ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೬-೨೦೦೮ ರಂದು ೨೨೩೦ ಗಂಟೆ ಸಮಯದಲ್ಲಿ ಬಂಗಾರಪೇಟೆಯ ಹುಣಸನಹಳ್ಳಿ ಗ್ರಾಮದ ವಾಸಿ ಸುಮನ್‌ಗೌಡ (೧೨) ಬಿನ್ ಅಶ್ವತ್ತಪ್ಪ ಎಂಬುವನು ಕಂದಪ್ಪ ವೃತ್ತದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಎದರುಗಡೆಯಿಂದ ೪೦೭ ಟೆಂಪೊ ಸಂಖ್ಯೆ ಕೆಎ-೦೭-೩೮೨೧ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಮನ್‌ಗೌಡನಿಗೆ ಡಿಕ್ಕಿ ಹೊಡೆದು, ತಲೆ ಮತ್ತು ಕೈಗಳ ಮೇಲೆ ರಕ್ತಗಾಯವಾಗಿರುತ್ತದೆ.
ಮೋಸ/ವಂಚನೆ ಪ್ರಕರಣಗಳು: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸ / ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೮-೨೦೦೭ ರಂದು ಬಂಗಾರಪೇಟೆಯ ಮುನಿಯಮ್ಮ ಲೇಔಟ್ ವಾಸಿ ಆರ್.ಶ್ರೀನಿವಾಸ್ ಎಂಬುವನು ಜಮೀನು ಸರ್ವೆ ನಂ. ೨೩(ಡಿ) ೪೦ * ೧೫ ಅಡಿಯುಳ್ಳ ಸೈಟನ್ನು ನಕಲಿ ಜಿ.ಪಿ.ಎಯನ್ನು ತಯಾರಿಸಿ ಅಮರಾವತಿ ನಗರದ ವಾಸಿ ಶ್ರೀ ಇಂತಿಯಾಸ್ ಎಂಬುವರಿಗೆ ಮಾರಾಟ ಮಾಡಿ ಮೋಸ ಮಾಡಿರುತ್ತಾನೆ.
ಕೊಲೆಗೆ ಪ್ರಯತ್ನ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೬-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ತಟ್ಟನಹಳ್ಳಿ ಗ್ರಾಮದ ವಾಸಿ ಶ್ರೀ ರಾಮ್‌ಸಿಂಗ್ (೫೦) ಬಿನ್ ಚಾಲಾಜಿಸಿಂಗ್ ಎಂಬುವರು ತಟ್ಟನಹಳ್ಳಿ ಗ್ರಾಮದ ಕೆರೆ ಕಟ್ಟೆಯ ಮೇಲೆ ತಮ್ಮ ಟಿವಿಎಸ್ ವಾಹನದಲ್ಲಿ ಹೋಗುತಿದ್ದಾಗ ಅದೇ ಗ್ರಾಮದ ವಾಸಿ ರಾಜೇಂದ್ರಸಿಂಗ್ ಬಿನ್ ಲೇಟ್ ರಾಮ್‌ಸಿಂಗ್ ಎಂಬುವನು ಅಡ್ಡಾಕಟ್ಟಿ ಒಂದು ಚಾಕುವಿನಿಂದ ಹೊಟ್ಟೆಯ ಮೇಲೆ ಮತ್ತು ಎದೆಯ ಮೇಲೆ ಹೊಡೆದು ಸಾಯಿಸಲು ಪ್ರಯತ್ತಿಸಿ ಪ್ರಾಣ ಬೆದರಿಕೆ ಹಾಕಿರುತ್ತಾನೆ.
ದೊಂಬಿ: ಇಲ್ಲ
ಹಲ್ಲೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೬-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ವಿಜಯನಗರದ ಶ್ರೀಮತಿ ಶಂಷದ್ ಬೇಗಂ ಕೋಂ ಕಲೀಲ್ ಸಾಬ್ ಎಂಬುವರನ್ನು ಅದೇ ಕೇರಿಯ ನಜೀರ್ ಸಾಬ್ ಮತ್ತು ರಹಿಂ ಸಾಬ್ ಎಂಬುವರುಗಳು ಮನೆಯ ವಿಚಾರದಲ್ಲಿ ಜಗಳ ತೆಗೆದು ಕೈಯಿಂದ ಮತ್ತು ಚಾಕುವಿನಿಂದ ಶಂಷದ್ ಬೇಗಂ ಮತ್ತು ಅವರ ಗಂಡ ಕಲೀಲ್ ಸಾಬ್ ರವರುಗಳಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


