೨೦೦೮ ರಂದು ರಾತ್ರಿ ಸುಮಾರು ೨೧೨೦ ಗಂಟೆ ಸಮಯದಲ್ಲಿ ಶ್ರೀ. ಅನಿಲ್ ಕುಮಾರ್‍ ಬಿನ್ ಕೃಷ್ಣ(೨೦) ೧ನೇ ಟೈಪ್, ಬೆಮೆಲ್ ನಗರ ವಾಸಿ ರವರು ತನ್ನ ವಾಹನ ಸಂಖ್ಯೆ ಕೆಎ-೦೮-ಕೆ-೩೭೦೮ಅನ್ನು ಬಂಗಾರಪೇಟೆ ಕಡೆಯಿಂದ ಕೆ.ಜಿ.ಎಫ್ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಎದರುಗಡೆಯಿಂದ ಬಸ್ಸ್ ಸಂಖ್ಯೆ ಕೆಎ-೦೮-೩೫೧೧ರ ಚಾಲಕ ರಾಂಗ್ ರಸ್ತೆಯಲ್ಲಿ ಡಿವೈಡರ್‍ ಕ್ರಾಸ್ ಜಾಗದಲ್ಲಿ ಅತಿವೇಗ ಮತ್ತು ಅಜಾಕರೂಕತೆಯಿಂದ ಚಲಾಯಿಸಿಕೊಂಡು ಬಂದು ಟಿ.ವಿ.ಎಸ್. ವಾಹನಕ್ಕೆ ಡಿಕ್ಕಿಹೊಡೆದು ೫೦ ಅಡಿ ದೂರಕ್ಕೆ ಎಳೆದುಕೊಂಡು ಹೋಗಿ ಮೋಟಾರು ಸೈಕಲ್ ಸವಾರನ ತಲೆ ಮೈ ಕೈ ತೀವ್ರ ಸ್ವರೂಪ ರಕ್ತಗಾಯಗಾಳಾಗಿ ಮೃತಪಟ್ಟಿರುತ್ತಾನೆ.

-ಸಾಧಾರಣ: ಇಲ್ಲ 

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ 

ದೊಂಬಿ: ಇಲ್ಲ 

ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •     ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಭಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೬-೨೦೦೮ ರಂದು ೭೦೦ ಗಂಟೆ ಸಮಯದಲ್ಲಿ ಶ್ರೀ. ವಿ. ಲಕ್ಷ್ಮಯ್ಯ, ಪಿ.ಐ. ಡಿ.ಸಿ.ಐ.ಬಿ. ಡಿ.ಪಿ.ಓ. ಕೆ.ಜಿ.ಎಫ್ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ಬೆಳಿಗ್ಗೆ ೭.೦೦ ಗಂಟೆಯಿಂದ ೮.೦೦ ಗಂಟೆ ತನಕ ಲೂರ್ದನಗರದ ವಾಸಿ ಮಾರಿಯಾ ಕೋಂ ಮಲ್ಲಿಗಾ, ಲೂರ್ದನಗರ ರವರ ಮನೆಯ ಮೇಲೆ ದಾಳಿ ಮಾಡಲಾಗಿ ಅಕ್ರಮವಾಗಿ ೧೦ ಲೀಟರ್‍ನ ಎರಡು ಕ್ಯಾನುಗಳಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ಅಕ್ರಮವಾಗಿ ಮಾರಾಟ ಇಟ್ಟಿಕೊಂಡಿದ್ದನ್ನು ಅಮಾನತ್ತು ಪಡಿಸಿಕೊಂಡು ಕಾನೂನು ಕ್ರಮಕೈಗೊಂಡಿರುತ್ತದೆ. ಬೆಲೆ ಸುಮಾರು ರೂ. ೧೫೦೦/-ಗಳಾಗಿರುತ್ತೆ.  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply